ನಿಜಲಿಂಗಪ್ಪ ಬಂಗಲೆ 
ರಾಜ್ಯ

ನಿಜಲಿಂಗಪ್ಪ ಬಂಗಲೆ ಖರೀದಿಸಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಕಚೇರಿಯನ್ನಾಗಿಸಿ: ಚಿತ್ರದುರ್ಗದ ಕೈ ಮುಖಂಡರ ಒತ್ತಾಯ

ಇತ್ತೀಚೆಗೆ ಚಿತ್ರದುರ್ಗದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದ ವೇಳೆ ಖರ್ಗೆ ಅವರು ಬಂಗಲೆಗೆ ಭೇಟಿ ನೀಡಿ ನಿಜಲಿಂಗಪ್ಪ ಅವರಿಗೆ ನಮನ ಸಲ್ಲಿಸಿದ್ದರು. ಶಿವಕುಮಾರ್ ಎಲ್ಲಾ ಜಿಲ್ಲೆಗಳಲ್ಲಿ ಪಕ್ಷದ ಕಚೇರಿಗಳನ್ನು ಸ್ಥಾಪಿಸುವ ಅಗತ್ಯವಿದೆ ಎಂದು ಹೇಳಿದರು.

ಬೆಂಗಳೂರು: ರಾಜಕೀಯ ದಿಗ್ಗಜ ಎಐಸಿಸಿ ಮಾಜಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಹಾಗೂ ಎಸ್.ನಿಜಲಿಂಗಪ್ಪ ಅವರ ಬಂಗಲೆ ಖರೀದಿಸಿ ಪಕ್ಷದ ಕಚೇರಿ ಸ್ಥಾಪಿಸುವಂತೆ ಚಿತ್ರದುರ್ಗ ಕಾಂಗ್ರೆಸ್ ಮುಖಂಡರು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಒತ್ತಾಯಸಿದ್ದಾರೆ.

ಕಾಂಗ್ರೆಸ್ ಪಕ್ಷದ ಹಣದಲ್ಲಿ ಚಿತ್ರದುರ್ಗದಲ್ಲಿರುವ ನಿಜಲಿಂಗಪ್ಪ ಬಂಗಲೆ ಖರೀದಿಸಬೇಕು ಮತ್ತು ಅಲ್ಲಿ ಪಕ್ಷದ ಜಿಲ್ಲಾ ಕಚೇರಿ ಆರಂಭಿಸಬೇಕು ಎಂದು ಡಿಸಿಸಿ ಅಧ್ಯಕ್ಷ ಟಿ. ಪೀರ್ ಒತ್ತಾಯಿಸಿದ್ದಾರೆ. ಬಂಗಲೆಯನ್ನು ನಿಜಲಿಂಗಪ್ಪ ಸ್ಮಾರಕವನ್ನಾಗಿ ಪರಿವರ್ತಿಸಲು ರಾಜ್ಯ ಸರ್ಕಾರ ಯೋಜಿಸಿತ್ತು, ಆದರೆ ಸರ್ಕಾರಿ ಅಧಿಕಾರಿಯೊಬ್ಬರು ಆಕ್ಷೇಪ ವ್ಯಕ್ತಪಡಿಸಿ ಮಾರಾಟಕ್ಕೆ ವಿಳಂಬ ಮಾಡಿದರು. ಕಳೆದ ನಾಲ್ಕು ವರ್ಷಗಳಿಂದ ನಿಜಲಿಂಗಪ್ಪ ಅವರ ಕುಟುಂಬ ಮಾರಾಟಕ್ಕಾಗಿ ಕಾಯುತ್ತಿದೆ. ಅಲ್ಲದೆ, ಆಸ್ತಿ ವಿಲ್ ಮಾಡಿರುವ ನಿಜಲಿಂಗಪ್ಪ ಅವರ ಮೊಮ್ಮಗ ವಿನಯ್ ಕಿರಣಶಂಕರ್ ಸಿದ್ದಯ್ಯನಹಳ್ಳಿ ಅವರು ಅಮೆರಿಕದಲ್ಲಿ ಉಳಿದುಕೊಂಡಿದ್ದು, ಪ್ರಕ್ರಿಯೆ ಮತ್ತಷ್ಟು ವಿಳಂಬವಾಗಿದೆ.

ಇತ್ತೀಚೆಗೆ ಚಿತ್ರದುರ್ಗದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದ ವೇಳೆ ಖರ್ಗೆ ಅವರು ಬಂಗಲೆಗೆ ಭೇಟಿ ನೀಡಿ ನಿಜಲಿಂಗಪ್ಪ ಅವರಿಗೆ ನಮನ ಸಲ್ಲಿಸಿದ್ದರು. ಶಿವಕುಮಾರ್ ಎಲ್ಲಾ ಜಿಲ್ಲೆಗಳಲ್ಲಿ ಪಕ್ಷದ ಕಚೇರಿಗಳನ್ನು ಸ್ಥಾಪಿಸುವ ಅಗತ್ಯವಿದೆ ಎಂದು ಹೇಳಿದರು. ಇದನ್ನು ಗಮನದಲ್ಲಿಟ್ಟುಕೊಂಡು ಪಕ್ಷದ ಪದಾಧಿಕಾರಿಗಳು ಕಚೇರಿ ಸ್ಥಾಪಿಸಲು ಬಂಗಲೆಯನ್ನು ಖರೀದಿಸಲು ಪರಿಗಣಿಸುವಂತೆ ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ. 1990ರಲ್ಲಿ ವೀರೇಂದ್ರ ಪಾಟೀಲರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದರಿಂದ ಕಾಂಗ್ರೆಸ್‌ನಿಂದ ದೂರ ಸರಿದಿದ್ದ ಲಿಂಗಾಯತರಿಗ ಮತ್ತೆ ಕಾಂಗ್ರೆಸ್ ಪರ ಒಲವು ತೋರಿಸಲು ಇದು ಸಹಾಯವಾಗಲಿದೆ ಎಂದು ಹೇಳಲಾಗಿದೆ.

ಕಾಂಗ್ರೆಸ್ ಮುಖಂಡ, ಮಾಜಿ ಎಂಎಲ್ ಸಿ ಮೋಹನ್ ಕೊಂಡಜ್ಜಿ, ಅವರ ತಂದೆ ಕೊಂಡಜ್ಜಿ ಬಸಪ್ಪ ಅವರು ನಿಜಲಿಂಗಪ್ಪ ಅವರ ಸಂಪುಟದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು, ನಿಜಲಿಂಗಪ್ಪ ಸ್ಮಾರಕ ಸ್ಥಾಪಿಸಲು ಸರಕಾರದಿಂದ 5 ಕೋಟಿ ರೂ ಅನುದಾನ ಘೋಷಿಸಲಾಗಿತ್ತು. ಆದರೆ ನಾಲ್ಕು ವರ್ಷ ಕಳೆದರೂ ಇನ್ನೂ ಬಿಡುಗಡೆಯಾಗಿಲ್ಲ ಇದು ಆಡಳಿತದ ಪರವಾಗಿ ನಿರಾಸಕ್ತಿಯೇ ಹೊರತು ಬೇರೇನೂ ಅಲ್ಲ ಎಂದು ಆರೋಪಿಸಿದ್ದಾರೆ.

5,000 ಚದರ ಅಡಿ ವಿಸ್ತೀರ್ಣದ ಈ ಭೂಮಿಗೆ ಮಾರುಕಟ್ಟೆ ಬೆಲೆ 6 ಕೋಟಿ ರೂ.ಮೌಲ್ಯವಿದೆ ಎಂದು ನಿಜಲಿಂಗಪ್ಪ ಕುಟುಂಬಸ್ಥರು ತಿಳಿಸಿದ್ದಾರೆ. ಬಂಗಲೆ ಮಾರಾಟವಾಗದಿದ್ದಕ್ಕೆ ಅವರು ಕಾದು ಕಾದು ಬೇಸತ್ತಿದ್ದಾರೆ. ಹೀಗಾಗಿ ಈಗ ಅದನ್ನು ಖಾಸಗಿ ಖರೀದಿದಾರರಿಗೆ ಮಾರಾಟ ಮಾಡಲು ಯೋಚಿಸುತ್ತಿದ್ದಾರೆ ಎಂದು ಮೋಹನ್ ಕೊಂಡಜ್ಜಿ ತಿಳಿಸಿದ್ದಾರೆ.

ನಿಜಲಿಂಗಪ್ಪ ಅವರ ಪುತ್ರ ಕಿರಣ್ ಶಂಕರ್ ಅವರು ವಿಕಾಸ ಸೌಧದ ಮುಖ್ಯ ವಾಸ್ತುಶಿಲ್ಪಿಯಾಗಿದ್ದರು ಮತ್ತು ಅವರ ಅಳಿಯ ಎಸ್ ಬಿ ಮುದ್ದಪ್ಪ ಕರ್ನಾಟಕದ ಮಾಜಿ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT