ಸಿಜೆಐ ಡಿವೈ ಚಂದ್ರಚೂಡ್ 
ರಾಜ್ಯ

ಗಂಭೀರ ಪ್ರಕರಣಗಳಲ್ಲಿ ಜಾಮೀನು ನೀಡಲು ವಿಚಾರಣಾಧೀನ ಕೋರ್ಟ್ ನ್ಯಾಯಾಧೀಶರಿಗೆ ಭಯ: ಸಿಜೆಐ ಡಿವೈ ಚಂದ್ರಚೂಡ್

ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು ಮತ್ತು ವಿರೋಧ ಪಕ್ಷಗಳ ನಾಯಕರು– ಮುಖ್ಯಮಂತ್ರಿಯನ್ನೂ ರಾಜಕೀಯ ಪ್ರೇರಿತವಾಗಿ ಬಂಧಿಸುವ ಕೆಲಸ ನಡೆಯುತ್ತಿದೆ. ಜಾಮೀನು ನೀಡುವಲ್ಲಿ ನ್ಯಾಯಾಧೀಶರು ಪ್ರತಿ ಪ್ರಕರಣದ ಆಳ– ಅಗಲವನ್ನು ಪರಿಶೀಲಿಸಿ, ವಿವೇಚನೆಯನ್ನು ಬಳಸಬೇಕು’ ಎಂದರು.

ಬೆಂಗಳೂರು: ಅಪರಾಧ ಪ್ರಕರಣಗಳಲ್ಲಿ ಜಾಮೀನು ನೀಡಬಹುದಾಗಿದ್ದರೂ ನೀಡದೆ, ವಿಚಾರಣಾ ನ್ಯಾಯಾಲಯಗಳ ನ್ಯಾಯಾಧೀಶರು ಹೊಣೆಗಾರಿಕೆಯನ್ನು ಉನ್ನತ ನ್ಯಾಯಾಲಯಗಳಿಗೆ ದಾಟಿಸುವುದು ಈಚೆಗೆ ಹೆಚ್ಚಾಗುತ್ತಿದೆ’ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಕಳವಳ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ನಡೆದ ‘ಬರ್ಕ್ಲಿ ಸೆಂಟರ್‌’ನ 11ನೇ ವಾರ್ಷಿಕ ಸಮ್ಮೇಳನದಲ್ಲಿ ಅವರು ಮಾತನಾಡಿದರು. ವಿಚಾರಣಾ ನ್ಯಾಯಾಲಯಗಳಲ್ಲಿ ಜಾಮೀನು ಪಡೆಯಬೇಕಾದ ಜನರು, ನ್ಯಾಯಾಧೀಶರ ಹಿಂದೇಟಿನ ಕಾರಣದಿಂದಾಗಿ ಹೈಕೋರ್ಟ್‌ಗಳಿಗೆ ಹೋಗುವಂತಾಗಿದೆ. ಹೈಕೋರ್ಟ್‌ಗಳಲ್ಲಿಯೂ ಕೆಲವರು ಜಾಮೀನು ಪಡೆಯಲು ಸಾಧ್ಯವಾಗುತ್ತಿಲ್ಲ. ಈ ವಿಳಂಬದಿಂದ ಹಲವರು ಅನಿಯಂತ್ರಿತ ಬಂಧನವನ್ನು ಎದುರಿಸುವಂತಾಗಿದೆ” ಎಂದು ಹೇಳಿದ್ದಾರೆ.

ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು ಮತ್ತು ವಿರೋಧ ಪಕ್ಷಗಳ ನಾಯಕರು– ಮುಖ್ಯಮಂತ್ರಿಯನ್ನೂ ರಾಜಕೀಯ ಪ್ರೇರಿತವಾಗಿ ಬಂಧಿಸುವ ಕೆಲಸ ನಡೆಯುತ್ತಿದೆ. ಜಾಮೀನು ನೀಡುವಲ್ಲಿ ನ್ಯಾಯಾಧೀಶರು ಪ್ರತಿ ಪ್ರಕರಣದ ಆಳ– ಅಗಲವನ್ನು ಪರಿಶೀಲಿಸಿ, ವಿವೇಚನೆಯನ್ನು ಬಳಸಬೇಕು’ ಎಂದರು.

ವಿಚಾರಣಾ ನ್ಯಾಯಾಲಯ ಮತ್ತು ಕೆಳ ಹಂತದ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರು ಜಾಮೀನು ನೀಡಿದರೆ, ಅವರ ನಿರ್ಧಾರವನ್ನು ಅನುಮಾನದಿಂದ ನೋಡಲಾಗುತ್ತಿದೆ. ಇದು ಅತ್ಯಂತ ದೊಡ್ಡ ಸಮಸ್ಯೆ. ಈ ಕಾರಣದಿಂದಲೇ ನ್ಯಾಯಾಧೀಶರು ಹೊಣೆಗಾರಿಕೆಯನ್ನು ಉನ್ನತ ನ್ಯಾಯಾಲಯಗಳಿಗೆ ದಾಟಿಸುತ್ತಿದ್ದಾರೆ. ನ್ಯಾಯಾಧೀಶರ ಮೇಲೆ ನಂಬಿಕೆ ಇರಿಸುವ ಕೆಲಸವನ್ನು ನಾವೂ ಮಾಡಬೇಕು’ ಎಂದರು.

ವಿಚಾರಣಾ ನ್ಯಾಯಾಲಯಗಳಲ್ಲೇ ಜಾಮೀನು ಸಿಗಬೇಕಾದವರಿಗೆ ಅಲ್ಲಿ ಜಾಮೀನು ಸಿಗುತ್ತಿಲ್ಲ. ಅಂತಹವರು ಹೈಕೋರ್ಟ್‌ಗಳಿಗೆ ಹೋಗುತ್ತಿದ್ದಾರೆ. ಹೈಕೋರ್ಟ್‌ಗಳಲ್ಲೇ ಜಾಮೀನು ಸಿಗಬೇಕಾದವರಿಗೆ ಅಲ್ಲಿ ಜಾಮೀನು ಸಿಗುತ್ತಿಲ್ಲ. ಅಂತಹವರು ಸುಪ್ರಿಂ ಕೋರ್ಟ್‌ಗೆ ಬರುತ್ತಿದ್ದಾರೆ. ಸುಪ್ರೀಂ ಕೋರ್ಟ್‌ಗೆ ಹೀಗೆ ಬರುವ ಜಾಮೀನು ಅರ್ಜಿಗಳಿಗೇ ನಾವು ಆದ್ಯತೆ ನೀಡುತ್ತಿದ್ದೇವೆ. ನ್ಯಾಯಾಂಗ ವ್ಯವಸ್ಥೆಯ ಆರಂಭಿಕ ಹಂತದಲ್ಲಿ ಇರುವವರೂ ತಮ್ಮ ನಿರ್ಧಾರಕ ಅಧಿಕಾರದ ಕರ್ತವ್ಯವನ್ನು ನಿರ್ವಹಿಸಬೇಕು ಎಂಬ ಸಂದೇಶ ಹೋಗಬೇಕು ಎಂದೇ ಹೀಗೆ ಮಾಡುತ್ತಿದ್ದೇವೆ’ ಎಂದರು.

ವಿಚಾರಣಾ ನ್ಯಾಯಾಧೀಶರು ಅಪರಾಧದ ಪ್ರಮುಖ ವಿಷಯಗಳ ಬಗ್ಗೆ ಅನುಮಾನ ಹೊಂದಿದ್ದಾಗ ಜಾಮೀನು ನೀಡದೆ ಸುರಕ್ಷಿತವಾಗಿ ಕೆಲಸ ಮಾಡಲು ಬಯಸುತ್ತಾರೆ. ಆದರೆ, ಅವರು ಪ್ರತಿ ಪ್ರಕರಣದ ಸೂಕ್ಷ್ಮತೆಗಳನ್ನು ಅರಿಯಲು ‘ದೃಢವಾದ ಸಾಮಾನ್ಯ ಜ್ಞಾನ’ವನ್ನು ಬಳಸಬೇಕು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಹೇಳಿದ್ದಾರೆ.

ಬಹುತೇಕ ಪ್ರಕರಣಗಳು ಸುಪ್ರೀಂ ಕೋರ್ಟ್‌ಗೆ ಬರಬಾರದಿತ್ತು. ನಾವು ಜಾಮೀನಿಗೆ ಆದ್ಯತೆ ನೀಡಲು ಕಾರಣವೆಂದರೆ, ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಅತ್ಯಂತ ಆರಂಭಿಕ ಹಂತದಲ್ಲಿರುವವರು ಹಿಂಜರಿಕೆ ಇಲ್ಲದೆ ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂಬ ಸಂದೇಶವನ್ನು ರಾಷ್ಟ್ರಾದ್ಯಂತ ರವಾನಿಸುವ ಉದ್ದೇಶವಿದೆ” ಎಂದು ಅವರು ಹೇಳಿದ್ದಾರೆ.

‘ಸಮಾನತೆಯ ಕಾನೂನಿಗೆ ಭರವಸೆ ಇದೆಯೇ?’ ಎಂಬ ವಿಷಯದ ಕುರಿತು ಮುಖ್ಯ ಭಾಷಣ ಮಾಡಿದ ಸಿಜೆಐ, ಸಮುದಾಯಗಳನ್ನು ಮತ್ತಷ್ಟು ವಿಭಜಿಸುವ ಮತ್ತು ಅವರ ಮೂಲಭೂತ ಹಕ್ಕುಗಳ ಪ್ರವೇಶದ ವಿವಿಧ ರೀತಿಯ ತಾರತಮ್ಯ ಮತ್ತು ದಬ್ಬಾಳಿಕೆಯ ಬಗ್ಗೆ ಮಾತನಾಡಿದರು.

ಸಮಾನ ಹವಾಮಾನ ನೀತಿಗಳ ಅಗತ್ಯತೆಯ ಕುರಿತು ಹೇಳಿದ ಅವರು, “ಹವಾಮಾನ ಬದಲಾವಣೆಯು ಅಸ್ತಿತ್ವದಲ್ಲಿರುವ ಅಸಮಾನತೆಗಳನ್ನು ಹೆಚ್ಚಿಸುತ್ತಿದೆಐ, ಅವುಗಳನ್ನು ಮಾನವ ಹಕ್ಕುಗಳ ಸಮಸ್ಯೆಗಳಾಗಿ ಪರಿವರ್ತಿಸುತ್ತದೆ, ಅದು ವಿಶೇಷವಾಗಿ ಹಕ್ಕುಗಳನ್ನು ಈಗಾಗಲೇ ರಾಜಿ ಮಾಡಿಕೊಂಡಿರುವವರ ಮೇಲೆ ಪರಿಣಾಮ ಬೀರುತ್ತದೆ. ಮಹಿಳೆಯರು, ಮಕ್ಕಳು, ಅಂಗವಿಕಲರು ಮತ್ತು ಸ್ಥಳೀಯ ಜನರು ಹೆಚ್ಚಿನ ಅಪಾಯಗಳನ್ನು ಎದುರಿಸುತ್ತಾರೆ. ಹೀಗಾಗಿ ಅಸಮಾನತೆಯು ಹವಾಮಾನ ಬದಲಾವಣೆಯ ಕಾರಣ ಮತ್ತು ಪರಿಣಾಮವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ, ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ 'ಸುಪ್ರೀಂ' ತರಾಟೆ!

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಗದ್ದುಗೆ ಗುದ್ದಾಟ: 'ಹೈಕಮಾಂಡ್' ನತ್ತ ಎಲ್ಲರ ಚಿತ್ತ, ಮುಂದೇನು?

ಕೇರಳ: ರೂ. 50 ಲಕ್ಷ ಮೌಲ್ಯದ 'ಐಷಾರಾಮಿ ಬೈಕ್' ಬೇಕೆಂದು ಗಲಾಟೆ, ತಂದೆಯಿಂದ ಹಲ್ಲೆಗೊಳಗಾದ ಯುವಕ ಸಾವು!

SCROLL FOR NEXT