ಸಾಂದರ್ಭಿಕ ಚಿತ್ರ 
ರಾಜ್ಯ

ಸಿಇಟಿ ಫಲಿತಾಂಶ ವಿಳಂಬಕ್ಕೆ ಕೆಇಎ ಅಧಿಕಾರಿಗಳ ಸಮರ್ಥನೆ: ಆತಂಕದಲ್ಲಿ ವಿದ್ಯಾರ್ಥಿಗಳು

ಸಿಇಟಿ ಪರೀಕ್ಷೆ ಫಲಿತಾಂಶಗಳಲ್ಲಿನ ವಿಳಂಬದಿಂದಾಗಿ ವಿದ್ಯಾರ್ಥಿಗಳು ತಮ್ಮ ರ್ಯಾಂಕ್ ಬಗ್ಗೆ ಮತ್ತು ವಿವಿಧ ಕಾಲೇಜುಗಳಲ್ಲಿ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಭವಿಷ್ಯದ ಬಗ್ಗೆ ಚಡಪಡಿಸುವಂತೆ ಮಾಡಿದೆ.

ಬೆಂಗಳೂರು: 2024-25ನೇ ಸಾಲಿನ ಇಂಜಿನಿಯರಿಂಗ್, ಆರ್ಕಿಟೆಕ್ಚರ್, ಕೃಷಿ ವಿಜ್ಞಾನ, ವೆಟರಿನರಿ, ಬಿ-ಫಾರ್ಮ್‌, ಇತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗೆ ನಡೆಸಿದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (CET)ಯ ರಿಸಲ್ಟ್‌ಗಾಗಿ ಲಕ್ಷಾಂತರ ವಿದ್ಯಾರ್ಥಿಗಳು ಕಾಯುತ್ತಿದ್ದಾರೆ (CET Result). ಮೂಲಗಳ ಪ್ರಕಾರ ಸಿಇಟಿ ಫಲಿತಾಂಶ ಲೋಕಸಭಾ ಚುನಾವಣೆಯ ರಿಸಲ್ಟ್‌ ಬಳಿಕವೇ ಘೋಷಣೆಯಾಗಲಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಿಇಟಿ ಪರೀಕ್ಷೆಯನ್ನು ಏಪ್ರಿಲ್ 18, 19ರಂದು ನಡೆಸಿತ್ತು.

ಸಿಇಟಿ ಪರೀಕ್ಷೆ ಫಲಿತಾಂಶಗಳಲ್ಲಿನ ವಿಳಂಬದಿಂದಾಗಿ ವಿದ್ಯಾರ್ಥಿಗಳು ತಮ್ಮ ರ‍್ಯಾಂಕ್ ಬಗ್ಗೆ ಮತ್ತು ವಿವಿಧ ಕಾಲೇಜುಗಳಲ್ಲಿ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಭವಿಷ್ಯದ ಬಗ್ಗೆ ಚಡಪಡಿಸುವಂತೆ ಮಾಡಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ವಿಳಂಬವನ್ನು ಸಮರ್ಥಿಸಿದಕೊಂಡಿದೆ. ಈ ವರ್ಷದಿಂದ ನಡೆಸಲಾಗುತ್ತಿರುವ ಪಿಯುಸಿ ದ್ವಿತೀಯ ಪರೀಕ್ಷೆಗಳ ಮೊದಲ ಎರಡು ಫಲಿತಾಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗಿದೆ ಎಂದು ಹೇಳಿದ ಹೊಸ ಸರ್ಕಾರದ ಆದೇಶವೇ ಇದಕ್ಕೆ ಕಾರಣವಾಗಿದೆ. ಕೃಷಿ ವಿಶ್ವವಿದ್ಯಾನಿಲಯದಿಂದ ಬಾಕಿ ಉಳಿದಿರುವ ‘ಕೃಷಿ ಪ್ರಾಯೋಗಿಕ ಪರೀಕ್ಷೆ’ ಫಲಿತಾಂಶವೂ ವಿಳಂಬಕ್ಕೆ ಇನ್ನೊಂದು ಕಾರಣ, ಇವೆರಡೂ ಇಲ್ಲದೆ ರ‍್ಯಾಂಕ್ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.

ಸರ್ಕಾರದ ನಿರ್ದೇಶನಗಳ ಪ್ರಕಾರ, ದ್ವಿತೀಯ ಪಿಯುಸಿಯ ಮೊದಲ ಎರಡು ಪರೀಕ್ಷೆಯ ಫಲಿತಾಂಶಗಳನ್ನು ಪರಿಗಣಿಸಬೇಕು. ಪ್ರಾಯೋಗಿಕ ಪರೀಕ್ಷೆಯ ಫಲಿತಾಂಶಗಳನ್ನು ನೀಡಲು ಕೃಷಿ ವಿಶ್ವವಿದ್ಯಾಲಯದಿಂದ ಒಂದು ವಾರ ವಿಳಂಬವಾಗಿದೆ, ಅದನ್ನು ನಾವು ನಿನ್ನೆ ತಡರಾತ್ರಿ (ಗುರುವಾರ) ಸ್ವೀಕರಿಸಿದ್ದೇವೆ. ವಿಳಂಬವು ಕರ್ನಾಟಕ ಪರೀಕ್ಷ ಪ್ರಾಧಿಕಾರದಿಂದ ಆಗಿಲ್ಲ ಹೊರಗಿನಿಂದ ಆಗಿದೆ ಎಂದು ಕೆಇಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಕೆಸಿಇಟಿ 2024 ರ ಫಲಿತಾಂಶಗಳನ್ನು ಮುಂದಿನ ವಾರದ ಆರಂಭದಲ್ಲಿ ನಿರೀಕ್ಷಿಸಬಹುದು ಎಂದು ಹೇಳಿದ್ದಾರೆ.

ಕರ್ನಾಟಕ ರಾಜ್ಯ ಪರೀಕ್ಷೆ ಮತ್ತು ಮೌಲ್ಯಮಾಪನ ಪ್ರಾಧಿಕಾರವು (KSEAB) ಮೇ 21 ರಂದು ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸಿದೆ, ಆದರೆ ವಿದ್ಯಾರ್ಥಿಗಳು ವಿಳಂಬದ ಬಗ್ಗೆ KEA ಅನ್ನು ಪ್ರಶ್ನಿಸಿದ್ದಾರೆ. COMEDK (ಕರ್ನಾಟಕದ ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಒಕ್ಕೂಟ) ಎಂದು ಹೇಳಿದರು. ಅದರ ಫಲಿತಾಂಶಗಳನ್ನು ಮೇ 24 ರಂದು ಪ್ರಕಟಿಸಿದೆ, ಮೇ 12 ರಂದು ಕಾಮೆಡ್ ಕೆ ಪರೀಕ್ಷೆಗಳನ್ನು ನಡೆಸಲಾಗಿತ್ತು, ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿದ್ದರು.

ಔಟ್ ಆಫ್ ಸಿಲಬಸ್ ಗೊಂದಲವು ವಿದ್ಯಾರ್ಥಿಗಳ ಅಂಕಗಳ ಬಗ್ಗೆ ಆತಂಕ ಪಡುವಂತೆ ಮಾಡಿದೆ ಮತ್ತು ಫಲಿತಾಂಶಗಳಲ್ಲಿನ ವಿಳಂಬವು ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಆತಂಕಕ್ಕೆ ತಳ್ಳುತ್ತಿದೆ ಎಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಶನ್ (ಎಐಡಿಎಸ್‌ಒ) ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಹೇಳಿದರು. ಈ ವರ್ಷ ಒಟ್ಟು 3,10,484 ಅಭ್ಯರ್ಥಿಗಳು ಕೆಸಿಇಟಿ ಪರೀಕ್ಷೆಗೆ ಹಾಜರಾಗಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸ್ಪಷ್ಟ ಉದ್ದೇಶದೊಂದಿಗೆ ಆರಂಭಗೊಂಡ Operation Sindoor ಗುರಿ ತಲುಪಿದ ಮೇಲೆ ಬೇಗನೆ ನಿಲ್ಲಿಸಲಾಯಿತು: IAF ಮುಖ್ಯಸ್ಥ

'ಮೋದಿಯವರು ಅವಮಾನ ಸಹಿಸುವುದಿಲ್ಲ, ಅವರು ಬುದ್ಧಿವಂತ ನಾಯಕ, ತಲೆಬಾಗಿಕೊಂಡು ಹೋಗುವವರಲ್ಲ': US tariffs ಮಧ್ಯೆ ಪುಟಿನ್ ಪ್ರಶಂಸೆ ಮಾತು!

ಲಡಾಖ್: ಪತಿಯ ಬಿಡುಗಡೆ ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋದ ವಾಂಗ್ಚುಕ್ ಪತ್ನಿ ಗೀತಾಂಜಲಿ

World Weightlifting Championships: ಬೆಳ್ಳಿ ಪದಕ ಗೆದ್ದ ಮೀರಾಬಾಯಿ ಚಾನು

ಆಡಳಿತ ವೈಫಲ್ಯದ ಲಾಭ ಪಡೆಯಲೂ ವಿಫಲವಾಗಿರುವ ಪ್ರತಿಪಕ್ಷ ಬಿಜೆಪಿ (ನೇರ ನೋಟ)

SCROLL FOR NEXT