ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಜೂನ್ 25 ರಿಂದ UPI ಮೂಲಕ KSRTC ಟಿಕೆಟ್‌ ಖರೀದಿಗೆ ಅವಕಾಶ!

ಪ್ರಯಾಣಿಕರ ಅನುಭವವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ)ಯು ತನ್ನ ನಿಯಮಗಳಲ್ಲಿ ಕೆಲ ಬದಲಾವಣೆಗಳನ್ನು ಮಾಡುತ್ತಿದ್ದು, UPI ಮೂಲಕ ಪಾವತಿ ಮಾಡಿ ಟಿಕೆಟ್ ಖರೀದಿ ಮಾಡುವ ಅವಕಾಶ ಒದಗಿಸಲು ಮುಂದಾಗಿದೆ.

ಬೆಂಗಳೂರು: ಪ್ರಯಾಣಿಕರ ಅನುಭವವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ)ಯು ತನ್ನ ನಿಯಮಗಳಲ್ಲಿ ಕೆಲ ಬದಲಾವಣೆಗಳನ್ನು ಮಾಡುತ್ತಿದ್ದು, UPI ಮೂಲಕ ಪಾವತಿ ಮಾಡಿ ಟಿಕೆಟ್ ಖರೀದಿ ಮಾಡುವ ಅವಕಾಶ ಒದಗಿಸಲು ಮುಂದಾಗಿದೆ.

ಈ ನಿಟ್ಟಿನಲ್ಲಿ ಕೆಎಸ್‌ಆರ್‌ಟಿಸಿ ಜೂನ್ 25 ರಿಂದ ನಾಲ್ಕು ಡಿಪೋಗಳಲ್ಲಿ ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರಗಳ (ಇಟಿಎಂ) ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸಲಿದೆ,

ಎಲ್ಲಾ ಕಂಡಕ್ಟರ್‌ಗಳಿಗೆ ತರಬೇತಿ ನೀಡಿದ ನಂತರ ಕೆಲವೇ ವಾರಗಳಲ್ಲಿ ಎಲ್ಲಾ ಬಸ್‌ಗಳಲ್ಲಿ ವ್ಯವಸ್ಥೆ ಜಾರಿಗೆ ಬರಲಿದೆ. ಸಾರಿಗೆ ನಿಗಮವು ಪ್ರತಿ ಸಾಧನಕ್ಕೆ ತಿಂಗಳಿಗೆ 645 ರೂಪಾಯಿ ಬಾಡಿಗೆಯಂತೆ 10,245 ಇಟಿಎಂಗಳನ್ನು ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ.

ಕೆಎಸ್‌ಆರ್‌ಟಿಸಿ ಎಂಡಿ ಅನ್ಬು ಕುಮಾರ್ ಮಾತನಾಡಿ, ಪ್ರಾಯೋಗಿಕ ಯೋಜನೆ ಯಶಸ್ವಿಯಾದ ಬಳಿಕ ಈ ತಿಂಗಳ ಅಂತ್ಯದಲ್ಲಿ ಎಲ್ಲಾ ಬಸ್ ಗಳಲ್ಲಿ ವ್ಯವಸ್ಥೆ ಜಾರಿಯಾಗಲಿದೆ. ಇದರಿಂದೆ ಚಿಲ್ಲರೆ ಸಮಸ್ಯೆ ಎದುರಾಗುವುದಿಲ್ಲ ನಿರ್ವಾಹಕರು ಚಿಲ್ಲರೆ ನೀಡಲಿಲ್ಲ ಎಂಬ ದೂರುಗಳು ಕೂಡ ಕಡಿಮೆಯಾಗಲಿದೆ. ETM ಗಳ ಮೂಲಕ, ಪ್ರಯಾಣಿಕರು GPay, PhonePe, Paytm ಮತ್ತು ಅವರ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಪಪಾವತಿಸಿ, ಟಿಕೆಟ್ ಖರೀದಿ ಮಾಡಬಹುದು ಎಂದು ಹೇಳಿದ್ದಾರೆ.

EbixCash Ltd ಐದು ವರ್ಷಗಳ ಕಾಲ ETM ಗಳನ್ನು ಪೂರೈಸಲು ಒಪ್ಪಿಗೆ ನೀಡಿದ್ದು, ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಕಂಪನಿಯು ಇಟಿಎಂಗಳಿಗೆ ಬ್ಯಾಕೆಂಡ್ ಮತ್ತು ಇಂಟರ್ಫೇಸ್ ಸಾಫ್ಟ್‌ವೇರ್ ಅನ್ನು ಒದಗಿಸುತ್ತದೆ. ಮಹಾರಾಷ್ಟ್ರದಂತಹ ರಾಜ್ಯಗಳಲ್ಲಿ ಯಂತ್ರಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ,

ಕಂಡಕ್ಟರ್‌ಗಳು ಆಗಮನ ಮತ್ತು ನಿರ್ಗಮನ ನಿಲ್ದಾಣಗಳನ್ನು ಆಯ್ಕೆ ಮಾಡಬೇಕು, ನಂತಪರ ಪ್ರಯಾಣಿಕರ ಸಂಖ್ಯೆ, ಪಾವತಿ ವಿಧಾನವನ್ನು ಆರಿಸಬೇಕು. ಬಳಿಕ ದರ ಸ್ವಯಂಚಾಲಿತವಾಗಿ ಲೆಕ್ಕಹಾಕಲಾಗುತ್ತದೆ. ಪ್ರಯಾಣಿಕರು ಹಣ ಪಾವತಿಸಿದ ನಂತರ ಟಿಕೆಟ್ ಪಡೆಯಬಹುದು. ಯಂತ್ರಗಳನ್ನು ಲಾಕ್ ಮಾಡಬಹುದು ಮತ್ತು ಅವುಗಳನ್ನು ಕದ್ದರೆ, ಅವುಗಳನ್ನು ಸ್ಮಾರ್ಟ್‌ಫೋನ್‌ನಂತೆ ಟ್ರ್ಯಾಕ್ ಮಾಡಬಹುದು ಎಂದು ಮಾಹಿತಿ ನೀಡಿದ್ದಾರೆ.

ಹ್ಯಾಂಡ್‌ಹೆಲ್ಡ್ ಇಟಿಎಂಯಲ್ಲಿ RFID ಸಾಧನವಿರಲಿದ್ದು, ಇ-ಪಾಸ್‌ಗಳಂತಹ ಸ್ಮಾರ್ಟ್ ಕಾರ್ಡ್‌ಗಳನ್ನು ಸ್ಕ್ಯಾನ್ ಮಾಡಲು ಮತ್ತು ಮೌಲ್ಯೀಕರಿಸಲು ಕ್ಯಾಮರಾ ಕೂಡ ಇದರಲ್ಲಿ ಇರುತ್ತದೆ. ಒಂದು ವೇಳೆ ಸರ್ಕಾರವು ಶಕ್ತಿ ಯೋಜನೆಯ ಫಲಾನುಭವಿಗಳಿಗೆ ಸ್ಮಾರ್ಟ್ ಕಾರ್ಡ್‌ಗಳನ್ನು ನೀಡಿದರೆ, ಅದನ್ನೂ ಅಳವಡಿಸಿಕೊಳ್ಳಲು ಈ ಯಂತ್ರಗಳಲ್ಲಿ ಅವಕಾಶ ಇರುತ್ತದೆ.

ಆನ್‌ಲೈನ್ ಟಿಕೆಟ್ ಕಾಯ್ದಿರಿಸುವಿಕೆ ವ್ಯವಸ್ಥೆಗಳನ್ನು ಟ್ರ್ಯಾಕಿಂಗ್ ಮಾಡುವುದು ಮತ್ತು ಖಾಲಿ ಇರುವ ಆಸನಗಳ ಆಧಾರದ ಮೇಲೆ ಟಿಕೆಟ್‌ಗಳನ್ನು ನೀಡುವುದು, ಸ್ಥಳ ಟ್ರ್ಯಾಕಿಂಗ್ ಮತ್ತು ಇತರ ಸುಧಾರಿತ ವೈಶಿಷ್ಟ್ಯಗಳಂತಹ ಹಲವು ವೈಶಿಷ್ಟ್ಯಗಳಿವೆ. ಆದರೆ, ಅವುಗಳನ್ನು ತಕ್ಷಣವೇ ಸೇರಿಸಲು ಸಾಧ್ಯವಾಗುವುದಿಲ್ಲ. ಹಂತ ಹಂತದಲ್ಲಿ ಎಲ್ಲವನ್ನೂ ಅಳವಡಿಸಿಕೊಳ್ಳಲಾಗುವುದು ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಅಂಧ ಕರ್ನಾಟಕದ ಆಟಗಾರ್ತಿಯರಿಗೆ ತಲಾ 10 ಲಕ್ಷ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಬರವಣಿಗೆಯಲ್ಲಿ ಖುಷಿ ಕಂಡ ಪೊಲೀಸ್ ಅಧಿಕಾರಿ: 'ಬಸವಣ್ಣನ ವಚನ' ಗಳನ್ನು ಇಂಗ್ಲೀಷ್ ಗೆ ಅನುವಾದ ಮಾಡ್ತಿರೋ DYSP ಬಸವರಾಜ್ ಯಲಿಗಾರ್!

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

SCROLL FOR NEXT