ಯು.ಟಿ. ಖಾದರ್ 
ರಾಜ್ಯ

ಯು.ಟಿ ಖಾದರ್ ಸಾಮ್ರಾಜ್ಯ ಉಳ್ಳಾಲದಲ್ಲಿ 'ಪಾಕ್ ಕುನ್ನಿಗಳು' ಇನ್ನೂ ಇದ್ದಾರೆ : ಸಿ.ಟಿ ರವಿ

ಯು ಟಿ ಖಾದರ್ ಸಾಮ್ರಾಜ್ಯ ಉಲ್ಲಾಳದಲ್ಲಿ ಪಾಕ್ ಕುನ್ನಿಗಳು ಇನ್ನೂ ಇದ್ದಾರೆ. ಹಾಗಾಗಿ, ಪಾಕಿಸ್ತಾನದ ಕುನ್ನಿಗಳೇ ದೇಶ ಬಿಟ್ಟು ತೊಲಗಿ ಎಂದು ನಾನು ಸಾವಿರ ಬಾರಿ ಹೇಳುತ್ತೇನೆ ಎಂದು ಬಿಜೆಪಿ ಮುಖಂಡ ಸಿ.ಟಿ ರವಿ ತಿಳಿಸಿದ್ದಾರೆ.

ಮಂಗಳೂರು: ಯು ಟಿ ಖಾದರ್ ಸಾಮ್ರಾಜ್ಯ ಉಲ್ಲಾಳದಲ್ಲಿ ಪಾಕ್ ಕುನ್ನಿಗಳು ಇನ್ನೂ ಇದ್ದಾರೆ. ಹಾಗಾಗಿ, ಪಾಕಿಸ್ತಾನದ ಕುನ್ನಿಗಳೇ ದೇಶ ಬಿಟ್ಟು ತೊಲಗಿ ಎಂದು ನಾನು ಸಾವಿರ ಬಾರಿ ಹೇಳುತ್ತೇನೆ ಎಂದು ಬಿಜೆಪಿ ಮುಖಂಡ ಸಿ.ಟಿ ರವಿ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಸಿ.ಟಿ ರವಿ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರದ ದಿನದಂದು ಮಂಗಳೂರಿನ ಬೋಳಿಯಾರಿನಲ್ಲಿ ನಡೆದಿದ್ದ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೀಕರ್ ಯು ಟಿ ಖಾದರ್ ಹಾಗೂ ಮಂಗಳೂರು ಪೊಲೀಸ್ ಕಮಿಷನರ್ ವಿರುದ್ಧ ವಾಗ್ದಾಳಿ ನಡೆಸಿದರು.

ಪಾಕಿಸ್ತಾನದ ಕುನ್ನಿಗಳೆ... ಎಂದು ಘೋಷಣೆ ಕೂಗಿದರೆ ಪಾಕ್ ಕುನ್ನಿಗಳು ಪ್ರಚೋದನೆಗೆ ಒಳಗಾಗಬೇಕು.'ಮಂಗಳೂರು ಪೊಲೀಸ್ ಕಮಿಷನರ್ ಅವರು ಪಾಕಿಸ್ತಾನದ ಕುನ್ನಿಗಳನ್ನು ಗುರುತಿಸಿ, ಅವರ ಮೇಲೆ ಪ್ರಕರಣ ಹಾಕಿ ಅವರನ್ನ ಗಡೀಪಾರು ಮಾಡಬೇಕು. ಅಥವಾ ಖಾದರ್ ಅವರೇ ಗುರುತಿಸಿ ಅವರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು' ಎಂದರು.

ಭಾರತ್ ಮಾತಾಕೀ‌ ಜೈ ಎಂದಾಗ ಹಾಗೂ ಪಾಕಿಸ್ತಾನಕ್ಕೆ ಬೈದಾಗ ನಮಕ್ ಹರಾಮ್‌ಗಳು ಮಾತ್ರ ಪ್ರಚೋದನೆಗೆ ಒಳಗಾಗುತ್ತಾರೆ. ಆದರೆ, 'ಪಾಕಿಸ್ತಾನದ ಕುನ್ನಿಗಳೇ ಎಂದಿದ್ದಕ್ಕೆ ಮಸೀದಿಯ ಎರಡೂ ಬದಿ ನಿಂತಿದ್ದವರು ಪ್ರಚೋದನೆಗೊಳಗಾಗಿ ಚೂರಿಯಿಂದ ಇರಿದಿದ್ದಾರೆ' ಎಂದು ಮಂಗಳೂರಿನ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಹೇಳಿಕೆ ನೀಡಿದ್ದಾರೆ. ಅವರು ಏಕೆ ಪಾಕಿಸ್ತಾನದ ಕಮಿಷನರ್ ಥರ ವರ್ತಿಸುತ್ತಾರೋ ತಿಳಿಯದು. ಅವರು ಪಾಕಿಸ್ತಾನದ ಅಧಿಕಾರಿಯಲ್ಲ, ಭಾರತದ ಪೊಲೀಸ್ ಅಧಿಕಾರಿ. ಅವರ ಹೇಳಿಕೆ ಸಮರ್ಥನೀಯವಲ್ಲ. ಅದನ್ನು ವಾಪಸ್ ಪಡೆಯಬೇಕು. ಮಸೀದಿಯವರು ಕೊಟ್ಟ ದೂರಿಗೆ ತಕ್ಷಣ ಬಿ ವರದಿ ಸಲ್ಲಿಸಬೇಕು ಎಂದು ಒತ್ತಾಯಿಸಿದರು.

ಇರಿತಕ್ಕೆ ಒಳಗಾದ ಹರೀಶ್, ನಂದ ಕುಮಾರ್‌ ಕುಟುಂಬಗಳಿಗೆ ಸರ್ಕಾರ ತಕ್ಷಣ ಪರಿಹಾರ ನೀಡಬೇಕು. ರಾಜಧರ್ಮದ ಬಗ್ಗೆ ಮಾತನಾಡುವ ವಿಧಾನಸಭಾಧ್ಯಕ್ಷರು ಹಾಗೂ ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಗಾಯಾಳುಗಳು ದಾಖಲಾಗಿರುವ ಆಸ್ಪತ್ರೆಗೆ ತೆರಳಿದ್ದಾಗ ಗಾಯಾಳುಗಳನ್ನು ಭೇಟಿಯಾಗಿ ಸಾಂತ್ವನ ಹೇಳಿಲ್ಲ. ಗಾಯಾಳುಗಳು ಪಾಕಿಸ್ತಾನದ ಕುನ್ನಿಗಳಾಗಿದ್ದರೆ ಅವರು ಆಸ್ಪತ್ರೆಯಲ್ಲೇ ಇರುತ್ತಿದ್ದರು. ಆದರೆ ಗಾಯಾಳುಗಳು ಭಾರತ‌ ಮಾತೆಯ ಸುಪುತ್ರರಾದ ಕಾರಣ ಅವರು ಆಸ್ಪತ್ರೆಗೆ ಬಂದರೂ ಅವರನ್ನು ಭೇಟಿಯಾಗಿಲ್ಲ ಎಂದು ಆರೋಪಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

2nd test, Day 2: 518 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್!

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

SCROLL FOR NEXT