ಸಚಿವ ಸುರೇಶ್ ಗೋಪಿ 
ರಾಜ್ಯ

ISRO ಮುಖ್ಯಸ್ಥ ಸೋಮನಾಥ್ ಭೇಟಿ ಮಾಡಿದ ಸುರೇಶ್ ಗೋಪಿ: ಕೇರಳ ಪ್ರವಾಹ- ತಗ್ಗಿಸುವ ಯೋಜನೆ ಬಗ್ಗೆ ಚರ್ಚೆ

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ರಾಜ್ಯ ಸಚಿವ ಸುರೇಶ್ ಗೋಪಿ ಅವರು ಜೂನ್ 18 ರಂದು ಬೆಂಗಳೂರಿನಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಸೋಮನಾಥ್ ಎಸ್ ಅವರನ್ನು ಭೇಟಿ ಮಾಡಿದರು.

ಬೆಂಗಳೂರು: ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ರಾಜ್ಯ ಸಚಿವ ಸುರೇಶ್ ಗೋಪಿ ಅವರು ಜೂನ್ 18 ರಂದು ಬೆಂಗಳೂರಿನಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಸೋಮನಾಥ್ ಎಸ್ ಅವರನ್ನು ಭೇಟಿ ಮಾಡಿದರು.

ಈ ವೇಳೆ ಕೇರಳದ ಇಡುಕ್ಕಿ ಅಣೆಕಟ್ಟು ಮತ್ತ ಮುಲ್ಲಪೆರಿಯಾರ್ ಪ್ರವಾಹದ ಅಪಾಯವನ್ನು ವಿಶ್ಲೇಷಿಸಲು ಬಾಹ್ಯಾಕಾಶ ತಂತ್ರಜ್ಞಾನ ಆಧಾರಿತ ಬಳಕೆ ಬಗ್ಗೆ ಚರ್ಚಿಸಿದರು. ಪ್ರವಾಸೋದ್ಯಮ ರಾಜ್ಯ ಸಚಿವರೂ ಆಗಿರುವ ಗೋಪಿ ಸಭೆಯಲ್ಲಿ ಕಳವಳ ವ್ಯಕ್ತಪಡಿಸಿ, ಈ ಅಣೆಕಟ್ಟುಗಳಿಗೆ ಸಂಬಂಧಿಸಿದ ಅತ್ಯಂತ ಕೆಟ್ಟ ಪ್ರವಾಹ ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡುವ ತುರ್ತು ಅಗತ್ಯವನ್ನು ಒತ್ತಿ ಹೇಳಿದರು.

ಬುಧವಾರದಂದು ಇಸ್ರೋ ಹೊರಡಿಸಿದ ಪ್ರಕಟಣೆಯ ಪ್ರಕಾರ, ಸಂಭವನೀಯ ಪ್ರವಾಹವನ್ನು ನಿರ್ಣಯಿಸಲು ಮತ್ತು ಸಂಭಾವ್ಯ ಪ್ರದೇಶಗಳನ್ನು ಗುರುತಿಸಲು ಪ್ರವಾಹ ಸಂಶೋಧನೆಯಲ್ಲಿ ತೊಡಗಿರುವ ಸಂಶೋಧಕರಿಗೆ ಹೆಚ್ಚಿನ ಭೂಪ್ರದೇಶದ ಡೇಟಾದಂತಹ ಬಾಹ್ಯಾಕಾಶ ಆಧಾರಿತ ಇನ್‌ಪುಟ್‌ಗಳು ಲಭ್ಯವಾಗುವಂತೆ ಮಾಡಲು ಸೋಮನಾಥ್ ಎಲ್ಲಾ ಬೆಂಬಲವನ್ನು ಭರವಸೆ ನೀಡಿದರು.

ಉಪಗ್ರಹ ಸಂವಹನ ಸಾಮರ್ಥ್ಯಗಳ ಜೊತೆಗೆ ಪಾರುಗಾಣಿಕಾ ಮತ್ತು ಪುನರ್ವಸತಿ ಯೋಜನೆಯೊಂದಿಗೆ ಪ್ರವಾಹ ಅಪಾಯವನ್ನು ಸಂಯೋಜಿಸುವ ಮೂಲಮಾದರಿಯ ಪರಿಹಾರವನ್ನು ಅಭಿವೃದ್ಧಿಪಡಿಸಲು ಅವರು ಸಲಹೆ ನೀಡಿದರು. ವಿಪತ್ತು ನಿರ್ವಹಣೆಗೆ ಬಾಹ್ಯಾಕಾಶ ಆಧಾರಿತ ಬೆಂಬಲದ ಪಾತ್ರದ ಕುರಿತು ಸಾಮರ್ಥ್ಯದ ನಿರ್ಮಾಣವನ್ನು ಸಹ ಸೂಚಿಸಲಾಗಿದೆ.

ಪ್ರತಿಯೊಂದು ಜಲಾನಯನ ಪ್ರದೇಶವು ವಿಭಿನ್ನವಾಗಿರುವುದರಿಂದ ಪ್ರತ್ಯೇಕ ಮಾದರಿಗಳನ್ನು ಸಿದ್ಧಪಡಿಸಬೇಕಾಗುತ್ತದೆ ಎಂದು ಇಸ್ರೋ ಅಧಿಕಾರಿಗಳು ತಿಳಿಸಿದ್ದಾರೆ. ಆದ್ದರಿಂದ ಪರಿಹಾರಗಳು ವಿಭಿನ್ನವಾಗಿರಬೇಕು. ಇಸ್ರೋ ಎಲ್ಲಾ ಸ್ಥಳಗಳಿಗೂ ಇದನ್ನು ಮಾಡಲು ಸಮರ್ಥವಾಗಿದೆ. ಪ್ರಸ್ತುತ ಸ್ಥಳಗಳ ಮಾದರಿಯನ್ನು ಸಿದ್ಧಪಡಿಸಲಾಗುತ್ತಿದ್ದು, ಈ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು ಎಂದು ತಿಳಿದು ಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

SCROLL FOR NEXT