ಬೆಂಗಳೂರು: ಬೆಂಗಳೂರಿನ ಫ್ರೀಡಂ ಪಾರ್ಕ್ (Freedom Park) ಬಳಿ ನಿರ್ಮಾಣ ಮಾಡಲಾಗಿರುವ ವೆಹಿಕಲ್ ಪಾರ್ಕಿಂಗ್ (Vehicle Parking) ಸಂಕೀರ್ಣ ಕೊನೆಗೂ ಉದ್ಘಾಟನೆಯಾಗಿದೆ.
ಇಂದು ಡಿಸಿಎಂ ಡಿಕೆ ಶಿವಕುಮಾರ್ ಫ್ರೀಡಂ ಪಾರ್ಕ್ (Freedom Park) ಬಳಿ ನಿರ್ಮಾಣ ಮಾಡಲಾಗಿರುವ ವೆಹಿಕಲ್ ಪಾರ್ಕಿಂಗ್ (Vehicle Parking) ಅನ್ನು ಲೋಕಾರ್ಪಣೆ ಮಾಡಿದರು.
ಫ್ರೀಡಂ ಪಾರ್ಕ್ ಬಳಿ ವಿಶಾಲವಾಗಿದ ಜಾಗದಲ್ಲಿ ಹೈಟೆಕ್ ಸೌಲಭ್ಯದೊಂದಿಗೆ. ಪಕ್ಕಾ ಪ್ಲಾನ್ ಮಾಡಿ ವಾಹನ ಪಾರ್ಕಿಂಗ್ ಮಾಡಲು ಬಿಬಿಎಂಪಿ ನಿರ್ಮಾಣ ಮಾಡಿತ್ತು.
BBMP ನಗರೋತ್ಥಾನ ಯೋಜನೆಯಡಿ ₹78 ಕೋಟಿ ಅನುದಾನದಲ್ಲಿ ಈ ಬಹುಮಹಡಿ ವಾಹನ ನಿಲುಗಡೆ ಸಂಕೀರ್ಣವನ್ನ ಬಿಬಿಎಂಪಿ ನಿರ್ಮಾಣ ಮಾಡಿದೆ. ಎರಡು ವರ್ಷದ ಹಿಂದೆ ಕಾಮಗಾರಿ ಕಂಪ್ಲಿಟ್ ಆಗಿದೆ. ಬೆಂಗಳೂರು ಮೂಲದ ಪ್ರಿನ್ಸ್ ರಾಯಲ್ ಪಾರ್ಕಿಂಗ್ ಸೊಲ್ಯೂಷನ್ ಬಿಸಿನೆಸ್ ಪ್ರೈವೇಟ್ ಲಿಮಿಟೆಡ್‌ಗೆ ವರ್ಷಕ್ಕೆ 1.55 ಕೋಟಿ ರೂಪಾಯಿಗೆ ಇದರ ನಿರ್ವಹಣೆಯ ಹೊಣೆಗಾರಿಕೆಯನ್ನು ನೀಡಿದೆ.
10 ವರ್ಷಗಳ ಅವಧಿಗೆ ಈ ಗುತ್ತಿಗೆ ಚಾಲ್ತಿಯಲ್ಲಿರಲಿದ್ದು, ವಾರ್ಷಿಕವಾಗಿ ಪಾಲಿಕೆಗೆ 1.5 ಕೋಟಿ ವರಮಾನ ಬರಲಿದೆ ಎಂದು ಅಂದಾಜಿಸಲಾಗಿದೆ.
ವಿಶೇಷತೆಗೆಳೇನು?
ತಂತ್ರಜ್ಞಾನ ಬಳಸಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿದ ದೇಶದಲ್ಲೇ ಮೊದಲ ಸರ್ಕಾರಿ ವಾಹನ ನಿಲುಗಡೆ ಕಟ್ಟಡ ಇದಾಗಿದ್ದು, ಅಡ್ವಾನ್ಸ್ ಪಾರ್ಕಿಂಗ್ ತಂತ್ರಜ್ಞಾನ (ಎಪಿಟಿ) ಹೊಂದಿದ ಹೆಗ್ಗಳಿಕೆ ಇದಕ್ಕಿದೆ. ಒಮ್ಮೆಲೇ 600 ಕಾರು ಹಾಗೂ 750 ಬೈಕ್‌ಗಳು ನಿಲುಗಡೆ ಸ್ಥಳಾವಕಾಶ ಇದ್ದು, ವಾಹನ ನಿಲುಗಡೆ ಕಟ್ಟಡದಲ್ಲಿ ಮಹಿಳೆಯರು ಹಾಗೂ ಅಂಗವಿಕಲರಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
ವಾಹನ ನಿಲುಗಡೆ ಕಟ್ಟಡ ನಗದು ರಹಿತ ಹಾಗೂ ಮಾನವ ರಹಿತ ಅಡ್ವಾನ್ಸ್ ತಂತ್ರಜ್ಞಾನ ಹೊಂದಿದ್ದು, ವಾಹನ ನಿಲುಗಡೆ ಶುಲ್ಕವನ್ನು ಫಾಸ್ಟಾಗ್, ಯುಪಿಐ ಪೇಮೆಂಟ್ ಆ್ಯಪ್‌ಗಳ ಮೂಲಕ ಪಾವತಿಸಬಹುದಾಗಿದೆ. ವಾಹನ ನಿಲುಗಡೆಗೆ ಕಟ್ಟಡ ಪ್ರವೇಶಿಸುವಾಗಲೇ ಚಾಲಕ ಹಾಗೂ ವಾಹನದ ಛಾಯಾಚಿತ್ರ ತೆಗೆಯಲಾಗುತ್ತದೆ.
ಕಟ್ಟಡದ ಎಲ್ಲ ಮೂರು ಮಹಡಿಯಲ್ಲೂ ಉಚಿತ ವೈಫೈ ವ್ಯವಸ್ಥೆ ಕಲ್ಪಿಸಲಾಗಿದ್ದು, ಪ್ರತಿ ಮಹಡಿಯಲ್ಲೂ ಎಲೆಕ್ನಿಕ್ ವಾಹನಗಳಿಗಾಗಿ ಪ್ರತ್ಯೇಕ ಚಾರ್ಜಿಂಗ್ ಕೇಂದ್ರ ಇದೆ. ಪ್ರತಿ ಮಹಡಿಯಲ್ಲಿ ಶೌಚಾಲಯ, ಶುದ್ದ ಕುಡಿಯುವ ನೀರಿನ ಘಟಕ ಇದೆ. ತುರ್ತು ಸಂದರ್ಭಕ್ಕಾಗಿ ಆ್ಯಂಬುಲೆನ್ಸ್ ನಿಯೋಜನೆ ಇದ್ದು, ಮಹಿಳೆಯರ ಸುರಕ್ಷತೆ ಎಸ್‌ಒಎಸ್ ಬಟನ್ ವ್ಯವಸ್ಥೆ ಕಲ್ಪಿಸಲಾಗಿದೆ.
ವಾಹನ ನಿಲ್ಲಿಸಿ ಕೆಲಸಕ್ಕೆ ಹತ್ತಿರ ತೆರಳುವವರಿಗೆ ಪಿಕಪ್ ಡ್ರಾಪ್ ವೆಹಿಕಲ್ ವ್ಯವಸ್ಥೆ ಕೂಡ ಇದ್ದು, ವಿಧಾನಸೌಧ, ಚಿಕ್ಕಪೇಟೆ, ಬಿವಿಕೆ ಐಯ್ಯಂಗಾರ್ ರಸ್ತೆ, ಮೆಜೆಸ್ಟಿಕ್‌ನ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಕಡೆಗೆ ಪಿಕ್ ಡ್ರಾಪ್ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿ 15 ನಿಮಿಷಕ್ಕೊಂದು ವಾಹನ ಪಿಕಪ್ -ಡ್ರಾಪ್ ವ್ಯವಸ್ಥೆ ಮಾಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾರ್ಕಿಂಗ್ ಶುಲ್ಕ
ಮೊದಲ 1 ಗಂಟೆವರೆಗೂ(ಸಬ್ ಹೆಡರ್) ಬೈಕ್ಗೆ 15 ರೂಪಾಯಿ ಮತ್ತು ಕಾರು 25 ರೂಪಾಯಿ, 1-2 ಗಂಟೆವರೆಗೆ (ಸಬ್ ಹೆಡರ್) ಬೈಕ್ ಗೆ 25 ರೂಪಾಯಿ ಮತ್ತು ಕಾರಿಗೆ 40 ರೂಪಾಯಿ ಚಾರ್ಜ್ ಮಾಡಲಾಗುತ್ತಿದೆ. ಅಂತೆಯೇ 2-4 ಗಂಟೆವರೆಗೆ ಕ್ರಮವಾಗಿ ಬೈಕ್ ಮತ್ತು ಕಾರಿಗೆ 40 ರೂಪಾಯಿ ಮತ್ತು 65 ರೂಪಾಯಿ, 4-6 ಗಂಟೆಗೆ 55 ರೂ, 90 ರೂ, 6-10 ಗಂಟೆಗೆ 85 ರೂ-110 ರೂ ಮತ್ತು 10-12 ಗಂಟೆಗೆ ಬೈಕ್ ಗೆ 100 ರೂ ಮತ್ತು ಕಾರಿಗೆ 165 ರೂ ಚಾರ್ಜ್ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.