ಹೈಕೋರ್ಟ್  
ರಾಜ್ಯ

ಪೋಕ್ಸೋ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಇಳಿಕೆ; ಗರಿಷ್ಠ ದಂಡ ಹಾಕಲು ಸೂಕ್ತ ಕಾರಣ ಬೇಕು ಎಂದ ಹೈಕೋರ್ಟ್

ಪೋಕ್ಸೋ ಕಾಯ್ದೆಯಡಿ(POCSO Act) ಆರೋಪಿಯ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಿಂದ 10 ವರ್ಷಕ್ಕೆ ಇಳಿಸಿದ ಕರ್ನಾಟಕ ಹೈಕೋರ್ಟ್, ಪ್ರಕರಣದಲ್ಲಿ ಗರಿಷ್ಠ ದಂಡವನ್ನು ವಿಧಿಸುವಾಗ ಸರಿಯಾದ ಕಾರಣಗಳ ಅಗತ್ಯವನ್ನು ಒತ್ತಿಹೇಳಿದೆ.

ಬೆಂಗಳೂರು: ಪೋಕ್ಸೋ ಕಾಯ್ದೆಯಡಿ(POCSO Act) ಆರೋಪಿಯ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಿಂದ 10 ವರ್ಷಕ್ಕೆ ಇಳಿಸಿದ ಕರ್ನಾಟಕ ಹೈಕೋರ್ಟ್, ಪ್ರಕರಣದಲ್ಲಿ ಗರಿಷ್ಠ ದಂಡವನ್ನು ವಿಧಿಸುವಾಗ ಸರಿಯಾದ ಕಾರಣಗಳ ಅಗತ್ಯವನ್ನು ಒತ್ತಿಹೇಳಿದೆ.

ನ್ಯಾಯಮೂರ್ತಿಗಳಾದ ಶ್ರೀನಿವಾಸ್ ಹರೀಶ್ ಕುಮಾರ್ ಮತ್ತು ಸಿ ಎಂ ಜೋಶಿ ಅವರನ್ನೊಳಗೊಂಡ ವಿಭಾಗೀಯ ಪೀಠ ಚಿಕ್ಕಮಗಳೂರಿನ ಆರೋಪಿ 27 ವರ್ಷದ ಯುವಕನ ಮನವಿಯನ್ನು ಭಾಗಶಃ ಅಂಗೀಕರಿಸಿತು. ಆದರೆ, ನ್ಯಾಯಾಲಯ ದಂಡ ಮೊತ್ತವನ್ನು 5,000 ರೂಪಾಯಿಯಿಂದ 25,000 ರೂಪಾಯಿಗೆ ಏರಿಕೆ ಮಾಡಿದೆ.

ಏನಿದು ಪ್ರಕರಣ?: ಪ್ರಕರಣದಲ್ಲಿ ಆರೋಪಿ ಜೂನ್ 2016 ರಲ್ಲಿ ತನ್ನ ನೆರೆಹೊರೆಯಲ್ಲಿದ್ದ ಅಪ್ರಾಪ್ತ ಬಾಲಕಿ ಜೊತೆ ಸ್ನೇಹ ಬೆಳೆಸಿ ಪದೇ ಪದೇ ಲೈಂಗಿಕ ದೌರ್ಜನ್ಯ ಎಸಗಿದ್ದ. ತನ್ನ ಮಗಳು ಗರ್ಭಿಣಿಯಾಗಿರುವುದನ್ನು ಕಂಡು ಬಾಲಕಿಯ ತಾಯಿ ಡಿಸೆಂಬರ್ 2016ರಲ್ಲಿ ದೂರು ದಾಖಲಿಸಿದ್ದರು. ಡಿಎನ್‌ಎ ಪರೀಕ್ಷೆಯಲ್ಲಿ ಆರೋಪಿ ಜೈವಿಕ ತಂದೆ ಎಂದು ದೃಢಪಟ್ಟಿತ್ತು. ಪೊಲೀಸರು ತಮ್ಮ ತನಿಖೆಯ ನಂತರ ಎಫ್‌ಐಆರ್ ದಾಖಲಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ಜೂನ್ 11, 2018 ರಂದು, ಜಿಲ್ಲಾ ಕೇಂದ್ರ ಪಟ್ಟಣದ ಚಿಕ್ಕಮಗಳೂರಿನ ವಿಶೇಷ ನ್ಯಾಯಾಲಯವು ಆರೋಪಿಗೆ ಪೋಕ್ಸೋ ಕಾಯ್ದೆಯ ಸೆಕ್ಷನ್ 6 ರ ಅಡಿಯಲ್ಲಿ ಜೀವಾವಧಿ ಶಿಕ್ಷೆ ಮತ್ತು ಕ್ರಿಮಿನಲ್ ಬೆದರಿಕೆ ಆರೋಪದ ಮೇಲೆ ಆರೋಪಿಗೆ 5,000 ರೂ ದಂಡ ಹೇರಿತ್ತು.

ಈ ತೀರ್ಪನ್ನು ಆರೋಪಿಗಳು ಹೈಕೋರ್ಟ್‌ನಲ್ಲಿ ಪ್ರಶ್ನಿಸಿ, ಸೂಕ್ತ ದಾಖಲೆಗಳೊಂದಿಗೆ ಬಾಲಕಿಯ ವಯಸ್ಸು ಸಾಬೀತಾಗಿಲ್ಲ ಎಂದು ವಾದಿಸಿದರು.

ಘಟನೆ ಸಮಯದಲ್ಲಿ ಬಾಲಕಿ ವಯಸ್ಸು 12 ಎಂದು ನೀಡಿದ್ದು ಅಪ್ರಸ್ತುತವಾಗಿದ್ದರೂ ಕೂಡ ಪ್ರಕರಣ ಪರಿಶೀಲಿಸಿದ ವಿಭಾಗೀಯ ಪೀಠವು, ಮೌಖಿಕ ಸಾಕ್ಷ್ಯವು ಬಾಲಕಿಯ ಒಪ್ಪಿಗೆಯನ್ನು ಸೂಚಿಸಿದೆ ಎಂದು ಗಮನಿಸಿತು.

ಈ ಒಪ್ಪಿಗೆಯು POCSO ಕಾಯಿದೆಯ ಸೆಕ್ಷನ್ 6 ರ ಅಡಿಯಲ್ಲಿ ಗರಿಷ್ಠ ಶಿಕ್ಷೆಯನ್ನು ವಿಧಿಸುವುದನ್ನು ವಿರೋಧಿಸುತ್ತದೆ ಎಂದು ಪೀಠ ಹೇಳಿತು. ವಿಶೇಷ ನ್ಯಾಯಾಲಯವು ಗರಿಷ್ಠ ಜೀವಾವಧಿ ಶಿಕ್ಷೆಯನ್ನು ವಿಧಿಸಲು ಸಾಕಷ್ಟು ಕಾರಣಗಳನ್ನು ಒದಗಿಸಿಲ್ಲ ಎಂದು ತೀರ್ಮಾನಿಸಿತು.

ಕಾನೂನಿನ ಪ್ರಕಾರ, POCSO ಕಾಯಿದೆಯ ಸೆಕ್ಷನ್ 6 ಕನಿಷ್ಠ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ಗರಿಷ್ಠ ಜೀವಾವಧಿ ಶಿಕ್ಷೆಗೆ ಅವಕಾಶ ನೀಡುತ್ತದೆ. ವಿಶೇಷ ನ್ಯಾಯಾಲಯದ ತೀರ್ಪಿನಲ್ಲಿ ಗರಿಷ್ಠ ಶಿಕ್ಷೆಯನ್ನು ವಿಧಿಸಲು ಕಾರಣಗಳ ಅಗತ್ಯವಿದೆ ಎಂದು ನ್ಯಾಯಾಲಯವು ತೀರ್ಪು ನೀಡಿದೆ.ಪರಿಣಾಮವಾಗಿ, ನ್ಯಾಯಾಲಯವು ತನ್ನ ಇತ್ತೀಚಿನ ಆದೇಶದಲ್ಲಿ, ಶಿಕ್ಷೆಯನ್ನು 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕ್ಸಿ ಜಿನ್‌ಪಿಂಗ್ ಜತೆ ಮಾತುಕತೆ: ಗಡಿಯಾಚೆಗಿನ ಭಯೋತ್ಪಾದನೆ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ ಮೋದಿ

ಜನರನ್ನು ಮೂರ್ಖರನ್ನಾಗಿಸುವವನೇ ಶ್ರೇಷ್ಠ ನಾಯಕ: ಕೇಂದ್ರ ಸಚಿವ ನಿತಿನ್ ಗಡ್ಕರಿ

ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸುವ 'ಎಜುಕೇಟ್ ಗರ್ಲ್ಸ್' NGOಗೆ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ

Rain Alert: ರಾಜ್ಯಾದ್ಯಂತ ಮುಂದಿನ 5 ದಿನ ಭಾರಿ ಮಳೆ; ಬೆಂಗಳೂರು, ಕರಾವಳಿ ಕರ್ನಾಟಕಕ್ಕೆ ಹವಾಮಾನ ಇಲಾಖೆ ಎಚ್ಚರಿಕೆ!

ಬೆಂಗಳೂರು: ಪಿಜಿಯಲ್ಲಿ ಮಲಗಿದ್ದ ಯುವತಿಗೆ ಲೈಂಗಿಕ ಕಿರುಕುಳ, ನಗದು ದೋಚಿ ಪರಾರಿ!

SCROLL FOR NEXT