ಬೆಂಗಳೂರು: ಹಲವು ಬಾರಿ ದೂರು ಕೊಟ್ಟರೂ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ತಮ್ಮ ತಮ್ಮ ಬಡಾವಣೆಗಳಲ್ಲಿ ಭಾನುವಾರ ಸ್ವಯಂ ಸ್ವಚ್ಛತಾ ಕಾರ್ಯ ನಡೆಸಿದ ಬಳಗೆರೆ ಮತ್ತು ವರ್ತೂರು ನಿವಾಸಿಗಳು ಬಿಬಿಎಂಪಿಗೆ ಹಿಡಿಶಾಪ ಹಾಕಿದರು.
ನಾವು ನೀಡುವ ಯಾವುದೇ ದೂರಿಗೂ ಬಿಬಿಎಂಪಿ, ಚುನಾಯಿತ ಪ್ರತಿನಿಧಿಗಳು ಪ್ಪತಿಕ್ರಿಯೆ ನೀಡುತ್ತಿಲ್ಲ. ನಮ್ಮ ಬಳಿ ಹಣವಿಲ್ಲ ಎಂದು ಹೇಳತ್ತಾರೆ. ನಮ್ಮ ಬಡಾವಣೆಗಳಲ್ಲಿ ಅಂಡರ್‌ಗ್ರೌಂಡ್ ಡ್ರೈನೇಜ್ (ಯುಜಿಡಿ) ಇಲ್ಲ. ಸೊಳ್ಳೆಗಳ ಉತ್ಪತ್ತಿ ನಿಯಂತ್ರಿಸಲು ಪಾಲಿಕೆ ಕ್ರಮ ಕೈಗೊಳ್ಳುತ್ತಿಲ್ಲ. ರಸ್ತೆ ಗುಂಡಿಯಿಂದಾಗಿ ಹಲವು ಬಾರಿ ಅಪಘಾತಗಳು ಸಂಭವಿಸಿವೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.
ಶಾಲೆಯಿಂದ ಬರುವಾಗ ನಮ್ಮ ಮಕ್ಕಳು ಧೂಳಿನಿಂದ ಕೂಡಿದ ಗಾಳಿಯನ್ನು ಉಸಿರಾಡುತ್ತಿದ್ದಾರೆ. ಚುನಾಯಿತ ಪ್ರತಿನಿಧಿಗಳು ಏನು ಮಾಡುತ್ತಿದ್ದಾರೆ? ಮಳೆ ಬಂದರೆ ದ್ವಿಚಕ್ರ ವಾಹನ ಸವಾರರು ಪರದಾಡುವಂತಾಗಿದ್ದು, ನೀರು ತುಂಬಿದ ಗುಂಡಿಗಳು, ರಸ್ತೆಗಳು ಜಲಾವೃತ್ತವಾದ ಹಿನ್ನೆಲೆಯಲ್ಲಿ ಸಂಚಾರ ನಿಧಾನಗತಿಯಲ್ಲಿ ಸಾಗವಂತಾಗುತ್ತದೆ ಎಂದು ಹೇಳಿದ್ದಾರೆ.
ಸ್ವಚ್ಛತಾ ಕಾರ್ಯದ ವೇಳೆ ಸ್ಥಳೀಯ ನಿವಾಸಿಗಳು ಬಿಬಿಎಂಪಿ ಚುನಾವಣೆ ನಡೆಸುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಸರ್ಕಾರ ಚುನಾವಣೆ ನಡೆಸಿದರ, ಸ್ಥಳೀಯ ಕೌನ್ಸಿಲರ್ ಗಳನ್ನು ಹೊಣೆಗಾರರನ್ನಾಗಿಸಿ ಕೆಲಸ ಮಾಡಿಸಬಹುದು ಎಂದು ತಿಳಿಸಿದ್ದಾರೆ,