ಹೊಸಪೇಟೆ: ಯುನೆಸ್ಕೋ ಮಾನ್ಯತೆ ಪಡೆದ ಪಾರಂಪರಿಕ ತಾಣವಾದ ಹಂಪಿಯಲ್ಲಿ 70 ಲಕ್ಷ ರೂಪಾಯಿಗಳ ವಿದ್ಯುತ್ ಬಿಲ್‌ಗಳನ್ನು ಇನ್ನೂ ಪಾವತಿಸದ ಕಾರಣ ಕಳೆದ ಎರಡು ತಿಂಗಳಿಂದ ಉತ್ತಮ ಮೆಚ್ಚುಗೆ ಪಡೆದ ಹಂಪಿ ಬೈ ನೈಟ್ ಪ್ರದರ್ಶನವನ್ನು ಸ್ಥಗಿತಗೊಳಿಸಲಾಗಿದೆ.
ಈಗಾಗಲೇ ಬಾಕಿ ಬಿಲ್ ಹಣವನ್ನು ಪಾವತಿಸಲಾಗಿದೆ ಎಂದು ಪ್ರದರ್ಶನ ನಿರ್ವಹಿಸುವ ಖಾಸಗಿ ಕಂಪನಿಯ ಅಧಿಕಾರಿಗಳು ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ. ಮಾನ್ಸೂನ್ ಆರಂಭವಾದ ಕಾರಣ ಹೊರಾಂಗಣ ಪ್ರದರ್ಶನವನ್ನು ನಿಲ್ಲಿಸಲಾಗಿದೆ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.
ಇದರರ್ಥ, ಪ್ರದರ್ಶನವನ್ನು ನಿರ್ವಹಿಸುವ ಅಧಿಕಾರಿಗಳು ಬಿಲ್ ಪಾವತಿಸಿದ್ದರೂ ಪ್ರವಾಸೋದ್ಯಮ ಇಲಾಖೆ ಮತ್ತು ಹಂಪಿ ವಿಶ್ವ ಪರಂಪರೆಯ ಪ್ರದೇಶ ನಿರ್ವಹಣಾ ಪ್ರಾಧಿಕಾರದ (HWHAMA) ಅಧಿಕಾರಿಗಳು ಇನ್ನೂ ಬಿಲ್ ಪಾವತಿಸಿಲ್ಲ ಎನ್ನಲಾಗುತ್ತಿದೆ. ‘ಹಂಪಿ ಬೈ ನೈಟ್’ ವಾರಾಂತ್ಯದಲ್ಲಿ ಮತ್ತು ವಿಶೇಷ ದಿನಗಳಲ್ಲಿ ನಡೆಯುತ್ತದೆ. ಬಿಲ್ ಬಾಕಿ ಇರುವ ಕಾರಣ ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ (ಜೆಸ್ಕಾಂ) ಜಿಲ್ಲಾಡಳಿತಕ್ಕೆ ನೋಟಿಸ್ ಜಾರಿ ಮಾಡಿದೆ. ಇದೀಗ ಸಂಪೂರ್ಣ ಯೋಜನೆ ಕೈಗೆತ್ತಿಕೊಳ್ಳಲು ಜಿಲ್ಲಾಡಳಿತ ಮುಂದಾಗಿದೆ.
ಕಾರ್ಯಕ್ರಮವನ್ನು ನಿರ್ವಹಿಸುವ ಇನ್ನೋವೇಟಿವ್ ಲೈಟಿಂಗ್ ಸಿಸ್ಟಂನ ಸಿಇಒ ಕೃಷ್ಣ ಕುಮಾರ್ ಮಾತನಾಡಿ “ನಾವು ನಮ್ಮ ಪಾಲನ್ನು ಪಾವತಿಸಿದ್ದೇವೆ ಮತ್ತು ಪ್ರತಿ ತಿಂಗಳು ಬಿಲ್‌ಗಳನ್ನು ತೆರವುಗೊಳಿಸುತ್ತೇವೆ. ಹೆರಿಟೇಜ್ ಸೈಟ್ ಐದು ಟ್ರಾನ್ಸ್‌ಫಾರ್ಮರ್‌ಗಳನ್ನು ಹೊಂದಿದೆ.
500 kWh ಸಾಮರ್ಥ್ಯದ ಎರಡು ಮತ್ತು 250 kWh ನ ಮೂರುಟ್ರಾನ್ಸ್‌ಫಾರ್ಮರ್‌ಗಳಿವೆ. ನಾವು ಎರಡು 500 kWh ಟ್ರಾನ್ಸ್‌ಫಾರ್ಮರ್‌ಗಳನ್ನು ಮಾತ್ರ ಬಳಸಿದ್ದೇವೆ. ಪ್ರತಿ ತಿಂಗಳು ಸರಾಸರಿ 6,000 ಪ್ರವಾಸಿಗರು ಪ್ರದರ್ಶನವನ್ನು ಆನಂದಿಸಿದ್ದಾರೆ. ಪ್ರದರ್ಶನವನ್ನು ಜಿಲ್ಲಾಡಳಿತ ವಹಿಸಿಕೊಂಡ ಬಗ್ಗೆ ನಮಗೆ ತಿಳಿದಿಲ್ಲ ಎಂದಿದ್ದಾರೆ.
ಗೆಸ್ಕಾಂ ನೋಟಿಸ್ ಕಳುಹಿಸಿದ ಮೇಲೆ ಜಿಲ್ಲಾ ಆಡಳಿತದ ಹಿರಿಯ ಅಧಿಕಾರಿಯೊಬ್ಬರು, “ನಾವು ರಾಜ್ಯ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆಯುತ್ತೇವೆ. ನಾವು ಆದಷ್ಟು ಬೇಗ ಸಮಸ್ಯೆಯನ್ನು ಪರಿಹರಿಸುತ್ತೇವೆ ಮತ್ತು ಪ್ರದರ್ಶನವನ್ನು ಪುನರಾರಂಭಿಸುತ್ತೇವೆ. ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಜಯನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ವಿಚಾರವನ್ನು ಹೇಳಿದ್ದೆವು. ಸರ್ಕಾರದ ಮುಂದಿನ ಸೂಚನೆಗಳಿಗಾಗಿ ನಾವು ಕಾಯುತ್ತಿದ್ದೇವೆ ಎಂದು ತಿಳಿಸಿದ್ದಾರೆ.