ಹುಬ್ಬಳ್ಳಿ: ಲೋಹಿಯಾನಗರದ ನಿವಾಸಿ ಆಕಾಶ ಮಠಪತಿ ಅನುಮಾನಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿ ಆರೋಪಿಗಳನ್ನು ಹುಬ್ಬಳ್ಳಿ ಪೊಲೀಸರು ಬಂಧಕ್ಕೊಳಪಡಿಸಿದ್ದಾರೆ.
ಆಕಾಶ್ ಅವರ ಮೃತದೇಹ ಜೂನ್ 22 ರಂದು ಕೆರೆಯ ದಡದಲ್ಲಿ ಪತ್ತೆಯಾಗಿತ್ತು. ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿತ್ತು. ಈ ವೇಳೆ ಮೃತದೇಹದ ಹಣೆ ಹಾಗೂ ಕತ್ತಿನ ಭಾಗದಲ್ಲಿ ಗಾಯಗಳಾಗಿರುವುದು ಪತ್ತೆಯಾಗಿದೆ. ಈ ಮಣೋತ್ತರ ಪರೀಕ್ಷೆ ವರದಿಯನ್ನು ಹುಬ್ಬಳ್ಳಿ-ಧಾರವಾಡ ಪೊಲೀಸರು ವಿವರವಾದ ವಿಶ್ಲೇಷಣೆಗಾಗಿ ಎಫ್‌ಎಸ್‌ಎಲ್ ಕೇಂದ್ರಕ್ಕೆ ರವಾನಿಸಿದ್ದಾರೆ.
ಈ ನಡುವೆ ಪ್ರಕರಣ ಸಂಬಂಧ ಪೊಲೀಸರು ಮಂದಿ ಎಂಟು ಆರೋಪಿಗಳನ್ನು ಬಂಧಿಸಿದ್ದು, ಈ ಪೈಕಿ ಓರ್ವ ಆಕಾಶ್‌ನನ್ನು ಹೊಡೆದು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆಂದು ತಿಳಿದುಬಂದಿದೆ.
ಆಕಾಶ್ ಮೃತಪಟ್ಟ ವೇಳೆ ಮದ್ಯದ ಅಮಲಿನಲ್ಲಿದ್ದ. ರಕ್ತದ ಮಾದರಿಗಳಲ್ಲಿ ಇದು ಪತ್ತೆಯಾಗಿದೆ ಎಂದು ಕಿಮ್ಸ್ ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಆಕಾಶ್ 50 ಕೆಜಿ ತೂಕಕ್ಕಿಂತ ಕಡಿಮೆಯಿದ್ದ, ವಿಪರೀತ ಮದ್ಯ ಸೇವನೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ದೇಹದ ಅಂಗಾಗಳು ಆರೋಗ್ಯಕರವಾಗಿರಲಿಲ್ಲ. ಹಣೆ ಹಾಗೂ ಕತ್ತಿನ ಭಾಗದಲ್ಲಿ ಹೊಡೆದಿರುವ, ರಕ್ತ ಹೆಪ್ಪುಗಟ್ಟಿರುವ ಗುರುತುಗಳಿವೆ. ಇದೇ ಸಾವಿಗೆ ಕಾರಣವಾಗಿದೆ ಎಂದು ಕಿಮ್ಸ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಈ ನಡುವೆ ಆಕಾಶ್ ಪೋಷಕರು ಸೊಸೆ ಕಾವ್ಯಾ ಮತ್ತ ಆಕೆಯ ಸಂಬಂಧಿಕರು ಹಾಗೂ ಸ್ನೇಹಿತರ ಮೇಲೆ ಕೊಲೆ ಆರೋಪ ಮಾಡಿದ್ದಾರೆ.