ನಂದಿನಿ ಹಾಲಿನ ಪ್ಯಾಕೆಟ್ 
ರಾಜ್ಯ

ಹಾಲನ್ನೇ ಕಡಿಮೆ ಖರೀದಿಸುತ್ತೇವೆ, ಟೀ-ಕಾಫಿ ಬೆಲೆ ಏರಿಕೆ ಮಾಡಲ್ಲ: ಹೋಟೆಲ್ ಮಾಲೀಕರು

ಕಾಫಿ-ಟೀ ಬೆಲೆ ಏರಿಕೆ ಮಾಡುವುದಿಲ್ಲ. ಹಾಲನ್ನೇ ಕಡಿಮೆ ಖರೀದಿ ಮಾಡುತ್ತೇವೆಂದು ಬೆಂಗಳೂರು ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳ ಸಂಘದ ಸದಸ್ಯರು ಹೇಳಿದ್ದಾರೆ.

ಬೆಂಗಳೂರು: ಕಾಫಿ-ಟೀ ಬೆಲೆ ಏರಿಕೆ ಮಾಡುವುದಿಲ್ಲ. ಹಾಲನ್ನೇ ಕಡಿಮೆ ಖರೀದಿ ಮಾಡುತ್ತೇವೆಂದು ಬೆಂಗಳೂರು ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳ ಸಂಘದ ಸದಸ್ಯರು ಹೇಳಿದ್ದಾರೆ.

ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳ ಸಂಘದ ಅಧ್ಯಕ್ಷ ಪಿಸಿ.ರಾವ್ ಅವರು ಮಾತಾಡಿ, ಕೆಎಂಎಫ್ ಹಾಲಿನ ದರವನ್ನು ಹೆಚ್ಚಿಸಿಲ್ಲ ಎಂದು ಹೇಳಿದೆ. ಅರ್ಧ/ಒಂದು ಲೀಟರ್ ಪ್ಯಾಕೆಟ್‌ಗೆ 50ಎಂಎಲ್ ಹಾಲನ್ನು ಹೆಚ್ಚು ಸೇರಿಸಿದ್ದು, ಹೆಚ್ಚಿನ ಹಾಲು ಹಿನ್ನೆಲೆಯಲ್ಲಿ ಅದಕ್ಕೆ ಶುಲ್ಕ ವಿಧಿಸಿದೆ. ಇದರಿಂದ ಹೆಚ್ಚಿನ ವ್ಯತ್ಯಾಸವಾಗುದಿಲ್ಲ. ವಾಸ್ತವವಾಗಿ, ನಾವು ಕಡಿಮೆ ಹಾಲು ಖರೀದಿಸುತ್ತೇವೆ. ಉದಾಹರಣೆಗೆ, ಒಂದು ಹೋಟೆಲ್ 100 ಲೀಟರ್ ಖರೀದಿಸುತ್ತಿದ್ದ ಹೋಟೆಲ್ ಇದೀಗ ಕೇವಲ 95 ಲೀಟರ್ ಖರೀದಿಸಲಿದೆ. ಹೀಗಾಗಿ ಬೆಲೆ ಏರಿಕೆ ಮಾಡುವುದಿಲ್ಲ ಎಂದು ಹೇಳಿದರು.

ಈ ನಡುವೆ 500 ಎಂಎಲ್ ಮತ್ತು 1000 ಎಂಎಲ್ ಪ್ಯಾಕೆಟ್‌ಗಳಿಗೆ ಇನ್ನೂ 2 ರೂಪಾಯಿ ನೀಡುವಂತೆ ಹಲವು ಕೇಳಿದ ಹಾಲು ಮಾರಾಟಗಾರರೊಂದಿಗೆ ಗ್ರಾಹಕರು ವಾಗ್ವಾದಕ್ಕಿಳಿದ ಘಟನೆಗಳು ಕೂಡ ಹಲವೆಡೆ ಕಂಡು ಬಂದಿತ್ತು.

ಗ್ರಾಹಕರಾದ ರೂಪಾ ಪಿ ಎಂಬುವವರು ಮಾತನಾಡಿ, ಕೆಎಂಎಫ್ ಪ್ರತಿ ಪ್ಯಾಕೆಟ್‌ನಲ್ಲಿ ಹೆಚ್ಚುವರಿ 50 ಎಂಎಲ್ ಘೋಷಿಸಿದೆ. ಆದರೆ, ಪ್ಯಾಕೆಟ್‌ನಲ್ಲಿ ಅದರ ಉಲ್ಲೇಖವಿಲ್ಲ. ಪ್ಯಾಕೆಟ್ ಗಳ ಮೇಲೆ 500ml ಅಥವಾ 1000ml ಅನ್ನೇ ಮುದ್ರಿಸಲಾಗಿದೆ. ಹಾಗಿರುವಾಗ ಹೆಚ್ಚುವರಿ ಹಾಲಿದೆ ಎಂದು ನಂಬುವುದು ಹೇಗೆ? ಬದಲಾವಣೆ ಮಾಡಿರುವುದಾದರೆ, ಪ್ಯಾಕೆಟ್ ಮೇಲೆ ಹೊಸ ಬೆಲೆ ಮತ್ತು ಪ್ರಮಾಣವನ್ನು ಮುದ್ರಿಸಬೇಕು ಎಂದು ಹೇಳಿದ್ದಾರೆ.

ಮತ್ತೋರ್ವ ಗ್ರಾಹಕ ನವೀನ್ ಎಲ್ ಎಂಬುವವರು ಮಾತನಾಡಿ, 'ಹೆಚ್ಚು ಶುಲ್ಕ ವಿಧಿಸಿ ಹೆಚ್ಚುವರಿ ಹಾಲು ಖರೀದಿಸುವಂತೆ ಸರಕಾರ ಒತ್ತಾಯಿಸುತ್ತಿದೆ. ನಮ್ಮಲ್ಲಿ ಹಲವರು ಹೆಚ್ಚುವರಿ ಹಾಲು ಬಯಸುವುದಿಲ್ಲ. ಸರ್ಕಾರ ತನ್ನ ನಿರ್ಧಾರಗಳನ್ನು ನಮ್ಮ ಮೇಲೆ ಹೇರುವಂತಿಲ್ಲ. ಇದೀಗ ಅಪಾರ್ಟ್ಮೆಂಟ್ ಸಮುಚ್ಚಯದ ಜನರು ಹಾಲಿನ ಬ್ರಾಂಡ್ ಅನ್ನು ಬದಲಾಯಿಸಲು ನಿರ್ಧರಿಸಿದ್ದಾರೆಂದು ಹೇಳಿದ್ದಾರೆ.

ಕೇಶವ ಎಲ್ ಎಂಬುವವರು ಮಾತನಾಡಿ, ಹೆಚ್ಚುವರಿ ಹಾಲು ಸಂಗ್ರಹಣೆ ಸಮಸ್ಯೆ ನಿವಾರಣೆಗೆ ಕೆಎಂಎಫ್ ಮತ್ತು ಸರಕಾರ ಪರ್ಯಾಯ ಪರಿಹಾರಕ್ಕೆ ಮುಂದಾಗಬೇಕಿತ್ತು. ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಹಣ ಬೇಕಾಗಿರುವುದಾದರೆ ನೇರವಾಗಿ ಮಾತನಾಡಬೇಕು. ಇದರಿಂದ ಜನರು ಪರದಾಡುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಏತನ್ಮಧ್ಯೆ, ಬುಧವಾರ ಬೆಳಿಗ್ಗೆಯಿಂದ ಅರ್ಧ / ಒಂದು ಲೀಟರ್ ಪ್ಯಾಕೆಟ್‌ಗಳಿಗೆ 50 ಮಿಲಿ ಹೆಚ್ಚು ಹಾಲನ್ನು ಸೇರಿಸಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷರು ತಿಳಿಸಿದ್ದಾರೆ.

ಬೆಳಗ್ಗೆ 10 ಗಂಟೆಯವರೆಗೆ ಬಳಸುತ್ತಿದ್ದ ಪ್ಯಾಕಿಂಗ್ ರೋಲ್‌ಗಳು ಹಳೆಯವು. ಪ್ಯಾಕೆಟ್‌ಗಳ ಮೇಲೆ 500ml ಮತ್ತು 1000ml ಎಂದು ಮುದ್ರಿಸಲಾಗಿತ್ತು. ಆದರೆ, ಅವುಗಳಲ್ಲಿನ ಹಾಲಿನ ಪ್ರಮಾಣವು 550 ಮಿಲಿ ಮತ್ತು 1050 ಮಿಲಿ ಹೊಂದಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT