ಪ್ರಾತಿನಿಧಿಕ ಚಿತ್ರ 
ರಾಜ್ಯ

ಮಕ್ಕಳ ಆರೈಕೆ ಮಾಡುವುದು ಪೂರ್ಣಾವಧಿ ಕೆಲಸ, ಗಂಡ ಪತ್ನಿಗೆ ಹಣ ನೀಡಬೇಕು: ಕರ್ನಾಟಕ ಹೈಕೋರ್ಟ್

ಹೆಂಡತಿ ಕೆಲಸ ಮಾಡಲು ಮತ್ತು ಸಂಪಾದಿಸಲು ಅರ್ಹಳಾಗಿದ್ದಾಳೆ, ಆದ್ದರಿಂದ ಆಕೆಗೆ ಹೆಚ್ಚಿನ ಆರ್ಥಿಕ ಬೆಂಬಲದ ಅಗತ್ಯವಿಲ್ಲ ಎಂದು ತನ್ನ ಮಕ್ಕಳನ್ನು ನೋಡಿಕೊಳ್ಳಲು ಹೆಂಡತಿಯ ಉಪನ್ಯಾಸಕ ಹುದ್ದೆಯನ್ನು ತೊರೆಯುವಂತೆ ಮಾಡಿದ ಪತಿಯ ವಾದವನ್ನು ತಳ್ಳಿಹಾಕಿದ ಕರ್ನಾಟಕ ಹೈಕೋರ್ಟ್, ಜೀವನಾಂಶವಾಗಿ ಪತ್ನಿಗೆ ತಿಂಗಳಿಗೆ 36,000 ರೂ. ನೀಡಬೇಕು ಎಂದಿದೆ.

ಬೆಂಗಳೂರು: ಹೆಂಡತಿ ಕೆಲಸ ಮಾಡಲು ಮತ್ತು ಸಂಪಾದಿಸಲು ಅರ್ಹಳಾಗಿದ್ದಾಳೆ, ಆದ್ದರಿಂದ ಆಕೆಗೆ ಹೆಚ್ಚಿನ ಆರ್ಥಿಕ ಬೆಂಬಲದ ಅಗತ್ಯವಿಲ್ಲ ಎಂದು ತನ್ನ ಮಕ್ಕಳನ್ನು ನೋಡಿಕೊಳ್ಳಲು ಹೆಂಡತಿಯ ಉಪನ್ಯಾಸಕ ಹುದ್ದೆಯನ್ನು ತೊರೆಯುವಂತೆ ಮಾಡಿದ ಪತಿಯ ವಾದವನ್ನು ತಳ್ಳಿಹಾಕಿದ ಕರ್ನಾಟಕ ಹೈಕೋರ್ಟ್, ಜೀವನಾಂಶವಾಗಿ ಪತ್ನಿಗೆ ತಿಂಗಳಿಗೆ 36,000 ರೂ. ನೀಡಬೇಕು ಎಂದಿದೆ.

ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು, ಕೆನರಾ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ಪತಿಗೆ ಮಾಸಿಕ 36,000 ರೂ. ಪಾವತಿಸುವಂತೆ ಸೂಚಿಸಿದ್ದಾರೆ. 2023ರ ಜೂನ್‌ನಲ್ಲಿ ಆನೇಕಲ್‌ನ ಸೆಷನ್ಸ್ ನ್ಯಾಯಾಲಯವು ಪತ್ನಿಗೆ 18,000 ರೂ. ಪಾತವಿಸುವಂತೆ ಹೇಳಿತ್ತು. ಬಳಿಕ 41 ವರ್ಷದ ಮಹಿಳೆ ತನಗೆ ಮತ್ತು ತನ್ನಿಬ್ಬರು ಇಬ್ಬರು ಮಕ್ಕಳಿಗೆ ತಿಂಗಳಿಗೆ 36,000 ರೂ. ನೀಡುವಂತೆ ಕೇಳಿದ್ದರು.

ಜೀವನ ವೆಚ್ಚಕ್ಕೆ ಅನುಗುಣವಾಗಿ ಅಥವಾ ಅವರು ಪತಿಯೊಂದಿಗೆ ಉಳಿದುಕೊಂಡರೂ ಜೀವನಾಂಶವನ್ನು ಹೆಂಡತಿ ಮತ್ತು ಮಕ್ಕಳಿಗೆ ಒದಗಿಸಬೇಕು. ಪತ್ನಿ ಕೆಲಸ ಮಾಡಲು ಅರ್ಹಳಾಗಿದ್ದಾಳೆ ಎಂಬ ಪತಿಯ ವಾದದ ಆಧಾರದ ಮೇಲೆ ತಿಂಗಳಿಗೆ ಕೇವಲ 18,000 ರೂ.ಗಳನ್ನು ಜೀವನಾಂಶವಾಗಿ ನೀಡಿದ್ದ ಸೆಷನ್ಸ್ ನ್ಯಾಯಾಲಯದ ಹಿಂದಿನ ತೀರ್ಪಿನಲ್ಲಿ ದೋಷವಿದೆ ಎಂದು ನ್ಯಾಯಾಲಯ ಹೇಳಿದೆ.

ಪತ್ನಿಯು ಸೋಮಾರಿಯಾಗಿದ್ದಾಳೆ. ಹೀಗಾಗಿ, ಆಕೆ ಸಂಪಾದನೆ ಮಾಡುತ್ತಿಲ್ಲ ಎಂಬ ಪತಿಯ ವಾದವನ್ನು ತಳ್ಳಿಹಾಕಿದ ನ್ಯಾಯಾಲಯ, ಇದು ‘ಅಸಂಬದ್ಧ’ವಾಗಿದೆ. ಅರ್ಹತೆ ಹೊಂದಿರುವುದರಿಂದ ಜೀವನಾಂಶವನ್ನು ಪಡೆಯಲು ಹೆಂಡತಿ ಅನರ್ಹ ಎಂದು ಹೇಳಲಾಗುವುದಿಲ್ಲ. ಪ್ರತಿಯೊಂದು ಪ್ರಕರಣವನ್ನು ಪ್ರತ್ಯೇಕವಾಗಿ ಮೌಲ್ಯಮಾಪನ ಮಾಡಬೇಕು. ಹೆಂಡತಿ, ಗೃಹಿಣಿ ಮತ್ತು ತಾಯಿಯಾಗಿ ಆಕೆ ಬಿಡುವಿಲ್ಲದಂತೆ ಕೆಲಸ ಮಾಡುತ್ತಾಳೆ. ವಿಶೇಷವಾಗಿ ಮಕ್ಕಳನ್ನು ನೋಡಿಕೊಳ್ಳುವಲ್ಲಿ ಆಕೆಯ ಜವಾಬ್ದಾರಿಗಳು ದಿನದ 24 ಗಂಟೆಯೂ ಇರುತ್ತವೆ ಎಂದು ನ್ಯಾಯಾಲಯ ಹೇಳಿದೆ.

ಹೆಂಡತಿ ತನ್ನ ಕರ್ತವ್ಯಗಳನ್ನು ಪೂರೈಸುತ್ತಿಲ್ಲ. ಆಕೆ ಜಗಳವಾಡುತ್ತಾಳೆ ಮತ್ತು ನನ್ನ ಉದ್ಯೋಗ ಭದ್ರತೆಯು ಅಸ್ಥಿರವಾಗಿದೆ ಎಂದು ಪತಿ ವಾದಿಸಿದರು.

ಪತಿ ಕೆನರಾ ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿದ್ದು, ಮ್ಯಾನೇಜರ್ ಕೇಡರ್‌ನಲ್ಲಿ ಕೆಲಸ ಮಾಡುತ್ತಿದ್ದು, ಇದು ಖಾಸಗಿ ಉದ್ಯೋಗಗಳಂತೆ ಕಸಿದುಕೊಳ್ಳುವ ಕೆಲಸವಲ್ಲ. ಇದು ತಪ್ಪುದಾರಿಗೆಳೆಯುವ ಮತ್ತು ಕಿಡಿಗೇಡಿತನವಾಗಿದೆ. ಕರ್ತವ್ಯನಿಷ್ಠ ತಾಯಿಯು ಕರ್ತವ್ಯನಿಷ್ಠ ಹೆಂಡತಿಗಿಂತ ಉನ್ನತ ಸ್ಥಾನದಲ್ಲಿದ್ದಾಳೆ ಎಂದು ನ್ಯಾಯಾಲಯ ಬಣ್ಣಿಸಿದೆ.

ಮೊದಲ ಮಗುವಿನ ಜನನದ ನಂತರ, ಮಹಿಳೆಯು ತನ್ನ ಕೆಲಸವನ್ನು ಬಿಡಲು ಕೇಳಲಾಯಿತು. ಎರಡನೇ ಮಗು ಜನಿಸಿದಾಗ, ಮಕ್ಕಳನ್ನು ನೋಡಿಕೊಳ್ಳಲು ಹೆಂಡತಿ ಸಂಪೂರ್ಣವಾಗಿ ಉದ್ಯೋಗವನ್ನು ತೊರೆದಿದ್ದರು.

ಸಂಬಂಧ ಹಳಸುವವರೆಗೂ ಎಲ್ಲವೂ ಚೆನ್ನಾಗಿತ್ತು. ಪತ್ನಿಯು ಜೀವನಾಂಶವನ್ನು ಕೇಳಿದಾಗ, ಹೆಂಡತಿಯು ಎಲ್ಲಾ ಅರ್ಹತೆ ಹೊಂದಿದ್ದರೂ, ಆಕೆ ಕೆಲಸ ಮಾಡಲು ಮತ್ತು ಹಣ ಸಂಪಾದಿಸಲು ಸಿದ್ಧಳಿಲ್ಲ ಮತ್ತು ಪತಿ ನೀಡುವ ಜೀವನಾಂಶದಲ್ಲಿ ಬದುಕಲು ಬಯಸುತ್ತಾಳೆ ಎಂದು ಪತಿ ಆರೋಪಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು, Video!

ಅಧಿಕೃತವಾಗಿ 'ಹೊಸ ಗರ್ಲ್‌ ಫ್ರೆಂಡ್‌' ಪರಿಚಯಿಸಿದ ಹಾರ್ದಿಕ್ ಪಾಂಡ್ಯ! Video

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

BBk 12: ಟಾಸ್ಕ್‌ನೇ ಮರೆತುಬಿಟ್ರಾ ಅಸುರಾಧಿಪತಿ ಕಾಕ್ರೋಚ್? ಬಾಗಿಲನ್ನು ಓಪನ್ ಮಾಡಿ ಎಂದ ಕಿಚ್ಚ ಸುದೀಪ್!

SCROLL FOR NEXT