ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ 
ರಾಜ್ಯ

ಕಡಬ ಆ್ಯಸಿಡ್ ದಾಳಿ: ಸಂತ್ರಸ್ತ ಬಾಲಕಿಯರಿಗೆ ತಲಾ 4 ಲಕ್ಷ ರೂ ಪರಿಹಾರ: ಮಹಿಳಾ ಆಯೋಗದ ಅಧ್ಯಕ್ಷೆ

ಕಡಬದ ಆಸಿಡ್ ದಾಳಿ ಸಂತ್ರಸ್ತ ಬಾಲಕಿಯರಿಗೆ ಪ್ರಾಥಮಿಕ ವೈದ್ಯಕೀಯ ಚಿಕಿತ್ಸೆಗಾಗಿ 4 ಲಕ್ಷ ರೂ ಪರಿಹಾರ ನೀಡಲಾಗುತ್ತಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ತಿಳಿಸಿದ್ದಾರೆ.

ಮಂಗಳೂರು: ಕಡಬದ ಆಸಿಡ್ ದಾಳಿ ಸಂತ್ರಸ್ತ ಬಾಲಕಿಯರಿಗೆ ಪ್ರಾಥಮಿಕ ವೈದ್ಯಕೀಯ ಚಿಕಿತ್ಸೆಗಾಗಿ 4 ಲಕ್ಷ ರೂ ಪರಿಹಾರ ನೀಡಲಾಗುತ್ತಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ತಿಳಿಸಿದ್ದಾರೆ.

ಕಡಬದಲ್ಲಿ ಸೋಮವಾರ ಕಿಡಿಗೇಡಿಯಿಂದ ಆ್ಯಸಿಡ್​​ ದಾಳಿಗೊಳಗಾಗಿ ನಗರದ ಎ.ಜೆ.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿನಿಯರನ್ನು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಅವರು ಇಂದು ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು. ಬಳಿಕ ಸಂತ್ರಸ್ತೆಯರು ಹಾಗೂ ಪೋಷಕರಿಗೆ ಸಾಂತ್ವನ ಹೇಳಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಘಟನೆಯ ಬಗ್ಗೆ ಡಿಸಿ ಕಚೇರಿಯಲ್ಲಿ ಎಲ್ಲಾ ಪೊಲೀಸ್ ಅಧಿಕಾರಿಗಳ ಜೊತೆ ಸಭೆ​ ಕರೆಯಲಾಗಿದೆ. ಮೂವರು ವಿದ್ಯಾರ್ಥಿನಿಯರೂ ಅಪಾಯದಿಂದ ಪಾರಾಗಿದ್ದಾರೆ. ಸಂತ್ರಸ್ತೆಯರಲ್ಲಿ ಒಬ್ಬರಿಗೆ ಶೇ.20, ಮತ್ತೊಬ್ಬರಿಗೆ ಶೇ.12 ಹಾಗೂ ಶೇ.10ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಗಾಯಗಾಗಿವೆ. ವಿದ್ಯಾರ್ಥಿನಿಯರ ನಗು, ಅಳುವನ್ನು ನೋಡಿದೆ. ಅವರ ಮನಸ್ಥೈರ್ಯಕ್ಕೆ ಮೆಚ್ಚಲೇಬೇಕು. 'ನಾವು ಮತ್ತೆ ಕನ್ನಡ ಪರೀಕ್ಷೆ ಬರೆಯಬೇಕಾ' ಎಂದು ಕೇಳಿದ್ದಾರೆ. ಇದರ ಬಗ್ಗೆ ಚಿಂತಿಸಬೇಡಿ ಎಂದು ಹೇಳಿದ್ದೇನೆ" ಎಂದು ಹೇಳಿದರು.

ಪರಿಹಾರವಾಗಿ ಸರ್ಕಾರ ಕೂಡಲೇ ವಿದ್ಯಾರ್ಥಿನಿಯರಿಗೆ ತಲಾ 4 ಲಕ್ಷ ರೂಪಾಯಿಂತೆ ನೀಡಲಿದೆ. ಬಳಿಕ 20 ಲಕ್ಷ ರೂಪಾಯಿ ಪ್ಲಾಸ್ಟಿಕ್​ ಶಸ್ತ್ರಚಿಕಿತ್ಸೆಗೆ ನೀಡಲಾಗುವುದು. ಸಂತ್ರಸ್ತೆಯರಿಗೆ ಯಾವುದೇ ಕೊರತೆಯಾಗಬಾರದು. ಈ ಸಂದರ್ಭದಲ್ಲಿ ಅವರ ಚಿಕಿತ್ಸೆಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನೂ ಇಲಾಖೆ ನೋಡಿಕೊಳ್ಳಬೇಕು. ನಾನೂ ಜೊತೆಗಿದ್ದೇನೆ. ಸರ್ಕಾರದಿಂದ ಸಿಗಬೇಕಾದ ಎಲ್ಲಾ ಪರಿಹಾರವನ್ನು ನಾನು ನೋಡಿಕೊಳ್ಳುತ್ತೇನೆ ಎಂದು ತಿಳಿಸಿದರು.

ಆರೋಪಿ ಆ್ಯಸಿಡ್​ ಅನ್ನು ಪ್ಲಾಸ್ಟಿಕ್​ ಬಾಟಲ್​ನಲ್ಲಿ ತಂದಿದ್ದರಿಂದ ಅದರ ಸುಡುವ ಪ್ರಮಾಣವನ್ನು ಸ್ವಲ್ಪ ಬಾಟಲ್​ ಹೀರಿಕೊಂಡಿತ್ತು. ಹೀಗಾಗಿ ವಿದ್ಯಾರ್ಥಿನಿಯರ ಮೇಲೆ ಗಂಭೀರ ಪರಿಣಾಮ ಉಂಟುಮಾಡಿಲ್ಲ" ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಾರತೀಯ ಸೇನೆ ಸಹ ಮೇಲ್ಜಾತಿಯವರಿಂದ ನಿಯಂತ್ರಿಸಲ್ಪಡುತ್ತದೆ': ರಾಹುಲ್ ಗಾಂಧಿಯಿಂದ ಹೊಸ ವಿವಾದ

ರಾಜ್ಯದ ಜನಸಂಖ್ಯೆಯ ಶೇ. 60 ಕ್ಕಿಂತ ಹೆಚ್ಚು ಜನರು 35 ರ ವಯೋಮಾನದವರು- ಸಿಎಂ ಸಿದ್ದರಾಮಯ್ಯ

ಸಾರ್ವಜನಿಕ ಸ್ಥಳಗಳಲ್ಲಿ ಖಾಸಗಿ ಸಂಸ್ಥೆಗಳ ಚಟುವಟಿಕೆಗೆ ನಿರ್ಬಂಧ: ತಡೆಯಾಜ್ಞೆ ವಿರೋಧಿಸಿ ಸರ್ಕಾರದ ಮೇಲ್ಮನವಿ; 'ಆದೇಶ ಕಾಯ್ದಿರಿಸಿದ' ಹೈಕೋರ್ಟ್

ಏಷ್ಯಾ ಕಪ್ ವಿವಾದ: ಪಾಕ್ ಕ್ರಿಕೆಟಿಗ ಹ್ಯಾರಿಸ್ ರೌಫ್‌ಗೆ ಐಸಿಸಿ ಕಠಿಣ ಶಿಕ್ಷೆ, ಸೂರ್ಯಕುಮಾರ್ ಯಾದವ್‌ಗೆ ದಂಡ

ಭಾರತ ಸದ್ಯದಲ್ಲೇ ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಲಿದೆ- ಕೇಂದ್ರ ಹಣಕಾಸು ಸಚಿವೆ

SCROLL FOR NEXT