ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ವಿಶೇಷ ಪೂಜೆ ಮಾಡಿಸುವುದಾಗಿ ಹೇಳಿ ಅವಿವಾಹಿತ ಮಹಿಳೆಗೆ ‘ನಕಲಿ’ ಜ್ಯೋತಿಷಿಗಳಿಂದ ದೋಖಾ!

ಮದುವೆ ತಡವಾಗುತ್ತಿರುವ ಕಾರಣ ಪರಿಹಾರ ಕಂಡುಕೊಳ್ಳಲು ಮುಂದಾದ ಅವಿವಾಹಿತ ಮಹಿಳೆಗೆ ನಕಲಿ ಜ್ಯೋತಿಷಿಗಳು ವಂಚಿಸಿರುವ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು: ಮದುವೆ ತಡವಾಗುತ್ತಿರುವ ಕಾರಣ ಪರಿಹಾರ ಕಂಡುಕೊಳ್ಳಲು ಮುಂದಾದ ಅವಿವಾಹಿತ ಮಹಿಳೆಗೆ ನಕಲಿ ಜ್ಯೋತಿಷಿಗಳು ವಂಚಿಸಿರುವ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ.

ಸಂತ್ರಸ್ತೆ ದಿವ್ಯಾ (ಹೆಸರು ಬದಲಾಯಿಸಲಾಗಿದೆ) ವಿವಾಹಕ್ಕೆ ಸೂಕ್ತ ವರ ಸಿಗದ ಕಾರಣ ಜ್ಯೋತಿಷಿಯನ್ನು ಸಂಪರ್ಕಿಸಿದ್ದಾರೆ. ಒಡಿಶಾ ಮೂಲದ ದಿವ್ಯಾ ವರ್ತೂರಿನ ಗುಂಜೂರಿನ ನಿವಾಸಿಯಾಗಿದ್ದು, ಕಾರ್ಪೊರೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆರೋಪಿ ಹಾಗೂ ಆತನ ಸಹಚರರು ಗ್ರಹಗಳ ಓಲೈಕೆಗಾಗಿ ಕುರಿ ಬಲಿ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳನ್ನು ಮಾಡುವುದಾಗಿ ಹೇಳಿ ಸಂತ್ರಸ್ತೆಗೆ ವಂಚಿಸಿದ್ದಾರೆ.

ತಾವು ಹೇಳುವ ವಿಧಿ ವಿಧಾನಗಳನ್ನು ಮಾಡದಿದ್ದರೆ ಮತ್ತಷ್ಟು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಆರೋಪಿಗಳು ಆಕೆಯನ್ನು ಹೆದರಿಸಿದ್ದಾರೆ. ಅವರು ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಾಗ, ಸಂತ್ರಸ್ತೆಗೆ ಮೋಸ ಹೋಗಿರುವುದು ತಿಳಿಯಿತು. ಬಳಿಕ ಅವರ ಮೊಬೈಲ್ ನಂಬರ್ ಬ್ಲಾಕ್ ಮಾಡಿ ಆರೋಪಿಗಳ ವಿರುದ್ಧ ದಿವ್ಯಾ ವರ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಆರೋಪಿಗಳನ್ನು ಲವ್ ಗುರು ಮತ್ತು ಪರಮೇಶ್ವರ್ ಪಂಡಿತ್ ಎಂದು ಗುರುತಿಸಲಾಗಿದೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ದಿವ್ಯಾ, ನನಗೆ ಮದುವೆಯಾಗಲು ಸಮಸ್ಯೆ ಇದೆ. ಹೀಗಾಗಿ ನಾನು ಇಂಟರ್‌ನೆಟ್‌ನಲ್ಲಿ ಜ್ಯೋತಿಷಿಗಳನ್ನು ಪರಿಶೀಲಿಸಿದೆ ಮತ್ತು ಪರಮೇಶ್ವರ್ ಪಂಡಿತ್ ಅವರ ಸಂಖ್ಯೆ ಕಂಡುಬಂತು ಫೆಬ್ರವರಿ 25 ರಂದು ಪರಮೇಶ್ವರ್ ಎಂದು ಗುರುತಿಸಲಾದ ಆರೋಪಿಗಳಲ್ಲಿ ಒಬ್ಬನಿಗೆ ಕರೆ ಮಾಡಿದೆ. ನಂತರ, ಲವ್ ಗುರು ಎಂದು ಗುರುತಿಸಲಾದ ಇನ್ನೊಬ್ಬ ವ್ಯಕ್ತಿ ನನ್ನೊಂದಿಗೆ ಮಾತನಾಡಲು ಪ್ರಾರಂಭಿಸಿದನು. ಮದುವೆಯಾಗಲು ನನ್ನ ಗ್ರಹಗತಿ ಸರಿಯಿಲ್ಲ ಎಂದು ಹೇಳಿದರು.

ನನ್ನ ಸಮಸ್ಯೆಯನ್ನು ಪರಿಹರಿಸಲು ಅವರು ನನ್ನನ್ನು ಅಘೋರಿಗಳ ಬಳಿಗೆ ಹೋಗಬೇಕು, ನಾನು ಅಘೋರಿಗಳ ಮುಂದೆ ಕುರಿಯನ್ನು ಬಲಿ ಕೊಡಬೇಕು ಎಂದು ಹೇಳಿದ್ದರು. ನನಗೆ ದೊಡ್ಡ ಸಮಸ್ಯೆಗಳಿವೆ , ಹೀಹಾಗಿ ಹಣ ನೀಡದರೆ ಅವರ ಜೊತೆ ಚರ್ಚಿಸಬಹುದು ಎಂದು ಅವರು ನನ್ನನ್ನು ಮತ್ತಷ್ಟು ಹೆದರಿಸಿದರು.

ನನ್ನ ಜಾತಕದಲ್ಲಿ ಕೆಲವು ಸೈತಾನ ಸಮಸ್ಯೆಗಳಿದ್ದು ಅವುಗಳನ್ನು ಪರಿಹರಿಸಬೇಕು ಎಂದು ಬೆದರಿಕೆ ಹಾಕಿದ್ದಾರೆ' ಎಂದು ದಿವ್ಯಾ ಹೇಳಿದ್ದಾರೆ. ಫೆಬ್ರವರಿ 29 ರಿಂದ ಮಾರ್ಚ್ 2 ರವರೆಗೆ ಹಂತ ಹಂತವಾಗಿ 42,000 ರೂ.ಗಳನ್ನು ವರ್ಗಾವಣೆ ಮಾಡಿಸಿಕೊಳ್ಳುವಲ್ಲಿ ಇಬ್ಬರೂ ಯಶಸ್ವಿಯಾಗಿದ್ದಾರೆ.

ಸಂತ್ರಸ್ತೆ ದಿವ್ಯಾ ಶೀಘ್ರವಾಗಿ ದೂರು ದಾಖಲಿಸಿದ್ದರಿಂದ ಆರೋಪಿಗಳ ಎರಡು ಖಾತೆಗಳಿಂದ 17,000 ರೂ. ಹಣ ಸ್ಥಗಿತಗೊಳಿಸಿದೇದೆವ. ಸಂತ್ರಸ್ತೆ ಅವರ ಮೊಬೈಲ್ ಫೋನ್ ಸಂಖ್ಯೆಗಳನ್ನು ನೀಡಿದ್ದಾರೆ. ಅವರನ್ನು ಬಂಧಿಸುವ ಪ್ರಯತ್ನ ಮುಂದುವರಿದಿದೆ' ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT