ಕಾಂಕ್ರಿಟ್ ನ ಘನ ಸ್ಲ್ಯಾಬ್  
ರಾಜ್ಯ

ಬೆಂಗಳೂರು: ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ನಲ್ಲಿ ಗುರುವಾರ ಸತತ 50 ಗಂಟೆಗಳ ಕಾಲ ಕಾಂಕ್ರೀಟ್ ಸ್ಲ್ಯಾಬ್ ಕಾಮಗಾರಿ!

ಸೆಂಟ್ರಲ್ ಸಿಲ್ಕ್ ಬೋರ್ಡ್ (ಸಿಎಸ್‌ಬಿ) ಜಂಕ್ಷನ್ ಅನ್ನು ಸಂಪೂರ್ಣ ಸಿಗ್ನಲ್ ಮುಕ್ತಗೊಳಿಸುವ ಕೆಲಸ ಬಿಎಂಆರ್ ಸಿಎಲ್ ನಿಂದ ನಡೆಯುತ್ತಿದೆ.

ಬೆಂಗಳೂರು: ಸೆಂಟ್ರಲ್ ಸಿಲ್ಕ್ ಬೋರ್ಡ್ (ಸಿಎಸ್‌ಬಿ) ಜಂಕ್ಷನ್ ಅನ್ನು ಸಂಪೂರ್ಣ ಸಿಗ್ನಲ್ ಮುಕ್ತಗೊಳಿಸುವ ಕೆಲಸ ಬಿಎಂಆರ್ ಸಿಎಲ್ ನಿಂದ ನಡೆಯುತ್ತಿದೆ. ಸೆಂಟ್ರಲ್ ಸಿಲ್ಕ್ ಬೋರ್ಡ್ (ಸಿಎಸ್‌ಬಿ) ಜಂಕ್ಷನ್‌ನಲ್ಲಿ ಮೇಲ್ಸೇತುವೆಯ ರಾಂಪ್ ಗೆ ಸಂಬಂಧಿಸಿದಂತೆ ಮೊದಲ ಬಾರಿಗೆ ನಿರಂತರವಾಗಿ 50 ಗಂಟೆಗಳ ಕಾಲ ಕಾಂಕ್ರೀಟ್ ಸುರಿದು ಸ್ಲ್ಯಾಬ್ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಇಲ್ಲಿ 2,520 ಕ್ಯೂಬಿಕ್ ಮೀಟರ್ ಕಾಂಕ್ರೀಟ್ ನಿಂದ ಘನ ಸ್ಲ್ಯಾಬ್ ಮಾಡಲಾಗಿದ್ದು, ಗುರುವಾರದಿಂದ ಕಾಮಗಾರಿ ಆರಂಭವಾಗಲಿದೆ.

ಇದೇ ಮೊದಲ ಬಾರಿಗೆ ಈ ರೀತಿಯ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ, ಕಳೆದ ಎರಡು ತಿಂಗಳಿನಿಂದ, 10,100 ಕಾರ್ಮಿಕರು ರಾಂಪ್ ಸಂಬಂಧಿತ ಕೆಲಸಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇದು ಜನರಿಂದ ತುಂಬಿದ ಜಂಕ್ಷನ್ ಆಗಿರುವುದರಿಂದ ಸಂಚಾರ ಪೊಲೀಸರೊಂದಿಗೆ ಸಮನ್ವಯದಿಂದ ಕೆಲಸ ಮಾಡಬೇಕಾಗುತ್ತದೆ ಎಂದು ಬಿಎಂಆರ್ ಸಿಎಲ್ ಹೊರ ವರ್ತುಲ ರಸ್ತೆ ಮಾರ್ಗದ ಉಪ ಮುಖ್ಯ ಎಂಜಿನಿಯರ್ ಎನ್. ಸದಾಶಿವ TNIE ಗೆ ತಿಳಿಸಿದರು. AFCONS ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ BMRCL ಮೂಲಕ ಈ ಕಾಮಗಾರಿ ಗುತ್ತಿಗೆ ಪಡೆದುಕೊಂಡಿದೆ.

ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ಬಿಎಂಆರ್ ಸಿಎಲ್ ನ ನ ಹಂತ-2A ಮಾರ್ಗವಾಗಿದೆ. ಇದು ಸೆಂಟ್ರಲ್ ಸಿಲ್ಕ್ ಬೋರ್ಡ್ ನಿಂದ K R ಪುರ ನಿಲ್ದಾಣಕ್ಕೆ (ಹೊರ ವರ್ತುಲ ರಸ್ತೆ ಮಾರ್ಗ) ಮತ್ತು ಹಳದಿ ರೇಖೆಯಿಂದ (R V ರಸ್ತೆಯಿಂದ ಬೊಮ್ಮಸಂದ್ರಕ್ಕೆ) ಸಾಗುತ್ತದೆ. ಸಿಎಸ್‌ಬಿ ಜಂಕ್ಷನ್‌ನಲ್ಲಿ ರಸ್ತೆ ಮೇಲ್ಸೇತುವೆ ಮತ್ತು ಐದು ಲೂಪ್‌ಗಳು ಮತ್ತು ಇಳಿಜಾರುಗಳನ್ನು 3 ಕಿಮೀ ಉದ್ದದವರೆಗೆ ಓಡುವ ಸಂಚಾರ ದಟ್ಟಣೆಯನ್ನು ನಿವಾರಿಸಲು ನಿರ್ಮಿಸಲಾಗಿದೆ.

ಎ- ರಾಂಪ್- ರಾಗಿಗುಡ್ಡದಿಂದ ಹೊಸೂರು ರಸ್ತೆ

ಸಿ-ರಾಂಪ್ => ರಾಗಿಗುಡ್ಡದಿಂದ ಕೆ ಆರ್ ಪುರಂ ಕಡೆಗೆ

ಡಿ- ರಾಂಪ್- HSR ಲೇಔಟ್‌ನಿಂದ ರಾಗಿಗುಡ್ಡ ಕಡೆಗೆ

ಬಿ-ರಾಂಪ್ => ಬಿಟಿಎಂ ಲೇಔಟ್‌ನ ನೆಲಮಟ್ಟವನ್ನು ಎ-ರಾಂಪ್‌ನ ಮೊದಲ ಹಂತದ ಫ್ಲೈಓವರ್ ರಸ್ತೆಗೆ ಸಂಪರ್ಕಿಸುತ್ತದೆ

ಇ-ರಾಂಪ್ => ಡಿ-ರಾಂಪ್‌ನ ಮೊದಲ ಹಂತದ ಫ್ಲೈಓವರ್ ರಸ್ತೆಯನ್ನು ಬಿಟಿಎಂ ಲೇಔಟ್‌ನ ನೆಲಮಟ್ಟಕ್ಕೆ ಸಂಪರ್ಕಿಸುತ್ತದೆ

"ಒಟ್ಟು 2520 ಘನ ಮೀಟರ್ ಘನ ಸ್ಲ್ಯಾಬ್ ನ್ನು ರಾಂಪ್ ನಲ್ಲಿ ಇರಿಸಲಾಗಿದೆ, ಇದು 124 ಮೀಟರ್ ಉದ್ದ ಮತ್ತು 15.1 ಮೀಟರ್ ಅಗಲವನ್ನು ಹೊಂದಿರುತ್ತದೆ. "1.8 ಮೀಟರ್ ಆಳವಿದ್ದು, 245 ಟನ್ ಉಕ್ಕು, 225 ಹೈ ಟೆನ್ಸಿಲ್ ಸ್ಟೀಲ್ ಸ್ಟ್ರಾಂಡ್‌ಗಳು ಮತ್ತು 11,074 ಹೈ ಡೆನ್ಸಿಟಿ ಪಾಲಿಥಿಲೀನ್ ಪೈಪ್‌ಗಳನ್ನು ಬಳಸಲಾಗುತ್ತಿದೆ" ಎಂದು ಅವರು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭೀಕರ ಮಳೆಗೆ ಜಮ್ಮು-ಕಾಶ್ಮೀರ ತತ್ತರ: ಸಾವಿನ ಸಂಖ್ಯೆ 41ಕ್ಕೆ ಏರಿಕೆ; ಕೇಂದ್ರದಿಂದ ನೆರವಿನ ಭರವಸೆ; ಮುಂದುವರೆದ ರಕ್ಷಣಾ ಕಾರ್ಯಾಚರಣೆ

ಭಾರತದ ಮೇಲೆ ಅಮೆರಿಕಾ ಸುಂಕಾಸ್ತ್ರ: ದೇಶ ರಕ್ಷಿಸುವಲ್ಲಿ ಪ್ರಧಾನಿ ಮೋದಿ ವಿಫಲ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಜಮ್ಮು-ಕಾಶ್ಮೀರದ ಬಂಡಿಪೋರಾದಲ್ಲಿ ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆ

RSS Song Controversy: ಡಿಕೆಶಿ ಆರ್‌ಎಸ್‌ಎಸ್‌ ಗೀತೆ ಹಾಡಿದ್ದು ತಪ್ಪು, ಕ್ಷಮೆ ಕೇಳಿದ್ದರಿಂದ ಎಲ್ಲವೂ ಮುಗಿದಿದೆ; ಮಲ್ಲಿಕಾರ್ಜುನ ಖರ್ಗೆ

ವಾಲ್ಮೀಕಿ ನಿಗಮ ಹಗರಣ: ಜಾರಿ ನಿರ್ದೇಶನಾಲಯದಿಂದ 5 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು !

SCROLL FOR NEXT