ಸಂಗ್ರಹ ಚಿತ್ರ 
ರಾಜ್ಯ

ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು: ಬಾವಿ ತೋಡುವವರಿಗೆ ಫುಲ್ ಡಿಮ್ಯಾಂಡ್!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೀರಿಗೆ ಹಾಹಾಕಾರ ಎದುರಾಗಿದ್ದು, ನೀರು ಪಡೆಯಲು ಇರುವ ಮಾರ್ಗಗಳಿಗಾಗಿ ಜನರು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇದರ ನಡುವಲ್ಲೇ ಸಾಂಪ್ರದಾಯಿಕ ಬಾವಿ ತೋಡುವವರಿಗೆ ಬೇಡಿಕೆಗಳು ಹೆಚ್ಚಾಗಿದೆ.

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೀರಿಗೆ ಹಾಹಾಕಾರ ಎದುರಾಗಿದ್ದು, ನೀರು ಪಡೆಯಲು ಇರುವ ಮಾರ್ಗಗಳಿಗಾಗಿ ಜನರು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇದರ ನಡುವಲ್ಲೇ ಸಾಂಪ್ರದಾಯಿಕ ಬಾವಿ ತೋಡುವವರಿಗೆ ಬೇಡಿಕೆಗಳು ಹೆಚ್ಚಾಗಿದೆ.

ಜನರು ಆಧುನಿತ ತಂತ್ರಜ್ಞಾನಗಳ ಬದಿಗೊತ್ತಿ, ಅಂತರ್ಜಲ ಮಟ್ಟವನ್ನು ಸುಧಾರಿಸಲು ಸಾಂಪ್ರದಾಯಿ ವಿಧಾನಗಳತ್ತ ಮುಖ ಮಾಡಿದ್ದಾರೆ.

ಸಾಂಪ್ರದಾಯಿಕ ಬಾವಿ ಅಗೆಯುವವರು ಕೇವಲ ಬಾವಿಗಳನ್ನು ಅಗೆಯಲು ಮತ್ತು ಅವುಗಳನ್ನು ಮುಚ್ಚುವ ಕೆಲಸವನ್ನಷ್ಟೇ ಅಲ್ಲದೆ, ಮಳೆನೀರು ಕೊಯ್ಲು ಹಾಗೂ ಇಂಗುಗುಂಡಿಗಳನ್ನು ತೋಡುವ ಕೆಲಸಗಳನ್ನೂ ಮಾಡುತ್ತಿದ್ದು, ಹೀಗಾಗಿ ಇವರಿಗೆ ಬೇಡಿಕೆಗಳು ಹೆಚ್ಚಾಗಿವೆ.

ಕೇವಲ ಸಾಮಾನ್ಯ ಜನರಷ್ಟೇ ಅಲ್ಲದೆ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ) ಎಂಜಿನಿಯರ್‌ಗಳೂ ಕೂಡ ನೀರಿನ ಲಭ್ಯತೆ ತಿಳಿಯಲು ಬಾವಿ ತೋಡುವವರ ನೆರವು ಪಡೆದುಕೊಳ್ಳುತ್ತಿದ್ದಾರೆ.

12 ವರ್ಷದವನಿದ್ದಾಗ ಬಾವಿ ತೋಡುವ ಕೆಲಸ ಆರಂಭಿಸಿದ್ದೆ. ಪೋಷಕರು ಮಾಡುತ್ತಿದ್ದ ಕೆಲಸದ ಸ್ಥಳಕ್ಕೆ ನಾನು ಹೋಗುತ್ತಿದ್ದೆ. ಆಗ ನೀರು ಸಿಗದ ಭೂಮಿ ಇರಲಿಲ್ಲ. ಬಾವಿಗಳನ್ನು ಅಗೆಯುವ ಮೊದಲ ಮಣ್ಣಿನ ಪ್ರಕಾರ, ಹತ್ತಿರದ ಜಲಮೂಲಗಳನ್ನು ಪರಿಶೀಲನೆ ನಡೆಸುತ್ತೇವೆ. ಬಾವಿ ಅಗೆಯಲು ಆರಂಭಿಸಿದಾಗ ಮಣ್ಣಿನ ತೇವ ಹಾಗೂ ಉಷ್ಣತೆಯನ್ನು ಪರಿಶೀಲಿಸಿದರೆ, ನೀರಿಗಾಗಿ ಎಷ್ಟು ಆಳ ಅಗೆಯಬೇಕೆಂಬುದುನ್ನು ತಿಳಿಯಬಹುದು. ನೀರು ಕಂಡ ಬಳಿಕವೇ ನಮಗೆ ಹಣ ನೀಡುವಂತೆ ಹೇಳುತ್ತೇವೆ. ನಾವು ನಮ್ಮ ಕಾರ್ಯದಲ್ಲಿ ಎಂದಿಗೂ ವಿಫಲವಾಗಿಲ್ಲ ಎಂದು ಬಾವಿ ತೋಡುವ ಕೆಲಸ ಮಾಡುತ್ತಿರುವ ಶಂಕರ್ ಎಂಬುವರು ಹೇಳಿದ್ದಾರೆ.

ಕಳೆದ ಎರಡು ವರ್ಷಗಳಿಂದ ಬಾವಿ ತೋಡುವವರಿಗೆ ಬೇಡಿಕೆ ಹೆಚ್ಚಿದೆ. ಮೂರು ವರ್ಷಗಳ ಹಿಂದೆ, ನಮಗೆ ಬೇಡಿಕೆ ಇರಲಿಲ್ಲ, ಇದರಿಂದ ಹಲವರು ತಮ್ಮ ವೃತ್ತಿಯನ್ನು ಬದಲಾಯಿಸುತ್ತಿದ್ದರು. ಈ ವೇಳೆ ನಾನು ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಮನೆ-ಮನೆಗೆ ಹೋಗಿ, ಬಾವಿ ತೋಡುವುದು ಅತವಾ ಸ್ವಚ್ಛಗೊಳಿಸಲು ಬಯಸುತ್ತೀರಾ ಎಂದು ಕೇಳುತ್ತಿದ್ದೆ. ಬಾವಿಗಳಿಗೆ ವರ್ಷಕ್ಕೊಮ್ಮೆ ನಿರ್ವಹಣೆ ಮಾಡಬೇಕಾಗುತ್ತದೆ. ಆದರೆ, ಉತ್ತಮ ಮುಂಗಾರು ಇದ್ದ ಹಿನ್ನೆಲೆಯಲ್ಲಿ ಜನರಿಗೆ ನೀರಿನ ಸಮಸ್ಯೆ ಕಾಣಿಸುತ್ತಿರಲಿಲ್ಲ. ಆದರೆ, ಕಳೆದ ವರ್ಷ ಮಳೆ ಕೊರತೆಯಾದ ಹಿನ್ನೆಲೆಯಲ್ಲಿ ನಮಗೆ ಬೇಡಿಕೆ ಹೆಚ್ಚಾಗಿದೆ ಎಂದು ಬಾವಿ ತೋಡುವ ಕೆಲಸ ಮಾಡುತ್ತಿರುವ ಮತ್ತೊಬ್ಬ ವ್ಯಕ್ತಿ ಕುಮಾರ್ ಎಂಬುವರು ಹೇಳಿದ್ದಾರೆ.

ಕಳೆದ ವರ್ಷದಿಂದ ಹೊಸ ಕೊಳವೆ ಬಾವಿ ತೋಡುವುದು, ಸ್ವಚ್ಛಗೊಳಿಸುವುದು, ಇಂಗು ಗುಂಡಿಗಳ ತೋಡುವುದು ಸೇರಿದಂತೆ 500ಕ್ಕೂ ಹೆಚ್ಚು ಆರ್ಡರ್ ಗಳು ಬಂದಿವೆ ಎಂದು ಮತ್ತೊಬ್ಬ ವ್ಯಕ್ತಿ ರಾಮಕೃಷ್ಣ ಕೆ.ಆರ್ ಹೇಳಿದ್ದಾರೆ.

ಇತ್ತೀಚೆಗೆ ಬೆಂಗಳೂರು ನಗರ ವ್ಯಾಪ್ತಿಗೆ ಸೇರ್ಪಡೆಗೊಂಡ 110 ಹಳ್ಳಿಗಳಲ್ಲಿ ಮಾತ್ರವಲ್ಲದೆ ಚಿಕ್ಕಪೇಟೆ, ಸದಾಶಿವನಗರ, ಮಲ್ಲೇಶ್ವರಂ, ದೊಮ್ಮಲೂರು, ರಾಜಾಜಿನಗರ, ಹಲಸೂರು ಮುಂತಾದ ಏರಿಯಾಗಳಲ್ಲೂ ಬೇಡಿಕೆ ಹೆಚ್ಚಿದೆ.

ನೀರಿನ ಆಳವು ಮಣ್ಣಿನ ಸ್ಥಿತಿ, ಪ್ರದೇಶ ಮತ್ತು ಕಾಂಕ್ರೀಟೀಕರಣವನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ, ಪ್ರದೇಶವು ಕಲ್ಲಿನಿಂದ ಕೂಡಿದ್ದರೆ, ನೀರನ್ನು ಹುಡುಕುವ ಆಳವು ಹೆಚ್ಚು ಇರುತ್ತದೆ. ಇಲ್ಲದಿದ್ದರೆ 30 ಅಡಿ ಒಳಗೆ ನೀರು ಲಭ್ಯವಿರುತ್ತದೆ ಎಂದು ಹೇಳಿದ್ದಾರೆ.

ಕೇವಲ ಮನೆಗಳಷ್ಟೇ ಅಲ್ಲದೆ, ಅಪಾರ್ಟ್ ಮೆಂಟ್ ಸಂಕೀರ್ಣ, ನಿಗಮಗಳು, ಪಂಚಾಯತ್ ಉದ್ಯಾನವನಗಳು ಮತ್ತು ಶಿಕ್ಷಣ ಸಂಸ್ಥೆಗಳೂ ಕೂಡ ಬಾವಿ ಅಗೆಯಲು ಆರ್ಡರ್ ನೀಡುತ್ತಿವೆ. ನಾವು ಕಬ್ಬನ್ ಪಾರ್ಕ್ ಹಾಗೂ ಲಾಲ್ ಬಾಗ್ ನಲ್ಲಿ ಬಾವಿ ತೋಡಿದ್ದೇವೆ. ಕೈಯಿಂದಲೇ ನಾವು ಬಾವಿ ತೋಡುತ್ತೇವೆ. ಅಗಲ ಮತ್ತು ಆಳವನ್ನು ಅವಲಂಬಿಸಿ ಕೆಲಸವು 2-3 ದಿನಗಳಲ್ಲಿ ಪೂರ್ಣಗೊಳ್ಳುತ್ತದೆ.

ತಂದೆ-ತಾಯಿಯಿಂದ ಈ ಕೆಲಸವನ್ನು ಕಲಿತಿದ್ದೆ. ನನ್ನ ಮಕ್ಕಳು ಇನ್ನೂ ಓದುತ್ತಿದ್ದು, ಅವರೂ ಕೂಡ ಬಾವಿ ಅಗೆಯುವುದನ್ನು ವೃತ್ತಿಯಾಗಿ ತೆಗೆದುಕೊಳ್ಳಲು ಉತ್ಸುಕರಾಗಿದ್ದರೆ, ನಾನು ಖಂಡಿತವಾಗಿಯೂ ಅವರಿಗೆ ಕಲಿಸುತ್ತೇನೆ. ಬಾವಿಗಳನ್ನು ಅಗೆಯಲು ಮತ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳಲು ಬೇಡಿಕೆಯಿದೆ, ಮಳೆಗಾಲ ಹಾಗೂ ಚಳಿಗಾಲ ಹತ್ತಿರವಿದ್ದು, ಬಾವಿಗಳ ತೋಡುವುದು ಅವಶ್ಯಕತೆಯಿದೆ ಎಂದು ರಾಮಕೃಷ್ಣ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT