ಕಾಟನ್‌ಪೇಟೆ ನಿವಾಸಿಗಳು ಮಂಗಳವಾರ ಬೋರ್‌ವೆಲ್‌ ಕೊರೆಯುವ ಯಂತ್ರ ಬಳಸಿ ಅಂತರ್ಜಲ ಮಟ್ಟವನ್ನು ಪರಿಶೀಲಿಸಿದರು. 
ರಾಜ್ಯ

ಬೆಂಗಳೂರು ನೀರು ಬಿಕ್ಕಟ್ಟು ನಡುವಲ್ಲೇ ಗಮನ ಸೆಳೆಯುತ್ತಿದೆ ಯಡಿಯೂರಿನ ಜಲಸಂರಕ್ಷಣಾ ಕ್ರಮ!

ಮಳೆ ಹಾಗೂ ಬರದಿಂದಾಗಿ ಬೆಂಗಳೂರು ತೀವ್ರ ನೀರಿನ ಸಮಸ್ಯೆಯನ್ನು ಎದುರಿಸುತ್ತಿರುವ ಸಾರ್ವಜನಿಕ ಮತ್ತು ಖಾಸಗಿ ಬೋರ್‌ವೆಲ್‌ಗಳು ಬತ್ತಿ ಹೋಗಿವೆ. ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ಇದರ ನಡುವಲ್ಲೇ ಯಡಿಯೂರಿನ ಜಲಸಂರಕ್ಷಣಾ ಕ್ರಮಗಳು ಹಲವರ ಗಮನ ಸೆಳೆದಿದ್ದು, ಈ ಬಗ್ಗೆ ಚರ್ಚೆಗಳೂ ಆರಂಭವಾಗಿವೆ.

ಬೆಂಗಳೂರು: ಮಳೆ ಹಾಗೂ ಬರದಿಂದಾಗಿ ಬೆಂಗಳೂರು ತೀವ್ರ ನೀರಿನ ಸಮಸ್ಯೆಯನ್ನು ಎದುರಿಸುತ್ತಿರುವ ಸಾರ್ವಜನಿಕ ಮತ್ತು ಖಾಸಗಿ ಬೋರ್‌ವೆಲ್‌ಗಳು ಬತ್ತಿ ಹೋಗಿವೆ. ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ಇದರ ನಡುವಲ್ಲೇ ಯಡಿಯೂರಿನ ಜಲಸಂರಕ್ಷಣಾ ಕ್ರಮಗಳು ಹಲವರ ಗಮನ ಸೆಳೆದಿದ್ದು, ಈ ಬಗ್ಗೆ ಚರ್ಚೆಗಳೂ ಆರಂಭವಾಗಿವೆ.

ಜಯನಗರ 3ನೇ ಬ್ಲಾಕ್, ಬಸವನಗುಡಿ ಮುಂತಾದ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ 300 ಅಡಿಗಳಷ್ಟಿದ್ದರೆ, ಉಪ್ಪಾರಹಳ್ಳಿ, ಸಕ್ಕಮ್ಮ ಗಾರ್ಡನ್‌ನಂತಹ ಪ್ರದೇಶಗಳಲ್ಲಿ 100 ಅಡಿಯಷ್ಟಿದೆ. ಯಡಿಯೂರು ವಾರ್ಡ್‌ನಲ್ಲಿ ಸರಾಸರಿ ಅಂತರ್ಜಲ ಮಟ್ಟ 213 ಅಡಿಗಳಷ್ಟಿದೆ.

ಯಡಿಯೂರು ವಾರ್ಡ್ 18 ಪ್ರದೇಶಗಳನ್ನು ಮತ್ತು 197 ರಸ್ತೆಗಳನ್ನು ಒಳಗೊಂಡಿದೆ. ಇಲ್ಲಿನ ಚರಂಡಿಗಳಲ್ಲಿ ಪ್ರತಿ ಬಾರಿ ಹೂಳು ತೆಗೆಯುವ ಅಥವಾ ಪುನರ್ನಿರ್ಮಿಸುವ ಕಾರ್ಯ ಕೈಗೊಂಡಾಗಲೆಲ್ಲಾ ಪ್ರತಿ 30 ಅಡಿಗಳಿಗೆ ಕನಿಷ್ಠ 400-ಲೀಟರ್ ಮಳೆನೀರು ಕೊಯ್ಲು ಹೊಂಡವನ್ನು ಸ್ಥಾಪಿಸಲಾಗುತ್ತಿದೆ. ಇದಲ್ಲದೆ, ಉದ್ಯಾನವನಗಳಲ್ಲಿ ಪ್ರತಿ 100 ಚದರ ಅಡಿಗಳಿಗೆ 4,000-12,000 ಲೀಟರ್ ಸಾಮರ್ಥ್ಯದ ಹೊಂಡಗಳನ್ನು ತೋಡಲಾಗಿದೆ. ಒಟ್ಟಾರೆಯಾಗಿ, ಯಡಿಯೂರಿನಲ್ಲಿ 2,781 ಮಳೆನೀರು ಹೊಂಡಗಳಿದ್ದು, ಮಳೆಗಾಲದಲ್ಲಿ 8.68 ಲಕ್ಷ ಲೀಟರ್ ನೀರು ಹಿಡಿದಿಟ್ಟುಕೊಳ್ಳಲು ಇದು ಸಹಾಯಕವಾಗಿವೆ.

ಬಿಜೆಪಿ ಮಾಜಿ ಅಧ್ಯಕ್ಷ (ಬೆಂಗಳೂರು ದಕ್ಷಿಣ) ಎನ್‌ಆರ್ ರಮೇಶ್ ಅವರು ಮಾತನಾಡಿ, ಮಳೆ ನೀರು ಕೊಯ್ಲು ಅಷ್ಟೇ ಅಲ್ಲದೆ, ರಸ್ತೆಗಳಲ್ಲಿ ಹರಿಯುವ ಮಳೆ ನೀರು ಸಂಗ್ರಹಿಸಲು ಪೇವರ್ ಬ್ಲಾಕ್ ಗಳನ್ನು ಬಳಸಲಾಗಿದೆ ಎಂದು ಹೇಳಿದ್ದಾರೆ.

100 ಮೀಟರ್ ಉದ್ದದ ಐದು ರಸ್ತೆಗಳಿಗೆ ಪೇವರ್ ಬ್ಲಾಕ್‌ಗಳನ್ನು ಬಳಸಲಾಗಿದೆ. ಇವು 200 ಟನ್ ಭಾರವನ್ನು ಹೊರಬಲ್ಲವು. ಪೇವರ್ ಬ್ಲಾಕ್‌ಗಳು ಮಳೆ ನೀರು ಹರಿದುಹೋಗದೆ, ನೀರು ಭೂಮಿಯೊಳಗೆ ಇಂಗಲು ಸಹಾಯ ಮಾಡುತ್ತದೆ. ಇದರಿಂದ ಒಂದೇ ಮಳೆಗಾಲದಲ್ಲಿಯೇ ನೀರಿನ ಮಟ್ಟವನ್ನು 40 ಅಡಿಗಳಷ್ಟು ಹೆಚ್ಚಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

ಮಳೆನೀರು ಚರಂಡಿಯಲ್ಲಿ ಹರಿಯುತ್ತವೆ. ನಂತರ ಈ ಚರಂಡಿ ನೀರು ನಗರವನ್ನು ಪ್ರವೇಶಿಸುತ್ತದೆ. ಯಡಿಯೂರು ಮಾದರಿಯನ್ನು ನಗರದಾದ್ಯಂತ ಅನುಕರಿಸಿದರೆ ಅಂತರ್ಜಲ ಮರುಪೂರಣಕ್ಕೆ ಸಹಕಾರಿಯಾಗುತ್ತದೆ. ಇದಕ್ಕೆ ರಾಜಕೀಯ ಇಚ್ಛಾಶಕ್ತಿ ಮತ್ತು ಸರಿಯಾದ ಯೋಜನೆ ಅಗತ್ಯವಿದೆ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT