ವೃದ್ದ ದಂಪತಿ ಸುದ್ದಿಗೋಷ್ಠಿ TNIE
ರಾಜ್ಯ

ಮಂಗಳೂರು: ವಯೋವೃದ್ದ ದಂಪತಿ ಮೇಲೆ ಚರ್ಚ್ ಪಾದ್ರಿ ದೌರ್ಜನ್ಯ, ದಂಪತಿಯನ್ನೇ ಬಹಿಷ್ಕರಿಸಿದ ಕ್ರೈಸ್ತ ಸಮುದಾಯ

ಬಂಟ್ವಾಳ ತಾಲೂಕಿನ ಪರಿಯಾಲತಡ್ಕ ಗ್ರಾಮದಲ್ಲಿ ಈ ತಿಂಗಳ ಆರಂಭದಲ್ಲಿ ಚರ್ಚ್‌ನ ಪಾದ್ರಿಯೊಬ್ಬರಿಂದ ಹಲ್ಲೆಗೊಳಗಾದ ವೃದ್ಧ ದಂಪತಿಯನ್ನು ಗ್ರಾಮದ ಕ್ರೈಸ್ತ ಸಮುದಾಯದವರು ಬಹಿಷ್ಕರಿಸಿದ್ದಾರೆ.

ಮಂಗಳೂರು: ಬಂಟ್ವಾಳ ತಾಲೂಕಿನ ಪರಿಯಾಲತಡ್ಕ ಗ್ರಾಮದಲ್ಲಿ ಈ ತಿಂಗಳ ಆರಂಭದಲ್ಲಿ ಚರ್ಚ್‌ನ ಪಾದ್ರಿಯೊಬ್ಬರಿಂದ ಹಲ್ಲೆಗೊಳಗಾದ ವೃದ್ಧ ದಂಪತಿಯನ್ನು ಗ್ರಾಮದ ಕ್ರೈಸ್ತ ಸಮುದಾಯದವರು ಬಹಿಷ್ಕರಿಸಿದ್ದಾರೆ.

ಚರ್ಚ್ ಪಾದ್ರಿ ಫಾದರ್ ನೆಲ್ಸನ್ ಒಲಿವೆರಾ ವಿರುದ್ಧ ದೂರು ನೀಡಿದ ಕೂಡಲೇ ಕಿರುಕುಳ ಆರಂಭವಾಯಿತು ಎಂದು ದಂಪತಿ ಗ್ರೆಗೊರಿ ಮೊಂಥೆರೊ ಮತ್ತು ಫಿಲೋಮಿನಾ ಕೊಯೆಲೊ ಇಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಮೊದಲಿಗೆ, ಚರ್ಚ್‌ಗೆ ಸಂಪರ್ಕ ಹೊಂದಿದ ಎಲ್ಲಾ ವಾಟ್ಸಾಪ್ ಗುಂಪುಗಳಿಂದ ನಮ್ಮನ್ನು ತೆಗೆದುಹಾಕಲಾಯಿತು. ನಂತರ ಹಳ್ಳಿಯ ಸಮುದಾಯದ ಜನರು ಇದ್ದಕ್ಕಿದ್ದಂತೆ ನಮ್ಮೊಂದಿಗೆ ಮಾತನಾಡುವುದನ್ನು ನಿಲ್ಲಿಸಿದರು. ಪ್ರಕರಣವನ್ನು ದುರ್ಬಲಗೊಳಿಸಲು ಮಂಗಳೂರು ಧರ್ಮಪ್ರಾಂತ್ಯವು ಪೊಲೀಸರ ಮೇಲೆ ಒತ್ತಡ ಹೇರುವ ಮೂಲಕ ಆರೋಪಿ ಪಾದ್ರಿಯನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

ಏತನ್ಮಧ್ಯೆ, ಪಾದ್ರಿಯ ವಿರುದ್ಧ ಎಫ್‌ಐಆರ್ ದಾಖಲಿಸಲು ದಂಪತಿಗೆ ಸಹಾಯ ಮಾಡಿದ ಸಾಮಾಜಿಕ ಕಾರ್ಯಕರ್ತರಾದ ರಾಬರ್ಟ್ ರೊಸಾರಿಯೊ ಮತ್ತು ಮಾರಿಸ್ ಮಸ್ಕರೇನ್ಹಸ್ ಅವರು ದಂಪತಿಗಳಿಗೆ ಸಹಾಯ ಮಾಡಿದ್ದಕ್ಕಾಗಿ ಟಾರ್ಗೆಟ್ ಆಗಿದ್ದಾರೆ ಎಂದು ಹೇಳಿದರು. ಮಂಗಳೂರಿನಾದ್ಯಂತ ನಮ್ಮನ್ನು ಕ್ರೈಸ್ತ ವಿರೋಧಿಗಳೆಂದು ಬಿಂಬಿಸಿ ನಮ್ಮ ವಿರುದ್ಧ ಸುಳ್ಳು ದೂರು ದಾಖಲಿಸಲು ಪ್ರಚೋದನೆ ನೀಡಲಾಗುತ್ತಿದೆ. ಆದರೆ ಸಮುದಾಯದ ಜನರಲ್ಲಿ ಜಾಗೃತಿ ಹೆಚ್ಚಿರುವುದರಿಂದ ಈವರೆಗೆ ಯಾವುದೇ ಕ್ರೈಸ್ತರು ಒತ್ತಡಕ್ಕೆ ಮಣಿದಿಲ್ಲ ಎಂದರು.

ದಂಪತಿಗೆ ಸಹಾಯ ಮಾಡಿದ್ದಕ್ಕಾಗಿ ಪುತ್ತೂರು ಚರ್ಚ್‌ನ ಪ್ಯಾರಿಷ್ ಕೌನ್ಸಿಲ್‌ನಿಂದ ನನ್ನನ್ನು ತೆಗೆದುಹಾಕಲಾಗಿದೆ ಎಂದು ಮಾರಿಸ್ ಮಸ್ಕರೇನ್ಹಸ್ ಹೇಳಿದ್ದಾರೆ. ಬಿಷಪ್ ರೆವ್ ಪೀಟರ್ ಪಾಲ್ ಸಲ್ಡಾನ್ಹಾ ಅವರಿಗೆ ಪತ್ರ ಬರೆದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿದ ಅವರು, ಬಿಷಪ್ ಅವರು ಪ್ಯಾರಿಷ್ ಪಾದ್ರಿ ಫಾದರ್ ನೆಲ್ಸನ್ ಒಲಿವೆರಾ ಜೊತೆ ಕೈಜೋಡಿಸಿದ್ದಾರೆ ಎಂದು ಆರೋಪಿಸಿದರು.

ಮಂಗಳೂರು ಧರ್ಮಾಲಯಗಳು ಸಂಕಷ್ಟದಲ್ಲಿರುವ ವೃದ್ಧ ದಂಪತಿಗಳಿಗೆ ನೆರವು ನೀಡದಿರುವುದನ್ನು ರೊಸಾರಿಯೋ ಖಂಡಿಸಿದರು. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಘಟನೆ ಸಾರ್ವಜನಿಕರಿಂದ ತೀವ್ರ ಟೀಕೆಗೆ ಕಾರಣವಾಯಿತು. ಆದರೆ ಸಂತ್ರಸ್ತರನ್ನು ಭೇಟಿ ಮಾಡಲು ಬಿಷಪ್ ತಲೆಕೆಡಿಸಿಕೊಂಡಿಲ್ಲ, ಅವರಿಗೆ ನೈತಿಕ ಬೆಂಬಲ ನೀಡುವ ಸಲುವಾಗಿ ಯಾರನ್ನೂ ಕಳುಹಿಸಲಿಲ್ಲ. ಘಟನೆಗೆ ಸಂಬಂಧಿಸಿದಂತೆ ನನ್ನ ಪತ್ರಕ್ಕೂ ಅವರು ಪ್ರತಿಕ್ರಿಯಿಸಲಿಲ್ಲ ಎಂದು ಮಾರಿಸ್ ಮಸ್ಕರೇನ್ಹಸ್ ಆರೋಪಿಸಿದರು.

ಘಟನೆ ನಡೆದ ಕೆಲವು ದಿನಗಳ ನಂತರ ಮಂಗಳೂರು ಕ್ಯಾಥೋಲಿಕ್ ಸಭಾದ ಸದಸ್ಯರೊಬ್ಬರೊಂದಿಗೆ ಮಂಗಳೂರು ಧರ್ಮಾಲಯದ ಪಿಆರ್‌ಒ ರಾಯ್ ಕ್ಯಾಸ್ತಲಿನೊ ಅವರ ಮನೆಗೆ ಭೇಟಿ ನೀಡಿ ಅವರ ಗುರುತು ರಹಸ್ಯವಾಗಿಟ್ಟಿದ್ದರು ಎಂದು ಗ್ರೆಗೊರಿ ಹೇಳಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ಅವರು ನಮ್ಮ ವಿರುದ್ಧವಾಗಿ ಏನೂ ಸಿಗದಿದ್ದಾಗ ಅವರು ಸದ್ದಿಲ್ಲದೆ ಹೊರಟರು. ನಿಷ್ಪಕ್ಷಪಾತ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT