ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ 
ರಾಜ್ಯ

ಅಧಿಕಾರಿಗಳ ನಿರ್ಲಕ್ಷ್ಯ: ಪರೀಕ್ಷೆ ಬರೆಯುವ ಸಹಾಯಕ ಇಲ್ಲದೇ ವಿಕಲಾಂಗ SSLC ವಿದ್ಯಾರ್ಥಿ ಪರದಾಟ!

Shilpa D

ವಿಜಯಪುರ: ಪರೀಕ್ಷಾ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗಿದ್ದ ವಿಕಲಚೇತನ ವಿದ್ಯಾರ್ಥಿ ತನ್ನ ಪರವಾಗಿ ಪರೀಕ್ಷೆ ಬರೆಯಲು ಸಹಾಯಕನಿಲ್ಲದೆ ಪರದಾಡುವಂತಾಯಿತು.

ಪರೀಕ್ಷೆ ಬರೆಯಲು ಸಹಾಯಕರನ್ನು ಒದಗಿಸುವಂತೆ ಪರೀಕ್ಷಾ ಅಧಿಕಾರಿಗಳಿಗೆ ಮನವಿ ಮಾಡಲಾಗಿತ್ತು, ಆದರೆ ಅಧಿಕಾರಿಗಳು ಅತನ ಮನವಿಯನ್ನು ಪರಿಗಣಿಸದ ಕಾರಣ ಸುಮಾರು 1 ಗಂಟೆ ತಡವಾಗಿ ಪರೀಕ್ಷೆ ಬರೆಯಬೇಕಾಯಿತು.

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಮೊಹಮ್ಮದ್ ಅಜಾನ್ ನಾಯ್ಕೋಡಿ ಹೇಮರೆಡ್ಡಿ ಮಲ್ಲಮ್ಮ ಶಾಲೆಗೆ ಪರೀಕ್ಷೆ ಬರೆಯಲು ಬಂದಿದ್ದರು. ವಿಕಲಚೇತನರಾಗಿರುವ ನಾಯ್ಕೋಡಿಅವರ ಕೈಯಲ್ಲಿ ಪೆನ್ನು ಹಿಡಿದು ಪರೀಕ್ಷೆ ಬರೆಯುವ ಶಕ್ತಿ ಇಲ್ಲ. ಇದನ್ನು ಪರಿಗಣಿಸಿ, ಈಗಾಗಲೇ ಫೆಬ್ರವರಿಯಲ್ಲೇ ಶಿಕ್ಷಣಾಧಿಕಾರಿಗಳಿಗೆ ತಿಳಿಸಿದ್ದೇವೆ ಮತ್ತು ಅವರ ಪರವಾಗಿ ಪರೀಕ್ಷೆ ಬರೆಯಲು ಸಹಾಯಕರನ್ನು ನೇಮಿಸಿಕೊಂಡುವಂತೆ ಅಧಿಕಾರಿಗಳಿಗೆ ಮನವಿ ಮಾಡಲಾಗಿತ್ತು, ಆದರೆ ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ ಎಂದು ವಿದ್ಯಾರ್ಥಿ ಪೋಷಕರು ಆರೋಪಿಸಿದ್ದಾರೆ.

ಇದೇ ವೇಳೆ ಟಿಎನ್‌ಐಇ ಜತೆ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್‌ಎಚ್‌ ನಾಗೂರ್‌, ಈ ವಿಷಯ ತಮ್ಮ ಗಮನಕ್ಕೆ ಬಂದಿದ್ದು, ತಪ್ಪಿತಸ್ಥ ಸಿಬ್ಬಂದಿಗೆ ಶೋಕಾಸ್‌ ನೋಟಿಸ್‌ ನೀಡಲಾಗುವುದು ಎಂದರು.

ಪರೀಕ್ಷೆ ಬರೆಯುವ ಸಹಾಯಕನಿಗೆ ಅವಕಾಶ ನೀಡುವ ನೀತಿ ನಿಯಮಗಳನ್ನು ಅನುಸರಿಸಲು ಸಾಕಷ್ಟು ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ಬಾರದೆ ಇರುವುದಕ್ಕೆ ವಿದ್ಯಾರ್ಥಿಯ ಪೋಷಕರನ್ನು ಕೂಡ ದೂಷಿಸಿದರು.

SCROLL FOR NEXT