ಸಾಂದರ್ಭಿಕ ಚಿತ್ರ 
ರಾಜ್ಯ

ಕೊಡಗಿನಲ್ಲಿ ರಾಮನವಮಿ ಆಚರಣೆ: ರಾಜಕೀಯೇತರ ಸಾರ್ವಜನಿಕ ಭಾಷಣಕ್ಕೆ ಹೈಕೋರ್ಟ್ ಅನುಮತಿ

ಕೊಡಗು ಹಿಂದೂ ಜಾಗರಣ ವೇದಿಕೆಯಿಂದ ರಾಮನವಮಿ ಆಚರಣೆ ವೇಳೆ ಸಾರ್ವಜನಿಕ ಭಾಷಣ ಮಾಡುವುದನ್ನು ನಿಷೇಧಿಸಿದ್ದ ಚುನಾವಣಾ ಆಯೋಗದ ಆದೇಶಕ್ಕೆ ಹೈಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ.

ಮಡಿಕೇರಿ: ಕೊಡಗು ಹಿಂದೂ ಜಾಗರಣ ವೇದಿಕೆಯಿಂದ ರಾಮನವಮಿ ಆಚರಣೆ ವೇಳೆ ಸಾರ್ವಜನಿಕ ಭಾಷಣ ಮಾಡುವುದನ್ನು ನಿಷೇಧಿಸಿದ್ದ ಚುನಾವಣಾ ಆಯೋಗದ ಆದೇಶಕ್ಕೆ ಹೈಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ.

ಚುನಾವಣಾ ಆಯೋಗದ ಆದೇಶದ ವಿರುದ್ಧ ಕೊಡಗು ಹಿಂದೂ ಜಾಗರಣ ವೇದಿಕೆಯಿಂದ ರಿಟ್ ಅರ್ಜಿ ಸಲ್ಲಿಸಿತ್ತು. ಅರ್ಜಿಯನ್ನು ಪುರಸ್ಕರಿಸಿರುವ ಹೈಕೋರ್ಟ್ ರಾಮನವಮಿ ಆಚರಣೆ ವೇಳೆ ರಾಜಕೀಯೇತರ ಸಾರ್ವಜನಿಕ ಭಾಷಣಕ್ಕೆ ಅನುಮತಿ ನೀಡಿದೆ. ಆ ಮೂಲಕ ಕೊಡಗಿನ ಮಾದಾಪುರದಲ್ಲಿ ನಡೆಯುವ ಆಚರಣೆಯಲ್ಲಿ ಸಾರ್ವಜನಿಕ ಭಾಷಣ ಮಾಡಲು ಅರ್ಜಿದಾರರು ಅನುಮತಿ ಪಡೆದಿದ್ದಾರೆ.

ಲೋಕಸಭೆ ಚುನಾವಣೆ ಘೋಷಣೆಯಾದ ನಂತರ ವೇದಿಕೆಯು ಈ ಹಿಂದೆ ಉತ್ಸವವನ್ನು ಆಯೋಜಿಸಲು ಚುನಾವಣಾ ಆಯೋಗದಿಂದ ಅನುಮತಿ ಕೋರಿತ್ತು. ಆದರೆ, ಚುನಾವಣಾ ನೀತಿ ಸಂಹಿತೆ ಅನ್ವಯ ಮೈಸೂರು-ಕೊಡಗು ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳು ಹಬ್ಬದ ಆಚರಣೆಗೆ ಹಲವು ನಿರ್ಬಂಧಗಳನ್ನು ವಿಧಿಸಿದ್ದಾರೆ. ಇತರ ನಿರ್ಬಂಧಗಳ ಜೊತೆಗೆ, ಉತ್ಸವ ಆಚರಣೆಯ ಸಮಯದಲ್ಲಿ ಭಾಷಣಗಳ ಮೂಲಕ ಭಕ್ತರ ಸಾರ್ವಜನಿಕ ಭಾಷಣವನ್ನು ಆಯೋಜಿಸುವುದನ್ನು ಆಯೋಗವು ನಿಷೇಧಿಸಿತ್ತು.

ಆದಾಗ್ಯೂ, ನಿಷೇಧದ ವಿರುದ್ಧ HJV (Hindu Jagarana Vedike) ಸದಸ್ಯ ಸುನಿಲ್ ಅವರು ರಿಟ್ ಅರ್ಜಿಯನ್ನು ಸಲ್ಲಿಸಿದ್ದರು. ಹೈಕೋರ್ಟ್ ಕೆಲವು ನಿಷೇಧಗಳನ್ನು ವಿಧಿಸಿದ್ದರೂ, ಹಬ್ಬದ ಸಂದರ್ಭದಲ್ಲಿ ರಾಜಕೀಯೇತರ ಸಾರ್ವಜನಿಕ ಭಾಷಣಕ್ಕೆ ಅನುಮತಿ ನೀಡಿದೆ. ಅಂತೆಯೇ, ಇಂದು ಹಬ್ಬದ ವೈಭವದ ಆಚರಣೆಯ ಜೊತೆಗೆ, ಬೆಂಗಳೂರಿನ ಹಿಂದೂ ಕಾರ್ಯಕರ್ತೆ ಹರಿಕಾ ಮಂಜುನಾಥ್ ಅವರು ಭಕ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

“ಧಾರ್ಮಿಕ ಕಾರ್ಯಕ್ರಮಗಳಲ್ಲಿ ಧಾರ್ಮಿಕ ಭಾಷಣಕ್ಕೆ ಅವಕಾಶ ನೀಡಬಾರದು ಎಂಬ ಆದೇಶದ ಮೂಲಕ ಚುನಾವಣಾ ಆಯೋಗವು ಸಂವಿಧಾನ ನೀಡಿರುವ ಧರ್ಮದ ಹಕ್ಕನ್ನು ಕಸಿದುಕೊಂಡಿದೆ. ಈ ಕ್ರಮವನ್ನು ಪ್ರಶ್ನಿಸಿ ನಾವು ಹೈಕೋರ್ಟ್‌ ಮೆಟ್ಟಿಲೇರಿದ್ದೇವೆ. ಈಗ ಕಾರ್ಯಕ್ರಮದಲ್ಲಿ ರಾಜಕೀಯೇತರ ಭಾಷಣಕ್ಕೆ ಅವಕಾಶ ನೀಡಲಾಗಿದೆ’ ಎಂದು ಸುನೀಲ್ ಖಚಿತಪಡಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Strait of Hormuz: 'ಅಡ್ಡ ಬರುವ Iran ಸಣ್ಣ ಬೋಟ್ ಗಳ ಗುಂಡಿಟ್ಟು ಉಡಾಯಿಸಿ': ಅಮೆರಿಕ ಸೇನೆಗೆ Donald Trump ಆದೇಶ!

ಸ್ವಾತಂತ್ರ್ಯದ ನಂತರ ತಮಿಳುನಾಡು, ಪ.ಬಂಗಾಳದಲ್ಲಿ ದಾಖಲೆ ಪ್ರಮಾಣದ ಮತದಾನ, ಮತದಾರರಿಗೆ ಧನ್ಯವಾದ ಹೇಳಿದ ಚುನಾವಣಾ ಆಯೋಗ!

Hassan: 'ಬಡ್ಡಿ ಸಮೇತ ತೀರಿಸೋವರ್ಗೂ ರಾಜಕೀಯದಲ್ಲಿ ಇರ್ತೀನಿ': ಎಚ್ ಡಿಕೆ ಮುಂದೆಯೇ HD Revanna ಕಣ್ಣೀರಿನ ಶಪಥ

IPL 2026: ಮತ್ತೆ ಮುಗ್ಗರಿಸಿದ MI, 103 ರನ್ ಅಂತರದಲ್ಲಿ CSKಗೆ ಜಯ!

IPL 2026: MI ವಿರುದ್ಧ ಸ್ಫೋಟಕ ಬ್ಯಾಟಿಂಗ್, ಶತಕದ ಮೂಲಕ ಐತಿಹಾಸ ನಿರ್ಮಿಸಿದ Sanju Samson, ಎಲೈಟ್ ಗ್ರೂಪ್ ಸೇರ್ಪಡೆ

SCROLL FOR NEXT