'ವಾಟರ್ ಫಾರ್ ವಾಯ್ಸ್‌ಲೆಸ್' ಬೋಗುಣಿ WFV website
ರಾಜ್ಯ

ಬೆಂಗಳೂರು ಜಲಕ್ಷಾಮ: ನೀರಿನ ಬೋಗುಣಿಗಳ ಮೂಲಕ ಪಶು-ಪಕ್ಷಿಗಳ ದಾಹ ನೀಗಿಸುತ್ತಿರುವ 'ವಾಟರ್ ಫಾರ್ ವಾಯ್ಸ್‌ಲೆಸ್' ಸಂಸ್ಥೆ

ಹೆಚ್ಚುತ್ತಿರುವ ಬಿಸಿಲಿನ ತಾಪ, ಕೈ ಕುಡುತ್ತಿರುವ ಮಳೆಯಿಂದಾಗಿ ಬೇಸಿಗೆಯಲ್ಲಿ ಎಲ್ಲೆಡೆ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಪ್ರಾಣಿಗಳಿಗೂ ಈ ಸಮಸ್ಯೆ ತಪ್ಪಿದ್ದಲ್ಲ. ಮನುಷ್ಯ ತನ್ನ ಬೇಕು ಬೇಡಗಳನ್ನು ಪೂರೈಸಿಕೊಳ್ಳುವಷ್ಟು ಜಾಣ. ಆದರೆ, ಮೂಕಪ್ರಾಣಿಗಳ ವೇದನೆ ನೀಜಕ್ಕೂ ಶೋಚನೀಯ...

ಬೆಂಗಳೂರು: ಹೆಚ್ಚುತ್ತಿರುವ ಬಿಸಿಲಿನ ತಾಪ, ಕೈ ಕೊಡುತ್ತಿರುವ ಮಳೆಯಿಂದಾಗಿ ಬೇಸಿಗೆಯಲ್ಲಿ ಎಲ್ಲೆಡೆ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಪ್ರಾಣಿಗಳಿಗೂ ಈ ಸಮಸ್ಯೆ ತಪ್ಪಿದ್ದಲ್ಲ. ಮನುಷ್ಯ ತನ್ನ ಬೇಕು ಬೇಡಗಳನ್ನು ಪೂರೈಸಿಕೊಳ್ಳುವಷ್ಟು ಜಾಣ. ಆದರೆ, ಮೂಕಪ್ರಾಣಿಗಳ ವೇದನೆ ನೀಜಕ್ಕೂ ಶೋಚನೀಯ. ಇದನ್ನರಿತ 'ವಾಟರ್ ಫಾರ್ ವಾಯ್ಸ್‌ಲೆಸ್' ಸಂಸ್ಥೆ ನೀರಿನ ಬೋಗುಣಿಗಳ ಮೂಲಕ ಅವುಗಳ ದಾಹ ನೀಗಿಸುವ ಕೆಲಸ ಮಾಡುತ್ತಿದೆ.

ಸಂಸ್ಥೆಯು ಸ್ವಯಂಸೇವಕರ ಮೂಲಕ ನೀರಿನ ಬೋಗುಣಿಗಳನ್ನು ಸ್ಥಾಪಿಸಿ, ಪಶು-ಪ್ರಾಣಿಗಳ ದಾಹ ತಣಿಸುವ ಕಾರ್ಯ ಮಾಡುತ್ತಿದೆ.

ಸಂಸ್ಥೆಯು 11 ರಾಜ್ಯಗಳ 27 ನಗರಗಳಲ್ಲಿ ಪ್ರಾಣಿ ಪ್ರಿಯರೊಂದಿಗೆ ಕೈಜೋಡಿಸಿ ನೀರಿನ ಬೋಗುಣಿಗಳನ್ನು ಸ್ಥಾಪಿಸುತ್ತಿದೆ. ಸಂಸ್ಥೆಯು 2015 ರಿಂದ 82,000 ಕ್ಕೂ ಹೆಚ್ಚು ನೀರಿನ ಬೋಗುಣಿಗಳನ್ನು ಸ್ಥಾಪಿಸಿದೆ.

ತುಮಕೂರಿನಲ್ಲಿ ಫಾರ್ಮಸಿ ನಡೆಸುತ್ತಿರುವ ಸಂಸ್ಥೆಯ ಸಂಸ್ಥಾಪಕ ಸನ್ನಿ ಜೈನ್ ಅವರು ಮಾತನಾಡಿ, ಒಂದೊಮ್ಮೆ ನನ್ನ ಕಾರಿಗೆ ನಾಯಿಯೊಂದು ಸಿಲುಕಿಕೊಂಡಿತ್ತು. ಆಸ್ಪತ್ರೆಗೆ ಕರೆದೊಯ್ದರೂ ನಾಯಿಯನ್ನು ಉಳಿಸಲು ಸಾಧ್ಯವಾಗಲಿಲ್ಲ. ಈ ಘಟನೆ ಬಳಿಕ ದಾಹದಲ್ಲಿದ್ದ ನಾಯಿ ಮರಿಯೊಂದು ಕೊಳಚೆ ನೀರು ಕುಡಿಯುತ್ತಿರುವುದನ್ನು ನೋಡಿದ್ದೆ. ಈ ಘಟನೆ ನನ್ನನ್ನು ವಿಚಲಿತಗೊಳ್ಳುವಂತೆ ಮಾಡಿತ್ತು. ಬಳಿಕ ಪ್ರಾಣಿಗಳಿಗೆ ನೀರು ಒದಗಿಸಲು ಆರಂಭಿಸಿದೆ. ಮನೆಯ ಹೊರಗೆ ಶಾಶ್ವತ ನೀರಿನ ಬೋಗುಣಿಯೊಂದನ್ನು ಸ್ಥಾಪಿಸಿದೆ. ಇದು ನೆರೆಹೊರೆಯವರು ಹಾಗೂ ಸ್ನೇಹಿತರಿಗೂ ಪ್ರೇರಣೆ ನೀಡಿತು. ನನ್ನ ಈ ಕಾರ್ಯಕ್ಕೆ ಅವರೂ ಕೈಜೋಡಿಸಿದರು.

ಸಂಸ್ಥೆಯ ಸ್ವಯಂಸೇವಕರಲ್ಲಿ ಒಬ್ಬರಾದ ರಾಹುಲ್ ಭುಟೋರಿಯಾ ಎಂಬುವವರು ಮಾತನಾಡಿ, ಮೊದಲಿಗೆ ನೀರು ನೀಡಲು ಮುಂದಾಗಿದ್ದ ಜನರು ನಂತರ ನಮ್ಮೊಂದಿಗೆ ಕೈಜೋಡಿಸಿದರು. ಇದು ದೊಡ್ಡ ಆಂದೋಲನವಾಗಿ ಬೆಳೆಯತೊಡಗಿತು ಎಂದು ಹೇಳಿದ್ದಾರೆ.

ನೀರಿನ ಬೋಗುಣಿಗಳ ಸ್ಥಾಪಿಸಲು ಇಚ್ಛಿಸುವವರು ಮೊದಲು ತಮ್ಮ ಹೆಸರನ್ನು ವೆಬ್ ಸೈಟ್ ನಲ್ಲಿ ನೋಂದಾಯಿಸಿಕೊಳ್ಳಬೇಕು. ಸ್ವಯಂಸೇವಕರಿಗೆ ಸಹಕಾರ ನೀಡಬೇಕು. ನೀರಿನ ಬೋಗುಣಿಗಳ ಸ್ಥಾಪಿಸಲು ಇಚ್ಛಿಸುವವರು ಬೋಗುಣಿಗಳ ಸ್ವಚ್ಛತೆಗೊಳಿಸುವುದು ಅತ್ಯಗತ್ಯವಾಗಿರುತ್ತದೆ. ಸ್ವಯಂಸೇವಕರು ಬೋಗುಣಿಗಳ ನಿರ್ವಹಣೆ ಕುರಿತು ಅಗತ್ಯ ಮಾಹಿತಿಗಳನ್ನು ನೀಡುತ್ತಾರೆ ಎಂದು ಹೇಳಿದ್ದಾರೆ.

ನಗರದಲ್ಲಿ ಒಟ್ಟು 26 ವಿತರಣಾ ಕೇಂದ್ರಗಳಿದ್ದು, ಉಚಿತ ನೀರಿನ ಬೋಗುಣಿಗಳನ್ನು ಪಡೆಯಲು, ಸ್ಥಾಪಿಸಲು ಇಚ್ಛಿಸುವವರು www.waterforvoiceless.org ವೆಬ್‌ಸೈಟ್‌'ಗೆ ಭೇಟಿ ನೀಡಬಹುದು.

ನೀರಿನ ಬೋಗುಣಿಗಳ ವಿತರಿಸುತ್ತಿರುವ ಪ್ರಮುಖ ಕೇಂದ್ರಗಳು ಇಲ್ಲಿವೆ...

  • ಯಲಹಂಕ

  • ಬಸವನಗುಡಿ

  • ಜಯನಗರ

  • ಕನಕಪುರ ರಸ್ತೆ

  • HSR ಲೇಔಟ್

  • ಹಲಸೂರು

  • ಇಂದಿರಾನಗರ

  • ವೈಟ್‌ಫೀಲ್ಡ್

  • ಯಶವಂತಪುರ

  • ರಾಜಾಜಿನಗರ

  • ವಿಜಯನಗರ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT