ಬೆಂಗಳೂರು ಮಳೆ 
ರಾಜ್ಯ

Bengaluru Rains: ಬೆಂದು ಬಸವಳಿದಿದ್ದ ಬೆಂಗಳೂರಿಗೆ ತಂಪೆರೆದ ಮಳೆರಾಯ; ತಾಪಮಾನ 38 ರಿಂದ 23.4 ಡಿಗ್ರಿಗೆ ಕುಸಿತ, ಮತ್ತಷ್ಟು ಮಳೆ ಸಾಧ್ಯತೆ

ಬೆಂಗಳೂರಿನಲ್ಲಿ ನಿನ್ನೆ ಆರಂಭವಾದ ಮಳೆ ಇಂದೂ ಕೂಡ ಮುಂದುವೆರೆದಿದ್ದು, ಶುಕ್ರವಾರ ಮಧ್ಯಾಹ್ನ ನಗರದಲ್ಲಿ ಗುಡುಗು ಸಹಿತ ಮಳೆ ದಾಖಲಾಗಿದೆ. ಮಧ್ಯಾಹ್ನ 2.10 ರಿಂದ ಸುರಿದ ಮಳೆಯು ನಗರದ ಗರಿಷ್ಠ ತಾಪಮಾನವನ್ನು ಕಡಿಮೆ ಮಾಡಲು ಸಹಾಯ ಮಾಡಿತು.

ಬೆಂಗಳೂರು: ಬರೊಬ್ಬರಿ 159 ದಿನಗಳ ಬಳಿಕ ಬೆಂಗಳೂರಿನಲ್ಲಿ ಸುರಿದ ಮಳೆರಾಯ ಉದ್ಯಾನ ನಗರಿ ಕೊಂಚ ಉಸಿರಾಡುವಂತೆ ಮಾಡಿದ್ದು, 38 ಡಿಗ್ರಿಗೆ ಏರಿದ್ದ ತಾಪಮಾನ ಇಂದು ಮಳೆ ಬಳಿಕ 23.4 ಡಿಗ್ರಿಗೆ ಇಳಿದಿದೆ.

ಹೌದು.. ಉದ್ಯಾನನಗರಿ ಬೆಂಗಳೂರಿನಲ್ಲಿ ನಿನ್ನೆ ಆರಂಭವಾದ ಮಳೆ ಇಂದೂ ಕೂಡ ಮುಂದುವೆರೆದಿದ್ದು, ಶುಕ್ರವಾರ ಮಧ್ಯಾಹ್ನ ನಗರದಲ್ಲಿ ಗುಡುಗು ಸಹಿತ ಮಳೆ ದಾಖಲಾಗಿದೆ. ಮಧ್ಯಾಹ್ನ 2.10 ರಿಂದ ಸುರಿದ ಮಳೆಯು ನಗರದ ಗರಿಷ್ಠ ತಾಪಮಾನವನ್ನು ಕಡಿಮೆ ಮಾಡಲು ಸಹಾಯ ಮಾಡಿತು.

17.2ಮಿಮೀ ಮಳೆ

IMD ಅಂಕಿಅಂಶಗಳ ಪ್ರಕಾರ, ನಗರದ ಬಹುತೇಕ ಭಾಗಗಳಲ್ಲಿ ಮಧ್ಯಾಹ್ನ 2.10- 3.20 ರವರೆಗೆ ಮಳೆ ದಾಖಲಾಗಿದೆ. ಕೆಲವೆಡೆ ಸಂಜೆ 4ರವರೆಗೆ ಮಳೆ ಮುಂದುವರಿದಿದೆ. IMD ಪ್ರಕಾರ, ಸಂಜೆ 5.30 ರವರೆಗೆ, ನಗರದಲ್ಲಿ 17.2 ಮಿಮೀ ಮಳೆ ದಾಖಲಾಗಿದೆ. ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ 0.3 ಮಿಮೀ ಮತ್ತು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಜೆ 5.30 ರವರೆಗೆ ಟ್ರೇಸ್ (0.1 ಮಿಮೀ) ಮಳೆ ದಾಖಲಾಗಿದೆ.

ಬೆಂಗಳೂರಿನ ವಿಧಾನಸೌಧ, ಕೆಆರ್ ಮಾರುಕಟ್ಟೆ, ಚಾಮರಾಜಪೇಟೆ, ಸಂಪಂಗಿರಾಮನಗರ, ಮಲ್ಲೇಶ್ವರಂ, ಜಯನಗರ, ಶಿವಾಜಿ ನಗರ, ಕೊತ್ತನೂರು, ಪ್ಯಾಲೇಸ್‌ ಗುಟ್ಟಹಳ್ಳಿ, ಹೊರಮಾವು, ಕೆಆರ್ ಪುರಂ, ನಾಗವರ, ಮಹಾಲಕ್ಷ್ಮಿ ಬಡಾವಣೆ, ರಾಮಮೂರ್ತಿನಗರ, ಸದಾಶಿವನಗರ ಸೇರಿದಂತೆ ನಗರದ ಬಹುತೇಕ ಭಾಗಗಳಲ್ಲಿ ಭಾರಿ ಮಳೆಯಾಗಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ಅಂಕಿಅಂಶಗಳ ಪ್ರಕಾರ, ಬಿದರಹಳ್ಳಿಯಲ್ಲಿ ಗರಿಷ್ಠ 45 ಮಿಮೀ ಮಳೆ ದಾಖಲಾಗಿದೆ. ಸಂಜೆ 5.30 ರವರೆಗೆ. ಕೆಲವು ದಿನಗಳ ಹಿಂದೆ, ಬಿದರಹಳ್ಳಿ ಮತ್ತು ಕೆಂಗೇರಿಯಲ್ಲಿ ಗರಿಷ್ಠ ತಾಪಮಾನ ಸುಮಾರು 41 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ನಗರದ ಬಹುತೇಕ ಭಾಗಗಳಲ್ಲಿ 10-17ಮಿಮೀ ಮಳೆ ದಾಖಲಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.

IMD ಪ್ರಕಾರ, ಗರಿಷ್ಠ ಗಾಳಿಯ ವೇಗವು ಮಧ್ಯಾಹ್ನ 2.50 ಗಂಟೆಗೆ 42 ಕಿಮೀ, ಉತ್ತರ ದಿಕ್ಕಿನಲ್ಲಿ ಬೀಸುತ್ತಿದೆ ಎಂದು ವರದಿಯಾಗಿದೆ. ಅಲ್ಲದೆ ಸಂಜೆ 6 ಗಂಟೆ ಸುಮಾರಿಗೆ ನಗರದಲ್ಲಿ ಗರಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ಇತ್ತು.

ಐಎಂಡಿ ನಿರ್ದೇಶಕ ಎನ್ ಪುವಿಯರಸನ್ ಅವರು, ಬೆಂಗಳೂರು ಮತ್ತು ದಕ್ಷಿಣ ಒಳನಾಡಿನ ಕರ್ನಾಟಕದ ಇತರ ಭಾಗಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಮಳೆ ಮುಂದುವರಿಯುತ್ತದೆ, ನಂತರ ಮತ್ತೆ ತಾಪಮಾನವು ಹೆಚ್ಚಾಗುತ್ತದೆ. ಮೇ 6-7, 2024 ರವರೆಗೆ ದಕ್ಷಿಣ ಒಳನಾಡಿನ ಕರ್ನಾಟಕದಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಆದಾಗ್ಯೂ, ಉತ್ತರ ಒಳನಾಡಿನ ಕರ್ನಾಟಕದ ಮೇಲೆ ಉಷ್ಣ ಅಲೆಯ ಸ್ಥಿತಿಯು ಮೇಲುಗೈ ಸಾಧಿಸುತ್ತದೆ ಎಂದಿದ್ದಾರೆ.

ಮಳೆ ಮೋಡಗಳ ರಚನೆ-ಇನ್ನೆರಡು ದಿನ ಮಳೆ ಸಾಧ್ಯತೆ

ಇನ್ನು ಕರ್ನಾಟಕ-ಆಂದ್ರ ಪ್ರದೇಶ ಮತ್ತು ತಮಿಳುನಾಡು ಗಡಿಯಲ್ಲಿ ಮಳೆ ಮೋಡಗಳು ರಚನೆಯಾಗಿದ್ದು, ಇದು ಬೆಂಗಳೂರು, ಮೈಸೂರು ಸೇರಿದಂತೆ ದಕ್ಷಿಣ ಕರ್ನಾಟಕದಲ್ಲಿ ಮಳೆ ಸಾಧ್ಯತೆಯನ್ನು ಹೆಚ್ಚಿಸಿವೆ. ಮುಂದಿನ ಕನಿಷ್ಠ 2 ದಿನಗಳ ಕಾಲ ದಕ್ಷಿಣ ಕರ್ನಾಟಕದಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT