ಸೋಮವಾರದಂದು ಬಸವನಗುಡಿಯ ವಾಣಿ ವಿಲಾಸ ರಸ್ತೆಯಲ್ಲಿ ಭಾರಿ ಗಾಳಿ ಮಳೆಗೆ ಮರ ಧರೆಗುರುಳಿದ್ದು, ಸುಗಮ ಸಂಚಾರಕ್ಕೆ ತೆರವುಗೊಳಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. 
ರಾಜ್ಯ

ಬೆಂಗಳೂರಿನಲ್ಲಿ 10.5 ಮಿ.ಮೀ ಮಳೆ; ಗೋಡೆ ಕುಸಿದು ಬಾಲಕಿ ಸ್ಥಿತಿ ಗಂಭೀರ; ಮುಂದಿನ 48 ಗಂಟೆ ಕಾಲ ಭಾರೀ ವರ್ಷಧಾರೆ ಮುನ್ಸೂಚನೆ

ನಗರದಲ್ಲಿ ಸೋಮವಾರ ಸಂಜೆ ಸುರಿದ ಭಾರಿ ಮಳೆಗೆ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಒಂದು ಭಾಗ ಕುಸಿದು ಬಿದ್ದ ಪರಿಣಾಮ 17 ವರ್ಷದ ಬಾಲಕಿಯ ತಲೆಗೆ ತೀವ್ರ ಗಾಯವಾಗಿದ್ದು, ಆಕೆಯ ತಾಯಿಗೆ ಮೂಳೆ ಮುರಿತವಾಗಿದೆ. ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ಗೊಟ್ಟಿಗೆರೆ ಸಮೀಪದ ವಡ್ಡರಪಾಳ್ಯದಲ್ಲಿ ಈ ಘಟನೆ ನಡೆದಿದೆ.

ಬೆಂಗಳೂರು: ನಗರದಲ್ಲಿ ಸೋಮವಾರ ಸಂಜೆ ಸುರಿದ ಭಾರಿ ಮಳೆಗೆ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಒಂದು ಭಾಗ ಕುಸಿದು ಬಿದ್ದ ಪರಿಣಾಮ 17 ವರ್ಷದ ಬಾಲಕಿಯ ತಲೆಗೆ ತೀವ್ರ ಗಾಯವಾಗಿದ್ದು, ಆಕೆಯ ತಾಯಿಗೆ ಮೂಳೆ ಮುರಿತವಾಗಿದೆ. ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ಗೊಟ್ಟಿಗೆರೆ ಸಮೀಪದ ವಡ್ಡರಪಾಳ್ಯದಲ್ಲಿ ಈ ಘಟನೆ ನಡೆದಿದೆ.

ಗಾಯಾಳುವನ್ನು ದ್ವಿತೀಯ ಪಿಯು ವಿದ್ಯಾರ್ಥಿನಿ ಖುಷಿ ಮತ್ತು ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ ಆಕೆಯ ತಾಯಿ ಸೋನಾಲಿ ಎಂದು ಗುರುತಿಸಲಾಗಿದೆ.

ಸಂಜೆ 6.15ರ ಸುಮಾರಿಗೆ ತಾಯಿ ಮತ್ತು ಮಗಳು ಒಣಗಿದ ಬಟ್ಟೆಗಳನ್ನು ತೆಗೆದುಕೊಳ್ಳಲು ಹೊರಗೆ ಬಂದಾಗ ಭಾರಿ ಮಳೆ ಪ್ರಾರಂಭವಾಗಿದೆ. ಈ ವೇಳೆ ಅವರ ಮನೆಯ ಪಕ್ಕದ ನಾಲ್ಕು ಅಂತಸ್ತಿನ ನಿರ್ಮಾಣ ಹಂತದ ಕಟ್ಟಡ ಕುಸಿದಿದೆ. ಕಟ್ಟಡದ ಪ್ಯಾರಪೆಟ್‌ನ ಹಾಲೊ ಬ್ಲಾಕ್‌ಗಳು ಅವರ ಮೇಲೆ ಬಿದ್ದಿವೆ. ಘಟನೆ ನಡೆದಾಗ ಸೋನಾಲಿಯ ಪತಿ ಆಟೋ ಚಾಲಕ ಮನೆಯಲ್ಲಿ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಖುಷಿಯ ತಲೆಯ ಮೇಲೆ ಹಾಲೊ ಬ್ಲಾಕ್‌ಗಳು ಬಿದ್ದಿವೆ ಮತ್ತು ಆಕೆಗೆ ಗಂಭೀರವಾದ ಗಾಯಗಳಾಗಿವೆ. ಆಕೆಯ ತಾಯಿಗೆ ಕೈ ಮುರಿದಿದೆ. ಖುಷಿಯನ್ನು ನಿಮ್ಹಾನ್ಸ್‌ಗೆ ಮತ್ತು ಆಕೆಯ ತಾಯಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ನಿಮ್ಹಾನ್ಸ್‌ನಲ್ಲಿ ಯಾವುದೇ ಹಾಸಿಗೆಗಳು ಲಭ್ಯವಿಲ್ಲದ ಕಾರಣ ಖುಷಿಯನ್ನು ತಕ್ಷಣವೇ ದಾಖಲಿಸಲು ಸಾಧ್ಯವಾಗಿರಲಿಲ್ಲ ಎಂದು ಪೊಲೀಸರು ಹೇಳಿದರು.

ಬೊಮ್ಮನಹಳ್ಳಿ ವಿಭಾಗದ ಬಿಬಿಎಂಪಿ ಜಂಟಿ ಆಯುಕ್ತ ಅಜಿತ್ ಆರ್ ಮಾತನಾಡಿ, ವಿವರಗಳನ್ನು ಇನ್ನೂ ಸಂಗ್ರಹಿಸಲಾಗುತ್ತಿದ್ದು, ಪಾಲಿಕೆ ಈ ಬಗ್ಗೆ ಪೊಲೀಸರೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದರು.

ಮತ್ತೊಂದು ಘಟನೆಯಲ್ಲಿ ಬೊಮ್ಮನಹಳ್ಳಿ ಪ್ರದೇಶದಲ್ಲಿ ನಿರ್ಮಾಣ ಹಂತದ ಗೋಡೆ ಕುಸಿದಿದೆ. ಆದರೆ, ಯಾರಿಗೂ ಗಾಯಗಳಾಗಿಲ್ಲ. ರಕ್ಷಣಾ ಕಾರ್ಯಾಚರಣೆಗಾಗಿ ತಂಡವನ್ನು ರಚಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ 48 ಗಂಟೆಗಳ ಕಾಲ ಹೆಚ್ಚಿನ ಮಳೆ

ನಗರದಲ್ಲಿ ರಾತ್ರಿ 8.30 ರವರೆಗೆ 10.5mm ಮಳೆ ಸುರಿದಿದೆ ಮತ್ತು ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ 2.7mm ಮಳೆ ದಾಖಲಾಗಿದೆ. ಮುಂದಿನ 48 ಗಂಟೆಗಳ ಕಾಲ ಬೆಂಗಳೂರು ಮತ್ತು ದಕ್ಷಿಣ ಒಳನಾಡಿನ ಪ್ರತ್ಯೇಕ ಸ್ಥಳಗಳಲ್ಲಿ ಮಿಂಚು ಗುಡುಗು ಸಹಿತ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.

ನಗರದಾದ್ಯಂತ ಸಂಚಾರ ದಟ್ಟಣೆ

ಮಳೆಯಿಂದಾಗಿ ನಗರದ ಟ್ರಾಫಿಕ್ ಪರಿಸ್ಥಿತಿ ಹದಗೆಟ್ಟಿದ್ದು, ಎರಡು ಗಂಟೆಗಳ ಅವಧಿಯಲ್ಲಿ ಮರ ಬಿದ್ದ ಘಟನೆಗಳ ಬಗ್ಗೆ ಬಿಬಿಎಂಪಿ ನಿಯಂತ್ರಣ ಕೊಠಡಿಗೆ 70ಕ್ಕೂ ಹೆಚ್ಚು ಕರೆಗಳು ಬಂದಿವೆ. ಅಧಿಕಾರಿಗಳ ಪ್ರಕಾರ, ಪಶ್ಚಿಮ ವಲಯದಿಂದ 27 ದೂರುಗಳು ಬಂದಿದ್ದು, ಇದು ಗರಿಷ್ಠ ಕರೆಗಳಾಗಿವೆ. ದಕ್ಷಿಣ ವಲಯದಲ್ಲಿ 16 ಕರೆಗಳು ಮತ್ತು ಪೂರ್ವ ವಲಯದಿಂದ 14 ದೂರುಗಳು ದಾಖಲಾಗಿವೆ. ಸೋಮವಾರ ರಾತ್ರಿ 8.30ರವರೆಗೆ ರಾಜರಾಜೇಶ್ವರಿ ನಗರದಿಂದ ಆರು ಮತ್ತು ಯಲಹಂಕದಿಂದ ಮೂರು ದೂರುಗಳು ದಾಖಲಾಗಿವೆ.

ಓಕಳಿಪುರಂನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ನಗರದ 33 ಸ್ಥಳಗಳಲ್ಲಿ ಭಾರಿ ನೀರು ನಿಂತಿರುವುದನ್ನು ದಾಖಲಾಗಿದೆ. 'ಇದು ಹಲವಾರು ಸ್ಥಳಗಳಲ್ಲಿ ಸಾಕಷ್ಟು ಟ್ರಾಫಿಕ್ ದಟ್ಟಣೆಯನ್ನು ಉಂಟುಮಾಡಿದೆ. ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಬೆಂಗಳೂರು ಟ್ರಾಫಿಕ್ ಪೊಲೀಸರು (ಬಿಟಿಪಿ) 24 ಗಂಟೆಗಳ ಕಾಲ ಕೆಲಸ ಮಾಡುತ್ತಿದೆ. ತಾತ್ಕಾಲಿಕವಾಗಿ ಮಾರ್ಗ ಬದಲಾಯಿಸಲಾಗಿತ್ತು’ ಎಂದು ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಎಂಎನ್ ಅನುಚೇತ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಲಬುರಗಿ: ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

Punishment: 5 ವರ್ಷದ ಬಾಲಕನನ್ನು ಮರಕ್ಕೆ ನೇತು ಹಾಕಿದ ಶಿಕ್ಷಕಿ!

ವಿಶ್ವಕಪ್ ವಿಜೇತ ಕರ್ನಾಟಕದ ಅಂಧ ಕ್ರಿಕೆಟ್ ಆಟಗಾರ್ತಿಯರಿಗೆ ತಲಾ 10 ಲಕ್ಷ ರೂ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

SCROLL FOR NEXT