ಹೀಲಳಿಗೆ ಮಾರ್ಗದಲ್ಲಿ ಬ್ಯಾರಿಯರ್ ಹಾಕಿರುವ ಚಿತ್ರ 
ರಾಜ್ಯ

ಬೆಂಗಳೂರು ಉಪನಗರ ರೈಲು ಯೋಜನೆ: 2,690 ಕೋಟಿ ರೂ. ಸಾಲ ನೀಡಲು EIB ಒಪ್ಪಿಗೆ

ಬೆಂಗಳೂರು ಉಪನಗರ ರೈಲು ಯೋಜನೆಗೆ ರೂ. 2,693 ಕೋಟಿ (300 ಮಿಲಿಯನ್ ಯೂರೋ) ಸಾಲ ನೀಡಲು ವಿಶ್ವದ ಅತಿದೊಡ್ಡ ಬಹುಪಕ್ಷೀಯ ಹಣಕಾಸು ಸಂಸ್ಥೆಯಾದ ಯುರೋಪಿಯನ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್ (ಯುರೋಪಿಯನ್ ಒಕ್ಕೂಟದ ಹೂಡಿಕೆ ಬ್ಯಾಂಕ್) ಒಪ್ಪಿಗೆ ನೀಡಿದೆ.

ಬೆಂಗಳೂರು: ಬೆಂಗಳೂರು ಉಪನಗರ ರೈಲು ಯೋಜನೆಗೆ ರೂ. 2,693 ಕೋಟಿ (300 ಮಿಲಿಯನ್ ಯೂರೋ) ಸಾಲ ನೀಡಲು ವಿಶ್ವದ ಅತಿದೊಡ್ಡ ಬಹುಪಕ್ಷೀಯ ಹಣಕಾಸು ಸಂಸ್ಥೆಯಾದ ಯುರೋಪಿಯನ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್ (ಯುರೋಪಿಯನ್ ಒಕ್ಕೂಟದ ಹೂಡಿಕೆ ಬ್ಯಾಂಕ್) ಒಪ್ಪಿಗೆ ನೀಡಿದೆ. ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ ಉಪನಗರ ರೈಲಿನ ಅತಿ ಉದ್ದದ ಕಾರಿಡಾರ್ - ಹೀಲಳಿಗೆ-ರಾಜನಕುಂಟೆ ಮಾರ್ಗ ನಿರ್ಮಾಣದತ್ತ ಮೊದಲ ಹೆಜ್ಜೆ ಇಡಲಾಗಿದೆ.

ಉಪನಗರ ರೈಲು ಯೋಜನೆಗೆ 300 ಮಿಲಿಯನ್ ಯುರೋ ಸಾಲ ನೀಡಲು EIB ಬುಧವಾರ ತಾತ್ವಿಕ ಒಪ್ಪಿಗೆ ನೀಡಿದೆ. ಈ ಅನುಮೋದನೆಯೊಂದಿಗೆ 15,767 ಕೋಟಿ ರೂ.ಗಳ ಉಪನಗರ ರೈಲು ಯೋಜನೆಗೆ ಸಾಲದ ಘಟಕವನ್ನು ಸಂಪೂರ್ಣವಾಗಿ ಸಜ್ಜುಗೊಳಿಸಲಾಗಿದೆ. ಯೋಜನೆಗೆ ಕರ್ನಾಟಕ ಸರ್ಕಾರ ಮತ್ತು ಕೇಂದ್ರದಿಂದ ತಲಾ ಶೇ. 20 ರಷ್ಟು ಆರ್ಥಿಕ ನೆರವು ದೊರೆಯುತ್ತಿದ್ದರೆ ಶೇ. 60 ರಷ್ಟನ್ನು ಸಾಲದ ಮೂಲಕ ಸಂಗ್ರಹಿಸಬೇಕಾಗಿದೆ ಎಂದು ಯೋಜನೆ ಅನುಷ್ಟಾನಗೊಳಿಸುತ್ತಿರುವ ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ (ಕೆ-ರೈಡ್‌) ಕೆ- ರೈಡ್ ನಿರ್ದೇಶಕ (, Projects and Planning) ರಾಕೇಶ್ ಕುಮಾರ್ ಸಿಂಗ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.

ಮತ್ತೊಂದು ಪ್ರಮುಖ ಸಾಲದಾತ ಬ್ಯಾಂಕ್ ಆಗಿರುವ ಜರ್ಮನಿಯ KfW ಡೆವಲಪ್‌ಮೆಂಟ್ ಬ್ಯಾಂಕ್, ಡಿಸೆಂಬರ್ 15, 2023 ರಂದು ರೂ. 4,552 ಕೋಟಿ ( 500 ಮಿಲಿಯನ್ ಯುರೋ ) ಸಾಲ ಒಪ್ಪಂದಕ್ಕೆ ಸಹಿ ಹಾಕಿದೆ ಮತ್ತು ರೂ 40.96 ಕೋಟಿ (4.5 ಮಿಲಿಯನ್ ಯುರೋಗಳು) ಅನುದಾನ ನೀಡಿದೆ.

L&T ಕಂಪನಿಯಿಂದ ಬ್ಯಾರಿಯರ್ ಅಳವಡಿಕೆ: 148.1 ಕಿಮೀ ಯೋಜನೆಯ ನಾಲ್ಕು ಕಾರಿಡಾರ್‌ಗಳಲ್ಲಿ ಎರಡನ್ನು L&T ಕಂಪನಿಗೆ ನೀಡಲಾಗಿದೆ. ನಾಲ್ಕನೇ ಕಾರಿಡಾರ್ ಅಥವಾ ಕನಕ ಮಾರ್ಗ (ಹೀಲಳಿಗೆಯಿಂದ ರಾಜನಕುಂಟೆ, 46.8 ಕಿ.ಮೀ) ಮತ್ತು ಎರಡನೇ ಕಾರಿಡಾರ್ ಅಥವಾ ಮಲ್ಲಿಗೆ ಮಾರ್ಗ ಬೆನ್ನಿಗಾನಹಳ್ಳಿಯಿಂದ ಚಿಕ್ಕಬಾಣಾವರವೆರೆಗೆ 25 ಕಿ. ಮೀ ಸಾಗುತ್ತದೆ. ಮಲ್ಲಿಗೆ ಮಾರ್ಗದಲ್ಲಿ ಶೇ. 20 ರಷ್ಟು ನಿರ್ಮಾಣ ಕಾಮಗಾರಿಯನ್ನು ಎಲ್ ಅಂಡ್ ಟಿ ಕಂಪನಿ ಪೂರ್ಣಗೊಳಿಸಿದೆ.

ಮಂಗಳವಾರ (ಮೇ 7) ರೈಲ್ವೆ ಮಾರ್ಗದಲ್ಲಿ ಬ್ಯಾರಿಕೇಡ್ ಹಾಕುವ ಮೂಲಕ ಕನಕ ಮಾರ್ಗದ ಕಾಮಗಾರಿ ಪ್ರಾರಂಭಿಸಲು ಮೊದಲ ಹೆಜ್ಜೆ ಇಡಲಾಯಿತು. “ಕಳೆದ ನಾಲ್ಕು ತಿಂಗಳಲ್ಲಿ ಗುತ್ತಿಗೆದಾರರಿಂದ ಮಣ್ಣು ಪರೀಕ್ಷೆ ಮತ್ತು ಮರು ಸಮೀಕ್ಷೆಯಂತಹ ಪ್ರಾಥಮಿಕ ಕೆಲಸಗಳನ್ನು ಮಾಡಲಾಗಿದೆ. ಯೋಜನೆ ಪ್ರಾರಂಭಿಸಲು, ಈ ಮಾರ್ಗದಲ್ಲಿ ಐದು ಕಿರು ಸೇತುವೆಗಳನ್ನು ನಿರ್ಮಿಸಲಾಗುವುದು ಮತ್ತು ಈ ಸಂಬಂಧ ಬ್ಯಾರಿಕೇಡ್ ಹಾಕಲಾಗಿದೆ. ಡಿಸೆಂಬರ್ 30, 2023ರಲ್ಲಿ ನೀಡಲಾದ ಗುತ್ತಿಗೆ ಅವಧಿ 30 ತಿಂಗಳ ಗಡುವನ್ನು ಹೊಂದಿದೆ ಎಂದು ಅವರು ತಿಳಿಸಿದರು.

ಮಾದರಿ ನೀತಿ ಸಂಹಿತೆ ಹಿಂಪಡೆದ ನಂತರ ಕೆಎಸ್ ಆರ್ ಬೆಂಗಳೂರು-ದೇವನಹಳ್ಳಿಯಿಂದ ಯಲಹಂಕ ಮೂಲಕ ಮೊದಲ ಕಾರಿಡಾರ್ ಅಥವಾ ಸಂಪಿಗೆ ಮಾರ್ಗದ (41 ಕಿಮೀ) ಗುತ್ತಿಗೆಯನ್ನು ಭಾಗಶಃ ನೀಡಲಾಗುವುದು,ಆರಂಭದಲ್ಲಿ ಕೆಎಸ್‌ಆರ್‌ನಿಂದ ಯಶವಂತಪುರ ಮೂಲಕ ಯಲಹಂಕಕ್ಕೆ ಶೀಘ್ರದಲ್ಲೇ ಗುತ್ತಿಗೆ ನೀಡಲು ಯೋಜಿಸಿದ್ದೇವೆ. ಅಲೈನ್‌ಮೆಂಟ್‌ಗೆ ಅನುಮತಿ ಪಡೆಯಲು ನಾವು ರೈಲ್ವೆಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದೇವೆ.ಕೆಂಗೇರಿಯಿಂದ ವೈಟ್‌ಫೀಲ್ಡ್‌ವರೆಗಿನ ಮೂರನೇ ಕಾರಿಡಾರ್ ಅಥವಾ ಪಾರಿಜಾತ ಲೈನ್ (35 ಕಿಮೀ) ನಂತರ ಒಂದು ತಿಂಗಳ ಕಾಲಾವಕಾಶ ನೀಡಲಾಗುವುದು ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT