ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಈಜುಕೊಳ ಬಳಕೆಯ ನಿಷೇಧ ಸಡಿಲಿಸಿದ ಜಲಮಂಡಳಿ!

ಅಪಾರ್ಟ್‌ಮೆಂಟ್‌ ಹಾಗೂ ಕ್ರೀಡಾ ಸಂಸ್ಥೆಯವರು ಮಾಡಿದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಜಲಮಂಡಳಿ ಅಧ್ಯಕ್ಷ ಡಾ. ರಾಮ್‌ ಪ್ರಸಾತ್‌ ಮನೋಹರ್‌, ಕೆಲವು ಷರತ್ತುಗಳನ್ನ ವಿಧಿಸುವ ಮೂಲಕ ಈಜುಕೊಳದ ಬಳಕೆಯ ನಿಷೇಧವನ್ನು ಸಡಿಲಿಸಿದ್ದಾರೆ.

ಬೆಂಗಳೂರು: ನಗರದ ಅಪಾರ್ಟ್‌ಮೆಂಟ್‌ ಹಾಗೂ ಕ್ರೀಡಾ ಸಂಸ್ಥೆಯವರು ಮಾಡಿದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಜಲಮಂಡಳಿ ಅಧ್ಯಕ್ಷ ಡಾ. ರಾಮ್‌ ಪ್ರಸಾತ್‌ ಮನೋಹರ್‌, ಕೆಲವು ಷರತ್ತುಗಳನ್ನ ವಿಧಿಸುವ ಮೂಲಕ ಈಜುಕೊಳದ ಬಳಕೆಯ ನಿಷೇಧವನ್ನು ಸಡಿಲಿಸಿದ್ದಾರೆ.

ಕಡ್ಡಾಯವಾಗಿ ಈಜುಕೊಳಕ್ಕೆ ಕಾವೇರಿ ನೀರನ್ನು ಬಳಸುವಂತಿಲ್ಲ. ಈಜುಕೊಳಕ್ಕೆ ಮಳೆ ನೀರು ಅಥವಾ ಕೊಳವೆ ಬಾವಿ ಮೂಲಕ ನೀರನ್ನು ಮಾತ್ರ ಬಳಸತಕ್ಕದ್ದು. ಈಜು ಕೊಳಕ್ಕೆ ನೀರನ್ನು ಶುದ್ದೀಕರಿಸುವ ಯಂತ್ರವನ್ನು ಅಳವಡಿಸಿಕೊಂಡು ನೀರನ್ನು ಮರುಬಳಕೆ ಮಾಡಬೇಕು ಎಂಬ ಷರತ್ತು ಹಾಕಲಾಗಿದೆ.

ತಮ್ಮ ಸಮುಚ್ಚಯದಲ್ಲಿ ಕಡ್ಡಾಯವಾಗಿ ಕೊಳವೆ ಬಾವಿ ಅಕ್ಕಪಕ್ಕದಲ್ಲಿ ಮಳೆ ನೀರು ಇಂಗು ಗುಂಡಿಗಳನ್ನು ನಿರ್ಮಿಸಿರಬೇಕು. ಎಲ್ಲಾ ಟ್ಯಾಪ್‌ಗಳಿಗೆ ಕಡ್ಡಾಯವಾಗಿ ಏರಿಯೇಟರ್‌ ಅಳವಡಿಸಿಕೊಂಡಿರಬೇಕು ಹಾಗೂ ಕುಡಿಯುವುದನ್ನು ಹೊರತುಪಡಿಸಿ ಅನ್ಯ ಬಳಕೆಗಳಿಗೆ (ಗಾರ್ಡೆನಿಂಗ್‌ ಮತ್ತು ಫ್ಲಶಿಂಗ್)‌ ಗೆ ಕಡ್ಡಾಯವಾಗಿ ಸಂಸ್ಕರಿಸಿದ ನೀರನ್ನು ಬಳಸಬೇಕು ಎನ್ನುವ ಷರತ್ತುಗಳನ್ನು ವಿಧಿಸಲಾಗಿದೆ.

ಈಜುಕೊಳಕ್ಕೆ ಕಾವೇರಿ ನೀರು ಬಳಕೆ ಮಾಡುವುದು ಕಂಡಬಂದಲ್ಲಿ ಜಲಮಂಡಳಿಯ ಕಾಯ್ದೆ 1964 ರ ಕಲಂ 109 ಅನ್ವಯ 5,000 ರೂಗಳ ದಂಡ ವಿಧಿಸಲಾಗುವುದು. ಈ ಉಲ್ಲಂಘನೆ ಮರುಕಳಿಸಿದಲ್ಲಿ ದಂಡ ಮೊತ್ತ 5,000 ರೂಗಳ ಜೊತೆಗೆ ಹೆಚ್ಚುವರಿಯಾಗಿ ಪ್ರತಿದಿನ ರೂ. 500 ದಂಡ ವಿಧಿಸಲಾಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ