ಚೇತನ್ ಕುಮಾರ್ 
ರಾಜ್ಯ

ಸಿಎಂ ‘ಸೋಮಾರಿ’ ಸಿದ್ದು ಈ ಪುಸ್ತಕ ಉಡುಗೊರೆ ನೀಡಿದ್ದು ಎಷ್ಟು ಸರಿ? ನಟ ಚೇತನ್ ಕುಮಾರ್ ವ್ಯಂಗ್ಯ

ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಟಾಪರ್ ಗಳಿಗೆ ಬಾಬಾಸಾಹೇಬ್ ಅವರ ಅನೀಹಿಲೇಷನ್ ಆಫ್ ಕಾಸ್ಟ್ ಕೃತಿಯ ಪ್ರತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉಡುಗೊರೆಯಾಗಿ ಕೊಟ್ಟಿರುವುದಕ್ಕೆ ನಟ ಚೇತನ್, ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ವ್ಯಂಗ್ಯವಾಡಿದ್ದಾರೆ.

ಬೆಂಗಳೂರು: ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಟಾಪರ್ ಗಳಿಗೆ ಬಾಬಾಸಾಹೇಬ್ ಅವರ ಅನೀಹಿಲೇಷನ್ ಆಫ್ ಕಾಸ್ಟ್ ಕೃತಿಯ ಪ್ರತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉಡುಗೊರೆಯಾಗಿ ಕೊಟ್ಟಿರುವುದಕ್ಕೆ ನಟ ಚೇತನ್, ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ವ್ಯಂಗ್ಯವಾಡಿದ್ದಾರೆ.

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಟಾಪರ್ಗಳಿಗೆ ಬಾಬಾಸಾಹೇಬ್ ಅವರ ‘ಅನೀಹಿಲೇಷನ್ ಆಫ್ ಕಾಸ್ಟ್ “ಕೃತಿಯ ಪ್ರತಿಯನ್ನು ಸಿಎಂ ‘ಸೋಮಾರಿ’ ಸಿದ್ದು ನೀಡಿದ್ದಾರೆ. ಎಷ್ಟು ವಿಪರ್ಯಾಸ ಎಂದು ಟೀಕಿಸಿದ್ದಾರೆ.

ಅಂಬೇಡ್ಕರ್ ಅವರ ಕಾಲದಲ್ಲಿ ಅವರ ಅತಿದೊಡ್ಡ ರಾಜಕೀಯ ಶತ್ರು ಕಾಂಗ್ರೆಸ್ ಪಕ್ಷ (ರಾಜಕೀಯ ಹಿಂದೂ ಧರ್ಮ), ಇಂದಿನ ಕಾಂಗ್ರೆಸ್ ಪಕ್ಷ (ಅದೇ ಮನುವಾದ) ಅಂಬೇಡ್ಕರ್ ಅವರನ್ನು ಚುನಾವಣಾ ಲಾಭಕ್ಕಾಗಿ ಬಳಸಲು ಪ್ರಯತ್ನಿಸುತ್ತಾರೆ.

ಗಾಂಧಿಯವರ 36 ಬ್ರಾಹ್ಮಣ್ಯದ ಪುಸ್ತಕಗಳಲ್ಲಿ ಒಂದನ್ನು ಸಿಎಂ ಈ ಇಬ್ಬರು ವಿದ್ಯಾರ್ಥಿಗಳಿಗೆ ನೀಡಬೇಕಿತ್ತು, ಇದು ಸೈದ್ಧಾಂತಿಕವಾಗಿ ಹೆಚ್ಚು ಪ್ರಾಮಾಣಿಕವಾದ ಉಡುಗೊರೆಯಾಗಿರುತ್ತಿತ್ತು ಎಂದು ಚೇತನ್ ಹೇಳಿದ್ದಾರೆ. ಇದು ಸೈದ್ಧಾಂತಿಕವಾಗಿ ಹೆಚ್ಚು ಪ್ರಾಮಾಣಿಕವಾದ ಉಡುಗೊರೆಯಾಗಿರುತ್ತಿತ್ತು ಎಂದು ಚೇತನ್ ಹೇಳಿದ್ದಾರೆ.

ಚೇತನ್‌ ಇಂಥ ಅಪ್ರಾಸಂಗಿಕ, ವಿವಾದಾತ್ಮಕ ಹೇಳಿಕೆಗಳಿಗೆ ಕುಖ್ಯಾತರಾಗಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ನಾಡಪ್ರಭು ಕೆಂಪೇಗೌಡರ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಆರೋಪದ ಮೇಲೆ ನಟ ಚೇತನ್ ವಿರುದ್ಧ ವಕೀಲರೊಬ್ಬರು ಶೇಷಾದ್ರಿಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಚೇತನ್ ವಿರುದ್ಧ ಗಂಭೀರ ಸ್ವರೂಪವಲ್ಲದ ಪ್ರಕರಣ (ಎನ್‌ಸಿಆರ್) ದಾಖಲಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

IPL 2026: ಹೈದರಾಬಾದ್ ನೀಡಿದ 220 ರನ್ ಟಾರ್ಗೆಟ್ ಬೆನ್ನತ್ತಿ ಗೆದ್ದ ಪಂಜಾಬ್ ಕಿಂಗ್ಸ್!

SCROLL FOR NEXT