ಸಂಗ್ರಹ ಚಿತ್ರ 
ರಾಜ್ಯ

ಲಿಕ್ವಿಡ್ ನೈಟ್ರೋಜನ್ ಪಾನ್ ತಿಂದ 12 ವರ್ಷದ ಬಾಲಕಿ ಹೊಟ್ಟೆಯಲ್ಲಿ ರಂಧ್ರ!

ಬಾಯಲ್ಲಿ ಪಾನ್ ಹಾಕಿಕೊಂಡ ಕೂಡಲೇ ಹೊಗೆ ಬರುವ ಲಿಕ್ವಿಡ್ ನೈಟ್ರೋಜನ್ ಪಾನ್ ಇತ್ತೀಚೆಗೆ ಟ್ರೆಂಡ್ ಆಗಿದೆ. ಆದರೆ, ಇದನ್ನು ಸೇವಿಸಿದ 12 ವರ್ಷದ ಬಾಲಕಿಯೊಬ್ಬಳ ಹೊಟ್ಟೆಯಲ್ಲಿ ರಂಧ್ರವಾಗಿದ್ದು, ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

ಬೆಂಗಳೂರು: ಬಾಯಲ್ಲಿ ಪಾನ್ ಹಾಕಿಕೊಂಡ ಕೂಡಲೇ ಹೊಗೆ ಬರುವ ಲಿಕ್ವಿಡ್ ನೈಟ್ರೋಜನ್ ಪಾನ್ ಇತ್ತೀಚೆಗೆ ಟ್ರೆಂಡ್ ಆಗಿದೆ. ಆದರೆ, ಇದನ್ನು ಸೇವಿಸಿದ 12 ವರ್ಷದ ಬಾಲಕಿಯೊಬ್ಬಳ ಹೊಟ್ಟೆಯಲ್ಲಿ ರಂಧ್ರವಾಗಿದ್ದು, ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

ಬಾಲಕಿಯನ್ನು ಇಂಟ್ರಾಆಪರೇಟಿವ್ ಒಜಿಡಿ ಸ್ಕೋಪಿಯೊಂದಿಗೆ ಪರಿಶೋಧನಾತ್ಮಕ ಲ್ಯಾಪರೊಟಮಿಗೆ ಒಳಪಡಿಸಲಾಯಿತು. ಅಲ್ಲಿ ಅನ್ನನಾಳ, ಹೊಟ್ಟೆ ಮತ್ತು ಡ್ಯುವೋಡೆನಮ್ ಅನ್ನು ಪರೀಕ್ಷಿಸಲು ಎಂಡೋಸ್ಕೋಪ್ ಬಳಸಲಾಯಿತು. ಈ ಸಂದರ್ಭದಲ್ಲಿ ಹೊಟ್ಟೆಯಲ್ಲಿ ಸುಮಾರು 4x5 ಸೆಂ.ಮೀ ಅಳತೆಯ ಅನಾರೋಗ್ಯಕರ ಪ್ಯಾಚ್ ಕಂಡುಬಂದಿದೆ.

ನಂತರ ಬಾಲಕಿಗೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು, ಹೊಟ್ಟೆಯ ಒಂದು ಭಾಗವನ್ನು ತೆಗೆದುಹಾಕಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ ಎರಡು ದಿನ ಐಸಿಯುನಲ್ಲಿದ್ದ ಬಾಲಕಿ, 6 ದಿನಗಳ ಆಸ್ಪತ್ರೆ ಮೇಲ್ವಿಚಾರಣೆ ಬಳಿಕ ಮನೆಗೆ ಮರಳಿದ್ದಾಳೆ.

ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿಯ ಆಪರೇಟಿಂಗ್ ಸರ್ಜನ್ ಡಾ.ವಿಜಯ್ ಎಚ್.ಎಸ್ ಮಾತನಾಡಿ, ದೇಶದ ವಿವಿಧ ಭಾಗಗಳಿಂದ ಇಂತಹ ಹಲವಾರು ಪ್ರಕರಣಗಳು ವರದಿಯಾಗಿವೆಯ ಈ ಘಟನೆಗಳನ್ನು ಗಂಭೀರವಾಗಿ ಪರಿಗಣಿಸುವುದು ಬಹಳ ಮುಖ್ಯ ಎಂದು ಹೇಳಿದ್ದಾರೆ.

ಆಹಾರದಲ್ಲಿ ಪ್ರಯೋಗದ ಅಭ್ಯಾಸಗಳಿಗೆ ಸಂಬಂಧಿಸಿದ ಅಂತರ್ಗತ ಅಪಾಯಗಳು ಮತ್ತು ಸುರಕ್ಷತಾ ಕ್ರಮಗಳ ಅಗತ್ಯವನ್ನೂ ಅವರು ಹೇಳಿದ್ದಾರೆ.

ಲಿಕ್ವಿಡ್ ನೈಟ್ರೋಜನ್ (ದ್ರವ ಸಾರಜನಕ) ಗಮನಾರ್ಹವಾದ ಆರೋಗ್ಯ ಅಪಾಯಗಳನ್ನು ಉಂಟು ಮಾಡುತ್ತದೆ. ಅದು ಸೀಮಿತ ಜಾಗದಲ್ಲಿ ಆವಿಯಾದಾಗ, ಅಪಾರ ಪ್ರಮಾಣದ ಶಕ್ತಿಯನ್ನು ಹೊರಹಾಕುತ್ತದೆ. ಈ ಸಂದರ್ಭದಲ್ಲಿ ಚರ್ಮವನ್ನು ಹಾನಿಗೊಳಿಸುತ್ತದೆ ಮತ್ತು ತೀವ್ರ ಆರೋಗ್ಯ ಅಪಾಯಗಳನ್ನು ಉಂಟು ಮಾಡುತ್ತದೆ. ಈ ಆವಿಯನ್ನು ಉಸಿರಾಡುವುದರಿಂದ ಉಸಿರಾಟದ ಸಮಸ್ಯೆ ಎದುರಾಗುತ್ತದೆ. ಅಂಗಾಂಶ ಹಾನಿಯ ವರದಿಗಳೂ ಇವೆ ಎಂದು ಆರೋಗ್ಯ ತಜ್ಞರು ವಿವರಿಸಿದರು.

ಕಾಟನ್ ಕ್ಯಾಂಡಿ ನಿಷೇಧ, ಗೋಬಿ ಮಂಚೂರಿಯಲ್ಲಿ ಬಣ್ಣ ಬಳಕೆ ನಿಷೇಧದ ಬಳಿಕ ಲಿಕ್ವಿಡ್ ನೈಟ್ರೋಜನ್(ದ್ರವ ಸಾರಜನಕ) ಬಳಕೆಯ ಮೇಲೂ ಕಡಿವಾಣ ಹಾಕುವಂತೆ ಆಗ್ರಹಗಳು ಕೇಳಿ ಬರುತ್ತಿವೆ.

ಆಹಾರವನ್ನು ತಕ್ಷಣ ತಣ್ಣಗೆ ಮಾಡುವುದಕ್ಕೆ ಜೀವಕ್ಕೂ ಅಪಾಯವಿರುವ ಈ ಲಿಕ್ವಿಡ್ ನೈಟ್ರೋಜನ್'ನ್ನು ಬಳಕೆ ಮಾಡಲಾಗುತ್ತಿದೆ. ಸ್ಮೋಕ್‌ ಬಿಸ್ಕತ್‌, ಬಿಯರ್‌, ಐಸ್‌ ಕ್ರೀಂಗಳಲ್ಲಿ ಇದನ್ನು ಬಳಸಲಾಗುತ್ತಿದೆ. ಈಗಾಗಲೇ ತಮಿಳುನಾಡು ಇದರ ನೇರ ಬಳಕೆಯನ್ನು ನಿಷೇಧಿಸಿದ್ದು, ಕರ್ನಾಟಕದಲ್ಲೂ ಬ್ಯಾನ್ ಮಾಡುವಂತೆ ಹಲವರು ಒತ್ತಾಯಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel