ಮರವೇರಿ ಮಾವು ಕಿತ್ತ ಜನಾರ್ಧನ್ ರೆಡ್ಡಿ 
ರಾಜ್ಯ

ಪ್ರೀತಿಯ ಪತ್ನಿಗಾಗಿ ಮರವೇರಿ ಮಾವು ಕಿತ್ತ Janardhan Reddy: ವಿಡಿಯೊ ವೈರಲ್

ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಗಣಿ ಧಣಿ ಜನಾರ್ಧನ ರೆಡ್ಡಿ ಮತ್ತೆ ಸುದ್ದಿಯಲ್ಲಿದ್ದು ಈ ಬಾರಿ ತಮ್ಮ ಪ್ರೀತಿಯ ಮಡದಿಗಾಗಿ ಮಾವು ಕೀಳಲು ಮರವೇರಿ ಸುದ್ದಿಗೆ ಗ್ರಾಸವಾಗಿದ್ದಾರೆ.

ಗಂಗಾವತಿ: ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಗಣಿ ಧಣಿ ಜನಾರ್ಧನ ರೆಡ್ಡಿ ಮತ್ತೆ ಸುದ್ದಿಯಲ್ಲಿದ್ದು ಈ ಬಾರಿ ತಮ್ಮ ಪ್ರೀತಿಯ ಮಡದಿಗಾಗಿ ಮಾವು ಕೀಳಲು ಮರವೇರಿ ಸುದ್ದಿಗೆ ಗ್ರಾಸವಾಗಿದ್ದಾರೆ.

ಹೌದು.. ಗಂಗಾವತಿ ಶಾಸಕ ಜಿ. ಜನಾರ್ದನರೆಡ್ಡಿ (Janardhan Reddy) ತಮ್ಮ ಪ್ರೀತಿಯ ಮಡದಿಗಾಗಿ ಮಾವು ಕೀಳಲು ಮರವೇರಿರುವ ಹಳೆಯ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.

ವಿಡಿಯೋದಲ್ಲಿ ಪತ್ನಿ ಲಕ್ಷ್ಮಿ ಅರುಣಾರೊಂದಿಗೆ ತಮ್ಮ ಮಾವಿನ ತೋಟದಲ್ಲಿ ವಿಹರಿಸುತ್ತಿರುವಾಗ ಜನಾರ್ದನರೆಡ್ಡಿ ಮಾವಿನ ಮರವನ್ನು ಪ್ರಯಾಸಪಟ್ಟು ಏರಿ ಕಾಯಿಯೊಂದನ್ನು ಕಿತ್ತು ಪತ್ನಿಯ ಕೈಗಿಡುತ್ತಾರೆ. ಮರದ ಟೊಂಗೆಗಳ ಮೇಲೆ ಶಾಸಕ ರೆಡ್ಡಿ ಜಾಗ್ರತೆಯಿಂದ ಹೆಜ್ಜೆ ಇಡುತ್ತಾ, ಬ್ಯಾಲೆನ್ಸ್ ಮಾಡಿ ಕಾಯಿ ಕಿತ್ತು, ಮರಳಿ ಮರ ಇಳಿಯುವಾಗ ತಮ್ಮ ಬಾಲ್ಯವನ್ನು ನೆನೆಸಿಕೊಂಡು ಇಳಿಯಲು ಪ್ರಯಾಸ ಪಡುವುದು ವಿಡಿಯೊದಲ್ಲಿ ಸೆರೆಯಾಗಿದೆ.

ಸದ್ಯ ಮಾವಿನ ಹಣ್ಣಿನ ಸೀಸನ್‌ ಆಗಿರುವುದರಿಂದ ತರಹೇವಾರಿ ಹಣ್ಣುಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಈ ನಡುವೆ ಜನಾರ್ದನ ರೆಡ್ಡಿ ಅವರು ಮಡದಿಗಾಗಿ ಮಾವಿನ ಕಾಯಿ ಕಿತ್ತುಕೊಟ್ಟಿರುವ ಹಳೆಯ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಎಂಆರ್ ರಾಧಾಕೃಷ್ಣ ರೆಡ್ಡಿ ಎನ್ನುವವರು ಈ ವಿಡಿಯೋವನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇದು 2019ರಲ್ಲಿ ರೆಡ್ಡಿ ಅವರ ಮಾವಿನ ತೋಟದಲ್ಲಿ ತೆಗೆದಿರುವ ವಿಡಿಯೊ ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೈಟ್ ಶಿಫ್ಟ್ ಮುಗಿಸಿ ಮನೆಗೆ ಮರಳುವಷ್ಟರಲ್ಲಿ ಎದುರಾಯ್ತು ಸಾವು: ತಿರುಪತಿಯ ಫಾರ್ಮಾ ಘಟಕದಲ್ಲಿ ಸಿಡಿದ ಬಾಯ್ಲರ್, ಐವರು ಕಾರ್ಮಿಕರು ಸಾವು!

Asian Games 2026: ಇತಿಹಾಸ ಬರೆದ ಮೈಸೂರಿನ ಪ್ರಣವಿ ಅರಸ್; ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳಾ ಗಾಲ್ಫರ್

ಏಷ್ಯನ್ ಗೇಮ್ಸ್ 2026 ಫೈನಲ್: ವೈಭವ್ ಸೂರ್ಯವಂಶಿ ಅಣಕಿಸಿದ ಪಾಕ್ ಸ್ಟಾರ್ ಆಟಗಾರ! ಏನು ಮಾಡಿದ್ರು ಗೊತ್ತಾ? Video

'ಅಭಿವೃದ್ಧಿಶೀಲ ರಾಷ್ಟ್ರಗಳ ಕೈಕಟ್ಟಬೇಡಿ, ಡಂಪಿಂಗ್ ವಿರುದ್ಧ ಸಾಕ್ಷ್ಯಾಧಾರಿತ ಕ್ರಮ ಕೈಗೊಳ್ಳಿ': G20 ಸಭೆಯಲ್ಲಿ ಭಾರತ ಕೆಂಡ

ಚಲಿಸುತ್ತಿದ್ದ ರೈಲು ಹತ್ತಲು ಯತ್ನಿಸಿ ಅಪಾಯಕ್ಕೆ ಸಿಲುಕಿದ ಪ್ರಯಾಣಿಕ, ಕ್ಷಣಮಾತ್ರದಲ್ಲಿ ಎಚ್ಚೆತ್ತ RPF ಕಾನ್‌ಸ್ಟೆಬಲ್, ರಕ್ಷಣೆ-Video