'ಅಭಿವೃದ್ಧಿಶೀಲ ರಾಷ್ಟ್ರಗಳ ಕೈಕಟ್ಟಬೇಡಿ, ಡಂಪಿಂಗ್ ವಿರುದ್ಧ ಸಾಕ್ಷ್ಯಾಧಾರಿತ ಕ್ರಮ ಕೈಗೊಳ್ಳಿ': G20 ಸಭೆಯಲ್ಲಿ ಭಾರತ ಕೆಂಡ

ಇಂತಹ ಸಮಸ್ಯೆಗಳನ್ನು WTO ನಿಯಮಗಳಿಗೆ ಅನುಗುಣವಾದ ಕ್ರಮಗಳ ಮೂಲಕವೇ ಪರಿಹರಿಸಬೇಕು. ಸಾಕ್ಷ್ಯಾಧಾರಗಳ ಆಧಾರದ ಮೇಲೆ ಆಂಟಿ-ಡಂಪಿಂಗ್ ಹಾಗೂ ಕೌಂಟರ್‌ವೈಲಿಂಗ್ ಸುಂಕ ವಿಧಿಸುವುದು ಮತ್ತು ಅಂತಹ..
India calls for WTO compliant measures to address trade distortions
ಪಿಯೂಷ್ ಗೋಯಲ್
Updated on: 

ಮಿಲ್ವಾಕಿ: ಜಾಗತಿಕ ವ್ಯಾಪಾರದಲ್ಲಿನ ಅಸಮತೋಲನ, ಡಂಪಿಂಗ್ ಹಾಗೂ ಅಸಮಂಜಸ ಬೆಲೆ ನಿಗದಿಯನ್ನು ಸರಿಪಡಿಸಲು WTO (ವಿಶ್ವ ವ್ಯಾಪಾರ ಸಂಸ್ಥೆ) ನಿಯಮಗಳಿಗೆ ಅನುಗುಣವಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಭಾರತ ಒತ್ತಾಯಿಸಿದೆ.

ಅಮೆರಿಕದ ಮಿಲ್ವಾಕಿಯಲ್ಲಿ ನಡೆದ G20 ವಾಣಿಜ್ಯ ಸಚಿವರ ಸಭೆಯ ಸಮಾರೋಪ ದಿನದಂದು ಮಾತನಾಡಿದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್, 'ಕೆಲವು ಆರ್ಥಿಕ ವ್ಯವಸ್ಥೆಗಳಲ್ಲಿ ವ್ಯಾಪಾರವನ್ನು ವಿರೂಪಗೊಳಿಸುವ ರೀತಿಯ ಬೆಂಬಲವು ಡಂಪಿಂಗ್ ಮತ್ತು ಪ್ರಿಡೇಟರಿ ಪ್ರೈಸಿಂಗ್‌ (ಸ್ಪರ್ಧಿಗಳನ್ನು ಮಾರುಕಟ್ಟೆಯಿಂದ ಹೊರಹಾಕಿ ಏಕಸ್ವಾಮ್ಯ ಸಾಧಿಸುವ ಉದ್ದೇಶದಿಂದ ಉತ್ಪನ್ನ ಅಥವಾ ಸೇವೆಯ ಬೆಲೆಯನ್ನು ಅಸಹಜವಾಗಿ ಕಡಿಮೆ ಮಾಡುವುದು, ಕೆಲವೊಮ್ಮೆ ಉತ್ಪಾದನಾ ವೆಚ್ಚಕ್ಕಿಂತಲೂ ಕಡಿಮೆ ಬೆಲೆಗೆ ಮಾರಾಟ ಮಾಡುವುದು)ಗೆ ಕಾರಣವಾಗಬಹುದು ಎಂಬ ಹಲವು ಸದಸ್ಯ ರಾಷ್ಟ್ರಗಳ ಕಳವಳವನ್ನು ಭಾರತ ಹಂಚಿಕೊಳ್ಳುತ್ತದೆ ಎಂದು ಹೇಳಿದರು.

ಇಂತಹ ಸಮಸ್ಯೆಗಳನ್ನು WTO ನಿಯಮಗಳಿಗೆ ಅನುಗುಣವಾದ ಕ್ರಮಗಳ ಮೂಲಕವೇ ಪರಿಹರಿಸಬೇಕು. ಸಾಕ್ಷ್ಯಾಧಾರಗಳ ಆಧಾರದ ಮೇಲೆ ಆಂಟಿ-ಡಂಪಿಂಗ್ ಹಾಗೂ ಕೌಂಟರ್‌ವೈಲಿಂಗ್ ಸುಂಕ ವಿಧಿಸುವುದು ಮತ್ತು ಅಂತಹ ಕ್ರಮಗಳನ್ನು ನ್ಯಾಯಾಂಗ ಪರಿಶೀಲನೆಗೆ ಒಳಪಡಿಸುವುದು WTOಗೆ ಹೊಂದಿಕೆಯಾಗುವ ಮಾರ್ಗಗಳಾಗಿವೆ ಎಂದು ಗೋಯಲ್ ವಿವರಿಸಿದರು.

ಕೈಗಾರಿಕಾ ಉತ್ಪಾದನಾ ಸಾಮರ್ಥ್ಯವೇ ಸಮಸ್ಯೆಯಲ್ಲ. ಆದರೆ, ಕೆಲವು ಪ್ರದೇಶಗಳಲ್ಲಿ ಉತ್ಪಾದನೆ ಕೇಂದ್ರೀಕೃತವಾಗಲು ಅಡಗಿದ ಸಬ್ಸಿಡಿಗಳು ಹಾಗೂ ಸರ್ಕಾರದ ಬೆಂಬಲ ಕಾರಣವಾದಾಗ ವ್ಯಾಪಾರದಲ್ಲಿ ಅಸಮತೋಲನ ಉಂಟಾಗಬಹುದು ಎಂದು ಅವರು ಹೇಳಿದರು.

ಉತ್ಪಾದನೆ ಮತ್ತು ಪೂರೈಕೆ ಸರಪಳಿಗಳ ವೈವಿಧ್ಯೀಕರಣವು ಸಮರ್ಥನೀಯ ಉದ್ದೇಶವಾಗಿದ್ದರೂ, WTO ನಿಯಮಗಳ ಹೊರಗಿನ ಕ್ರಮಗಳಿಗೆ ಅದನ್ನು ನೆಪವಾಗಿ ಬಳಸಬಾರದು. ಹೊಂದಾಣಿಕೆಯ ಹೊರೆ ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ ಬೀಳದಂತೆ ನೋಡಿಕೊಳ್ಳಬೇಕು. ಅಭಿವೃದ್ಧಿಶೀಲ ದೇಶಗಳು ಕೈಗಾರಿಕೀಕರಣಕ್ಕೆ ಅಗತ್ಯವಾದ ನೀತಿ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಬೇಕು ಎಂದು ಗೋಯಲ್ ಒತ್ತಿಹೇಳಿದರು.

ಅಂಕಿ-ಅಂಶಗಳು ಹಾಗೂ ಮಾಹಿತಿಯ ಹಂಚಿಕೆ ಈಗಾಗಲೇ ಇರುವ ವ್ಯವಸ್ಥೆಗಳ ಮೂಲಕವೇ ನಡೆಯಬೇಕು ಎಂದು ಅವರು ಹೇಳಿದರು.

India calls for WTO compliant measures to address trade distortions
Pak ಹೊಸ ನಾಟಕ: ಕಾಶ್ಮೀರದಲ್ಲಿ ಭಾರತೀಯ ಸೇನೆಯಿಂದ ಹತ್ಯೆಗೀಡಾದ SSG ಉಗ್ರ ಜೀವಂತವಾಗಿದ್ದಾನೆ ಎಂದ ಪಾಕ್ ಸೇನೆ

1.4 ಶತಕೋಟಿ ಜನರ ದೇಶ

ಭಾರತವು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆಗಳಲ್ಲಿ ಒಂದಾಗಿದ್ದು, 1.4 ಶತಕೋಟಿ ಜನರ ದೇಶದ ದೇಶೀಯ ಬೇಡಿಕೆಯನ್ನು ಆಧರಿಸಿದ ಆರ್ಥಿಕತೆಯನ್ನು ಹೊಂದಿದೆ ಎಂದು ಗೋಯಲ್ ಹೇಳಿದರು. ವಿನ್ಯಾಸದಿಂದ ಹಿಡಿದು ಸಿದ್ಧ ಉತ್ಪನ್ನಗಳವರೆಗೆ ಸಂಪೂರ್ಣ ಉತ್ಪಾದನಾ ಮೌಲ್ಯ ಸರಪಳಿಯನ್ನು ಭಾರತ ನಿರ್ಮಿಸುತ್ತಿದೆ. ಜಾಗತಿಕ ಪೂರೈಕೆ ಸರಪಳಿಯಲ್ಲಿ ವಿಶ್ವಾಸಾರ್ಹ ಪಾಲುದಾರನಾಗಿ ಭಾರತ ತನ್ನ ಸ್ಥಾನವನ್ನು ಬಲಪಡಿಸುತ್ತಿದೆ ಎಂದರು.

ಭಾರತದ ಉತ್ಪಾದನಾ ಸಾಮರ್ಥ್ಯವು ದೇಶೀಯ ಹಾಗೂ ಜಾಗತಿಕ ಅಗತ್ಯಗಳನ್ನು ಪೂರೈಸುತ್ತಿದೆ. G20 ಅಧ್ಯಕ್ಷತೆ ಗುರುತಿಸಿರುವ ಕ್ಷೇತ್ರಗಳಲ್ಲಿ ಭಾರತಕ್ಕೆ ಯಾವುದೇ ರಚನಾತ್ಮಕ ಹೆಚ್ಚುವರಿ ಉತ್ಪಾದನಾ ಸಾಮರ್ಥ್ಯ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಪಾರದರ್ಶಕ ವ್ಯಾಪಾರ ವ್ಯವಸ್ಥೆಗೆ ಒತ್ತು

G20 ರಾಷ್ಟ್ರಗಳೊಂದಿಗೆ ಭಾರತದ ವ್ಯಾಪಾರವು ಪಾರದರ್ಶಕ, ತಾರತಮ್ಯರಹಿತ ಹಾಗೂ ನಿಯಮಾಧಾರಿತ ವ್ಯಾಪಾರ ವ್ಯವಸ್ಥೆಯ ಮೇಲೆ ಅವಲಂಬಿತವಾಗಿದೆ ಎಂದು ಗೋಯಲ್ ಹೇಳಿದರು. ಈ ವ್ಯವಸ್ಥೆಯಲ್ಲಿ Most-Favoured-Nation (MFN) ತತ್ವವು ಪ್ರಮುಖ ಭರವಸೆಯಾಗಿದ್ದು, ಸಣ್ಣ ವ್ಯಾಪಾರಿಯಾಗಿರಲಿ ಅಥವಾ ದೊಡ್ಡ ವ್ಯಾಪಾರಿಯಾಗಿರಲಿ ಎಲ್ಲರಿಗೂ ಒಂದೇ ರೀತಿಯ ವ್ಯಾಪಾರ ನಿಯಮಗಳು ಅನ್ವಯಿಸುವುದನ್ನು ಖಚಿತಪಡಿಸುತ್ತದೆ ಎಂದು ಅವರು ತಿಳಿಸಿದರು.

ಜಾಗತಿಕ ಪೂರೈಕೆ ಸರಪಳಿಗಳಲ್ಲಿ ಬಲವಂತದ ಕಾರ್ಮಿಕ ಪದ್ಧತಿಯನ್ನು ಕೊನೆಗೊಳಿಸುವ ವಿಚಾರದಲ್ಲಿ ಭಾರತದ ಬದ್ಧತೆ ಸಂಪೂರ್ಣ ಮತ್ತು ಯಾವುದೇ ಷರತ್ತಿಲ್ಲದ್ದು ಎಂದು ಗೋಯಲ್ ಹೇಳಿದರು. WTO ಅನ್ನು ಕೇಂದ್ರವಾಗಿಟ್ಟುಕೊಂಡು ನಿಯಮಾಧಾರಿತ, ನ್ಯಾಯಸಮ್ಮತ, ಸಮಾನ, ತಾರತಮ್ಯರಹಿತ, ಪಾರದರ್ಶಕ, ಮುಕ್ತ, ಒಳಗೊಳ್ಳುವ ಮತ್ತು ಬಹುಪಕ್ಷೀಯ ವ್ಯಾಪಾರ ವ್ಯವಸ್ಥೆಗೆ ಭಾರತ ಬದ್ಧವಾಗಿದೆ ಎಂದು ಸಚಿವರು ಪುನರುಚ್ಚರಿಸಿದರು.

ಅಭಿವೃದ್ಧಿಶೀಲ ರಾಷ್ಟ್ರಗಳು ತಮ್ಮ ಜನರ ಅಭಿವೃದ್ಧಿ ಮತ್ತು ಆಹಾರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯವಾದ ನೀತಿ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಬೇಕು. ಜತೆಗೆ, ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಒಮ್ಮತದ ತತ್ವವನ್ನು ಕಾಪಾಡಿಕೊಳ್ಳಬೇಕು ಎಂದು ಅವರು ಹೇಳಿದರು.

ಸಭೆಯ ಅಂಚಿನಲ್ಲಿ ಗೋಯಲ್ ಅವರು ಆಸ್ಟ್ರೇಲಿಯಾ, ಸೌದಿ ಅರೇಬಿಯಾ ಮತ್ತು ದಕ್ಷಿಣ ಕೊರಿಯಾ ಸೇರಿದಂತೆ ಹಲವು ದೇಶಗಳ ತಮ್ಮ ಸಹವರ್ತಿ ಸಚಿವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com