ರಾಜ್ಯ

ಬೆಂಗಳೂರು: ಬರೀ ರೇವ್ ಪಾರ್ಟಿ ಅಲ್ಲ, ಸೆಕ್ಸ್ ದಂಧೆಯೂ ಇತ್ತೆ?; ತನಿಖೆ CCBಗೆ ವರ್ಗಾವಣೆ

ಐಟಿ ರಾಜಧಾನಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಹೊರವಲಯದಲ್ಲಿ ಮೊನ್ನೆ ಭಾನುವಾರ ಮಧ್ಯರಾತ್ರಿ ನಡೆದಿದ್ದ ರೇವ್ ಪಾರ್ಟಿಪ್ರಕರಣ ತನಿಖೆಯನ್ನು ಅಧಿಕೃತವಾಗಿ ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ. ಈ ಬಗ್ಗೆ ಡಿಜಿ ಅಂಡ್ ಐಜಿಪಿ ಅಲೋಕ್ ಮೋಹನ್ ಅಧಿಕೃತ ಆದೇಶ ಹೊರಡಿಸಿದ್ದಾರೆ.

ಬೆಂಗಳೂರು: ಐಟಿ ರಾಜಧಾನಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಹೊರವಲಯದಲ್ಲಿ ಮೊನ್ನೆ ಭಾನುವಾರ ಮಧ್ಯರಾತ್ರಿ ನಡೆದಿದ್ದ ರೇವ್ ಪಾರ್ಟಿಪ್ರಕರಣ ತನಿಖೆಯನ್ನು ಅಧಿಕೃತವಾಗಿ ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ. ಈ ಬಗ್ಗೆ ಡಿಜಿ ಅಂಡ್ ಐಜಿಪಿ ಅಲೋಕ್ ಮೋಹನ್ ಅಧಿಕೃತ ಆದೇಶ ಹೊರಡಿಸಿದ್ದಾರೆ.

ಸದ್ಯ ಸಿಸಿಬಿ ಆಂಟಿ ನಾರ್ಕೊಟಿಕ್ಸ್ ವಿಭಾಗದ ಅಧಿಕಾರಿಗಳಿಂದ ತನಿಖೆ ನಡೆಯುತ್ತಿದೆ. ಇನ್ಸ್ಪೆಕ್ಟರ್ ಲಕ್ಷ್ಮೀ ಪ್ರಸಾದ್ ಅವರನ್ನು ತನಿಖಾ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ಪೊಲೀಸ್ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ.

ಎಲೆಕ್ಟ್ರಾನಿಕ್ ಸಿಟಿ ಬಳಿಯ ಜಿ ಆರ್ ಫಾರ್ಮ್ ಹೌಸ್ ನಲ್ಲಿ ಪಾರ್ಟಿ ಭಾನುವಾರ ಸಂಜೆ ಐದು ಘಂಟೆಯಿಂದ ಆರಂಭವಾಗಿದ್ದು ಸೋಮವಾರ ಬೆಳಗಿನ ಜಾವದವರೆಗೂ ಮುಂದುವರಿದಿತ್ತು. ಪಾರ್ಟಿಯಲ್ಲಿ 110ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಬರ್ತ್ ಡೇ ಪಾರ್ಟಿ ನೆಪದಲ್ಲಿ ಆರಂಭವಾದ ಪಾರ್ಟಿಯಲ್ಲಿ ಮದ್ಯ, ಡ್ರಗ್ಸ್ ನ ಮಾದಕ ವಸ್ತು ಸೇವನೆ ನಶೆಯಲ್ಲಿ ತೇಲಾಡುತ್ತಿರುವ ಬಗ್ಗೆ ಮಾಹಿತಿ ಪಡೆದು ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ ಕೆಲವರು ತಪ್ಪಿಸಿಕೊಂಡಿದ್ದಾರೆ.

ಬರ್ತ್ ಡೇ ಪಾರ್ಟಿ ಬದಲು ಡ್ರಗ್ಸ್, ಸೆಕ್ಸ್; ಬದಲಿಗೆ ಡ್ರಗ್ಸ್, ಸೆಕ್ಸ್ ಪಾರ್ಟಿ: ಪ್ರಕರಣವನ್ನು ತನಿಖೆ ಮಾಡಿದಷ್ಟೂ ಮತ್ತಷ್ಟು ಮಾಹಿತಿಗಳು ಹೊರಬರುತ್ತಿದ್ದು, ಇಲ್ಲಿ ಡ್ರಗ್ಸ್ ಮಾತ್ರ ಅಲ್ಲ ಸೆಕ್ಸ್ ಸಹ ಇತ್ತು ಎಂಬ ಶಾಕಿಂಗ್ ಮಾಹಿತಿ ತಿಳಿದುಬಂದಿದೆ. ಡ್ರಗ್ಸ್ ಜಾಲದ ಜೊತೆಗೆ ಸೆಕ್ಸ್‌ ಜಾಲದ ಬಗ್ಗೆ ಸಿಸಿಬಿಗೆ ಕೆಲ ಮಾಹಿತಿಗಳು ಲಭ್ಯವಾಗಿವೆ. ಈ ಹಿನ್ನಲೆ ಪ್ರಕರಣದ ತೀವ್ರತೆ ಹೆಚ್ಚಿದೆ. ವಾಸು ಬರ್ತಡೆ ಪಾರ್ಟಿ ಎಂದು ನೆಪಕ್ಕೆ ಆಯೋಜನೆ ಮಾಡಿದ್ದು ಅಕ್ರಮ ನಡೆಸಲಾಗಿದೆ. ಓರ್ವರಿಗೆ ಇಂತಿಷ್ಟು ಎಂದು ಹಣ ಪಡೆದು ಪಾರ್ಟಿಗೆ ಕರೆಸಿದ್ದಾರೆ.

ಸಿಸಿಬಿ ಪೊಲೀಸರಿಗೆ ಕಮಿಷನರ್ ಬಿ ದಯಾನಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿ ಎಂದಿದ್ದಾರೆ. ನಗರದಲ್ಲಿ ಇಂತಹ ಡ್ರಗ್ಸ್ ಮತ್ತು ರೇವ್ ಪಾರ್ಟಿಗಳು ನಡೆಯದಂತೆ ಕ್ರಮ ತೆಗೆದುಕೊಳ್ಳಬೇಕು. ಪಾರ್ಟಿ ಆಯೋಜನೆ, ಪಾರ್ಟಿಗೆ ಡ್ರಗ್ಸ್ ಪೂರೈಕೆ ಪಾರ್ಟಿಗೆ ಸ್ಥಳದ ಅವಕಾಶ ನೀಡುವುದು ಹೀಗೆ ಎಲ್ಲಾ ಕೋನದಲ್ಲಿ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಮಧ್ಯಪ್ರದೇಶ: ಕಾಫ್ ಸಿರಪ್ ಸೇವಿಸಿ ಮೂತ್ರಪಿಂಡ ವೈಫಲ್ಯ; ಚಿಕಿತ್ಸೆ ಪಡೆಯುತ್ತಿದ್ದ 6 ಮಕ್ಕಳ ಮರಣ; ಸಾವಿನ ಸಂಖ್ಯೆ 20ಕ್ಕೆ ಏರಿಕೆ

BiggBoss Kannada: ಬಿಗ್ ಬಾಸ್ 12 ಮನೆಗೆ ಬೀಗಮುದ್ರೆ, ಜಾಲಿವುಡ್ ಸ್ಟುಡಿಯೋಸ್ ಇಂದು ಹೈಕೋರ್ಟ್ ಮೊರೆ?

ರಾಜಕೀಯ ಒತ್ತಡಕ್ಕೆ ಮಣಿದು ಆತುರಾತುರವಾಗಿ ಸಮೀಕ್ಷೆ ನಡೆಸುತ್ತಿದ್ದಾರೆ: BJP ಟೀಕೆ

ನಮ್ಮ ಮೆಟ್ರೋಗೆ ವಾಲ್ಮೀಕಿ ಹೆಸರಿಡಲು ಕೇಂದ್ರಕ್ಕೆ ಒತ್ತಾಯ: ಸಿಎಂ ಸಿದ್ದರಾಮಯ್ಯ

ನಮ್ಮ ತಟ್ಟೆಯಲ್ಲಿರುವ ಅನ್ನ ಕಿತ್ತುಕೊಳ್ಳಬೇಡಿ: ಕುರುಬ ಸಮುದಾಯ ST ಸೇರ್ಪಡೆ ಪ್ರಸ್ತಾಪಕ್ಕೆ VS ಉಗ್ರಪ್ಪ ವಿರೋಧ

SCROLL FOR NEXT