ಸಾಂದರ್ಭಿಕ ಚಿತ್ರ 
ರಾಜ್ಯ

ರಾಜ್ಯದ ಸರ್ಕಾರಿ ಆಸ್ಪತ್ರೆಯ ಔಷಧಿ ಮೇಲೆ ವೆಟರ್ನರಿ ಸೈನ್ಸಸ್‌ ಲೇಬಲ್‌; ರೋಗಿಗಳಲ್ಲಿ ಹೆಚ್ಚಿದ ಆಂತಕ!

ಇತ್ತೀಚೆಗೆ ಕರ್ನಾಟಕದ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿದ ರೋಗಿಗಳಿಗೆ ನೀಡಲಾದ ಕೆಲವು ಔಷಧಿಗಳ ಮೇಲೆ ಪಶು ಸಂಗೋಪನಾ ಪಶುವೈದ್ಯಕೀಯ ವಿಜ್ಞಾನ(ಎಎಚ್‌ವಿಎಸ್) ಎಂಬ ಲೇಬಲ್‌ಗಳನ್ನು ನೋಡಿ ಆಘಾತಗೊಂಡಿದ್ದಾರೆ.

ಬೆಂಗಳೂರು: ಇತ್ತೀಚೆಗೆ ಕರ್ನಾಟಕದ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿದ ರೋಗಿಗಳಿಗೆ ನೀಡಲಾದ ಕೆಲವು ಔಷಧಿಗಳ ಮೇಲೆ ಪಶು ಸಂಗೋಪನಾ ಪಶುವೈದ್ಯಕೀಯ ವಿಜ್ಞಾನ(ಎಎಚ್‌ವಿಎಸ್) ಎಂಬ ಲೇಬಲ್‌ಗಳನ್ನು ನೋಡಿ ಆಘಾತಗೊಂಡಿದ್ದಾರೆ. ಆದರೆ ಸಂಬಂಧಿಸಿದ ಇಲಾಖೆಯು ಇದು ಕೇವಲ ಲೋಗೋ ಸಮಸ್ಯೆ. ವಾಸ್ತವವಾಗಿ ಔಷಧಗಳು ಮಾನವ ಬಳಕೆಗೆ ಯೋಗ್ಯ ಎಂದು ಹೇಳಿದೆ.

ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ(KSMSCL) 'ಲೋಗೋಗ್ರಾಮ್' ವಿನ್ಯಾಸದಲ್ಲಿ ದೋಷವಿದೆ. ಆದರೆ ಉತ್ಪನ್ನವು ಉತ್ತಮ ಗುಣಮಟ್ಟದ ಮತ್ತು 'ಮಾನವ ಬಳಕೆಗೆ ಮಾತ್ರ' ಎಂದು ಹೇಳಿದೆ.

ಮುದ್ರಣದೋಷವು ರೋಗಿಗಳಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಆದರೆ ಅಗತ್ಯವಿರುವ ವೈದ್ಯಕೀಯ ಮಾನದಂಡಗಳ ಪ್ರಕಾರ ಮತ್ತು ಮಾನವ ಬಳಕೆಗೆ ಮಾತ್ರ ಈ ಔಷಧಿ ತಯಾರಿಸಲಾಗಿದೆ ಎಂದು KSMSCL ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ಸದಾಶಿವ ವಟಾರೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

KSMSCL ಮೂಲಗಳ ಪ್ರಕಾರ, AHVS ಲೇಬಲ್ ಹೊಂದಿರುವ ಏಳು ಔಷಧಿಗಳಿವೆ. ಇದು ಕಣ್ಣು ಮತ್ತು ಮೂಗಿನ ಡ್ರಾಪ್ ಗಳನ್ನು ಸಹ ಒಳಗೊಂಡಿತ್ತು.

ಒಟ್ಟು 62.9 ಲಕ್ಷ ರೂ. ಮೌಲ್ಯದ ಈ ಔಷಧಿಗಳನ್ನು ಖಾಸಗಿ ಸಂಸ್ಥೆಯೊಂದು ಸರಬರಾಜು ಮಾಡಿದ್ದು, ಈ ವರ್ಷದ ಜನವರಿ 5 ರಂದು ಸರ್ಕಾರಿ ಗೋದಾಮಿಗೆ ತಲುಪಿದೆ.

ಔಷಧಿಗಳೆಂದರೆ ಮೀಥೈಲ್ ಪ್ರೆಡ್ನಿಸೋಲೋನ್ ಇಂಜೆಕ್ಷನ್, ಕಾರ್ಬಾಕ್ಸಿಮೆಥೈಲ್ ಸೆಲ್ಯುಲೋಸ್ ಐ ಡ್ರಾಪ್ಸ್, ಆಕ್ಸಿಮೆಟಾಜೋಲಿನ್ ಪೀಡಿಯಾಟ್ರಿಕ್ (ನಾಸಲ್) ಡ್ರಾಪ್ಸ್, ಫ್ಲುರ್ಬಿಪ್ರೊಫೆನ್ ಐ ಡ್ರಾಪ್ಸ್ ಐಪಿ, ಸೋಡಿಯಂ ಕ್ಲೋರೈಡ್ (ನಾಸಲ್) ಡ್ರಾಪ್ಸ್, ಟಿಮೊಲೋಲ್ ಮಲೇಟ್ ಡ್ರಾಪ್ಸ್ ಮತ್ತು ಆಕ್ಸಿಮೆಟಾಜೋಲಿನ್ ಹೈಡ್ರೋಕ್ಲೋರೈಡ್ (ನಾಸಲ್.)

ಜನವರಿ 5 ರೊಳಗೆ ಉತ್ಪನ್ನಗಳನ್ನು ರಾಜ್ಯದ ಎಲ್ಲಾ ಗೋದಾಮುಗಳಿಗೆ ಸರಬರಾಜುದಾರರಿಂದ ಸರಬರಾಜು ಮಾಡಲಾಗಿದೆ ಎಂದು ವಟಾರೆ ಅವರು ಹೇಳಿದ್ದಾರೆ.

"ಒದಗಿಸಿದ ಉತ್ಪನ್ನದ ಮಾಹಿತಿಯ ಲೇಬಲ್‌ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ ಎಂಬುದನ್ನು ಗಮನಿಸಬೇಕು. ಅಲ್ಲದೆ, ಉತ್ಪನ್ನದ ಒಂದು ಭಾಗದಲ್ಲಿ ಲೋಗೋಗ್ರಾಮ್ ವಿನ್ಯಾಸ ಸರಿಯಾಗಿದೆ ಮತ್ತು ಇನ್ನೊಂದು ಭಾಗದಲ್ಲಿ ಮಾತ್ರ ಲೋಗೋಗ್ರಾಮ್ ವಿನ್ಯಾಸದಲ್ಲಿ ಮುದ್ರಣ ದೋಷ ಕಂಡುಬಂದಿದೆ. ಅಲ್ಲಿ ಆರೋಗ್ಯ ಇಲಾಖೆಯ ಬದಲಿಗೆ AHVS ಇಲಾಖೆ ಎಂದು ಟೈಪ್ ಮಾಡಲಾಗಿದೆ." "ಸರಬರಾಜುದಾರರಿಗೆ ಖರೀದಿ ಆದೇಶದ ಮೌಲ್ಯದ ಮೇಲೆ ಒಂದು ಶೇಕಡಾ ದಂಡವನ್ನು ವಿಧಿಸಲಾಗಿದೆ ಮತ್ತು ಎಲ್ಲಾ ಗೋದಾಮುಗಳಿಗೆ ದೋಷವನ್ನು ಮರೆಮಾಚಿದ ನಂತರ ಮಾತ್ರ ಉತ್ಪನ್ನಗಳನ್ನು ವಿತರಿಸಲು ಸೂಚಿಸಲಾಗಿದೆ. ಅಲ್ಲದೆ ಸರಬರಾಜುದಾರರಿಗೆ ಇಂತಹ ತಪ್ಪು ಪುನರಾವರ್ತಿಸದಂತೆ ಎಚ್ಚರಿಕೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

SCROLL FOR NEXT