ಬಿಎಂಟಿಸಿ ಬಸ್ ಗಳು BMTC
ರಾಜ್ಯ

ಬೆಂಗಳೂರು: ಬಿಎಂಟಿಸಿಗೆ ಉತ್ತರ ಪ್ರದೇಶದ ನಿಯೋಗ ಭೇಟಿ, ಶಕ್ತಿ ಯೋಜನೆ ಸೇರಿ ಹಸಿರು ತಂತ್ರಜ್ಞಾನದ ಕುರಿತು ಚರ್ಚೆ

ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಬಿಎಂಟಿಸಿಗೆ ಭೇಟಿ ನೀಡಿ, ಶಕ್ತಿ ಯೋಜನೆ ಸೇರಿ ಹಸಿರು ತಂತ್ರಜ್ಞಾನದ ಕುರಿತು ಮಾಹಿತಿ ಪಡೆದುಕೊಂಡರು.

ಬೆಂಗಳೂರು: ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಬಿಎಂಟಿಸಿಗೆ ಭೇಟಿ ನೀಡಿ, ಶಕ್ತಿ ಯೋಜನೆ ಸೇರಿ ಹಸಿರು ತಂತ್ರಜ್ಞಾನದ ಕುರಿತು ಮಾಹಿತಿ ಪಡೆದುಕೊಂಡರು.

ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ವ್ಯವಸ್ಥಾಪಕ ನಿರ್ದೇಶಕರಾದ ಪ್ರನ್ನಾತ ಐಶ್ವರ್ಯ, ಪ್ರಧಾನ ವ್ಯವಸ್ಥಾಪಕ (ಟೆಕ್‌) ರಾಜೀವ್ ಆನಂದ್, ಪ್ರಾದೇಶಿಕ ವ್ಯವಸ್ಥಾಪಕ ಕೇಸರಿ ನಂದನ್ ಚೌಧರಿ, ಸೇವಾ ನಿರ್ವಾಹಕ ಅನುರಾಗ್ ಯಾದವ್ ಅವರು ಬಿಎಂಟಿಸಿಗೆ ಭೇಟಿ ನೀಡಿದ್ದು, ಈ ನಿಯೋಗಕ್ಕೆ ಬಿಎಂಟಿಸಿ ನಿರ್ದೇಶಕಿ (ಮಾಹಿತಿ ತಂತ್ರಜ್ಞಾನ) ಶಿಲ್ಪಾ ಪ್ರಾತ್ಯಕ್ಷಿಕೆ ನೀಡಿದರು.

ಬಿಎಂಟಿಸಿ ಅಳವಡಿಸಿಕೊಂಡಿರುವ ಮಾದರಿ ಉಪಕ್ರಮಗಳು, ಸಂಸ್ಥೆಯ ಇತಿಹಾಸ, ಶಕ್ತಿ ಯೋಜನೆಯ ಅನುಷ್ಠಾನ, ಪ್ರಯಾಣಿಕರ ಪಾಸ್ ವ್ಯವಸ್ಥೆ, ಆರ್ಥಿಕ ಕಾರ್ಯಕ್ಷಮತೆ, ಸಂಚಾರ ಆದಾಯ, ಜಾಹೀರಾತು ಶಿಷ್ಟಾಚಾರ, ಸಂಸ್ಥೆಯ ಬಸ್ ವೇಳಾಪಟ್ಟಿ, ಕಾರ್ಯಚರಣೆಗಳ ವೆಚ್ಚ, ಎಲೆಕ್ಟ್ರಿಕ್ ಬಸ್ಸುಗಳ ಹಸಿರು ತಂತ್ರಜ್ಞಾನದ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ (ಆಚರಣೆ) ಜಿ.ಟಿ. ಪ್ರಭಾಕರ ರೆಡ್ಡಿ, ಮುಖ್ಯ ತಾಂತ್ರಿಕ ಎಂಜಿನಿಯರ್‌ ಎ.ಎನ್. ಗಜೇಂದ್ರ ಕುಮಾರ್, ಗಣಕ ವ್ಯವಸ್ಥಾಪಕಿ ಎ. ಪ್ರಿಯಾಂಕ, ವಿಭಾಗೀಯ ಸಂಚಾರ ಅಧಿಕಾರಿ ಪ್ರತಿಮಾ.ಎಸ್.ವಿ. ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್