ಬಸವರಾಜ ಬೊಮ್ಮಾಯಿ 
ರಾಜ್ಯ

ವಕ್ಫ್ ನೋಟಿಸ್ ಹಿಂಪಡೆದ ಸರ್ಕಾರ: ಉಪ ಚುನಾವಣೆ ವೇಳೆ ರೈತರ ದಿಕ್ಕು ತಪ್ಪಿಸುವ ಯತ್ನ- ಬೊಮ್ಮಾಯಿ

ಮುಖ್ಯಮಂತ್ರಿ ಸಿದ್ದರಾಮಯ್ಯಗೆ ರೈತರ ಹಿತ ಹಾಗೂ ಅವರ ಜಮೀನಿನ ಭದ್ರತೆಯ ಬಗ್ಗೆ ನಿಜವಾಗಿಯೂ ಆಸಕ್ತಿ ಇದ್ದರೆ ಈ ನೋಟಿಫಿಕೇಶನ್‌ಗಳನ್ನು ಹೊರಡಿಸಿರುವ ಗೆಜೆಟ್‌ ಅಧಿಸೂಚನೆಯನ್ನು ಹಿಂಪಡೆಯಬೇಕು.

ಹುಬ್ಬಳ್ಳಿ: ವಕ್ಫ್ ಜಮೀನಿಗೆ ಸಂಬಂಧಿಸಿದ ಎಲ್ಲಾ ನೋಟಿಸ್‌ಗಳನ್ನು ಹಿಂತೆಗೆದುಕೊಳ್ಳುವ ರಾಜ್ಯ ಸರ್ಕಾರದ ನಿರ್ಧಾರ ಉಪ ಚುನಾವಣೆ ವೇಳೆ ರೈತರನ್ನು ದಿಕ್ಕು ತಪ್ಪಿಸುವ ಪ್ರಯತ್ನವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಮುಖಂಡ ಬಸವರಾಜ ಬೊಮ್ಮಾಯಿ ಭಾನುವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಕ್ಫ್ ಕಾನೂನು ಚೆನ್ನಾಗಿ ಗೊತ್ತಿದೆ, ಉಪ ಚುನಾವಣೆ ವೇಳೆ ರೈತರನ್ನು ದಿಕ್ಕು ತಪ್ಪಿಸಲು ಅವರು ಪ್ರಯತ್ನಿಸುತ್ತಿದ್ದಾರೆ. ನೋಟಿಸ್ ಹಿಂಪಡೆಯುವ ಉದ್ದೇಶ ಈಡೇರುವುದಿಲ್ಲ, ಯಾವುದೇ ಸಮಯದಲ್ಲಿ ನೋಟಿಸ್ ನೀಡಬಹುದು ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯಗೆ ರೈತರ ಹಿತ ಹಾಗೂ ಅವರ ಜಮೀನಿನ ಭದ್ರತೆಯ ಬಗ್ಗೆ ನಿಜವಾಗಿಯೂ ಆಸಕ್ತಿ ಇದ್ದರೆ ಈ ನೋಟಿಫಿಕೇಶನ್‌ಗಳನ್ನು ಹೊರಡಿಸಿರುವ ಗೆಜೆಟ್‌ ಅಧಿಸೂಚನೆಯನ್ನು ಹಿಂಪಡೆಯಬೇಕು. ಆ ಗೆಜೆಟ್ ಅಧಿಸೂಚನೆಯನ್ನು ಹಿಂಪಡೆಯಲು ನವೆಂಬರ್ 4 ರಂದು ಬಿಜೆಪಿ ಎಲ್ಲಾ ವಕ್ಫ್ ಸಮಸ್ಯೆಗಳ ವಿರುದ್ಧ ದೊಡ್ಡ ಪ್ರತಿಭಟನೆ ನಡೆಸಲಿದೆ ಎಂದು ಅವರು ಹೇಳಿದರು

ಈ ಮಧ್ಯೆ ವಕ್ಫ್ ಆಸ್ತಿ ಅಲ್ಲಾನದ್ದು, ಅದನ್ನು ಕಾಪಾಡಿಕೊಳ್ಳುವುದು ನಿಮ್ಮ ಡ್ಯೂಟಿ, ಅದನ್ನು ಮರಳಿ ಪಡೆಯಲು ಯಾವುದೇ ಕಾಂಪ್ರಮೈಸ್ ಮಾಡಿಕೊಳ್ಳಬೇಡಿ. ಕಾಂಪ್ರಮೈಸ್ ಮಾಡಿಕೊಂಡರೆ ನಾವೇನೂ ಮಾಡಲು ಸಾಧ್ಯವಾಗುವುದಿಲ್ಲ. ಊಪರ್ ವಾಲಾ ಎಲ್ಲವನ್ನೂ ನೋಡುತ್ತಿರುತ್ತಾನೆ 2022ರಲ್ಲಿ ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ ಹೇಳಿರುವ ವಿಡಿಯೋ ವೈರಲ್ ಆಗಿದ್ದು, ಬಿಜೆಪಿಗೆ ಇರುಸು ಮುರುಸು ತರಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮೂಡಬಿದ್ರೆ ಇನ್ಸ್‌ಪೆಕ್ಟರ್ ಸಂದೇಶ್ ಕಾಮಕಾಂಡ?: ಸಂತ್ರಸ್ತೆಯ ಮಗಳ ಮೇಲೂ ಕಣ್ಣು, ಆಡಿಯೋ ವೈರಲ್..! ಅಮಾನತು

ಭಾರತದ ಪದವೀಧರರಲ್ಲಿ ಶೇ. 40 ರಷ್ಟು ಜನರಿಗೆ ಉದ್ಯೋಗ ಸಿಗುತ್ತಿಲ್ಲ: ವರದಿ

Railway Exam: ಕನ್ನಡಕ್ಕೆ ಕೊಕ್, ಕರವೇ ಹೋರಾಟದಿಂದ ಮುಂದೂಡಿಕೆ, ಪ್ರಧಾನಿ ಮೋದಿ, ಸೋಮಣ್ಣ ವಿರುದ್ಧ ಸಿದ್ದು ಗರಂ!

'ಬೆಂಗಳೂರಿನ 1.5 ಲಕ್ಷ ರೂ.ಗಿಂತ ನನ್ನ ಊರಿನ 65,000 ರೂ. ಸಂಬಳ ಉತ್ತಮ': ವ್ಯಕ್ತಿ ಪೋಸ್ಟ್ ವೈರಲ್

ರಾತ್ರಿಯಿಡೀ ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್‌ ಭದ್ರತಾ ಮುಖ್ಯಸ್ಥ ಲಾರಿಜಾನಿ ಹತ್ಯೆ

SCROLL FOR NEXT