ಬಂಧತ ಆರೋಪಿಗಳು. 
ರಾಜ್ಯ

ದೀಪಾವಳಿ ಸಮಯದಲ್ಲಿ ಇಸ್ಪೀಟ್‌ ಜೂಜಾಟ: ಬಳ್ಳಾರಿಯಲ್ಲಿ 130 ಪ್ರಕರಣ, 810 ಮಂದಿ ಬಂಧನ

ಜಿಲ್ಲೆ ಸೇರಿದಂತೆ ಇತರೆ ಜಿಲ್ಲೆ, ನೆರೆಯ ಆಂಧ್ರದ ಭಾಗಗಳಿಂದ ಸಹ ಇಸ್ಟೀಟ್‌ ಜೂಜಾಟವಾಡಲು ಜಿಲ್ಲೆಯತ್ತ ಕೆಲವರು ಆಗಮಿಸುವುದು ಸಾಮಾನ್ಯವಾಗಿದೆ.

ಬಳ್ಳಾರಿ: ದೀಪಾವಳಿ ಹಬ್ಬದ ಸಮಯದಲ್ಲಿ ಜಿಲ್ಲಾದ್ಯಂತ ಇಸ್ಪೀಟ್‌ ಜೂಜಾಟದಲ್ಲಿ ತೊಡಗಿರುವವರ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಒಟ್ಟು 130 ಪ್ರಕರಣ ದಾಖಲಿಸಿ, ಜೂಜಾಟದಲ್ಲಿ ತೊಡಗಿಸಿಕೊಂಡಿದ್ದ 810 ಜನರನ್ನು ಬಂಧನಕ್ಕೊಳಪಡಿಸಿದ್ದಾರೆ.

ದೀಪಾವಳಿ ಹಬ್ಬ ಎದುರಾಗುತ್ತಿದ್ದಂತೆ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಎಲ್ಲೆಡೆ ಇಸ್ಪೀಟ್‌ ಜೂಜಾಟದ ಅಡ್ಡೆ ನಿರ್ಮಾಣವಾಗುತ್ತವೆ. ಜಿಲ್ಲೆ ಸೇರಿದಂತೆ ಇತರೆ ಜಿಲ್ಲೆ, ನೆರೆಯ ಆಂಧ್ರದ ಭಾಗಗಳಿಂದ ಸಹ ಇಸ್ಟೀಟ್‌ ಜೂಜಾಟವಾಡಲು ಜಿಲ್ಲೆಯತ್ತ ಕೆಲವರು ಆಗಮಿಸುವುದು ಸಾಮಾನ್ಯವಾಗಿದೆ. ಹೀಗಾಗಿ, ಕಾನೂನು ಬಾಹಿರ ಜೂಜಾಟಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಳೆದ ಅ.30ರಿಂದ ನವೆಂಬರ್ 3ರರವರೆಗೆ ಜಿಲ್ಲಾದ್ಯಂತ ಪೊಲೀಸರು ದಾಳಿ ನಡೆಸಿ 810 ಮಂದಿಯನ್ನು ಬಂಧನಕ್ಕೊಳಪಡಿಸಿ, 16 ಲಕ್ಷ ರೂ. ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ವಿವಿಧ ಠಾಣೆಗಳಲ್ಲಿ 130 ಪ್ರಕರಣಗಳು ದಾಖಲಾಗಿವೆ.

ಪದೇ ಪದೇ ಎಚ್ಚರಿಕೆ ನೀಡಿದರೂ, ಹಬ್ಬ ಹರಿದಿನಗಳ ಸಂದರ್ಭದಲ್ಲಿ ಜೂಜಾಟ ಹೆಚ್ಚಾಗುತ್ತವೆ. ಈಗಾಗಲೇ ಸಾಕಷ್ಟು ಮಂದಿ ಕಂಬಿ ಹಿಂದೆ ಇದ್ದಾರೆ. ಕೆಲವರು ಜೂಜಾಟಕ್ಕೆ ಕೆಲವು ಗಂಟೆಗಳ ಕಾಲ ಮನೆಗಳನ್ನೇ ನೀಡುತ್ತಿರುವುದೂ ಕಂಡು ಬಂದಿದೆ. ಇದೀಗ ಬಂಧನಕ್ಕೊಳಗಾಗಿರುವವರು ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT