ಬೀದರ್ ಕೋಟೆ PTI
ರಾಜ್ಯ

ಐತಿಹಾಸಿಕ ಬೀದರ್ ಕೋಟೆ ಮೇಲೆ ವಕ್ಫ್ ಮಂಡಳಿ ಕಣ್ಣು: 17 ಸ್ಮಾರಕಗಳು ತನ್ನ ಆಸ್ತಿ ಎಂದು ಗುರುತಿಸಿದ Waqf!

ಕೋಟೆಯನ್ನು ನಿರ್ವಹಿಸುತ್ತಿರುವ ಭಾರತೀಯ ಪುರಾತತ್ವ ಇಲಾಖೆಗೆ ಈ ಬಗ್ಗೆ ತಿಳಿದಿಲ್ಲ. ಬೀದರ್ ಕೋಟೆ ಆವರಣದಲ್ಲಿರುವ 60 ಆಸ್ತಿಗಳ ಪೈಕಿ 17 ಆಸ್ತಿಗಳು ವಕ್ಫ್ ಮಂಡಳಿಗೆ ಸೇರಿದ್ದು ಎಂದು ಮೂಲಗಳು ತಿಳಿಸಿವೆ.

ಬೆಂಗಳೂರು: ರಾಜ್ಯದಲ್ಲಿ ವಕ್ಫ್ ಆಸ್ತಿ ವಿವಾದ ಮುಗಿಯುವ ಸೂಚನೆಗಳು ಕಾಣುತ್ತಿಲ್ಲ. ರೈತರ ಜಮೀನು, ಮಠದ ಜಮೀನುಗಳನ್ನು ತನ್ನದೆಂದು ಗುರುತಿಸಿದ್ದ ವಕ್ಫ್ ಮಂಡಳಿಯೂ ಇದೀಗ ಐತಿಹಾಸಿಕ ಬೀದರ್ ಕೋಟೆ ಮೇಲೆ ಕಣ್ಣಾಕಿದ್ದು ಕೋಟೆಯೊಳಗಿನ 17 ಸ್ಮಾರಕಗಳು ತನ್ನ ಆಸ್ತಿ ಎಂದು ಗುರುತಿಸಿರುವುದಾಗಿ ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

ಈ ಸ್ಮಾರಕಗಳು ಬೀದರ್ ಜಿಲ್ಲಾ ಕೇಂದ್ರ ಪಟ್ಟಣದಲ್ಲಿರುವ ಕೋಟೆಯ ಪ್ರಮುಖ ಹೆಗ್ಗುರುತುಗಳಲ್ಲಿ ಸೇರಿವೆ. ಕೋಟೆಯನ್ನು ನಿರ್ವಹಿಸುತ್ತಿರುವ ಭಾರತೀಯ ಪುರಾತತ್ವ ಇಲಾಖೆಗೆ ಈ ಬಗ್ಗೆ ತಿಳಿದಿಲ್ಲ. ಬೀದರ್ ಕೋಟೆ ಆವರಣದಲ್ಲಿರುವ 60 ಆಸ್ತಿಗಳ ಪೈಕಿ 17 ಆಸ್ತಿಗಳು ವಕ್ಫ್ ಮಂಡಳಿಗೆ ಸೇರಿದ್ದು ಎಂದು ಮೂಲಗಳು ತಿಳಿಸಿವೆ.

ವಕ್ಫ್ ಗುರುತಿಸಿರುವ ಪಟ್ಟಿಯಲ್ಲಿ ಹೆಸರಾಂತ 16 ಸ್ತಂಭಗಳು ಮಸೀದಿ, ವಿವಿಧ ಬಹಮನಿ ಆಡಳಿತಗಾರರ 14 ಸಮಾಧಿಗಳು ಮತ್ತು ಅಹ್ಮದ್ ಶಾ-IV, ಅಹ್ಮದ್ ಶಾ ಅವರ ಪತ್ನಿ, ಅಲ್ಲಾವುದ್ದೀನ್, ಹಸನ್ ಖಾನ್, ಮೊಹಮ್ಮದ್ ಶಾ-III, ನಿಜಾಮ್, ಸುಲ್ತಾನ್ ಅಹ್ಮದ್ ಶಾ ವಾಲಿ ಮತ್ತು ಸುಲ್ತಾನ್ ಮಹಮೂದ್ ಷಾ ಸೇರಿದಂತೆ ಅವರ ಕುಟುಂಬದ ಸದಸ್ಯರ ಸಮಾಧಿಗಳನ್ನು ಸೇರಿವೆ.

ಈ ಸಂಬಂಧ ಎಎಸ್‌ಐಗೆ ನೋಟಿಸ್‌ಗಳನ್ನು ನೀಡಲಾಗಿಲ್ಲ ಎಂದು ಅನಾಮಧೇಯತೆಯ ಷರತ್ತಿನ ಮೇಲೆ ವಕ್ಫ್ ಮಂಡಳಿಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಲವು ದಶಕಗಳಿಂದ ಐತಿಹಾಸಿಕ ಸ್ಮಾರಕಗಳ ನಿರ್ವಹಣೆ ಹಾಗೂ ರಕ್ಷಕರಾಗಿರುವ ಎಎಸ್‌ಐಗೆ ಮಂಡಳಿಯು ನೋಟಿಸ್ ಜಾರಿ ಮಾಡುವುದು ಹೇಗೆ? ವಕ್ಫ್ ಬೋರ್ಡ್ ಹೆಸರಿನಲ್ಲಿ ಸಾಕಷ್ಟು ಅವ್ಯವಹಾರಗಳು ನಡೆಯುತ್ತಿದ್ದು, ಇದರಿಂದ ಮುಸ್ಲಿಂ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದು ಆರೋಪಿಸಿದರು. ವಿವಾದವು ಪ್ರಾರಂಭವಾದಾಗಿನಿಂದ, ನಾವು ಎಲ್ಲಾ ನೋಟಿಸ್‌ಗಳನ್ನು ಹಿಂಪಡೆಯಲು ನಿರ್ಧರಿಸಿದ್ದೇವೆ. ಏಕೆಂದರೆ ಬಹಳ ಸಮಯದಿಂದ ಭೂಮಿಯಲ್ಲಿ ಕುಳಿತಿರುವ ಜನರನ್ನು ಹೊರಹಾಕುವುದು ಅನ್ಯಾಯ ಮತ್ತು ಕಾನೂನುಬಾಹಿರವಾಗಿದೆ ಎಂದು ಅಧಿಕಾರಿ ಸೇರಿಸಿದರು.

ಏತನ್ಮಧ್ಯೆ, ವಕ್ಫ್ (ತಿದ್ದುಪಡಿ) ಮಸೂದೆ 2024ರ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರು ನವೆಂಬರ್ 7ರಂದು ಕರ್ನಾಟಕದ ಹುಬ್ಬಳ್ಳಿ ಮತ್ತು ವಿಜಯಪುರಕ್ಕೆ ಭೇಟಿ ನೀಡಿ ವಕ್ಫ್ ಮಂಡಳಿಯ ಕ್ರಮದಿಂದ ಹಾನಿಗೊಳಗಾದ ರೈತರೊಂದಿಗೆ ಸಂವಾದ ನಡೆಸಲಿದ್ದಾರೆ. ವಿಜಯಪುರದಲ್ಲಿ ವಕ್ಫ್ ಮಂಡಳಿಯೂ ರೈತರ ಜಮೀನನ್ನು ಕಬಳಿಸುತ್ತಿದೆ. ಈ ಸಂಬಂಧ ರೈತರ ಜೊತೆ ಚರ್ಚಿಸಲು ರಾಜ್ಯಕ್ಕೆ ಬರುವಂತೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮನವಿ ಮಾಡಿದ ಕೆಲವು ದಿನಗಳ ನಂತರ ಪ್ರತಿಕ್ರಿಯೆ ಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT