ಸಂಗ್ರಹ ಚಿತ್ರ 
ರಾಜ್ಯ

Swiggy-Zomato ಸೇವೆಗಳಲ್ಲಿ ಕನ್ನಡ ಬಳಕೆಗೆ ಕಾನೂನು ಜಾರಿಗೆ ತನ್ನಿ: ಸರ್ಕಾರಕ್ಕೆ KDA ಆಗ್ರಹ

ಮನೆ ಮನೆಗೆ ಆಹಾರ ತಲುಪಿಸುವ ಸೇವೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರವರ್ಧಮಾನಕ್ಕೆ ಬಂದಿರುವ ಸ್ವಿಗ್ಗಿ, ಝೊಮ್ಯಾಟೊನಂತಹ ಸಂಸ್ಥೆಗಳ ಕನ್ನಡ ವಿರೋಧಿ ಧೋರಣೆಯನ್ನು ನಿಯಂತ್ರಿಸಬೇಕಾದಲ್ಲಿ ರಾಜ್ಯ ಸರಕಾರವು ಉದ್ದೇಶಿಸಿರುವ ಕಾರ್ಮಿಕ ಭದ್ರತಾ ಕಾಯ್ದೆಯಲ್ಲಿ ಸೂಕ್ತ ತಿದ್ದುಪಡಿ ತರಬೇಕಾದ ತುರ್ತು ಅವಶ್ಯಕತೆ ಇದೆ.

ಬೆಂಗಳೂರು: ಸ್ವಿಗ್ಗಿ, ಜೊಮ್ಯಾಟೋ ಮುಂತಾದ ಆಹಾರ ಡೆಲಿವರಿ ಸಂಸ್ಥೆಗಳು ತಮ್ಮ ಸೇವೆಗಳಲ್ಲಿ ಕನ್ನಡ ಬಳಕೆಗೆ ಕಾನೂನು ಜಾರಿಗೆ ತರಬೇಕೆಂದು ರಾಜ್ಯ ಸರ್ಕಾರಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಗ್ರಹಿಸಿದೆ.

ಈ ಸಂಬಂಧ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಸಚಿವ ಸಂತೋಷ್ ಲಾಡ್ ಅವರಿಗೆ ಪತ್ರ ಬರೆದಿದ್ದಾರೆ.

ಮನೆ ಮನೆಗೆ ಆಹಾರ ತಲುಪಿಸುವ ಸೇವೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರವರ್ಧಮಾನಕ್ಕೆ ಬಂದಿರುವ ಸ್ವಿಗ್ಗಿ, ಝೊಮ್ಯಾಟೊನಂತಹ ಸಂಸ್ಥೆಗಳ ಕನ್ನಡ ವಿರೋಧಿ ಧೋರಣೆಯನ್ನು ನಿಯಂತ್ರಿಸಬೇಕಾದಲ್ಲಿ ರಾಜ್ಯ ಸರಕಾರವು ಉದ್ದೇಶಿಸಿರುವ ಕಾರ್ಮಿಕ ಭದ್ರತಾ ಕಾಯ್ದೆಯಲ್ಲಿ ಸೂಕ್ತ ತಿದ್ದುಪಡಿ ತರಬೇಕಾದ ತುರ್ತು ಅವಶ್ಯಕತೆ ಇದೆ. ಆಧುನಿಕ ಸೇವಾ ವಲಯದಲ್ಲಿ ಕನ್ನಡ ಅವಗಣನೆಗೆ ಒಳಪಟ್ಟಿದೆ. ಈ ವಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಸಂಘಟಿತ ಕಾರ್ಮಿಕರಿಗೆ ಸೇವಾ ಭದ್ರತೆಯನ್ನು ಒದಗಿಸುವ ಸರ್ಕಾರದ ನಿರ್ಧಾರದಲ್ಲಿ ಇಂತಹ ಸಂಸ್ಥೆಗಳ ಸೇವೆಗಳು ಕನ್ನಡ ಪರವಾಗಿ ಇರಬೇಕಾದುದು ಮುಖ್ಯವಾಗಿದೆ. ಇದಕ್ಕಾಗಿ ಸರಕಾರವು ಉದ್ದೇಶಿಸಿರುವ ಸೇವಾ ಭದ್ರತಾ ಕಾಯ್ದೆಯಲ್ಲಿ ಸೂಕ್ತ ಅವಕಾಶವನ್ನು ಕಲ್ಪಿಸಿಕೊಳ್ಳಬೇಕಾಗಿರುತ್ತದೆ ಎಂದು ಹೇಳಿದ್ದಾರೆ.

ಈ ಸೇವಾ ವಲಯಗಳು ರಾಜ್ಯದ ಬೃಹತ್ ನಗರಗಳನ್ನು ದಾಟಿ ಜಿಲ್ಲಾ, ತಾಲೂಕು ಹಂತಗಳಿಗೆ ತಮ್ಮ ಸೇವೆಗಳನ್ನು ವಿಸ್ತರಿಸಿಕೊಳ್ಳುತ್ತಿದ್ದು, ಇವುಗಳ ಆನ್ಲೈನ್ ಸಹಾಯ ಕೇಂದ್ರಗಳಲ್ಲಿ ಕನ್ನಡ ಭಾಷೆಗೆ ಯಾವುದೇ ಪ್ರಾತಿನಿಧ್ಯವನ್ನು ನೀಡದಿರುವುದು, ಸ್ಥಳೀಯ ಕನ್ನಡಿಗರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸದಿರುವುದು ಒಂದು ರೀತಿಯಲ್ಲಿ ಆತಂಕ ತರುವ ಸಂಗತಿಯಾಗಿದೆ. ಕಾನೂನಾತ್ಮಕವಾಗಿ ಸರಕಾರವು ಆದ್ಯತೆಯ ಮೇರೆಗೆ ಈ ಸಮಸ್ಯೆಯನ್ನು ಬಗೆಹರಿಸದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಇದು ವ್ಯಾಪಕವಾಗುವ, ಕನ್ನಡ ಭಾಷೆ ಅವಗಣನೆಗೆ ಒಳಗಾಗುವ ಎಲ್ಲ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಸರಕಾರದ ಉದ್ದೇಶಿತ ಕಾಯ್ದೆಯಲ್ಲಿ ಆಧುನಿಕ ಸೇವಾ ವಲಯಗಳ ಆನ್ಲೈನ್ ಸೇವೆಗಳಲ್ಲಿ, ಐವಿಆರ್ ಕರೆಗಳಲ್ಲಿ ಕನ್ನಡಕ್ಕೆ ಮೊದಲ ಪ್ರಾತಿನಿಧ್ಯವನ್ನು ನೀಡಬೇಕು. ಕನ್ನಡ ಭಾಷೆಯ ಆಯ್ಕೆಯನ್ನು ಮತ್ತು ಸ್ಥಳೀಯ ಕನ್ನಡಿಗರಿಗೆ ಉದ್ಯೋಗಾವಕಾಶವನ್ನು ಒದಗಿಸಬೇಕು ಎನ್ನುವ ಅಂಶವನ್ನು ಅಳವಡಿಸಬೇಕು. ಈ ವಲಯಗಳಲ್ಲಿಯೂ ಕನ್ನಡಕ್ಕೆ ಅಗ್ರ ಪ್ರಾಶಸ್ತ್ಯವನ್ನು ದೊರಕಿಸಲು ಕ್ರಮವಹಿಸಬೇಕು ಎಂದು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಕೆಲಸದ ಹೊರೆ ಖಂಡಿಸಿ ಪಶ್ಚಿಮ ಬಂಗಾಳ CEO ಕಚೇರಿ ಮುಂದೆ BLOಗಳಿಂದ ಅಹೋರಾತ್ರಿ ಧರಣಿ!

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ; ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ ಸುಪ್ರೀಂ ಕೋರ್ಟ್ ತರಾಟೆ!

SCROLL FOR NEXT