ಶರತ್ ಜೋಯಿಸ್ 
ರಾಜ್ಯ

ಮೈಸೂರಿನ ಖ್ಯಾತ ಯೋಗ ಗುರು ಶರತ್ ಜೋಯಿಸ್ ಅಮೆರಿಕದಲ್ಲಿ ನಿಧನ

ಶರತ್ ಜೋಯಿಸ್ ಅವರು ಮಡೋನಾ, ಗ್ವಿನೆತ್ ಪಾಲ್ಟ್ರೋ ಮತ್ತು ಸ್ಟಿಂಗ್ ಸೇರಿದಂತೆ ಹಲವಾರು ಜಾಗತಿಕ ಪ್ರಸಿದ್ಧ ವ್ಯಕ್ತಿಗಳಿಗೆ ಅಷ್ಟಾಂಗ ಯೋಗವನ್ನು ಕಲಿಸಿದ್ದಾರೆ.

ವರ್ಜೀನಿಯಾ: ಅಮೆರಿಕದ ವರ್ಜೀನಿಯಾದಲ್ಲಿ ಯೋಗ ತರಗತಿಗಳನ್ನು ನಡೆಸುತ್ತಿದ್ದ ಮೈಸೂರಿನ ಖ್ಯಾತ ಯೋಗ ಗುರು ಶರತ್ ಜೋಯಿಸ್ ಅವರು ಹೃದಯಘಾತದಿಂದ ನಿಧನರಾಗಿದ್ದಾರೆ.

ಶರತ್ ಜೋಯಿಸ್ ಅವರಿಗೆ 53 ವರ್ಷ ವಯಸ್ಸಾಗಿತ್ತು, ಅವರು ಮಡೋನಾ, ಗ್ವಿನೆತ್ ಪಾಲ್ಟ್ರೋ ಮತ್ತು ಸ್ಟಿಂಗ್ ಸೇರಿದಂತೆ ಹಲವಾರು ಜಾಗತಿಕ ಪ್ರಸಿದ್ಧ ವ್ಯಕ್ತಿಗಳಿಗೆ ಅಷ್ಟಾಂಗ ಯೋಗವನ್ನು ಕಲಿಸಿದ್ದಾರೆ.

ಮೈಸೂರಿನ ಕೆ.ಪಟ್ಟಾಭಿ ಜೋಯಿಸ್ ಅವರ ಮೊಮ್ಮಗ ಶರತ್ ಜೋಯಿಸ್ ಅವರು ಅಮೆರಿಕಾದ ವರ್ಜೀನಿಯಾದಲ್ಲಿ ಯೋಗ ಗುರುವಾಗಿ ನೆಲೆಸಿದ್ದರು. ಶರತ್ ಜೋಯಿಸ್ ಅವರು ತಮ್ಮ ಅಜ್ಜ ಕೆ.ಪಟ್ಟಾಭಿ ಜೋಯಿಸ್ ಅವರಂತೆ ಯೋಗ ಶಾಲೆ ನಡೆಸುತ್ತಿದ್ದರು. ಮೈಸೂರಿನಲ್ಲಿ ಇವರದ್ದೇ ಆದ ಯೋಗ ಕೇಂದ್ರವಿದೆ.

ಶರತ್ ಜೋಯಿಸ್​ ಅವರು ಸೆಪ್ಟೆಂಬರ್ 29, 1971 ರಂದು ಮೈಸೂರಿನಲ್ಲಿ ಸರಸ್ವತಿ(ಪಟ್ಟಾಭಿ ಜೋಯಿಸ್ ಅವರ ಪುತ್ರಿ) ಮತ್ತು ರಂಗಸ್ವಾಮಿ ದಂಪತಿಯ ಮಗನಾಗಿ ಜನಿಸಿದರು. ಶರತ್​ ಅವರು ಚಿಕ್ಕ ವಯಸ್ಸಿನಿಂದಲೂ ಯೋಗದಲ್ಲಿ ಆಸಕ್ತಿ ಬೆಳಸಿಕೊಂಡಿದ್ದರು.

ಶರತ್ ಜೋಯಿಸ್​ ಅವರು ಮೈಸೂರಿನ ಜೆಎಸ್‌ಎಸ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್‌ನಲ್ಲಿ ಡಿಪ್ಲೊಮಾ ಪದವಿಯನ್ನು ಪಡೆದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Bihar polls: ಇಂಡಿಯಾ ಬಣದ ಸಿಎಂ ಅಭ್ಯರ್ಥಿಯಾಗಿ ತೇಜಸ್ವಿ ಯಾದವ್‌ ಘೋಷಣೆ, ಇಬ್ಬರು ಉಪಮುಖ್ಯಮಂತ್ರಿಗಳು

ಮಲೇಷಿಯಾದಲ್ಲಿ ASEAN ಶೃಂಗಸಭೆ: ವರ್ಚುವಲ್ ಆಗಿ ಪ್ರಧಾನಿ ಭಾಗಿ, ಟ್ರಂಪ್ ಭೇಟಿ ತಪ್ಪಿಸಲು ಮೋದಿ ಗೈರು ಎಂದ ಕಾಂಗ್ರೆಸ್

ವರ್ಷಾಂತ್ಯದ ವೇಳೆಗೆ ಭಾರತ ರಷ್ಯಾದ ತೈಲ ಆಮದನ್ನು 'ಹಂತ ಹಂತವಾಗಿ ನಿಲ್ಲಿಸಲಿದೆ ': ಟ್ರಂಪ್ ಪುನರುಚ್ಛಾರ

'ಭಾರತೀಯರು ಸಾಯುತ್ತಿದ್ದಾರೆ'..'ರಷ್ಯಾ ಪರ ಯುದ್ಧ ಮಾಡಲು ಸಾಧ್ಯವಿಲ್ಲ...'; ರಷ್ಯಾ ಸೇನೆಯಲ್ಲಿದ್ದ ಹೈದರಾಬಾದ್ ಮೂಲದ ವ್ಯಕ್ತಿ ಸೆಲ್ಫಿ ವಿಡಿಯೋ ವೈರಲ್!

ತಂದೆ ರಾಜಕೀಯ ಜೀವನ ಮುಗಿಯಿತು; ಯತೀಂದ್ರ ಹೇಳಿಕೆಯಿಂದ ಸಂಚಲನ, ರಾಜಕೀಯ ಜೀವನದ ಕೊನೆಗಾಲದಲ್ಲೂ ಡಿಕೆಶಿಗೆ ಚೆಕ್‌ಮೇಟ್ ನೀಡಲು ಸಿದ್ದು ಟೀಮ್ ಮುಂದು..!

SCROLL FOR NEXT