ಸಾಂದರ್ಭಿಕ ಚಿತ್ರ online desk
ರಾಜ್ಯ

ಬೆಂಗಳೂರು: ಹನಿಟ್ರ್ಯಾಪ್ ಮಾಡಿ 2 ಕೋಟಿ ರೂ ಗೂ ಅಧಿಕ ಹಣ ವಸೂಲಿ; ಜಿಮ್ ಮಾಲೀಕ ಸೇರಿ ಮೂವರ ಬಂಧನ

2018ರಲ್ಲಿ ಆರ್.ಟಿ.ನಗರದ ಜಿಮ್‌ಗೆ ಹೋಗುವಾಗ ಅದರ ಮಾಲಿಕ ಅಜೀಂ ಉದ್ದೀನ್‌ನ ಸಹೋದರಿ ತಬಸ್ಸುಮ್ ಬೇಗಂ ಎಂಬ ಮಹಿಳೆಯ ಪರಿಚಯವಾಗಿತ್ತು.

ಬೆಂಗಳೂರು: ಹನಿಟ್ರ್ಯಾಪ್ ಮಾಡಿ 2 ಕೋಟಿಗೂ ಅಧಿಕ ಹಣ ವಸೂಲಿ ಮಾಡಿದ್ದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

46 ವರ್ಷ ವಯಸ್ಸಿನ ಸಂತ್ರಸ್ತರೊಬ್ಬರು ನೀಡಿದ ದೂರಿನನ್ವಯ ತನಿಖೆ ನಡೆಸಿದ ಸಿಸಿಬಿ ಪೊಲೀಸರು ಆರೋಪಿಗಳಾದ ತಬಸ್ಸುಮ್ ಬೇಗಂ (38), ಅಜೀಂ ಉದ್ದೀನ್ (41), ಹಾಗೂ ಅಭಿಷೇಕ್ (33) ಎಂಬುವವರನ್ನು ಬಂಧಿಸಿದ್ದಾರೆ. 2018ರಲ್ಲಿ ಆರ್.ಟಿ.ನಗರದ ಜಿಮ್‌ಗೆ ಹೋಗುವಾಗ ಅದರ ಮಾಲಿಕ ಅಜೀಂ ಉದ್ದೀನ್‌ನ ಸಹೋದರಿ ತಬಸ್ಸುಮ್ ಬೇಗಂ ಎಂಬ ಮಹಿಳೆಯ ಪರಿಚಯವಾಗಿತ್ತು. ತಮಗೆ ಮದುವೆಯಾಗಿ ಮಕ್ಕಳಿರುವ ಕಾರಣ ಆಕೆಯ ಜೊತೆಗೆ ಸಂಬಂದ ಬೆಳೆಸಲು ಹಿಂದೇಟು ಹಾಕಿದ್ದರು, ಆದರೆ ಆಕೆಯ ಒತ್ತಡಕ್ಕೆ ಮಣಿದು ತಬುಸ್ಸಮ್ ಜೊತೆ ಸಂಬಂಧ ಬೆಳೆಸಿದೆ. ನಂತರ ಇಬ್ಬರು ದೈಹಿಕ ಸಂಬಂಧ ಬೆಳೆಸಿದ್ದರು. ಸಂತ್ರಸ್ತ ವ್ಯಕ್ತಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ನಿಂದ ಸ್ಟ್ರಕ್ಚರಲ್ ಇಂಜಿನಿಯರಿಂಗ್‌ನಲ್ಲಿ ಪಿಎಚ್‌ಡಿ, ಮಾಡುತ್ತಿದ್ದು, ಇಬ್ಬರು ಮಕ್ಕಳಿದ್ದಾರೆ.

ನಂತರ ಬೇಗಂ ತಮ್ಮ ಖಾಸಗಿ ವೀಡಿಯೊಗಳು ಮತ್ತು ಛಾಯಾಚಿತ್ರಗಳನ್ನು ಲೀಕ್ ಮಾಡುವುದಾಗಿ ಬ್ಲ್ಯಾಕ್ ಮೇಲ್ ಮಾಡಲು ಪ್ರಾರಂಭಿಸಿದರು. ಐದು ವರ್ಷಗಳ ಕಾಲ ಬ್ಲಾಕ್‌ಮೇಲ್ ಗೆ ಗುರಿಯಾದರು. ಆಕೆ ತನ್ನ ಸಹೋದರ ಅಜೀಂ ಉದ್ದೀನ್ (41) ಮತ್ತು ಅಭಿಷೇಕ್ ಅಲಿಯಾಸ್ ಅವಿನಾಶ್ (33) ಜೊತೆ ಸೇರಿ ಆತನಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಳು. ಅಭಿಷೇಕ್ ಎಂಬಾತ ಪೊಲೀಸ್ ಅಧಿಕಾರಿಯ ರೀತಿ ನಟಿಸಿ ಖಾಸಗಿ ಛಾಯಾಚಿತ್ರಗಳು ಮತ್ತು ವೀಡಿಯೊಗಳನ್ನು ಸೋರಿಕೆ ಮಾಡುವ ಬೆದರಿಕೆ ಹಾಕಿದ್ದ. ಸಂತ್ರಸ್ತನ ವಿರುದ್ಧ ಸುಳ್ಳು ಅತ್ಯಾಚಾರದ ಆರೋಪಗಳನ್ನು ದಾಖಲಿಸುವುದಾಗಿ ಬೆದರಿಕೆ ಹಾಕಿದ್ದರು. ಡೆತ್ ನೋಟ್‌ನಲ್ಲಿ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ. ಆರಂಭದಲ್ಲಿ ಅಧಿಕಾರಿಗಳನ್ನು ಸಂಪರ್ಕಿಸಲು ಹೆದರಿದ ಸಂತ್ರಸ್ತೆ ತನ್ನ ಭವಿಷ್ಯ ನಿಧಿ ಉಳಿತಾಯದಿಂದ ಹಣ ಹಿಂತೆಗೆದುಕೊಂಡರು. ಅವರುಗಳು ಬೇಡಿಕೆಗಳನ್ನು ಪೂರೈಸಲು ಬ್ಯಾಂಕ್‌ಗಳು ಮತ್ತು ಸ್ನೇಹಿತರಿಂದ ಹಣವನ್ನು ಸಾಲ ಪಡೆದರು.

ಅಲ್ಲದೆ ಆರೋಪಿಗೆ ಮಾಸಿಕ 1.25 ಲಕ್ಷ ರೂ. ಹಣ ನೀಡುತ್ತಿದ್ದರು. ಆದರೆ, ಹಣದ ಬೇಡಿಕೆ ಹೆಚ್ಚಾದಾಗ ಸಂತ್ರಸ್ತ ವ್ಯಕ್ತಿ ಸೋಮವಾರ ಸಿಸಿಬಿ ಮೆಟ್ಟಿಲೇರಿದ್ದಾರೆ. ಅವರ ದೂರಿನ ಆಧಾರದ ಮೇಲೆ ಸಿಸಿಬಿ ಪೊಲೀಸರು ಬೇಗಂ, ಅಜೀಂ ಮತ್ತು ಅಭಿಷೇಕ್ ಅವರನ್ನು ಬಂಧಿಸಿದ್ದಾರೆ. ಸಂತ್ರಸ್ತ ವ್ಯಕ್ತಿ ಆನಂದ್ ಎಂಬ ಇನ್ನೊಬ್ಬ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿದ್ದಾರೆ,ಆತ ವಕೀಲ ಎಂದು ಹೇಳಿಕೊಂಡಿದ್ದ.ತನಗೆ ಮನೆಯಲ್ಲಿ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದು, ಇದಕ್ಕಾಗಿ ಮಗುವೊಂದನ್ನು ದತ್ತು ತೆಗೆದುಕೊಂಡಿದ್ದೀನಿ ಎಂದು ಆಕೆ ಹೇಳಿದ್ದಳು. ಈ ಮಾತು ನಂಬಿದ ಸಂತ್ರಸ್ತ, ಆಕೆಯ ಮಗನ ಶಿಕ್ಷಣಕ್ಕೆ ನೆರವಾಗಿದ್ದ. ಅಲ್ಲದೆ ಪೊಲೀಸ್ ಮತ್ತು ಲಾಯರ್ ಎಂದು ಹೇಳಿಕೊಂಡು ತನ್ನ ಸಹಚರ ಅಭಿಷೇಕ್ ಮೂಲಕ ಸಂತ್ರಸ್ತನಿಗೆ ಕರೆ ಮಾಡಿ ಬೆದರಿಸಿದ್ದಳು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT