ಜನಾರ್ಧನ ರೆಡ್ಡಿ 
ರಾಜ್ಯ

ಸಂಡೂರು ಉಪಚುನಾವಣೆ: ಬಂಗಾರು ಹನುಮಂತ ಸೋಲಿನಿಂದ ಗಾಲಿ ಜನಾರ್ದನ ರೆಡ್ಡಿಗೆ ಭಾರೀ ಹಿನ್ನಡೆ

ಉಪಚುನಾವಣೆಯಲ್ಲಿ ಚುನಾಯಿತ ಕಾಂಗ್ರೆಸ್ ಶಾಸಕ ಇ ಅನ್ನಪೂರ್ಣ ತುಕಾರಾಂ ಅವರಿಗೆ ಸಮಬಲದ ಪೈಪೋಟಿ ನೀಡಿದ ಸಂತಸದಲ್ಲಿ ಬಿಜೆಪಿ ಇದ್ದರೂ, ಫಲಿತಾಂಶ ಜನಾರ್ಧನ ರೆಡ್ಡಿಯವರಿಗೆ ಭಾರೀ ನಿರಾಸೆಯನ್ನು ತಂದಿದೆ.

ಬಳ್ಳಾರಿ: ಸಂಡೂರು ಉಪಚುನಾವಣೆಯಲ್ಲಿ ಗೆದ್ದು ಬಳ್ಳಾರಿ ಜಿಲ್ಲಾ ರಾಜಕೀಯಕ್ಕೆ ಮರಳಿದ್ದನ್ನು ಅದ್ಧೂರಿಯಾಗಿ ಆಚರಿಸಲು ಬಯಸಿದ್ದ ಗಂಗಾವತಿ ಶಾಸಕ ಹಾಗೂ ಬಿಜೆಪಿ ಮುಖಂಡ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಸೋಲಿನಿಂದ ಭಾರೀ ಮುಖಭಂಗವಾಗಿದೆ.

ಉಪಚುನಾವಣೆಯಲ್ಲಿ ಚುನಾಯಿತ ಕಾಂಗ್ರೆಸ್ ಶಾಸಕ ಇ ಅನ್ನಪೂರ್ಣ ತುಕಾರಾಂ ಅವರಿಗೆ ಸಮಬಲದ ಪೈಪೋಟಿ ನೀಡಿದ ಸಂತಸದಲ್ಲಿ ಬಿಜೆಪಿ ಇದ್ದರೂ, ಫಲಿತಾಂಶ ಜನಾರ್ಧನ ರೆಡ್ಡಿಯವರಿಗೆ ತೀವ್ರ ಬೇಸರವನ್ನು ತರಿಸಿದೆ.

ಸಂಡೂರಿನ ಚುನಾವಣಾ ಕದನದಲ್ಲಿ ಹೊಸ ರಾಜಕೀಯ ಇತಿಹಾಸ ಸೃಷ್ಟಿಸಲು ಇರುವ ಎಲ್ಲ ಸಂಪನ್ಮೂಲಗಳನ್ನು ಜನಾರ್ದನ ರೆಡ್ಡಿ ಬಳಸಿದ್ದರು. ಶನಿವಾರ ಸಂಡೂರು ಉಪಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ 93,616 ಮತಗಳನ್ನು ಪಡೆದು ಜಯಗಳಿಸಿದ್ದು, ಎದುರಾಳಿ ಅಭ್ಯರ್ಥಿ ಬಂಗಾರು ಹನುಮಂತ 83,967 ಅವರು ಮತಗಳನ್ನು ಪಡೆದು ತೀವ್ರ ಪೈಪೋಟಿ ನೀಡಿದ್ದಾರೆ.

9,649 ಮತಗಳ ಅಂತರದಿಂದ ಅನ್ನಪೂರ್ಣ ಅವರು ಗೆಲುವು ಸಾಧಿಸಿದ್ದಾರೆ. ಕ್ಷೇತ್ರದಲ್ಲಿ ಮತಗಳ ಹೆಚ್ಚಳದಿಂದ ಬಿಜೆಪಿ ನಾಯಕರು ಸಂತಸಗೊಂಡಿದ್ದಾರೆ.

ಜನಾರ್ದನ ರೆಡ್ಡಿ ಮತ್ತು ಮಾಜಿ ಸಚಿವ ಮತ್ತು ಆಪ್ತ ಬಿ ಶ್ರೀರಾಮುಲು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನಾಲ್ಕು ಅಂಕಿಗಳ ಅಂತರವನ್ನು ತಲುಪಲು ಸಾಕಷ್ಟು ಶ್ರಮಿಸಿದ್ದರು.

ಚುನಾವಣೆಗೂ ಮುನ್ನ ಹೇಳಿಕೆ ನೀಡಿದ್ದ ಜನಾರ್ದನ ರೆಡ್ಡಿ ಅವರು ಸಂಡೂರು ಉಪಚುನಾವಣೆಯಲ್ಲಿ ಗೆದ್ದು, ಈ ಗೆಲುವನ್ನು ಪ್ರಧಾನಿ ಮೋದಿ ಅವರಿಗೆ ಉಡುಗೊರೆಯಾಗಿ ನೀಡುತ್ತೇನೆಂದು ಹೇಳಿದ್ದರು. ಆದರೆ, ಸಂಡೂರಿನ ಮತದಾರರು ಇದಕ್ಕೆ ಅವಕಾಶ ನೀಡಿಲ್ಲ.

ಬಳ್ಳಾರಿಯ ರಾಜಕೀಯ ತಜ್ಞ ಶ್ರೀಧರ ರೆಡ್ಡಿ ಮಾತನಾಡಿ, ಸಂಡೂರು ಉಪಚುನಾವಣೆಯನ್ನು ಮೊದಲ ದಿನದಿಂದಲೂ ಕಾಂಗ್ರೆಸ್ ಮತ್ತು ಜನಾರ್ದನ ರೆಡ್ಡಿ ನಡುವಿನ ರಾಜಕೀಯ ಹೋರಾಟ ಎಂದು ಪರಿಗಣಿಸಲಾಗಿತ್ತು. ಸಂಡೂರು ಉಪಚುನಾವಣೆಯಲ್ಲಿ ಯಾವುದೇ ಬೆಲೆ ತೆತ್ತಾದರೂ ಗೆಲ್ಲುವ ಮೂಲಕ ಬಳ್ಳಾರಿ ರಾಜಕೀಯಕ್ಕೆ ಮರಳಿ ಬರಬೇಕೆಂಬ ಹಂಬಲ ರೆಡ್ಡಿಯವರಿಗೆ ಇತ್ತು. ಪ್ರತಿನಿತ್ಯ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರೊಂದಿಗೆ ಸಭೆ ನಡೆಸಿ, ಇತಿಹಾಸ ಸೃಷ್ಟಿಸಲು ಶ್ರಮಿಸುತ್ತಿದ್ದರು. ಹೊಸ ಮನೆಯನ್ನೂ ತೆಗೆದುಕೊಂಡು ಮೊದಲ ದಿನದಿಂದ ಕೊನೆಯ ದಿನದ ಪ್ರಚಾರದವರೆಗೂ ಶ್ರಮಪಟ್ಟಿದ್ದರು ಎಂದು ಹೇಳಿದ್ದಾರೆ.

ಇನ್ನು ಫಲಿತಾಂಶ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ರೆಡ್ಡಿ ಅವರು, ಬಿಜೆಪಿ ಅಭ್ಯರ್ಥಿ ಸೋಲನ್ನು ಒಪ್ಪುವುದಿಲ್ಲ. ಕಾಂಗ್ರೆಸ್ ಹಣಬಲ ಬಳಸಿತು. ಆದರೆ, ಬಿಜೆಪಿ ಅಭ್ಯರ್ಥಿ ಕಾಂಗ್ರೆಸ್ ಅಭ್ಯರ್ಥಿಗೆ ತೀವ್ರ ಪೈಪೋಟಿ ನೀಡಿದರು. ಮುಂದಿನ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ ಮೀಸಲಾತಿ ಬದಲಾಗಬಹುದು. ಸಾಮಾನ್ಯ ವರ್ಗದ ಸ್ಥಾನಕ್ಕೆ ಬದಲಾದರೂ ಬಂಗಾರು ಹನುಮಂತ ನಮ್ಮ ಅಭ್ಯರ್ಥಿ ಆಗಿರಲಿದ್ದಾರೆಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

2nd test, Day 2: 518 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್!

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

SCROLL FOR NEXT