ಬಾಡಿಗೆ ಮನೆ ಹುಡುಕುತ್ತಿರುವ ಯುವತಿ online desk
ರಾಜ್ಯ

ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕಲು ಪರದಾಟ: ವಯಸ್ಸಿನದ್ದೇ ಸಮಸ್ಯೆ!; ಯುವತಿ ಹಂಚಿಕೊಂಡ ಕಥೆ ಇದು...

ಆಕೆಯ ಹೆಸರು ನೈನಾ, ಬಾಡಿಗೆಗಾಗಿ ಅಪಾರ್ಟ್ ಮೆಂಟ್ ಹುಡುಕುತ್ತಿದ್ದ ಆಕೆಗೆ ದೊಮ್ಮಲೂರು ಪ್ರದೇಶದಲ್ಲಿ ಇಷ್ಟವಾಗುವಂತಹ ಅಪಾರ್ಟ್ ಮೆಂಟ್ ಕೊನೆಗೂ ಕಂಡಿತ್ತು. ಆದರೆ ಆ ಫ್ಲ್ಯಾಟ್ ನಲ್ಲಿದ್ದ ಇತರರಿಗೆ ಹಲವು ಕಾರಣಗಳಿಂದಾಗಿ ಆಕೆಯ ವಾಸಿಸುವುದು ಇಷ್ಟವಾಗಲಿಲ್ಲ.

ಬೆಂಗಳೂರು: ಬೆಂಗಳೂರಿನಲ್ಲಿ ಮನೆ ಬಾಡಿಗೆಯನ್ನು ಹಂಚಿಕೊಂಡು ವಾಸಿಸುವ ಟ್ರೆಂಡ್ ಆರಂಭವಾಗಿದೆ. ಆದರೆ ಫ್ಲ್ಯಾಟ್ ಮೇಟ್ ಗಳೊಂದಿಗೆ ವಾಸಿಸುವುದಕ್ಕೆ ಮಾನದಂಡಗಳು ಹೊಂದಿಕೆಯಾಗುವುದೂ ಅಷ್ಟೇ ಮುಖ್ಯವಾಗುವುದರಿಂದ Rent Sharing concept ಸುಲಭದ ಸಂಗತಿಯಲ್ಲ ಎಂಬ ಅರಿವಾಗುತ್ತಿದೆ.

ಇಂಥಹದ್ದೇ ಸನ್ನಿವೇಶವನ್ನು 20 ವರ್ಷದ ಯುವತಿಯೊಬ್ಬಳು ಎದುರಿಸಿದ್ದು, ತನಗೆ ಆದ ಅನುಭವವನ್ನು ಹಂಚಿಕೊಂಡಿದ್ದಾರೆ.

ಆಕೆಯ ಹೆಸರು ನೈನಾ, ಬಾಡಿಗೆಗಾಗಿ ಅಪಾರ್ಟ್ ಮೆಂಟ್ ಹುಡುಕುತ್ತಿದ್ದ ಆಕೆಗೆ ದೊಮ್ಮಲೂರು ಪ್ರದೇಶದಲ್ಲಿ ಇಷ್ಟವಾಗುವಂತಹ ಅಪಾರ್ಟ್ ಮೆಂಟ್ ಕೊನೆಗೂ ಕಂಡಿತ್ತು. ಆದರೆ ಆ ಫ್ಲ್ಯಾಟ್ ನಲ್ಲಿದ್ದ ಇತರರಿಗೆ ಹಲವು ಕಾರಣಗಳಿಂದಾಗಿ ಆಕೆಯ ವಾಸಿಸುವುದು ಇಷ್ಟವಾಗಲಿಲ್ಲ. ಹಾಗಾಗಿ ಆಕೆಯೊಂದಿಗೆ rent sharing ನ್ನು ನಿರಾಕರಿಸಿದ್ದಾರೆ. ಈ ಪೈಕಿ ಪ್ರಮುಖವಾದ ಕಾರಣ ಎಂದರೆ ಆಕೆಗೆ ಕೇವಲ 20 ವರ್ಷ ಎಂಬುದು!

ಅರೆ, ವಯಸ್ಸಿಗೂ rent sharing ಅಪಾರ್ಟ್ಮೆಂಟ್ ಗೂ ಏನು ಸಂಬಂಧ ಎಂದು ಹುಬ್ಬೇರಿಸಬೇಡಿ.... ಖಂಡಿತವಾಗಿಯೂ ಇದೆ.

ಯುವತಿ ತನ್ನ ಅನುಭವ ಹಂಚಿಕೊಂಡಿರುವ ವಿಡಿಯೋದಲ್ಲಿ ದಾಖಲಿಸಿರುವ ಮಾತುಗಳಲ್ಲೇ ಕೇಳುವುದಾದರೆ, "ನನಗೆ 20'ರ ಮಧ್ಯದಲ್ಲಿರುವ ಮತ್ತು 20'ರ ಉತ್ತರಾರ್ಧದಲ್ಲಿರುವ ಬಹಳಷ್ಟು ಸ್ನೇಹಿತರಿದ್ದಾರೆ. ನಾನು ಅವರನ್ನು ಹಳೆಯ ಜನರೇಷನ್, ಮಿಲೇನಿಯಲ್ಸ್ ಎಂದೆಲ್ಲಾ ಹೇಳುವುದುಂಟು, ವಯಸ್ಸಿನ ಬಗ್ಗೆ ನನಗೆ ಪೂರ್ವಾಗ್ರಹಗಳಿವೆ. ಆದರೆ ಅದು ಒಳ್ಳೆಯ ರೀತಿಯಲ್ಲಿವೆ. ಅವಹೇಳನಕಾರಿ ರೀತಿಯಲ್ಲಿ ಅಲ್ಲ, ಆದರೂ ಆ ಪೂರ್ವಾಗ್ರಹವೇ ಕಳೆದ ದಿನ ನನಗೆ ಮುಳುವಾಯಿತು ಎಂದು ಹೇಳಿದ್ದಾರೆ.

"ವಾರಗಟ್ಟಲೆ ಮನೆ ಹುಡುಕುತ್ತಿದ್ದ ನನಗೆ ಅಂತಿಮವಾಗಿ ಒಂದು ಅಪಾರ್ಟ್ಮೆಂಟ್ ಒಪ್ಪಿಗೆಯಾಯಿತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ನಾನು ಅಲ್ಲಿಗೆ ಸ್ಥಳಾಂತರವಾಗಬೇಕಿತ್ತು. ಆದರೆ ಆ ಫ್ಲ್ಯಾಟ್ ನಲ್ಲಿ ಅದಾಗಲೇ ಇದ್ದವರು ನಾನು ಬಹಳ ಕಿರಿಯ ವಯಸ್ಸಿನವಳಾಗಿದ್ದೆ ಆದ ಕಾರಣ ನಾನು ಅಲ್ಲಿಗೆ ಸ್ಥಳಾಂತರಗೊಳ್ಳುವುದಕ್ಕೆ ವಿರೋಧ ವ್ಯಕ್ತಪಡಿಸಿದರು.

"ನಿನಗೆ 20 ವರ್ಷ, ಆದ್ದರಿಂದ ನಿನ್ನೊಂದಿಗೆ ನಾವು ವಾಸಿಸುವುದು ಆರಾಮದಾಯಕವಾಗಿರುವುದಿಲ್ಲ" ಎಂದು ಅದಾಗಲೇ ಫ್ಲ್ಯಾಟ್ ನಲ್ಲಿದ್ದವರು ನನಗೆ ಹೇಳಿದರೆಂದು ಹೇಳಿದ್ದಾಗಿ ನೈನಾ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ನೈನಾ ತನ್ನನ್ನು ತಾನು ಅರ್ಹ ಫ್ಲಾಟ್‌ಮೇಟ್ ಎಂದು ಸಾಬೀತುಪಡಿಸಲು ನಿರ್ಧರಿಸಿ, ತನ್ನ ಸಕಾರಾತ್ಮಕ ಗುಣಗಳ ಬಗ್ಗೆ ಪವರ್‌ಪಾಯಿಂಟ್ ಪ್ರಸ್ತುತಿಯನ್ನೂ ರಚಿಸಿದರು.

ವೀಡಿಯೊದಲ್ಲಿ ಆಕೆ ಹಂಚಿಕೊಂಡ ಪ್ರಸ್ತುತಿಯ ಪ್ರಕಾರ ಆಕೆ ಮುಂಜಾನೆಯಿಂದ ದಿನ ಆರಂಭಿಸುವ ವ್ಯಕ್ತಿಯಾಗಿದ್ದು, ಮದ್ಯಪಾನ ಮಾಡದ, ಧೂಮಪಾನ ಮಾಡದ ಮತ್ತು ಸ್ವಚ್ಛವಾದ ವಾಸಸ್ಥಳವನ್ನು ನಿರ್ವಹಿಸುವ ವ್ಯಕ್ತಿಯಂತಹ ಗುಣಲಕ್ಷಣಗಳನ್ನು ತೋರುತ್ತಿದೆ.

"ನಾನು ಬೆದರಿಕೆ ಹಾಕುವ ಸ್ವಭಾವದವಳೂ ಅಲ್ಲ, ನಿಮ್ಮ ಸ್ವಂತ ಜಾಗವನ್ನು ನೀವು ಬಯಸಿದರೆ, ಅದು ಸಹ ಒಳ್ಳೆಯದು," ಎಂದು ನೈನಾ ಫ್ಲ್ಯಾಟ್ ಮೇಟ್ ಗಳಿಗೆ ತಿಳಿಸಿದ್ದಾರೆ. ಆಕೆಯ PPT ಮತ್ತು ಮನೆ ಹುಡುಕುವ ತಂತ್ರಗಳಿಗೆ ಸಾಮಾಜಿಕ ಮಾಧ್ಯಮದಲ್ಲಿ ಅನೇಕರು ಪ್ರತಿಕ್ರಿಯಿಸಿದ್ದಾರೆ.

"ನನಗೆ 25 ವರ್ಷ ಮತ್ತು ನಾನು ನಿಮ್ಮ ಅನುಭವದಿಂದ ತುಂಬಾ ಕಲಿತಿದ್ದೇನೆ. ನಿಮ್ಮಂತೆ ಸನ್ನಿವೇಶಗಳನ್ನು ಎದುರಿಸಲು ಮತ್ತು ಸಹಾಯಕ್ಕಾಗಿ ಕೇಳಲು ನನಗೆ ಎಂದಿಗೂ ಸಾಧ್ಯವಾಗುವುದಿಲ್ಲ. ನೀವು ಶೀಘ್ರದಲ್ಲೇ ನಿಮ್ಮ ಮನೆಯನ್ನು ಕಂಡುಕೊಳ್ಳುತ್ತೀರಿ ಎಂದು ಭಾವಿಸುತ್ತೇವೆ." ಎಂದು ನೆಟ್ಟಿಗರೊಬ್ಬರು ಬರೆದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಕರ್ನಾಟಕದ ಅಂಧ ಕ್ರಿಕೆಟ್ ಆಟಗಾರ್ತಿಯರಿಗೆ ತಲಾ 10 ಲಕ್ಷ ರೂ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ನಾಯಕತ್ವ ಬದಲಾವಣೆ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಅಯೋಧ್ಯ ಧ್ವಜಾರೋಹಣ ನೆರವೇರಿಸಿದ್ದು ಹೇಗೆ?: ಸ್ವಿಚ್ ಅಥವಾ ಹಗ್ಗ ಬಳಸದ ಪ್ರಧಾನಿ; ಈ ಅದ್ಭುತ Video ನೋಡಿ..

SCROLL FOR NEXT