12 ಸಾಧಕಿಯರಿಗೆ 'ದೇವಿ' ಪ್ರಶಸ್ತಿ ಪ್ರದಾನ 
ರಾಜ್ಯ

Devi Awards Bengaluru 2024: 12 ಸಾಧಕಿಯರಿಗೆ 'ದೇವಿ ಪ್ರಶಸ್ತಿ' ಪ್ರದಾನ

ಇಂದು ನಗರದ ಐಟಿಸಿ ಗಾರ್ಡೆನಿಯಾದಲ್ಲಿ ನಡೆದ ಸಮಾರಂಭದಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಗ್ರೂಪ್ ಚೇರ್ಮನ್ ಮನೋಜ್ ಕುಮಾರ್ ಸೊಂತಾಲಿಯಾ ಪ್ರಶಸ್ತಿ ಪ್ರದಾನ ಮಾಡಿದರು.

ಬೆಂಗಳೂರು: ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಗ್ರೂಪ್ 2014ರಿಂದಲೂ ಮಹಿಳಾ ಸಾಧಕಿಯರಿಗೆ ದೇವಿ ಪ್ರಶಸ್ತಿ ನೀಡುತ್ತಾ ಬಂದಿದ್ದು, ಈ ವರ್ಷ ಬೆಂಗಳೂರಿನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ 12 ಮಹಿಳಾ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇಂದು ಸಂಜೆ ನಗರದ ಐಟಿಸಿ ಗಾರ್ಡೆನಿಯಾದಲ್ಲಿ ನಡೆದ ಸಮಾರಂಭದಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಗ್ರೂಪ್ ಚೇರ್ಮನ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್ ಸೊಂತಾಲಿಯಾ ಅವರು ಜಾಹ್ನವಿ ಫಾಲ್ಕಿ, ಡಾ. ವತ್ಸಲಾ ತಿರುಮಲೈ, ಅಲಿನಾ ಆಲಂ, ಸೋನಾಲಿ ಸತ್ತಾರ್, ಪವಿತ್ರಾ ಮುದ್ದಯ್ಯ ವಿಮೋರ್‌, ಡಾ.ಪ್ರತಿಮಾ ಮೂರ್ತಿ, ಅರುಂಧತಿ ನಾಗ್, ಸಂಹಿತಾ ಅರ್ನಿ, ಡಾ. ಅಂಜು ಬಾಬಿ ಜಾರ್ಜ್, ಕವಿತಾ ಗುಪ್ತಾ ಸಬರ್ವಾಲ್, ಮೀನಾ ಗಣೇಶ್ ಹಾಗೂ ನಿರುಪಮಾ ರಾಜೇಂದ್ರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ (TNIE) ಸಂಪಾದಕೀಯ ನಿರ್ದೇಶಕ ಪ್ರಭು ಚಾವ್ಲಾ, TNIE ಗ್ರೂಪ್‌ ಸಂಪಾದಕಿ ಸಾಂತ್ವಾನ ಭಟ್ಟಾಚಾರ್ಯ ಮತ್ತು TNIE ನ ಸಿಇಒ ಲಕ್ಷ್ಮಿ ಮೆನನ್ ಅವರು ಉಪಸ್ಥಿತರಿದ್ದರು.

ವಿವಿಧ ವೃತ್ತಿ ಹಿನ್ನೆಲೆಯ 12 ಮಹಿಳೆಯರಿಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಇಂದು ದೇವಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಸಮಾಜಕ್ಕೆ ನೀಡಿರುವ ಒಟ್ಟಾರೇ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Cockroach Janta Partyಗೆ ಬಿಗ್ ಶಾಕ್: ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸರು, 57 ಮೆಟ್ರೋ ನಿಲ್ದಾಣಗಳು ಬಂದ್..!

ಕನ್ನಡಿಗರ ಆತ್ಮೀಯತೆ, ವಾತ್ಸಲ್ಯ, ದಯೆ ನಿಜಕ್ಕೂ ನನ್ನ....: ಬೆಂಗಳೂರು ಭೇಟಿ ಬಗ್ಗೆ ಅಭಿಜೀತ್ ದೀಪ್ಕೆ ಭಾವುಕ ಪೋಸ್ಟ್!

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video

ಧಾರವಾಡ: ಕಾರು - ಕ್ಯಾಂಟರ್ ಮುಖಾಮುಖಿ ಡಿಕ್ಕಿ; ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವು!

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ