ತುಮಕೂರು ರಸ್ತೆಯ ನಾಗಸಂದ್ರ ಮತ್ತು ಮಾದಾವರ ನಡುವಿನ ಹಳಿಗಳನ್ನು ಮೆಟ್ರೋ ರೈಲು ಸುರಕ್ಷತಾ ಆಯುಕ್ತರು ಗುರುವಾರ ಪರಿಶೀಲಿಸಿದರು. 
ರಾಜ್ಯ

ಬೆಂಗಳೂರು-ತುಮಕೂರು ರಸ್ತೆ ನಮ್ಮ ಮೆಟ್ರೋ ಸೇವೆ ವಿಸ್ತರಣೆ ಶೀಘ್ರದಲ್ಲೇ ಆರಂಭ..!

ತಪಾಸಣೆ ಪೂರ್ಣಗೊಳಿಸಿರುವ ತಂಡ ಇನ್ನೆರಡು ದಿನಗಳಲ್ಲಿ ವರದಿ ನೀಡುವ ನಿರೀಕ್ಷೆಯಿದ್ದು, ಶೀಘ್ರದಲ್ಲೇ ನಮ್ಮ ಮೆಟ್ರೋ ಸಂಚಾರ ಪ್ರಾರಂಭವಾಗಲಿದೆ.

ಬೆಂಗಳೂರು: ನಮ್ಮ ಮೆಟ್ರೋ ಕಾರಿಡಾರ್ ವಿಸ್ತರಿತ ತುಮಕೂರು ರಸ್ತೆಯ ನಾಗಸಂದ್ರ-ಮಾದಾವರ ನಡುವಿನ 3.17 ಕಿ.ಮೀ ಉದ್ದದ ಹಸಿರು ಮಾರ್ಗದಲ್ಲಿ ಗುರುವಾರ ಮೆಟ್ರೋ ರೈಲು ಸುರಕ್ಷತಾ ಆಯುಕ್ತರ ತಂಡ (ಸಿಎಂಆರ್‌ಎಸ್) ತಪಾಸಣೆ ಪೂರ್ಣಗೊಳಿಸಿದೆ.

ತಪಾಸಣೆ ಪೂರ್ಣಗೊಳಿಸಿರುವ ತಂಡ ಇನ್ನೆರಡು ದಿನಗಳಲ್ಲಿ ವರದಿ ನೀಡುವ ನಿರೀಕ್ಷೆಯಿದ್ದು, ಶೀಘ್ರದಲ್ಲೇ ಇಲ್ಲಿ ಪ್ರಯಾಣಿಕರ ಸಂಚಾರ ಪ್ರಾರಂಭವಾಗಲಿದೆ.

ಮೋಟಾರ್ ಟ್ರಾಲಿ ಮೂಲಕ ಮಾರ್ಗದಲ್ಲಿ ಸಂಚರಿಸಿದ ತಂಡ, ಪರಿಶೀಲನೆ ನಡೆಸಿತು. ಮಾರ್ಗದ ತಿರುವು, ಪ್ರಾಯೋಗಿಕ ಸಂಚಾರದ ವೇಳೆಯಲ್ಲಿ ರೈಲಿನ ವೇಗ, ನಿಲ್ದಾಣಗಳಲ್ಲಿ ನಿಲ್ಲಬೇಕಾದಾಗ ನಿಧಾನಗತಿ, ಬ್ರೇಕ್ ಸಿಸ್ಟಂ, ವಿದ್ಯುತ್ ಪೂರೈಕೆ ಸೇರಿ ಇತರೆ ಅಂಕಿಅಂಶಗಳ ಮಾಹಿತಿಯನ್ನು ಮೆಟ್ರೋ ರೈಲು ನಿಗಮದ ಅಧಿಕಾರಿಗಳಿಂದ ಪಡೆದುಕೊಂಡರು.

ಮಂಜುನಾಥ ನಗರ, ಚಿಕ್ಕಬಿದರಕಲ್ಲು (ಜಿಂದಾಲ್ ನಗರ) ಮತ್ತು ಮಾದಾವರ ಮೂರು ನಿಲ್ದಾಣಗಳು ಈ ಹಸಿರು ಮಾರ್ಗದಲ್ಲಿ ಬರಲಿವೆ. ಸಿಎಂಆರ್‌ಎಸ್ ವರದಿಗಾಗಿ ಕಾಯುತ್ತಿದ್ದು, ಒಪ್ಪಿಗೆ ನೀಡಿದ ಕೂಡಲೇ ಮೆಟ್ರೋ ಸೇವೆ ಪ್ರಾರಂಭಿಸಲಾಗುವುದು. ಎಂದು ಬಿಎಂಆರ್'ಸಿಎಲ್ ಎಂಡಿ ಮಹೇಶ್ವರ್ ರಾವ್ ಅವರು ಹೇಳಿದ್ದಾರೆ.

ಈ ತಿಂಗಳ ಅಂತ್ಯದೊಳಗೆ ಮೆಟ್ರೋ ಸೇವೆ ಪ್ರಾರಂಭಿಸಲು ಬಿಎಂಆರ್‌ಸಿಎಲ್ ಸಿದ್ಧತೆ ನಡೆಸುತ್ತಿದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜ್ಯ ಮತ್ತು ಕೇಂದ್ರ ಸಚಿವರು ಲಭ್ಯತೆಯ ಮೇರೆಗೆ ದಿನಾಂಕವನ್ನು ದೃಢಪಡಿಸಲಾಗುವುದು. ಇದು ಅತ್ಯಂತ ಚಿಕ್ಕ ಮಾರ್ಗವಾಗಿರುವುದರಿಂದ ವಿಐಪಿಗಳ ಉಪಸ್ಥಿತಿ ಇಲ್ಲದೆಯೂ ಸೇವೆಯನ್ನು ಪ್ರಾರಂಭಿಸುವ ಸಾಧ್ಯತೆಗಳಿವೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌, ಪವಿತ್ರಾ ಗೌಡಗೆ ಬಿಗ್ ಶಾಕ್: ಪ್ರದೋಷ್‌ ಮಾಫಿ ಸಾಕ್ಷಿಗೆ ಕೋರ್ಟ್‌ ಅಸ್ತು

ಪ್ರತಿಪಕ್ಷಗಳು ಸಂಪುಟದಿಂದ ವಜಾಕ್ಕೆ ಆಗ್ರಹಿಸುತ್ತಿರುವ ಮಧ್ಯೆ ಸಚಿವ ಬಿ. ನಾಗೇಂದ್ರಗೆ ಹೈಕೋರ್ಟ್ ಬಿಗ್ ರಿಲೀಫ್!

ಸಂಪುಟ ವಿಸ್ತರಣೆ ಮುನಿಸು ಕೊನೆಗೂ ಶಮನ: ರಾಜೀನಾಮೆ ವಾಪಸ್ ಪಡೆದ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ್

ರಾಜ್‌ಗಢದಲ್ಲಿ ಭಾರೀ ಮಳೆ: 11 ಪ್ರಯಾಣಿಕರ ಸಮೇತ ಚರಂಡಿಯಲ್ಲಿ ಕೊಚ್ಚಿ ಹೋದ ವ್ಯಾನ್; 9 ಮಂದಿ ಸಾವು!

ದೇಶದ ಅತ್ಯಂತ ದುಬಾರಿ ಪೆಂಟ್‌ಹೌಸ್! ಈ ಐಷಾರಾಮಿ ಮನೆ 271 ಕೋಟಿಗೆ ಮಾರಾಟ!