ದಸರ ಆನೆಗಳ ತೂಕ ಪರೀಕ್ಷೆ  online desk
ರಾಜ್ಯ

Mysuru Dasara: ಆನೆಗಳ ತೂಕ ಪರೀಕ್ಷೆ; ಒಂದೂವರೆ ತಿಂಗಳಲ್ಲಿ ಅಭಿಮನ್ಯು ತೂಕ ಭಾರಿ ಹೆಚ್ಚಳ!

ಆನೆಗಳ ತೂಕ ಪರೀಕ್ಷಿಸಲಾಗಿದ್ದು, ಈ ಪೈಕಿ ಅಂಬಾರಿ ಹೊರುವ ಆನೆ ಅಭಿಮನ್ಯು ತೂಕ 5560 ಕೆಜಿ ಯಿಂದ 5820ಗೆ ಏರಿಕೆಯಾಗಿದೆ.

ಮೈಸೂರು: ಮೈಸೂರಿನಲ್ಲಿ ನವರಾತ್ರಿ, ದಸರಾ ಆಚರಣೆ ಎಲ್ಲರನ್ನೂ ಆಕರ್ಷಿಸುತ್ತಿದೆ. ದಸರಾ ಜಂಬೂಸವಾರಿಗೆ ಆಗಮಿಸಿರುವ ಆನೆಗಳು ತಾಲೀಮಿನಲ್ಲಿ ನಿರತವಾಗಿದ್ದು, ಅವುಗಳಿಗೆ ಪೌಷ್ಟಿಕ ಆಹಾರ ಒದಗಿಸಲಾಗುತ್ತಿದೆ.

ಆನೆಗಳ ತೂಕ ಪರೀಕ್ಷಿಸಲಾಗಿದ್ದು, ಈ ಪೈಕಿ ಅಂಬಾರಿ ಹೊರುವ ಆನೆ ಅಭಿಮನ್ಯು ತೂಕ 5560 ಕೆಜಿ ಯಿಂದ 5820ಗೆ ಏರಿಕೆಯಾಗಿದೆ. ಒಂದೂವರೆ ತಿಂಗಳ ಅಂತರದಲ್ಲಿ 260 ಕೆಜಿ ತೂಕ ಹೆಚ್ಚಿಸಿಕೊಂಡಿರುವ ಅಭಿಮನ್ಯು ಬಲಶಾಲಿಯಾಗಿದ್ದಾನೆ.

ದಸರಾ ಆನೆಗಳು ಮೈಸೂರಿಗೆ ಬಂದಾಗಿನಿಂದ ಇದು ಮೂರನೇ ಬಾರಿಯ ತೂಕ ಪರೀಕ್ಷೆಯಾಗಿದ್ದು 14 ಆನೆಗಳು ಭಾಗಿಯಾಗಿದ್ದವು.

ಆನೆಗಳ ತೂಕದ ವಿವರ ಹೀಗಿದೆ..

  • ಅಭಿಮನ್ಯು: 5820 ಕೆಜಿ ತೂಕ

  • ಸುಗ್ರೀವ : 5540 ಕೆಜಿ

  • ಭೀಮ : 5380 ಕೆಜಿ

  • ಗೋಪಿ : 5280 ಕೆಜಿ

  • ಧನಂಜಯ : 5255 ಕೆಜಿ

  • ಪ್ರಶಾಂತ : 5240 ಕೆಜಿ

  • ಮಹೇಂದ್ರ : 5150 ಕೆಜಿ

  • ಏಕಲವ್ಯ : 5095 ಕೆಜಿ

  • ಕಂಜನ್ : 4725 ಕೆಜಿ

  • ರೋಹಿತ : 3930 ಕೆಜಿ

  • ಹಿರಣ್ಯ. ‌ : 3160 ಕೆಜಿ

  • ದೊಡ್ಡ ಹರವೆ ಲಕ್ಷ್ಮಿ : 3570 ಕೆಜಿ

  • ವರಲಕ್ಷ್ಮಿ : 3555 ಕೆಜಿ

  • ಲಕ್ಷ್ಮಿ : 2625 ಕೆಜಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

SCO Summit: ಒಂದೇ ವೇದಿಕೆಯಲ್ಲಿ ಚೀನಾ- ಭಾರತ- ರಷ್ಯಾ; ಕೆರಳಿದ Trump ಭಾರತದ ಬಗ್ಗೆ ಹೇಳಿದ್ದೇನು?

ಎಲ್ಲರನ್ನೂ ಕಾಯಿಸುತ್ತಿದ್ದ ಪುಟಿನ್ ಪ್ರಧಾನಿ ಮೋದಿಗಾಗಿ 10 ನಿಮಿಷಗಳ ಕಾಲ ಕಾರಿನಲ್ಲಿ ಕಾದು ಕುಳಿತ್ತಿದ್ದರು, Video!

ಧರ್ಮಸ್ಥಳದ ವಿರುದ್ಧ ಬಿಜೆಪಿಯಿಂದಲೇ ಷಡ್ಯಂತ್ರ: ಡಿಕೆ ಶಿವಕುಮಾರ್

ಸರ್ಕಾರಿ ಬಂಗಲೆ ಖಾಲಿ ಮಾಡಿದ ಮಾಜಿ ಉಪರಾಷ್ಟ್ರಪತಿ ಜಗದೀಪ್ ಧಂಖರ್!

ಸೌಜನ್ಯ ಹೆಸರು ಹೇಳಿ ದುಡ್ಡು ಮಾಡಿದೆ ಎಂದು ನಿಮ್ಮ ಪಕ್ಷದವರೇ ಟೀಕಿಸಿದರು: ವಿಜಯೇಂದ್ರಗೆ ಸೌಜನ್ಯ ತಾಯಿ ತರಾಟೆ

SCROLL FOR NEXT