ಕಾಂತರಾಜ್ Photo | Vinod Kumar T
ರಾಜ್ಯ

ಭಾರತದಲ್ಲಿ ಜಾತಿ ಎಂಬುದು ಒಂದು ವಾಸ್ತವ, ಸಮಾನತೆ ಸಿಗುವವರೆಗೆ ಸಮೀಕ್ಷೆ ಅಗತ್ಯ: KSCBC ಮಾಜಿ ಅಧ್ಯಕ್ಷ ಕಾಂತರಾಜ್ (ಸಂದರ್ಶನ)

(ಸಂದರ್ಶನ )ಭಾರತದಲ್ಲಿ ಜಾತಿ ಎಂಬುದು ಒಂದು ವಾಸ್ತವ, ಸಮಾನತೆ ಸಿಗುವವರೆಗೆ ಸಮೀಕ್ಷೆ ಅಗತ್ಯ- KSCBC ಮಾಜಿ ಅಧ್ಯಕ್ಷ ಕಾಂತರಾಜ್

Nagaraja AB

ಒಂದು ಕಡೆ ಸಾಮಾಜಿಕ- ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಅನುಷ್ಟಾನಗೊಳಿಸುವ ಒತ್ತಡದಲ್ಲಿ ಕರ್ನಾಟಕ ಸರ್ಕಾರ ಇದ್ದರೆ, ಮತ್ತೊಂದೆಡೆ ಅದಕ್ಕೆ ಬಲವಾದ ವಿರೋಧ ಎದುರಾಗಿದೆ. ಲೋಕಸಭಾ ಚುನಾವಣೆ ದಿನಾಂಕ ಘೋಷಣೆಗೂ ಮುನ್ನಾ ಈ ವರ್ಷದ ಫೆಬ್ರವರಿಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ (KSCBC) ಮಾಜಿ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ ಜಾತಿ ಗಣತಿ' ಬಿಸಿ ತುಪ್ಪವಾಗಿ ಸರ್ಕಾರಕ್ಕೆ ಪರಿಣಮಿಸಿದೆ.

ಈ ಹಿಂದೆ ಮೂರು ವರ್ಷಗಳ ಕಾಲ KSCBC ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಎಚ್.ಕಾಂತರಾಜ್ ಅವರ ಅವಧಿಯಲ್ಲೂ ಸಮೀಕ್ಷೆ ಕೈಗೊಂಡು ವರದಿ ಸಲ್ಲಿಸಲಾಗಿತ್ತು. ಯಾವುದೇ ತಾರತಮ್ಯ ಅಥವಾ ಲೋಪವಿಲ್ಲದೆ ವರದಿ ಸಿದ್ಧಪಡಿಸಲು ಎಲ್ಲಾ ಪ್ರಯತ್ನ ಮಾಡಲಾಗಿದೆ ಎಂದು ಕಾಂತರಾಜ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.

ಜಾತಿ ಸಮೀಕ್ಷೆಯನ್ನು ಹೇಗೆ ಮಾಡಿದ್ರಿ?

2014ರಲ್ಲಿ ನನ್ನನ್ನು ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ನಾನು ಸೇರುವ ಹೊತ್ತಿಗೆ ಪ್ರಾಥಮಿಕ ಕೆಲಸ ಮುಗಿದಿತ್ತು. ಇದು ಸುದೀರ್ಘ ಕಾರ್ಯವಿಧಾನವಾಗಿದೆ. ನಾವು ಹಿಂದಿನ ಎಲ್ಲಾ ಸಮೀಕ್ಷೆ ವರದಿಗಳನ್ನು ಪರಿಶೀಲಿಸಿದ್ದೇವೆ. ಸಮೀಕ್ಷೆಯು ಇಡೀ ಜನಸಂಖ್ಯೆಯನ್ನು ಒಳಗೊಳ್ಳಬೇಕೆಂದು ರಾಜ್ಯ ಸರ್ಕಾರ ಬಯಸಿದ್ದು, ಮನೆ-ಮನೆಗೆ ತೆರಳಿ ಸಮೀಕ್ಷೆ ನಡೆಸಲಾಗಿದೆ. ಹಿಂದುಳಿದಿರುವಿಕೆ ನಿರ್ಧರಿಸಲು 55 ಪ್ರಶ್ನೆಗಳಿಗೆ ಉತ್ತರಿಸಬೇಕಾಗಿತ್ತು. ಅದರಲ್ಲಿ ಜಾತಿಯೂ ಒಂದಾಗಿತ್ತು. ಕರ್ನಾಟಕದಲ್ಲಿ ಇಲ್ಲಿಯವರೆಗೆ ಯಾವುದೇ ಅಧಿಕೃತ ಜಾತಿ ಪಟ್ಟಿಯನ್ನು ಸಿದ್ಧಪಡಿಸಿಲ್ಲ. ತಪ್ಪಿಹೋಗಿರಬಹುದಾದ ಜಾತಿಗಳನ್ನು ಸೇರಿಸಲು, ಪ್ರತಿನಿಧಿಸಲು ಜನರನ್ನು ಆಹ್ವಾನಿಸಿದ್ದೇವೆ. ನಾವೇ ಸ್ವಂತವಾಗಿ ಯಾವುದೇ ಜಾತಿಯನ್ನು ಸೇರಿಸಿಕೊಂಡಿಲ್ಲ.

ಸಮೀಕ್ಷೆಯಲ್ಲಿ ಜಾತಿ ಯಾಕೆ ಒಂದು ಪ್ರಮುಖ ಅಂಶವಾಗಿದೆ?

ನಾವು 21 ನೇ ಶತಮಾನದಲ್ಲಿ ವಾಸಿಸುತ್ತಿದ್ದೇವೆ ಮತ್ತು ಜಾತಿಯನ್ನು ಏಕೆ ಸೇರಿಸಲಾಗುತ್ತಿದೆ ಎಂಬುದು ಎಲ್ಲರೂ ಆಶ್ಚರ್ಯಪಡುವಂತಹದ್ದು, ಯಾವುದೇ ಸಮೀಕ್ಷೆ ಅಥವಾ ಜನಗಣತಿ ಕೇವಲ ಜಾತಿಯನ್ನು ಆಧರಿಸಿರಬಾರದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಹಿಂದುಳಿದಿರುವಿಕೆಯನ್ನು ಕಂಡುಹಿಡಿಯಲು ಜಾತಿಯು ಒಂದು ಅಂಶವಾಗಿರಬೇಕು ಎಂದು ಸುಪ್ರೀಂ ಕೋರ್ಟ್ ಹಲವು ತೀರ್ಪುಗಳಲ್ಲಿ ಹೇಳಿದೆ. ನಮ್ಮ ಸಮೀಕ್ಷೆಯಲ್ಲಿನ 55 ಪ್ರಶ್ನೆಗಳಲ್ಲಿ ಒಂದು ಪ್ರಶ್ನೆ ಜಾತಿಗೆ ಸಂಬಂಧಿಸಿದೆ ಮತ್ತು ಉಳಿದವು ಉದ್ಯೋಗ, ನೈರ್ಮಲ್ಯ, ವಾಸಸ್ಥಳ, ಮನೆ ಪ್ರಕಾರ, ಭೂಹಿಡುವಳಿ ಇತ್ಯಾದಿ. ಜಾತಿಯು ಭಾರತದಲ್ಲಿ ಒಂದು ವಾಸ್ತವವಾಗಿದೆ ಮತ್ತು ಅದನ್ನು ಯಾರೂ ನಿರಾಕರಿಸಲು ಸಾಧ್ಯವಿಲ್ಲ. ಭಾರತ ಜಾತಿ ರಹಿತ ಸಮಾಜವಾಗಬೇಕು ಎಂದು ಸಂವಿಧಾನ ಹೇಳಿದ್ದರೂ ನಾವು ಇನ್ನೂ ಅಲ್ಲಿಗೆ ತಲುಪಿಲ್ಲ.

ನಿಮ್ಮ ಸಮೀಕ್ಷೆಯಲ್ಲಿ ಮುಂದುವರೆದಿರುವ ಜಾತಿಗಳಲ್ಲಿ ಹಿಂದುಳಿದಿರುವಿಕೆಯನ್ನು ನೋಡಿದ್ದೀರಾ ಮತ್ತು ಶೇಕಡಾವಾರು ಪ್ರಮಾಣ ಎಷ್ಟು?

ಹೌದು, ಆದರೆ ನಾನು ಬಹಿರಂಗಪಡಿಸಲು ಸಾಧ್ಯವಿಲ್ಲ. ಎಲ್ಲ ಜಾತಿಗಳಲ್ಲೂ ಬಡವರಿದ್ದಾರೆ. ಈ ಸಮೀಕ್ಷೆಯು ಕರ್ನಾಟಕದ ಹಿಂದುಳಿದ ಮತ್ತು ಹಿಂದುಳಿದ ವರ್ಗಗಳನ್ನು ಒಳಗೊಂಡಂತೆ ಇಡೀ ವರ್ಗಗಳನ್ನು ಮುಟ್ಟಿದೆ. 2015ರಲ್ಲೇ ಸಮೀಕ್ಷೆ ಮುಗಿದಿದೆ. ಅದು ಈಗಲೂ ಪ್ರಸ್ತುತ. ಹತ್ತು ವರ್ಷಗಳೊಳಗೆ ವರದಿಯನ್ನು ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್ ಒಂದು ತೀರ್ಪಿನಲ್ಲಿ ಹೇಳಿದೆ. ಇದು ಈಗಲೂ ಪ್ರಸ್ತುತವಾಗಿದೆ.

ಭಾರತದಲ್ಲಿ ಅಥವಾ ಕರ್ನಾಟಕದಲ್ಲಿ ಇಂತಹ ಸಮೀಕ್ಷೆಗಳು ಏಕೆ ಬೇಕು?

1872 ರಿಂದ 1931 ರವರೆಗೆ ಈ ರೀತಿಯ ಜನಗಣತಿಯನ್ನು ನಡೆಸಲಾಗಿದೆ. ಅಲ್ಲಿ ಜಾತಿಯ ವಿವರಗಳನ್ನು ಸೇರಿಸಲಾಗಿದೆ. 1931 ರ ನಂತರ ಜನಗಣತಿಯು ಜಾತಿಯ ಅಂಶವನ್ನು ಹೊಂದಿಲ್ಲ ಮತ್ತು ಅದನ್ನು ಏಕೆ ನಿಲ್ಲಿಸಲಾಯಿತು ಎಂಬುದು ನಮಗೆ ತಿಳಿದಿಲ್ಲ. ಇಂತಹ ಸಮೀಕ್ಷೆಗಳು ನಮಗೆ ಬೇಕು. ಇದು 1931 ರ ನಂತರವೂ ಮುಂದುವರಿದಿದ್ದರೆ, ನಾವು ಈಗ ಈ ರೀತಿಯ ಸಮೀಕ್ಷೆಯನ್ನು ನಡೆಸುವ ಅಗತ್ಯವಿರಲಿಲ್ಲ. ಪೀಠಿಕೆ ಸೇರಿದಂತೆ ಸಂವಿಧಾನದ ಗುರಿ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯಕ್ಕೆ ಆದ್ಯತೆ ನೀಡುತ್ತದೆ. 14 ನೇ ವಿಧಿಯು ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ಹೇಳುತ್ತದೆ. ಸಮಾಜದಲ್ಲಿ ಸಮಾನತೆ ಸಾಧಿಸುವವರೆಗೆ ಈ ರೀತಿಯ ಸಮೀಕ್ಷೆಯ ಅಗತ್ಯವಿದೆ.

ಜಾತಿ ಗಣತಿ ಏಕೆ ಬೇಕು?

ಜಾತಿ ಅಂಶ ಎಲ್ಲಾ ವ್ಯತ್ಯಾಸಗಳನ್ನು ಮಾಡುತ್ತದೆ. ಜಾತಿಗಳು ಒಂದು ಉದ್ಯೋಗವಾಗಿ ಮಾರ್ಪಟ್ಟಿರಬಹುದು ಅಥವಾ ಇಲ್ಲದಿರಬಹುದು. ಉದ್ಯೋಗದ ಆಧಾರದ ಮೇಲೆ ನಾವು ಹಿಂದುಳಿದಿರುವಿಕೆಯನ್ನು ಕಂಡುಹಿಡಿಯಬಹುದು ಮತ್ತು ಸಾಮಾಜಿಕ ನ್ಯಾಯವನ್ನು ಸಾಧಿಸುವ ಸಲುವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಈ ರೀತಿಯ ಸಮೀಕ್ಷೆಯ ಅಗತ್ಯವಿದೆ. ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿರುವ ಸರ್ಕಾರ ಕರ್ನಾಟಕದಲ್ಲಿ ಆಯೋಗವನ್ನು ಸ್ಥಾಪಿಸಿದೆ. ಬಿಹಾರ ದೊಡ್ಡ ರಾಜ್ಯವಾದ್ದರಿಂದ 500 ಕೋಟಿ ರೂ. ವೆಚ್ಚ ಮಾಡಿದೆ. ಕೇಂದ್ರ ಸರ್ಕಾರ ಕೂಡ ಮುಂದಿನ ದಿನಗಳಲ್ಲಿ ಜಾತಿ ಕಾಲಂ ಸೇರಿದಂತೆ ಜನಗಣತಿಯನ್ನು ಕೈಗೊಳ್ಳಲಿದೆ. ಹಾಗೆ ಮಾಡಿದರೆ ಎಲ್ಲ ರಾಜ್ಯಗಳಿಗೂ ಸಹಾಯವಾಗುತ್ತದೆ. ರಾಜ್ಯಗಳು ತಮ್ಮದೇ ಆದ ಸಮೀಕ್ಷೆಗಳೊಂದಿಗೆ ಮುಂದುವರಿಯುವ ಅಗತ್ಯವಿಲ್ಲ.

ಜಾತಿ ಗಣತಿ ವರದಿಯನ್ನು ಯಾವಾಗ ಸಲ್ಲಿಸಲು ಪ್ರಯತ್ನಿಸಿದ್ದೀರಿ?

ಏಕಾಏಕಿ ಕಮಿಷನ್ ಬಿಡುವಂತೆ ಆದೇಶ ಬಂದಿದ್ದರಿಂದ ನೇರವಾಗಿ ಸರ್ಕಾರಕ್ಕೆ ಸಲ್ಲಿಸಲು ಸಾಧ್ಯವಾಗಲಿಲ್ಲ. ಸದಸ್ಯ ಕಾರ್ಯದರ್ಶಿ, ಐಎಎಸ್ ಅಧಿಕಾರಿಗೆ ವರದಿ ನೀಡಿ 2019ರಲ್ಲಿ ಸರಕಾರಕ್ಕೆ ಸಲ್ಲಿಸುವಂತೆ ಕೋರಿದ್ದೆವು.

ಎಲ್ಲವನ್ನೂ ಮಾಡಲಾಗಿದೆ, ಜನರು ಅದರ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ, ಆದರೆ ಸರ್ಕಾರ ಜಾತಿ ಗಣತಿಯನ್ನು ಏಕೆ ಬಿಡುಗಡೆ ಮಾಡಿಲ್ಲ?

ಎಲ್ಲವನ್ನೂ ಮಾಡಲಾಗಿದೆ, ಜನರು ಅದರ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ, ಆದರೆ ಸರ್ಕಾರ ಜಾತಿ ಗಣತಿಯನ್ನು ಏಕೆ ಬಿಡುಗಡೆ ಮಾಡಿಲ್ಲ?

ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ವರದಿ ಸಲ್ಲಿಸಲು ಮುಂದಾದದ್ದು ನಿಜವೇ?

ನಾವು ಪ್ರಯತ್ನಿಸಿದ್ದೇವು. ಆದರೆ ಅಧಿಕೃತವಾಗಿ ಅಪಾಯಿಂಟ್‌ಮೆಂಟ್ ಪಡೆಯಲು ಸಾಧ್ಯವಾಗಲಿಲ್ಲ. ಒಮ್ಮೆ ನಾನು ಅವರನ್ನು ಭೇಟಿಯಾದಾಗ, ವರದಿಯ ವೈಶಿಷ್ಟ್ಯಗಳ ಬಗ್ಗೆ ಚರ್ಚಿಸಿದ್ದೇವೆ, ಅದಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ಮತ್ತೆ ನನಗೆ ಕರೆ ಮಾಡುವುದಾಗಿ ಕುಮಾರಸ್ವಾಮಿ ಹೇಳಿದರು. ಆದರೆ ಅವರಿಂದ ಯಾವುದೇ ಕರೆ ಬರಲಿಲ್ಲ.

ವರದಿ ನಾಪತ್ತೆ ಬಗ್ಗೆಯೂ ಚರ್ಚೆ ನಡೆದಿದೆ. ನಿಜವೇ?

ನನಗೆ ಆಶ್ಚರ್ಯವಾಯಿತು. ಆಯೋಗಕ್ಕೆ ಹೋಗಿ ಅಂದಿನ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಅವರನ್ನು ಭೇಟಿ ಮಾಡಿ ವಿಚಾರಿಸಿದೆ, ಅದಕ್ಕೆ ಅವರು ನಾಪತ್ತೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಜಾತಿ ಗಣತಿಯಲ್ಲಿ ಒಟ್ಟು ಜನಸಂಖ್ಯೆಯ ಶೇಕಡಾವಾರು ಪ್ರಮಾಣ ಎಷ್ಟು?

ಗ್ರಾಮೀಣ ಪ್ರದೇಶಗಳಲ್ಲಿ, ಶೇ. 98-99 ರಷ್ಟು ಜನಸಂಖ್ಯೆ, ನಗರ ಪ್ರದೇಶಗಳಲ್ಲಿ, ಸುಮಾರು ಶೇ.87 ರಷ್ಟು ಜನರು ಗಣತಿಯಲ್ಲಿ ಸೇರಿದ್ದಾರೆ.

ಮೀಸಲಾತಿ ವರ್ಗೀಕರಿಸಲು ಪ್ರಾಯೋಗಿಕ ಮಾಹಿತಿ ಎಂದು ತೆಗೆದುಕೊಳ್ಳಬಹುದೇ?

ಹೌದು. ಜನರ ಹಿಂದುಳಿದಿರುವಿಕೆ, ಸಾಮಾಜಿಕ ಸ್ಥಿತಿ ಮತ್ತು ಸಾಮಾಜಿಕ ಹಿಂದುಳಿದಿರುವಿಕೆಯನ್ನು ಕಂಡುಹಿಡಿಯಲು ನಮಗೆ ಸಾಧ್ಯವಾಗುವಂತೆ 55 ಪ್ರಶ್ನೆಗಳನ್ನು ಸಿದ್ಧಪಡಿಸಿದ್ದೇವೆ. ನಮ್ಮ ಸಂವಿಧಾನವು ನಿರ್ದಿಷ್ಟವಾಗಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವ್ಯಕ್ತಿಗಳನ್ನು ಗುರುತಿಸಲು ಒದಗಿಸುತ್ತದೆ. ಕಲ್ಯಾಣ ಕಾರ್ಯಕ್ರಮಗಳನ್ನು ನೀಡಲು ವಿವರಗಳನ್ನು ಸಂಗ್ರಹಿಸಲಾಗಿದೆ.

ವರದಿ ಸೋರಿಕೆ ಬಗ್ಗೆ ಏನು ಹೇಳುತ್ತೀರಿ?

ನಾನು ಅದನ್ನು ನಿರಾಕರಿಸುತ್ತೇನೆ, ವರದಿಯ ಸೋರಿಕೆಯಾಗಿಲ್ಲ.

ಸಂಗ್ರಹಿಸಿದ ಸಾಮಾಜಿಕ-ಆರ್ಥಿಕ ಮಾಹಿತಿ ಎಷ್ಟು ನಿಖರವಾಗಿದೆ?

ಸಮೀಕ್ಷೆಯ ಸಮಯದಲ್ಲಿ ಮನೆ ಮನೆಗೆ ಭೇಟಿ ನೀಡಿದಾಗ, 55 ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆದುಕೊಂಡಿದ್ದೇವೆ. ಮಾಹಿತಿ ನೀಡಿದವರ ಸಹಿ ತೆಗೆದುಕೊಂಡಿದ್ದೇವೆ. ಗಣತಿದಾರರು ನಮೂದಿಸಿದ ವಿವರಗಳನ್ನು ಪರಿಶೀಲಿಸಿ ಸಹಿ ಮಾಡುತ್ತಾರೆ. ಮಾಹಿತಿಯನ್ನು ಸರಿಯಾಗಿ ನಮೂದಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಮೇಲ್ವಿಚಾರಕರು ಸಹ ಅದನ್ನು ನೋಡುತ್ತಾರೆ ಮತ್ತು ಸಹಿ ಹಾಕುತ್ತಾರೆ.

ರಾಜ್ಯದಲ್ಲಿ ಅನಕ್ಷರಸ್ಥರ ಶೇಕಡಾವಾರು ಪ್ರಮಾಣ ಎಷ್ಟು?

ಕರ್ನಾಟಕದಲ್ಲಿ 10 ವರ್ಷಗಳ ಹಿಂದೆ ಶೇ.24 ರಷ್ಟಿತ್ತು, ಇದು ಅತಿ ಹೆಚ್ಚಿನದಾಗಿದೆ.

ಅನಕ್ಷರಸ್ಥರು ಬೇರೆ ಬೇರೆ ಸ್ಥಳಗಳಲ್ಲಿ ಹರಡಿ ಹೋಗಿದ್ದಾರೆಯೇ?

ಅವರು ವಿವಿಧ ಪ್ರದೇಶಗಳಲ್ಲಿ ಹರಡಿಕೊಂಡಿವೆ. ಹಳ್ಳಿಗಳ ಅನೇಕ ಜನರು ಶಾಲೆಗಳನ್ನು ನೋಡಿಲ್ಲ. ಈಗ ಅದು ಸುಧಾರಿಸಿದೆ, ಆದರೆ ಇಂದಿಗೂ ಓದಲು ಮತ್ತು ಬರೆಯಲು ಗೊತ್ತಿಲ್ಲದ ಅನಕ್ಷರಸ್ಥರು ಇದ್ದಾರೆ ಎಂಬುದು ಸತ್ಯ.

ಸಮೀಕ್ಷೆ ಪೂರ್ಣಗೊಳಿಸಿ ಸರಕಾರಕ್ಕೆ ಸಲ್ಲಿಸಲು ಯಾಕೆ ಅನೇಕ ವರ್ಷ ಬೇಕಾಯಿತು?

1.22 ಲಕ್ಷ ಗಣತಿದಾರರು ಮತ್ತು ಮೇಲ್ವಿಚಾರಕರೊಂದಿಗೆ ಕೇವಲ 40 ದಿನಗಳಲ್ಲಿ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿದ್ದೇವೆ. ಪ್ರತಿ ಗಣತಿದಾರರಿಗೆ ಸುಮಾರು 120 ಮನೆಗಳನ್ನು ನಿಯೋಜಿಸಲಾಗಿತ್ತು. ಆದರೆ ಡೇಟಾವನ್ನು ಸಂಗ್ರಹ ಮಾಡುವುದು ಮತ್ತು ವಿಶ್ಲೇಷಿಸುವುದು ದೊಡ್ಡ ಕೆಲಸವಾಗಿತ್ತು. ವಿಶ್ಲೇಷಣೆಯನ್ನು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ಗೆ ವಹಿಸಲಾಯಿತು ಮತ್ತು ಅವರು ಅದನ್ನು ಸಾಫ್ಟ್‌ವೇರ್ ಬಳಸಿ ಮಾಡಿದರು. ಅಲ್ಲದೆ, ದತ್ತಾಂಶ ಸಂಗ್ರಹಣೆ ಮತ್ತು ವರದಿಯನ್ನು ಸಿದ್ಧಪಡಿಸಿದ ನಂತರ, ಸಮೀಕ್ಷೆಯ ನೈಜತೆ ಮತ್ತು ಲಭ್ಯವಿರುವ ಅಂಕಿಅಂಶಗಳ ಬಗ್ಗೆ ಅಭಿಪ್ರಾಯ ನೀಡಲು ನಾವು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸಂಪರ್ಕಿಸಿದ್ದೇವು.

ಸಮೀಕ್ಷೆ ಅವೈಜ್ಞಾನಿಕವಾಗಿದ್ದು, ತರಾತುರಿಯಲ್ಲಿ ನಡೆಸಲಾಗಿದೆ ಎಂಬ ಟೀಕೆ ಅದರಲ್ಲೂ ಪ್ರಬಲ ಸಮುದಾಯಗಳಿಂದ ಸಾಕಷ್ಟು ಟೀಕೆಗಳು ಕೇಳಿಬರುತ್ತಿವೆ. ಇದರಿಂದ ತಮ್ಮ ಸಮುದಾಯಗಳ ಮೇಲೆ ದೀರ್ಘಾವಧಿ ಪರಿಣಾಮ ಬೀರುತ್ತದೆ ಎಂದು ಸಿಎಂಗೆ ಮನವಿ ಸಲ್ಲಿಸಿದ್ದಾರೆ. ಅವರಿಗೆ ನಿಮ್ಮ ಸಂದೇಶವೇನು?

ಮೊದಲಿಗೆ, ವೈಜ್ಞಾನಿಕ ಮತ್ತು ಅವೈಜ್ಞಾನಿಕ ಯಾವುದು ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಸರ್ಕಾರ ಅದನ್ನು ಪ್ರಕಟಿಸದಿರುವಾಗ ಅದು ಅವೈಜ್ಞಾನಿಕ ಎಂದು ನಿಮಗೆ ಹೇಗೆ ಗೊತ್ತು? ಪ್ರಕಟಣೆಯ ನಂತರ, ಅವರು ವರದಿಯನ್ನು ಅಧ್ಯಯನ ಮಾಡಬೇಕು ಮತ್ತು ನಂತರ ತಮ್ಮ ಹೇಳಿಕೆ ನೀಡಬೇಕು

ಜಾತಿ ಸಮೀಕ್ಷೆ ವರದಿಯನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸುವುದು ಸರ್ಕಾರಕ್ಕೆ ಸೂಕ್ತವಲ್ಲವೇ?

ವರದಿಯು ಸರ್ಕಾರದ ಆಸ್ತಿಯಾಗಿದೆ. ಸಂಪುಟ ಮತ್ತು ವಿಧಾನಸಭೆಯಲ್ಲಿ ಚರ್ಚಿಸಿ ನಂತರ ಪ್ರಕಟಿಸಬೇಕು.

ವರದಿ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಇದರಿಂದ ನಿಮಗೆ ತೊಂದರೆಯಾಗಬಹುದೇ?

ಇದು ನನಗೆ ತೊಂದರೆಯಾಗುವುದಿಲ್ಲ ಎಂದು ನಾನು ಹೇಳಲಾರೆ. ಇದು ಕಾರ್ಯರೂಪಕ್ಕೆ ಬಂದರೆ ಮತ್ತು ಅದರ ಪ್ರಯೋಜನಗಳನ್ನು ಜನರಿಗೆ ತಲುಪಿದರೆ ನನಗೆ ತುಂಬಾ ಸಂತೋಷವಾಗುತ್ತದೆ ಎಂದು ಹೇಳಬಲ್ಲೆ.

ಯಾರೂ ನೋಡದ ವರದಿಗೆ ಇಷ್ಟೊಂದು ವಿರೋಧಕ್ಕೆ ಕಾರಣವೇನಿರಬಹುದು?

ನನಗೆ ಗೊತ್ತಿಲ್ಲ. ಸಮೀಕ್ಷೆ ನಡೆಸುವಾಗಲೂ ಆಕ್ಷೇಪ ವ್ಯಕ್ತವಾಗಿತ್ತು. ಏಕೆಂದರೆ ಸಾಮಾನ್ಯವಾಗಿ, ಇಂತಹ ಆಯೋಗವನ್ನು ಸ್ಥಾಪಿಸಿದಾಗಲೆಲ್ಲಾ ಅದು ಮೀಸಲಾತಿ ಉದ್ದೇಶಕ್ಕಾಗಿ ಮಾತ್ರ ಎಂದು ಜನರು ಭಾವಿಸುತ್ತಾರೆ. ಆದರೆ, ವರದಿಯಲ್ಲಿ ತಮ್ಮ ಜಾತಿ ನಮೂದಿಸಬೇಕು ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ಜಾತಿ ಸಮೀಕ್ಷೆ ಮುಖ್ಯವಾದುದು ಏಕೆಂದರೆ ಎಲ್ಲಿಯೂ ಜಾತಿ ನಮೂದಿಸದ ವ್ಯಕ್ತಿ ತಹಶೀಲ್ದಾರ್ ಬಳಿ ಹೋಗುತ್ತಾನೆ ಎಂದು ಭಾವಿಸೋಣ. ಆತ ಮೀಸಲಾತಿ ಅಡಿಯಲ್ಲಿ ಬರುವ ಜಾತಿಗೆ ಸೇರಿದವನು, ಆತನ ಹೆಸರನ್ನು ಮೀಸಲಾತಿ ಪಟ್ಟಿಯಲ್ಲಿ ಸೇರಿಸಬೇಕು ಎಂದು ಹೇಗೆ ತಹಸೀಲ್ದಾರ್ ನಿರ್ಧರಿಸುತ್ತಾರೆ. ರಾಜ್ಯದಲ್ಲಿ ಮೀಸಲಾತಿಯಿಂದ ಹೊರಗುಳಿದಿರುವ ಹಲವು ಜಾತಿಗಳಿವೆ.

ಬ್ಯಾಂಕ್ ಮತ್ತು ಡಿಜಿಟಲ್ ಪಾವತಿಗಳ ಬಗ್ಗೆ ಏನು?

ಇವತ್ತಿಗೂ ಬ್ಯಾಂಕ್ ಖಾತೆ ಇಲ್ಲದ ಎಷ್ಟೋ ಮಂದಿ ಇದ್ದಾರೆ. ಒಬ್ಬ ವ್ಯಕ್ತಿಯು ನಿರ್ದಿಷ್ಟ ಆದಾಯವನ್ನು ಹೊಂದಿರುವಾಗ ಬ್ಯಾಂಕ್ ಖಾತೆಯನ್ನು ಹೊಂದಿರುತ್ತಾನೆ. ಬ್ಯಾಂಕಿನಲ್ಲಿ ಠೇವಣಿ ಇಡಲು ಹಣವಿಲ್ಲದಿರುವಾಗ, ಬ್ಯಾಂಕ್ ಖಾತೆ ತೆರೆಯುವ ಅಗತ್ಯವೇನು? ಇಂದಿಗೂ, ದೇಶ ಮತ್ತು ರಾಜ್ಯದಲ್ಲಿ ನಿರ್ದಿಷ್ಟ ಆದಾಯವಿಲ್ಲದ ಜನರಿದ್ದಾರೆ.

ಹಿಂದುಳಿದ ವರ್ಗದವರಾದರೂ ಉತ್ತಮ ವಿದೇಶಿ ಶಿಕ್ಷಣ ಹೊಂದಿರುವ, ಶಿಕ್ಷಣ ಸಂಸ್ಥೆ ನಡೆಸುತ್ತಿರುವ ಮತ್ತು ಉತ್ತಮ ಆದಾಯ ಹೊಂದಿರುವ ವ್ಯಕ್ತಿಯನ್ನು ಇನ್ನೂ ಹಿಂದುಳಿದ ವರ್ಗಕ್ಕೆ ಸೇರಿಸಲಾಗುತ್ತದೆಯೇ?

ಕೆಲವು ರೂಢಿಗಳಿವೆ. ಒಬ್ಬ ವ್ಯಕ್ತಿಯು ಶೈಕ್ಷಣಿಕವಾಗಿ ಹಿಂದುಳಿದಿದ್ದರೂ, ಹಣ ಮತ್ತು ಆಸ್ತಿಯನ್ನು ಹೊಂದಿದ್ದರೆ, ನಾವು ಅವನನ್ನು ಹಿಂದುಳಿದವರು ಎಂದು ಕರೆಯುತ್ತೇವೆ. ಸುಪ್ರೀಂಕೋರ್ಟ್ ಕೂಡ ರಾಜಕೀಯ ಮೀಸಲಾತಿ ಇರಬೇಕು ಎಂದು ಹೇಳಿದೆ. 2010ರವರೆಗೆ ರಾಜಕೀಯ ಮೀಸಲಾತಿಯಲ್ಲಿ ಸಾಮಾನ್ಯ ಮೀಸಲಾತಿ ಇತ್ತು. 2010 ರ ಕೃಷ್ಣಮೂರ್ತಿ ಪ್ರಕರಣದಲ್ಲಿ, ಸಾಮಾಜಿಕ ಮತ್ತು ರಾಜಕೀಯ ಹಿಂದುಳಿದಿರುವಿಕೆಯ ಮಾನದಂಡಗಳು ವಿಭಿನ್ನವಾಗಿವೆ ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿತು. ಆ ಉದ್ದೇಶಕ್ಕಾಗಿ ಕರ್ನಾಟಕ ಸರ್ಕಾರ 2010ರಲ್ಲಿ ಭಕ್ತವತ್ಸಲ ಆಯೋಗವನ್ನು ನೇಮಿಸಿತು.

ವರದಿಯು ಆಧಾರರಹಿತವಾಗಿದ್ದು, ಯಾವುದೇ ವ್ಯಕ್ತಿ ಅಥವಾ ಸಮುದಾಯಕ್ಕೆ ನ್ಯಾಯ ಒದಗಿಸಿಲ್ಲ ಎಂಬ ಕಳವಳ ಕೇಳಿಬರುತ್ತಿದೆ

ನಾನು ಪರಿಪೂರ್ಣ ಎಂದು ಹೇಳುವುದಿಲ್ಲ. ನಮ್ಮ ಕಾರ್ಯಚಟುವಟಿಕೆಯಲ್ಲಿ ಯಾವುದೇ ತಾರತಮ್ಯ ಅಥವಾ ಲೋಪವಿಲ್ಲದೆ ನಾವು ಎಲ್ಲಾ ಪ್ರಯತ್ನಗಳನ್ನು ಮಾಡಿದ್ದೇವೆ. ನಾವು ನಮ್ಮ ಕೈಲಾದಷ್ಟು ಮಾಡಿದ್ದೇವೆ. ನಮಗೆ ಒಪ್ಪಿಸಿದ ಕೆಲಸಕ್ಕಾಗಿ ನಾವು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಿದ್ದೇವೆ ಎಂದು ನನ್ನ ಆತ್ಮಸಾಕ್ಷಿಯು ಹೇಳುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT