ಡೆಂಗ್ಯು (ಸಂಗ್ರಹ ಚಿತ್ರ) online desk
ರಾಜ್ಯ

Dengue ಸಾಂಕ್ರಾಮಿಕ ರೋಗ: ರಾಜ್ಯ ಸರ್ಕಾರದಿಂದ ಅಧಿಕೃತ ಘೋಷಣೆ!

ರಾಜ್ಯ ಸರ್ಕಾರದಿಂದ ಗೆಜೆಟ್ ಅಧಿಸೂಚನೆ ಪ್ರಕಟಿಸಲಾಗಿದ್ದು, ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ 2020 ರ ಅಡಿಯಲ್ಲಿ ಡೆಂಗ್ಯೂ ಜ್ವರವನ್ನು ಸಾಂಕ್ರಾಮಿಕ ರೋಗ ಎಂದು ಅಧಿಸೂಚನೆ ಹೊರಡಿಸಲಾಗಿದೆ.

ಬೆಂಗಳೂರು: ರಾಜ್ಯದಲ್ಲಿ Dengue ಜ್ವರ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಡೆಂಗ್ಯು ಜ್ವರವನ್ನು ಸಾಂಕ್ರಾಮಿಕ ರೋಗವೆಂದು ರಾಜ್ಯ ಸರ್ಕಾರ ಅಧಿಕೃತವಾಗಿ ಘೋಷಿಸಿದೆ.

ರಾಜ್ಯ ಸರ್ಕಾರದಿಂದ ಗೆಜೆಟ್ ಅಧಿಸೂಚನೆ ಪ್ರಕಟಿಸಲಾಗಿದ್ದು, ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ 2020 ಕ್ಕೆ ತಿದ್ದುಪಡಿ ತರಲಾಗಿದ್ದು, ಡೆಂಗ್ಯೂ ಜ್ವರವನ್ನು ಸಾಂಕ್ರಾಮಿಕ ರೋಗ ಎಂದು ಅಧಿಸೂಚನೆ ಹೊರಡಿಸಲಾಗಿದೆ.

ರಾಜ್ಯಾದ್ಯಂತ ಈ ಅಧಿಸೂಚನೆ ಅನ್ವಯವಾಗಲಿದ್ದು, ಡೆಂಗ್ಯು ಹಾಗೂ ಇನ್ನಿತರ ಸೊಳ್ಳೆಗಳಿಂದ ಹರಡುವ ಇನ್ನಿತರ ರೋಗಗಳ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಕರ್ನಾಟಕ ಸಾಂಕ್ರಾಮಿಕ ರೋಗಗಳ ನಿಯಮಗಳು, 2020 ಕ್ಕೆ ತಿದ್ದುಪಡಿ ತಂದಿದ್ದು ಸೊಳ್ಳೆ ನಿಯಂತ್ರಣಕ್ಕಾಗಿ ಕಠಿಣ ಕ್ರಮಗಳನ್ನು ಜಾರಿಗೊಳಿಸಿದೆ.

ಹೊಸ ನಿಯಮಗಳ ಪ್ರಕಾರ, ಯಾವುದೇ ಜಮೀನು, ಕಟ್ಟಡ, ನೀರಿನ ತೊಟ್ಟಿ, ಉದ್ಯಾನವನ, ಆಟದ ಮೈದಾನ, ಅಥವಾ ಯಾವುದೇ ಇತರ ಸ್ಥಳದ ಉಸ್ತುವಾರಿ ವಹಿಸಿರುವ ಪ್ರತಿಯೊಬ್ಬ ಮಾಲೀಕರು, ಬಿಲ್ಡರ್, ಸೊಳ್ಳೆಗಳ ಸಂತಾನೋತ್ಪತ್ತಿಯನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ನೀರಿನ ಸಂಗ್ರಹಣೆ ಕಂಟೈನರ್‌ಗಳು, ಸಂಪ್‌ಗಳು ಅಥವಾ ಓವರ್‌ಹೆಡ್ ಟ್ಯಾಂಕ್‌ಗಳನ್ನು ಮುಚ್ಚಲಾಗಿರುವುದನ್ನು ಖಚಿತಪಡಿಸಿಕೊಳ್ಳುವುದು ಕಡ್ಡಾಯವಾಗಿರಲಿದೆ. ನೀರಿನ ಶೇಖರಣೆಯನ್ನು ತಡೆಯಲು ಘನ ತ್ಯಾಜ್ಯವನ್ನು ವಿಲೇವಾರಿ ಮಾಡುವುದು ಮತ್ತು ಖಾಲಿ ಪಾತ್ರೆಗಳು, ಕ್ಯಾನ್‌ಗಳು, ಬಳಕೆಯಾಗದ ಟೈರ್‌ಗಳು ಅಥವಾ ನೀರನ್ನು ಸಂಗ್ರಹಿಸುವ ಯಾವುದೇ ವಸ್ತುಗಳನ್ನು ಸಂಗ್ರಹಿಸುವುದನ್ನು ತಪ್ಪಿಸುವುದು. ಸೊಳ್ಳೆಗಳ ಸಂತಾನೋತ್ಪತ್ತಿಯನ್ನು ತಡೆಯಲು ಯಾವುದೇ ಬಳಕೆಯಾಗದ ಟ್ಯಾಂಕ್‌ಗಳು, ಹೊಂಡಗಳು ಅಥವಾ ನೀರು ನಿಲ್ಲಬಹುದಾದ ಸ್ಥಳಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುವುದನ್ನು ರಾಜ್ಯ ಸರ್ಕಾರ ಕಡ್ಡಾಯಗೊಳಿಸಿದೆ.

ತಿದ್ದುಪಡಿಯಲ್ಲಿ ಬೆಂಗಳೂರು ಪ್ರದೇಶದ ಬಿಬಿಎಂಪಿ ಮುಖ್ಯ ಆಯುಕ್ತರು ಮತ್ತು ಇತರ ಜಿಲ್ಲೆಗಳ ಜಿಲ್ಲಾಧಿಕಾರಿಗಳನ್ನು ಒಳಗೊಂಡಿರುವ ಸಕ್ಷಮ ಪ್ರಾಧಿಕಾರಕ್ಕೆ ನಿವೇಶನಗಳನ್ನು ಪರಿಶೀಲಿಸುವ, ನೋಟಿಸ್ ನೀಡುವ ಮತ್ತು ನಿಯಮಗಳ ಅನುಸರಣೆಯನ್ನು ಜಾರಿಗೊಳಿಸುವ ಅಧಿಕಾರವನ್ನು ನೀಡಲಾಗಿದೆ.

ಈ ಪ್ರಾಧಿಕಾರದಲ್ಲಿರುವ ಸದಸ್ಯರು ಹಗಲಿನಿಂದ ಸಂಜೆ ವೇಳೆಯ ನಡುವೆ ಯಾವುದೇ ಸಮಯದಲ್ಲೂ , ಪೂರ್ವ ಮಾಹಿತಿ ನೀಡಿ ತಪಾಸಣೆ ನಡೆಸಬಹುದಾಗಿದೆ. ಅಷ್ಟೇ ಅಲ್ಲದೇ ಭೌತಿಕ, ರಾಸಾಯನಿಕ, ಅಥವಾ ಜೈವಿಕ ವಿಧಾನಗಳನ್ನು ಬಳಸಿ ಸೊಳ್ಳೆಗಳ ಸಂತಾನೋತ್ಪತ್ತಿಯನ್ನು ತೊಡೆದುಹಾಕಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮಾಲೀಕರು ಅಥವಾ ಮಾಲೀಕರಿಗೆ ಸೂಚಿಸಬಹುದಾಗಿರುತ್ತದೆ. ವ್ಯಕ್ತಿಯು ನಿರ್ದಿಷ್ಟ ಸಮಯದೊಳಗೆ ಕಾರ್ಯನಿರ್ವಹಿಸಲು ವಿಫಲವಾದರೆ, ಅಧಿಕಾರಿಗಳು ಸ್ವತಃ ಅಗತ್ಯ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ.

ಸರ್ಕಾರದ ಆದೇಶದ ಪ್ರಕಾರ ನಿಯಮಗಳು ಪಾಲನೆಯಾಗದೇ ಇದ್ದಲ್ಲಿ, ವಿವಿಧ ಪ್ರದೇಶ ಮತ್ತು ಕಟ್ಟಡಗಳ ಆಧಾರದಲ್ಲಿ ನಿಗದಿಪಡಿಸಲಾದ ದಂಡವನ್ನು ವಿಧಿಸಬಹುದಾಗಿದೆ.

ನಗರ ಪ್ರದೇಶದಲ್ಲಿನ ಮನೆಗಳಲ್ಲಿ ನಿಯಮ ಪಾಲನೆಯಾಗದೇ ಇದ್ದಲ್ಲಿ 400 ರೂಪಾಯಿ ದಂಡ, ಗ್ರಾಮೀಣ ಪ್ರದೇಶದಲ್ಲಿ ನಿಯಮ ಪಾಲನೆಯಾಗದೇ ಇದ್ದರೆ, 200 ರೂಪಾಯಿ ದಂಡ, ನಗರ ಪ್ರದೇಶದಲ್ಲಿರುವ ಕಚೇರಿಗಳು, ಶಾಲೆಗಳು, ಕಾಲೇಜುಗಳು, ಆರೋಗ್ಯ ಸೌಲಭ್ಯಗಳು, ಹೋಟೆಲ್‌ಗಳು ಮತ್ತು ಅಂತಹ ಇತರ ಸ್ಥಳಗಳು ಸೇರಿದಂತೆ ವಾಣಿಜ್ಯ ಸಂಸ್ಥೆಗಳಿಗೆ 1000 ರೂಪಾಯಿ ದಂಡ, ಹಾಗೂ ಗ್ರಾಮೀಣ ಭಾಗಗಳಿಗೆ 500 ರೂಪಾಯಿ ದಂಡ ವಿಧಿಸಬಹುದಾಗಿದೆ.

ನಗರ ಪ್ರದೇಶಗಳಲ್ಲಿ ಸಕ್ರಿಯ ಅಥವಾ ಕಾಮಗಾರಿ ಸ್ಥಗಿತಗೊಂಡ ಸ್ಥಳಗಳು, ಹಾಗೆಯೇ ಖಾಲಿ ಜಾಗಗಳಲ್ಲಿ ನಿಯಮ ಪಾಲನೆಯಾಗದೇ ಇದ್ದಲ್ಲಿ ರೂ 2,000 ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ರೂ 1,000 ದಂಡ ದಂಡ ವಿಧಿಸಬಹುದಾಗಿದೆ.

ಬಿಬಿಎಂಪಿ ಮತ್ತು ಮಂಗಳೂರು ಮಹಾನಗರ ಪಾಲಿಕೆ ಆಡಳಿತವಿರುವ ಪ್ರದೇಶಗಳಲ್ಲಿ ನಿಗದಿತ ದಂಡಗಳು ಚಾಲ್ತಿಯಲ್ಲಿರುತ್ತವೆ. ಹೆಚ್ಚುವರಿಯಾಗಿ, ನೋಟಿಸ್ ನೀಡಿದ ನಂತರ ನಿರ್ಲಕ್ಷ್ಯ ಮುಂದುವರಿದರೆ, ಮುಂದುವರಿದ ಉಲ್ಲಂಘನೆಯ ಪ್ರತಿ ವಾರಕ್ಕೆ ಒಟ್ಟು ದಂಡದ ಮೊತ್ತದ 50% ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. ಕರ್ನಾಟಕದಲ್ಲಿ ಡೆಂಗ್ಯೂ ಹರಡುವುದನ್ನು ತಡೆಗಟ್ಟಲು ಎಲ್ಲಾ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು, ಈ ದಂಡಗಳನ್ನು ವಿಧಿಸುವ ಮತ್ತು ವಸೂಲಿ ಮಾಡುವ ಜವಾಬ್ದಾರಿಯನ್ನು ಪ್ರಾಧಿಕಾರ ಅಥವಾ ಅದರ ಅಧಿಕೃತ ಅಧಿಕಾರಿ ಹೊಂದಿರುತ್ತಾರೆ.

ಮೈತಾಪಮಾನ ಹೆಚ್ಚಾಗುವುದು, ತೀವ್ರ ತಲೆನೋವು, ಕೀಲು ಮತ್ತು ಸ್ನಾಯು ನೋವು, ದದ್ದು ಮತ್ತು ಕೆಲವು ಸಲ ರಕ್ತಸ್ರಾವ ಮತ್ತು ವಾಕರಿಕೆ ಕಾಣಿಸಿಕೊಳ್ಳುವುದು ಡೆಂಗ್ಯೂ ರೋಗದ ಪ್ರಮುಖ ಲಕ್ಷಣಗಳಾಗಿದೆ.

ಡೆಂಗ್ಯು ಜ್ವರವನ್ನು ತಡೆಯಲು ನಿರ್ದಿಷ್ಟವಾದ ಚಿಕಿತ್ಸೆಯಿಲ್ಲ. ಆದರೆ ಮುಂಜಾಗ್ರತಾ ಕ್ರಮವಾಗಿ ತೆರೆದಿಟ್ಟ ನೀರಿನ ತೊಟ್ಟಿ ವಾರಕ್ಕೊಮ್ಮೆ ಖಾಲಿ ಮಾಡುವುದು, ತೊಳೆದು ಭರ್ತಿ ಮಾಡಿ ಮುಚ್ಚುವುದು. ಮನೆ ಸುತ್ತಮುತ್ತ ಬಯಲಲ್ಲಿ ಬಿಸಾಡಿದ ತೆಂಗಿನ ಚಿಪ್ಪು, ಬಿಸಾಡಿದ ಟೀ ಗ್ಲಾಸ್‌ ಇತರೆ ವಸ್ತುಗಳಲ್ಲಿ ನೀರು ಸಂಗ್ರಹವಾದಾಗಿ ಸೊಳ್ಳೆ ಉತ್ಪತ್ತಿಯಾಗದಂತೆ ಎಚ್ಚರ ವಹಿಸುವ ಮೂಲಕ ಡೆಂಗ್ಯು ತಡೆಗಟ್ಟಬಹುದಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತ ಮತ್ತು ಚೀನಾ 'ಸ್ನೇಹಿತರಾಗಿರುವುದೇ' ಸರಿಯಾದ ಆಯ್ಕೆ: ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್

Dharmasthala Case: NIA ತನಿಖೆ ಅಗತ್ಯವಿಲ್ಲ, SITಗೆ ಸ್ವಾತಂತ್ರ್ಯ ನೀಡಲಾಗಿದೆ; ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್‌ನಲ್ಲೂ ಸಾಮಾನ್ಯಕ್ಕಿಂತ ಹೆಚ್ಚು ಮಳೆ; ಪ್ರವಾಹ, ಭೂಕುಸಿತದ ಬಗ್ಗೆ IMD ಎಚ್ಚರಿಕೆ

ಆಪರೇಷನ್ ಸಿಂಧೂರ ವೇಳೆಯ 'ಅಪವಿತ್ರ ಮೈತ್ರಿ'ಯನ್ನು ಸದ್ದಿಲ್ಲದೆ ಒಪ್ಪಿಕೊಂಡ ಮೋದಿ ಸರ್ಕಾರ! ಚೀನಾ ಆಕ್ರಮಣವನ್ನು ಕಾನೂನುಬದ್ಧಗೊಳಿಸುತ್ತಿದ್ದೆಯೇ? ಕಾಂಗ್ರೆಸ್

ಬೆಂಗಳೂರು: ಪ್ರಯಾಣಿಕನಿಗೆ ಕಪಾಳಮೋಕ್ಷ ಮಾಡಿದ BMTC ಬಸ್ ಕಂಡೆಕ್ಟರ್; ನೆಟ್ಟಿಗರು ಆಕ್ರೋಶ, Video!

SCROLL FOR NEXT