ಬೆಂಗಳೂರು: ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕ ಮುಂಚೂಣಿಯಲ್ಲಿರುವ ರಾಜ್ಯದ ಸ್ಥಾನವನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಐಟಿ/ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಶುಕ್ರವಾರ ಕರ್ನಾಟಕ ಜೈವಿಕ ತಂತ್ರಜ್ಞಾನ ನೀತಿ 2024-2029 ಅನ್ನು ಅನಾವರಣಗೊಳಿಸಿದರು.
ಹೌದು.. ರಾಜ್ಯ ಸರ್ಕಾರ ಜೈವಿಕ ತಂತ್ರಜ್ಞಾನ ನೀತಿ 2024-29 ಅನಾವರಣಗೊಳಿಸಿದ್ದು, ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆಗೊಂಡಿರುವ ಜೈವಿಕ ತಂತ್ರಜ್ಞಾನ ನೀತಿ ಮೂಲಕ ರಾಜ್ಯ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಗನಾಗಿರುವ ಉದ್ದೇಶ ಹೊಂದಿದೆ.
ಹೊಸ ನೀತಿಯು 2030 ರ ವೇಳೆಗೆ 100 ಶತಕೋಟಿ ಡಾಲರ್ ಮಾರುಕಟ್ಟೆ ಮೌಲ್ಯವನ್ನು ಗುರಿಯಾಗಿರಿಸಿಕೊಂಡಿದ್ದು, ಈ ನೀತಿ ರಾಜ್ಯಕ್ಕೆ ಹೊಸ ಮಾನದಂಡವನ್ನು ನಿಗದಿಪಡಿಸಿದೆ. ಕರ್ನಾಟಕ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಳವಣಿಗೆಯ ವೇಗ ಹೆಚ್ಚಿಸಲು ಹೊಸ ನೀತಿಗಳನ್ನು ಕಾರ್ಯತಂತ್ರಾತ್ಮಕವಾಗಿ ಜಾರಿಗೊಳಿಸುವ ಉದ್ದೇಶ ಹೊಂದಿದೆ ಎಂದು ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದ್ದಾರೆ.
ಹೊಸ ನೀತಿಯ ಪ್ರಮುಖ ಉದ್ದೇಶಗಳು
ಉದ್ಯೋಗ ಮತ್ತು ಉದ್ಯಮಶೀಲತೆ ಎರಡನ್ನೂ ಬೆಂಬಲಿಸಲು, ಕೌಶಲ್ಯದ ಮೂಲಕ ಜೈವಿಕ ತಂತ್ರಜ್ಞಾನ ಶಿಕ್ಷಣವನ್ನು ಬಲಪಡಿಸುವುದು. ವ್ಯವಹಾರ ಸ್ಥಾಪನೆಗೆ ಅನುಕೂಲವಾಗುವಂತೆ ಮತ್ತು ಹೂಡಿಕೆ ಆಕರ್ಷಿಸಲು ಜೈವಿಕ ತಂತ್ರಜ್ಞಾನ ನಿಯಮಗಳನ್ನು ಸುಗಮಗೊಳಿಸುವ ಉದ್ದೇಶ ಹೊಂದಿದೆ. ಆರೋಗ್ಯ, ಹವಾಮಾನ ಮತ್ತು ಇಂಧನ ಗುರಿಗಳಿಗೆ ಅನುಗುಣವಾಗಿ ಜೈವಿಕ ಉತ್ಪಾದನೆ ಬೆಂಬಲಿಸುವುದು, ಆಹಾರ ಭದ್ರತೆಯನ್ನು ಹೆಚ್ಚಿಸುವುದು, ಕರ್ನಾಟಕವನ್ನು ಜಾಗತಿಕ ಜೈವಿಕ ಉತ್ಪಾದನಾ ಕೇಂದ್ರವಾಗಿ ಉತ್ತೇಜಿಸಲಿದೆ.
ಆರಂಭಿಕ ಹಂತದ ಜೈವಿಕ ತಂತ್ರಜ್ಞಾನ ನವೋದ್ಯಮಗಳಿಗೆ ಧನಸಹಾಯ ಮತ್ತು ಮಾರ್ಗದರ್ಶನದೊಂದಿಗೆ ಮತ್ತು ಸ್ಥಳೀಯ ಉತ್ಪನ್ನಗಳನ್ನು ಆದ್ಯತೆಯೊಂದಿಗೆ ಸಂಗ್ರಹಿಸುವ ಮೂಲಕ ಮಾರುಕಟ್ಟೆ ಪ್ರವೇಶದೊಂದಿಗೆ ಮಧ್ಯಮ ಹಂತದ ಉದ್ಯಮಗಳನ್ನು ಬೆಂಬಲಿಸುವ ಗುರಿ ಹೊಂದಿದೆ.
30,000 ಗುಣಮಟ್ಟದ ಉದ್ಯೋಗ ಸೃಷ್ಟಿ
ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕವನ್ನು ಜಾಗತಿಕ ಮಟ್ಟದಲ್ಲಿ ಪ್ರಮುಖ ಸ್ಥಾನವನ್ನಾಗಿ ಹೊರಹೊಮ್ಮಿಸಲು ಜೀನೋಮಿಕ್ಸ್, ಆಣ್ವಿಕ ಜೀವಶಾಸ್ತ್ರ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ವಾಣಿಜ್ಯೀಕರಣಕ್ಕಾಗಿ ಬೆಂಬಲವನ್ನು ಮುಂದುವರಿಸುವ ಉದ್ದೇಶ ಹೊಂದಲಾಗಿದೆ. ಹಣಕಾಸು ಪ್ರೋತ್ಸಾಹಕಗಳೊಂದಿಗೆ 50 ನವೀನ ಸಂಸ್ಥೆಗಳು ಸೇರಿದಂತೆ 300 ಜೈವಿಕ ತಂತ್ರಜ್ಞಾನ ಕಂಪನಿಗಳ ರಚನೆಗೆ ಅನುಕೂಲ ಮಾಡಿಕೊಡುವ ಉದ್ದೇಶ ಇದೆ.
2029ರ ವೇಳೆಗೆ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ 30,000 ಗುಣಮಟ್ಟದ ಉದ್ಯೋಗಗಳನ್ನು ಸೃಷ್ಟಿಸುವುದು ಮತ್ತು 20,000 ವ್ಯಕ್ತಿಗಳಿಗೆ ವಿಶೇಷ ಕೌಶಲ್ಯಗಳಲ್ಲಿ ತರಬೇತಿ ನೀಡಲು 200 ಕ್ಕೂ ಹೆಚ್ಚು ಸಂಸ್ಥೆಗಳೊಂದಿಗೆ ಪಾಲುದಾರಿಕೆಯನ್ನು ಹೊಂದುವ ಅಂಶಗಳನ್ನು ನೀತಿಯಲ್ಲಿ ಸೇರಿಸಲಾಗಿದೆ.
ಕ್ಷೇತ್ರವಾರು ಆದ್ಯತೆ
ಹೊಸ ನೀತಿ ಜೈವಿಕ ಕೃಷಿ, ಜೈವಿಕ-ಕೈಗಾರಿಕಾ ಅನ್ವಯಗಳು (ಜೈವಿಕ ಶಕ್ತಿ, ಸ್ಮಾರ್ಟ್ ಪ್ರೋಟೀನ್ ಗಳು ಮತ್ತು ನ್ಯೂಟ್ರಾಸ್ಯುಟಿಕಲ್ಸ್), ಸಾಗರ ಜೈವಿಕ ತಂತ್ರಜ್ಞಾನ, ಸಿಂಥೆಟಿಕ್ ಜೈವಿಕ ತಂತ್ರಜ್ಞಾನ, ವೈದ್ಯಕೀಯ ಉಪಕರಣಗಳು ಮತ್ತು ರೋಗ ನಿರ್ಣಯ, ಜೈವಿಕ ತಂತ್ರಜ್ಞಾನದಲ್ಲಿ ಕೃತಕ ಬುದ್ಧಿಮತ್ತೆ (AI)/ಯಂತ್ರ ಕಲಿಕೆ (ML), ಸೂಕ್ಷ್ಮ ಜೀವಾಣರೋಧಕ ಪ್ರತಿರೋಧ, ಆರೋಗ್ಯಕ್ಕಾಗಿ ಮಲ್ಟಿ-ಓಮಿಕ್ಸ್, ಕೋಶ ಮತ್ತು ಜೀನ್ ಚಿಕಿತ್ಸೆಗಳು, ಅಪರೂಪದ ರೋಗಗಳಿಗೆ, ಮತ್ತು ಬಾಹ್ಯಾಕಾಶ ಜೈವಿಕ ತಂತ್ರಜ್ಞಾನ ಮುಂತಾದ ಉದಯೋನ್ಮುಖ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು.
ರಿಯಾಯಿತಿ, ಹಣಕಾಸು ಪ್ರೋತ್ಸಾಹಕ
ಹೊಸ ನೀತಿಯಲ್ಲಿ ನವೋದ್ಯಮಗಳಿಗೆ ಹಲವು ಹಣಕಾಸು ಪ್ರೋತ್ಸಾಹಕಗಳು, ರಿಯಾಯಿತಿಗಳನ್ನು ಕಲ್ಪಿಸಲಾಗಿದೆ. ರಾಜ್ಯ ಜಿಎಸ್ಟಿ ಮರುಪಾವತಿ, ಮಾರುಕಟ್ಟೆ ವೆಚ್ಚ ಮರುಪಾವತಿ, ಪೇಟೆಂಟ್ ವೆಚ್ಚ ಮರುಪಾವತಿ, ಗುಣಮಟ್ಟ ಪ್ರಮಾಣೀಕರಣ ವೆಚ್ಚ ಮರುಪಾವತಿ, ಪರಿಪೋಷಣೆ / ವೇಗವರ್ಧನೆ ಕೇಂದ್ರಗಳ ಸ್ಥಾಪನೆ ಮತ್ತು ಉನ್ನತೀಕರಣ / ವಿಸ್ತರಣೆ ಬೆಂಬಲಕ್ಕಾಗಿ ಒಂದು ಬಾರಿಯ ಬಂಡವಾಳ ಅನುದಾನ ನೀಡಲಾಗುವುದು.
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ (MSME)ಗಳಿಗೂ ಹೊಸ ನೀತಿಯಲ್ಲಿ ಪೇಟೆಂಟ್ ವೆಚ್ಚ ಮರುಪಾವತಿ, ಮಾರುಕಟ್ಟೆ ವೆಚ್ಚ ಮರುಪಾವತಿ, ಗುಣಮಟ್ಟ ಪ್ರಮಾಣೀಕರಣ ವೆಚ್ಚ ಮರುಪಾವತಿ, ಪ್ರೊಟೊಟೈಪಿಂಗ್ ವೆಚ್ಚ ಮರುಪಾವತಿ, ಬಡ್ಡಿ ಸಬ್ಸಿಡಿ, ಸ್ಟ್ಯಾಂಪ್ ಡ್ಯೂಟಿ ವಿನಾಯಿತಿ, ಭೂ ಪರಿವರ್ತನೆ ಶುಲ್ಕ ಪ್ರೋತ್ಸಾಹ, ವಿದ್ಯುತ್ ದರ ರಿಯಾಯಿತಿ ನೀಡಲಾಗುವುದು.
ದೊಡ್ಡ ಕೈಗಾರಿಕೆಗಳಿಗೆ ಎಸ್.ಟಿ.ಪಿ ವೆಚ್ಚ ಮರುಪಾವತಿ, ಮಳೆನೀರು ಕೊಯ್ಲು ವೆಚ್ಚ ಮರುಪಾವತಿ, ಬಡ್ಡಿ ಸಬ್ಸಿಡಿ, ಭೂ ವೆಚ್ಚ ಮರುಪಾವತಿ, ಉತ್ಪಾದನಾ ಸಂಬಂಧಿತ ಪ್ರೋತ್ಸಾಹಕಗಳು, ಪೇಟೆಂಟ್ ವೆಚ್ಚ ಮರುಪಾವತಿ, ಮಾರುಕಟ್ಟೆ ವೆಚ್ಚ ಮರುಪಾವತಿ, ವಿದ್ಯುತ್ ದರ ರಿಯಾಯಿತಿ ನೀಡಲಾಗುವುದು.
ಇದು ಆರಂಭಿಕ ಹಂತದ ಬಯೋಟೆಕ್ ಸ್ಟಾರ್ಟ್‌ಅಪ್‌ಗಳಿಗೆ ಆರ್ಥಿಕ ನೆರವು ಮತ್ತು ಮಾರ್ಗದರ್ಶನದೊಂದಿಗೆ ನಿರಂತರ ಬೆಂಬಲವನ್ನು ಒದಗಿಸುವುದರ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ಸ್ಥಳೀಯ ಬಯೋಟೆಕ್ ಉತ್ಪನ್ನಗಳಿಗೆ ಆದ್ಯತೆಯ ಸಂಗ್ರಹಣೆಯನ್ನು ಸಕ್ರಿಯಗೊಳಿಸುವುದರ ಹೊರತಾಗಿ, ಸ್ಥಳೀಯ ಉತ್ಪನ್ನಗಳ ಆದ್ಯತೆಯ ಸಂಗ್ರಹಣೆಯ ಮೂಲಕ ಬೆಳವಣಿಗೆಯ ಸೌಲಭ್ಯಗಳು ಮತ್ತು ಮಾರುಕಟ್ಟೆ ಪ್ರವೇಶದೊಂದಿಗೆ ಮಧ್ಯಮ ಹಂತದ ಉದ್ಯಮಗಳಿಗೆ ನೆರವಾಗಲಿದೆ. ಜೀನೋಮಿಕ್ಸ್, ಆಣ್ವಿಕ ಜೀವಶಾಸ್ತ್ರ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು ವಾಣಿಜ್ಯೀಕರಣವನ್ನು ಬೆಂಬಲಿಸುತ್ತದೆ.
ಅಂತೆಯೇ ದೃಢವಾದ ಪ್ರೋತ್ಸಾಹಕ ವೇತನ ಪ್ಯಾಕೇಜ್‌ನೊಂದಿಗೆ 50 ನವೀನ ಸಂಸ್ಥೆಗಳು ಸೇರಿದಂತೆ 300 ಜೈವಿಕ ತಂತ್ರಜ್ಞಾನ ಕಂಪನಿಗಳ ರಚನೆಗೆ ಅನುಕೂಲವಾಗುವಂತೆ ಮಾಡುವುದು. 2029 ರ ವೇಳೆಗೆ ಬಯೋಟೆಕ್‌ನಲ್ಲಿ 30,000 ಉನ್ನತ-ಗುಣಮಟ್ಟದ ಉದ್ಯೋಗಗಳನ್ನು ಸೃಷ್ಟಿಸುವುದು ಮತ್ತು 20,000 ವ್ಯಕ್ತಿಗಳಿಗೆ ವಿಶೇಷ ಕೌಶಲ್ಯಗಳಲ್ಲಿ ತರಬೇತಿ ನೀಡಲು 200 ಸಂಸ್ಥೆಗಳೊಂದಿಗೆ ಪಾಲುದಾರಿಕೆ ಮಾಡುವುದು ಈ ಯೋಜನೆಯ ಗುರಿಯಾಗಿದೆ.
ಜೈವಿಕ-ಕೃಷಿ, ಜೈವಿಕ-ಕೈಗಾರಿಕಾ ಅನ್ವಯಿಕೆಗಳು, ಸಾಗರ ಜೈವಿಕ ತಂತ್ರಜ್ಞಾನ, ಸಂಶ್ಲೇಷಿತ ಜೈವಿಕ ತಂತ್ರಜ್ಞಾನ, ವೈದ್ಯಕೀಯ ಸಾಧನಗಳು ಮತ್ತು ರೋಗನಿರ್ಣಯ, ಜೈವಿಕ ತಂತ್ರಜ್ಞಾನದಲ್ಲಿ AI/ML, ಆಂಟಿಮೈಕ್ರೊಬಿಯಲ್ ಪ್ರತಿರೋಧ, ಆರೋಗ್ಯಕ್ಕಾಗಿ ಮಲ್ಟಿಯೊಮಿಕ್ಸ್, ಅಪರೂಪದ ಕಾಯಿಲೆಗಳಿಗೆ ಕೋಶ ಮತ್ತು ಜೀನ್ ಚಿಕಿತ್ಸೆ, ಬಾಹ್ಯಾಕಾಶ ಜೈವಿಕ ತಂತ್ರಜ್ಞಾನಗಳಂತಹ ಉದಯೋನ್ಮುಖ ಕ್ಷೇತ್ರಗಳಲ್ಲಿ ನೀತಿಯು ಕಾರ್ಯನಿರ್ವಹಿಸುತ್ತದೆ. ನೀತಿಯ ಅಡಿಯಲ್ಲಿ ಹಣಕಾಸಿನ ಪ್ರೋತ್ಸಾಹ ಮತ್ತು ರಿಯಾಯಿತಿಗಳು ಸ್ಟಾರ್ಟ್‌ಅಪ್‌ಗಳು, ಎಂಎಸ್‌ಎಂಇಗಳು ಮತ್ತು ದೊಡ್ಡ ಕೈಗಾರಿಕೆಗಳು ಸೇರಿದಂತೆ ವಿವಿಧ ಸೆಟಪ್‌ಗಳನ್ನು ಈ ನೀತಿ ಒಳಗೊಂಡಿವೆ.