ಖುಷಿ ಬನ್ನಟ್ಟಿ 
ರಾಜ್ಯ

ಕಲಬುರಗಿ: ತಲೆ ಮೇಲೆ ಶಾಲಾ ವಾಹನ ಹರಿದು 3 ವರ್ಷದ ಬಾಲಕಿ ದುರ್ಮರಣ

ಅಣ್ಣ ಬಸ್‌ನಿಂದ ಇಳಿದ ಬಳಿಕ ಶಾಲಾ ವಾಹನದ ಚಾಲಕ ಬಸ್ ಹಿಂದೆ ತಿರುಗಿಸಿದ್ದಾನೆ. ಈ ವೇಳೆ ಖುಷಿ ಬಸ್‌ನಡಿಗೆ ಸಿಲುಕಿದ್ದು, ಆಕೆಯ ತಲೆ ಮೇಲೆ ಶಾಲಾ ಬಸ್ ಹರಿದಿದೆ.

ಕಲಬುರಗಿ: ತಲೆ ಮೇಲೆ ಶಾಲಾ ವಾಹನ ಹರಿದ ಪರಿಣಾಮ 3 ವರ್ಷದ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಶಿವಪುರ ಗ್ರಾಮದಲ್ಲಿ ನಡೆದಿದೆ.

ರಾಜಶೇಖರ್ ಎಂಬವರ ಪುತ್ರಿ ಖುಷಿ ಬನ್ನಟ್ಟಿ (3) ಮೃತ ಬಾಲಕಿ. ಶಾಲಾ ವಾಹನದಲ್ಲಿ ಅಣ್ಣ ಬಂದಿದ್ದ ವೇಳೆ ಆತನನ್ನು ಕರೆದೊಯ್ಯಲು ತಂದೆಯ ಹಿಂದೆ ಖುಷಿ ಹೋಗಿದ್ದಳು. ಆದರೆ ತಂದೆ ಈಕೆ ಬಂದಿರುವುದನ್ನು ಗಮನಿಸಿರಲಿಲ್ಲ. ಅಣ್ಣ ಬಸ್‌ನಿಂದ ಇಳಿದ ಬಳಿಕ ಶಾಲಾ ವಾಹನದ ಚಾಲಕ ಬಸ್ ಹಿಂದೆ ತಿರುಗಿಸಿದ್ದಾನೆ. ಈ ವೇಳೆ ಖುಷಿ ಬಸ್‌ನಡಿಗೆ ಸಿಲುಕಿದ್ದು, ಆಕೆಯ ತಲೆ ಮೇಲೆ ಶಾಲಾ ಬಸ್ ಹರಿದಿದೆ. ಘಟನೆಯ ಪರಿಣಾಮ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಘಟನೆಯ ಬಳಿಕ ಶಾಲಾ ವಾಹನ ಚಾಲಕ ಶ್ರೀಶೈಲ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚೆಗಷ್ಟೇ ರಾಯಚೂರು ಜಿಲ್ಲೆಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದರು. ನಾಲ್ವರ ವಿದ್ಯಾರ್ಥಿಗಳಿಗೆ ಕಾಲು ತುಂಡಾಗಿತ್ತು. ಹಲವಾರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಕಪ್ಪಾ ಸಾಕು ಯುದ್ಧ, ನಾವ್ ಯಾರಿಗೂ ಸಹಾಯ ಮಾಡಲ್ಲ; ನಿಮ್ ತೈಲ ನೀವೆ ಹುಡುಕಿಕೊಳ್ಳಿ: ಇತರ ರಾಷ್ಟ್ರಗಳಿಗೆ Trump ಶಾಕ್!

ಇರಾನ್ ಯುದ್ಧಕ್ಕೆ ಹೌತಿಗಳ ಪ್ರವೇಶ: 2ನೇ ಕದನರಂಗ; ಬಾಬ್ ಅಲ್-ಮಂದಾಬ್‌ ಜಲಸಂಧಿ ಬಂದ್ ಆದರೆ ಭಾರತಕ್ಕೇನು ಸಂಕಷ್ಟ? ಇಲ್ಲಿದೆ ಮಾಹಿತಿ

ಬೆಂಗಳೂರು: RCB ಪಂದ್ಯದ ವೇಳೆ ಸರಣಿ ಮೊಬೈಲ್ ಕಳ್ಳತನ; ಪ್ರಮುಖ ಆರೋಪಿ, ಅಪ್ರಾಪ್ತರ ಬಂಧನ

IndiGo ನೂತನ CEO ಆಗಿ ವಿಲಿಯಂ ವಾಲ್ಷ್ ನೇಮಕ

ಖಜಾನೆ ಖಾಲಿ? ಇರಾನ್ ಯುದ್ಧಕ್ಕೆ ಹಣ ನೀಡಲು ಅರಬ್ ರಾಷ್ಟ್ರಗಳಿಗೆ ಅಮೆರಿಕ ಒತ್ತಾಯ..: ವೈಟ್ ಹೌಸ್ ಹೇಳಿದ್ದೇನು?

SCROLL FOR NEXT