ರಾಜ್ಯ

ಲೋಕಸಭೆ ಚುನಾವಣೆಯಲ್ಲಿ ಮತದಾರರ ಓಲೈಕೆಗಾಗಿ ನೀಡುತ್ತಿದ್ದ 'ಆಮಿಷ' ಬಗ್ಗೆ ಮಾಹಿತಿ ಕೊಡಲು ಆಯೋಗ ನಕಾರ: RTI ಕಾರ್ಯಕರ್ತ

ರಾಜ್ಯದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ನಗದು, ಮದ್ಯ ಮತ್ತು ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ಆದರೆ ನಿರ್ಣಾಯಕ ವಿವರಗಳಲ್ಲಿ ಪಾರದರ್ಶಕತೆಯ ಕೊರತೆಯಿದೆ ಮತ್ತು ಚುನಾವಣಾ ವೀಕ್ಷಕರ ವರದಿಗಳನ್ನು ಸಂಪೂರ್ಣವಾಗಿ ನಿರಾಕರಿಸಲಾಗಿದೆ

ಬೆಂಗಳೂರು: ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಮತದಾರರನ್ನು ಓಲೈಸುವ ವಿಚಾರದಲ್ಲಿ ಭಾರತೀಯ ಚುನಾವಣಾ ಆಯೋಗವು (ಇಸಿಐ) ಮೌನ ವಹಿಸಿದೆ. ಈ ಸಂಬಂಧ 25,000 ಕ್ಕೂ ಹೆಚ್ಚು ಎಫ್‌ಐಆರ್‌ಗಳು ದಾಖಲಾಗಿದ್ದರೂ ಚುನಾವಣಾ ಆಯೋಗ ಯಾವುದ ಕ್ರಮ ಕೈಗೊಳ್ಳುತ್ತಿಲ್ಲ ಎಂದು ನವದೆಹಲಿಯ ಕಾಮನ್‌ವೆಲ್ತ್ ಮಾನವ ಹಕ್ಕುಗಳ ಯೋಜನಾ ನಿರ್ದೇಶಕ ವೆಂಕಟೇಶ್ ನಾಯಕ್ ಆರೋಪಿಸಿದ್ದಾರೆ.

ಈ ಸಂಬಂಧ ಇಸಿಐ ಮತ್ತು ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಇಬ್ಬರಿಗೂ ಮಾಹಿತಿ ಹಕ್ಕು (ಆರ್‌ಟಿಐ) ಮನವಿಗಳನ್ನು ಸಲ್ಲಿಸಿದ್ದರೂ ಯಾವುದೇ ಮಾಹಿತಿ ನೀಡದೆ ನಿರ್ಲಕ್ಷಿಸಲಾಗಿದೆ ಎಂದು ವೆಂಕಟೇಶ್ ನಾಯಕ್ ಹೇಳಿದ್ದಾರೆ. ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಸಮಯದಲ್ಲಿ ಕ್ಷೇತ್ರವಾರು ಮತದಾರರ ಓಲೈಕೆಗಾಗಿ ಹಂಚಿರುವ ಉಚಿತಗಳ ಬಗ್ಗೆ ಮಾಹಿತಿ ನೀಡದೆ ಮೌನವಾಗಿದೆ" ಎಂದಿದ್ದಾರೆ.

ರಾಜ್ಯದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ನಗದು, ಮದ್ಯ ಮತ್ತು ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ಆದರೆ ನಿರ್ಣಾಯಕ ವಿವರಗಳಲ್ಲಿ ಪಾರದರ್ಶಕತೆಯ ಕೊರತೆಯಿದೆ ಮತ್ತು ಚುನಾವಣಾ ವೀಕ್ಷಕರ ವರದಿಗಳನ್ನು ಸಂಪೂರ್ಣವಾಗಿ ನಿರಾಕರಿಸಲಾಗಿದೆ ಎಂದು ಆರ್‌ಟಿಐ ಕಾರ್ಯಕರ್ತ ವೆಂಕಟೇಶ್ ತಿಳಿಸಿದ್ದಾರೆ. ಈ ದಾಖಲೆಗಳನ್ನು ಬಹಿರಂಗಪಡಿಸಲು ನಿರಾಕರಿಸಿರುವುದು ಚುನಾವಣಾ ಪ್ರಕ್ರಿಯೆಯ ಸಮಗ್ರತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಚುನಾವಣಾ ಆಯೋಗವು ಸಾರ್ವಜನಿಕರಿಂದ ಸತ್ಯವನ್ನು ಮುಚ್ಚಿಡುತ್ತಿದೆಯೇ?" ಎಂದು ಪ್ರಶ್ನಿಸಿರುವ ಅವರು “ಮತದಾರರನ್ನು ಪ್ರೇರೇಪಿಸುವುದು ಸಣ್ಣ ಅಪರಾಧವಲ್ಲ, ಇದು ಪೂರ್ಣ ಪ್ರಮಾಣದ ಚುನಾವಣಾ ಅಪರಾಧವಾಗಿದೆ. ಆದರೂ, ಚುನಾವಣಾ ಆಯೋಗದ ಕ್ರಮ ಮತದಾರರನ್ನು ಅಕ್ರಮ ಮಾರ್ಗಗಳ ಮೂಲಕ ಓಲೈಸಬಹುದಾದ ವಿಧಾನದ ಬಗ್ಗೆ ವಿಚಾರಣೆ ಮಾಡುವ ಅದರ ಬದ್ಧತೆಯನ್ನು ಪ್ರಶ್ನಿಸುತ್ತಿದೆ ಎಂದಿದ್ದಾರೆ.

ಚುನಾವಣಾ ಆಯೋಗದ ‘ವೀಕ್ಷಕರ ಕೈಪಿಡಿ’ ನೀಡುವಂತೆ ಸೂಚಿಸಿದರು, ಇದು ಚುನಾವಣಾ ವೆಚ್ಚವನ್ನು ಮೇಲ್ವಿಚಾರಣೆ ಮಾಡುವ ಕಾರ್ಯವಿಧಾನಗಳನ್ನು ವಿವರಿಸುತ್ತದೆ. ನಗದು, ಮದ್ಯ ಮತ್ತು ಇತರ ಪ್ರಚೋದನೆಗಳು ಸೇರಿದಂತೆ ಹಣಕಾಸಿನ ಅಕ್ರಮಗಳ ಮೇಲೆ ಕಣ್ಣಿಡಲು ನಿರ್ದಿಷ್ಟವಾಗಿ ಪ್ರತಿ ಕ್ಷೇತ್ರಕ್ಕೆ IRS ಅಧಿಕಾರಿಗಳನ್ನು ನೇಮಿಸಲಾಗುತ್ತದೆ. ಆದರೆ ಚುನಾವಣಾ ವೆಚ್ಚ ಮತ್ತು ಸೂಕ್ಷ್ಮ ಕ್ಷೇತ್ರಗಳ ಪಟ್ಟಿಯ ಬಗೆಗಿನ ಮಾಹಿತಿ ಯಾವಾಗಲೂ ನಿಗೂಡವಾಗಿಯೇ ಇರುತ್ತದೆ ಎಂದು ಅವರು ಹೇಳಿದರು.

ಗೌಪ್ಯತೆಯ ಬಗ್ಗೆ ಪ್ರಶ್ನಿಸಿದರೇ, ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಇಸಿಐ ಸುತ್ತೋಲೆಯನ್ನು ಉಲ್ಲೇಖಿಸಿದ್ದಾರೆ. ಸಾರ್ವಜನಿಕ ಡೊಮೇನ್‌ನಲ್ಲಿ ಮಾಹಿತಿ ನೀಡುವಂತಿಲ್ಲ ಎಂದುನಿರಾಕರಿಸಿದ್ದಾರೆ. ಅಲ್ಲದೆ, ಈ ಸುತ್ತೋಲೆಯ ನಿರ್ಧಾರವನ್ನು ಆಧರಿಸಿದ ಕೇಂದ್ರ ಮಾಹಿತಿ ಆಯೋಗವು (ಸಿಐಸಿ) ಆನ್‌ಲೈನ್‌ನಲ್ಲಿ ಈ ತೀರ್ಪಿನ ಯಾವುದೇ ಕುರುಹು ಹೊಂದಿಲ್ಲ ಎಂದು ನಾಯಕ್ ಹೇಳಿದರು.

ವೆಚ್ಚ ವೀಕ್ಷಕರನ್ನು ನೇಮಿಸಿರುವುದಾಗಿ ಮತ್ತು ಈ ಸೂಕ್ಷ್ಮ ಕ್ಷೇತ್ರಗಳ ಕುರಿತು ವರದಿಗಳನ್ನು ಸ್ವೀಕರಿಸಿರುವುದಾಗಿ ಚುನಾವಣಾ ಆಯೋಗ ಹೇಳಿಕೊಂಡಿದೆ. ECI ಮತ್ತು CEO ಕರ್ನಾಟಕ ಎರಡೂ ಅದನ್ನು ಬಿಡುಗಡೆ ಮಾಡಲು ನಿರಾಕರಿಸುತ್ತಿವೆ. ಆರ್‌ಟಿಐ ಕಾಯ್ದೆಯ ಸೆಕ್ಷನ್ 8(1)(ಜಿ) ಉಲ್ಲೇಖಿಸಿದ್ದಾರೆ, ಚುನಾವಣೆ ವೆಚ್ಚ ಮತ್ತು ವೀಕ್ಷಕರ ಹೆಸರುಗಳು ಈಗಾಗಲೇ ಸಾರ್ವಜನಿಕವಾಗಿದ್ದು, ಚುನಾವಣಾ ಸಮಯದಲ್ಲಿ ನಗದು ಮತ್ತು ಅಕ್ರಮ ವಸ್ತುಗಳನ್ನು ವಶಪಡಿಸಿಕೊಳ್ಳುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಹೀಗಾಗಿ ಇದರಲ್ಲಿ ಯಾವುದೇ ರಹಸ್ಯ ಕಾಪಾಡುವ ಅವಶ್ಯಕತೆಯಿಲ್ಲ ಎಂದಿದ್ದಾರೆ. ಚುನಾವಣಾ ನ್ಯಾಯಸಮ್ಮತತೆಯ ಬಗ್ಗೆ ಚುನಾವಣಾ ಅಧಿಕಾರಿಗಳೊಂದಿಗೆ ಸಮರ ನಡೆಸುತ್ತಿರುವ ಹಿರಿಯ ನಿವೃತ್ತ ಐಎಎಸ್ ಅಧಿಕಾರಿ ಎಂ.ಜಿ.ದೇವಸಹಾಯಂ ಅವರು ಚುನಾವಣಾ ಅಧಿಕಾರಿಗಳ ಪಾರದರ್ಶಕತೆಯಿಲ್ಲದ ಕರ್ತವ್ಯದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು. ಚುನಾವಣಾ ಆಯೋಗ ಏನನ್ನು ಮುಚ್ಚಿಟ್ಟಿದೆ ಎಂದು ಪ್ರಶ್ನಿಸಿದರು. ಸಿಇಒ ಮನೋಜ್ ಕುಮಾರ್ ಮೀನಾ ಅವರನ್ನು ಸಂಪರ್ಕಿಸಲು TNIE ಪ್ರಯತ್ನಿಸಿದರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ತಮಿಳುನಾಡಿನಲ್ಲಿ ಬದಲಾದ ರಾಜಕೀಯ ಸಮೀಕರಣ: ವಿಜಯ್ ಜೊತೆ ಬಿಜೆಪಿ ಮಾತುಕತೆ? ಕಾಲ್ತುಳಿತ ಘಟನೆಯ ನಂತರ TVKಗೆ ಪ್ರಮುಖ ಭರವಸೆ?

Bengaluru: ಮೆಟ್ರೋ ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ, ಗಂಭೀರ ಗಾಯ, ಆಸ್ಪತ್ರೆಗೆ ದಾಖಲು!

KRS ಪಕ್ಷದ ಕಾರ್ಯಕರ್ತರು V/S ಪೊಲೀಸರ ಸಂಘರ್ಷ: 'ಕೇಸ್' ದಾಖಲು! ಅಸಲಿ ಕಾರಣವೇನು?

148 ವರ್ಷಗಳಲ್ಲಿ ಇದೇ ಮೊದಲು... ವೆಸ್ಟ್ ಇಂಡೀಸ್ ವಿರುದ್ಧ ಶತಕ ಸಿಡಿಸಿ ಅತ್ಯಪರೂಪ, ವಿಚಿತ್ರ ದಾಖಲೆ ಬರೆದ KL Rahul

ಡಲ್ಲಾಸ್‌ನ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಹೈದರಾಬಾದ್ ವ್ಯಕ್ತಿಗೆ ಗುಂಡಿಕ್ಕಿ ಹತ್ಯೆ

SCROLL FOR NEXT