ಸಿಎಂ ಸಿದ್ದರಾಮಯ್ಯ 
ರಾಜ್ಯ

ಕೇಜ್ರಿವಾಲ್ ಗೆ ಸುಪ್ರೀಂಕೋರ್ಟ್ ಜಾಮೀನು ಮಂಜೂರು: ಕೇಂದ್ರ ಸರ್ಕಾರಕ್ಕೆ ಕಪಾಳ ಮೋಕ್ಷ- ಸಿಎಂ ಸಿದ್ದರಾಮಯ್ಯ

ಸುಪ್ರೀಂಕೋರ್ಟ್ ಆದೇಶ ದೇಶದ ನ್ಯಾಯಾಂಗದ ಮೇಲಿನ ನಮ್ಮೆಲ್ಲರ ನಂಬಿಕೆಯನ್ನು ಇನ್ನಷ್ಟು ದೃಢೀಕರಿಸಿದೆ. ಸತ್ಯ ಮತ್ತು ನ್ಯಾಯದ ಪರವಾಗಿ ಹೋರಾಡುತ್ತಿರುವವರೆಲ್ಲರಿಗೂ ಈ ಆದೇಶ ಭರವಸೆ ಹುಟ್ಟಿಸಿದೆ

ಬೆಂಗಳೂರು: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾಮೀನು ನೀಡಿ ಜೈಲಿನಿಂದ ಬಿಡುಗಡೆಗೊಳಿಸಿದ ಸುಪ್ರೀಂಕೋರ್ಟ್ ಆದೇಶ, ಸಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಕೇಂದ್ರ ಸರ್ಕಾರಕ್ಕೆ ಕೊಟ್ಟ ಕಪಾಳ ಮೋಕ್ಷವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಹೇಳಿದ್ದಾರೆ.

ಸುಪ್ರೀಂಕೋರ್ಟ್ ಆದೇಶ ದೇಶದ ನ್ಯಾಯಾಂಗದ ಮೇಲಿನ ನಮ್ಮೆಲ್ಲರ ನಂಬಿಕೆಯನ್ನು ಇನ್ನಷ್ಟು ದೃಢೀಕರಿಸಿದೆ. ಸತ್ಯ ಮತ್ತು ನ್ಯಾಯದ ಪರವಾಗಿ ಹೋರಾಡುತ್ತಿರುವವರೆಲ್ಲರಿಗೂ ಈ ಆದೇಶ ಭರವಸೆ ಹುಟ್ಟಿಸಿದೆ ಎಂದಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಸುಪ್ರೀಂಕೋರ್ಟ್ ನ ಈ ಆದೇಶ ಸಾಂವಿಧಾನಿಕ ಸಂಸ್ಥೆಗಳನ್ನು ತಮ್ಮ ರಾಜಕೀಯ ದ್ವೇಷ ಸಾಧನೆಗಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಕೊಟ್ಟ ತಪರಾಕಿಯಾಗಿದೆ. ದ್ವೇಷದ ರಾಜಕಾರಣಕ್ಕೆ ಇಳಿದಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನ್ಯಾಯಾಲಯದ ಈ ಆದೇಶದಿಂದಾದರೂ ಪಾಠ ಕಲಿತು ಎಚ್ಚೆತ್ತುಕೊಳ್ಳಲಿ. ಅಂತಿಮವಾಗಿ ಸತ್ಯವೇ ಗೆಲ್ಲುವುದು, ನ್ಯಾಯವೇ ಬಾಳುವುದು. ಸತ್ಯಮೇವ ಜಯತೆ ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನಕ್ಸಲ್ ಹಿಂಸಾಚಾರ ಉತ್ತುಂಗದಲ್ಲಿದ್ದಾಗ ಕಾಂಗ್ರೆಸ್ಸಿನವರಿಗೆ ಧೈರ್ಯವೇ ಇರಲಿಲ್ಲ- ಪ್ರಧಾನಿ ಮೋದಿ ವಾಗ್ದಾಳಿ

ಸಚಿವ ಸಂಪುಟ ವಿಸ್ತರಣೆ ಮಾಡುವುದು ಹೈಕಮಾಂಡ್ ನಿರ್ಧಾರ: ಕೊಟ್ಟ ಪಟ್ಟಿ ಅನುಷ್ಠಾನಗೊಳಿಸುವುದು ನನ್ನ ಕೆಲಸ- CM ಡಿ.ಕೆ. ಶಿವಕುಮಾರ್

ಬಿಡದಿ ಟೌನ್​​ಶಿಪ್ ಕದನ: HDK ಸವಾಲು ಸ್ವೀಕರಿಸಿದ CM; ಬೈರಮಂಗಲ ಬೇಡ, ವಿಧಾನಸೌಧಕ್ಕೆ ಬನ್ನಿ- ಡಿಕೆಶಿ ಪಂಥಾಹ್ವಾನ!

ಆಗಸ್ಟ್ 21ರವರೆಗೆ ಇರಾನ್ ತೈಲದ ಮೇಲಿನ ನಿರ್ಬಂಧ ಸ್ಥಗಿತಗೊಳಿಸಿದ ಅಮೆರಿಕ

ಭಾರತದ ಅಪಾಚೆ ಹೆಲಿಕಾಫ್ಟರ್‌, M777 ಹೊವಿಟ್ಜರ್‌ಗಳಿಗೆ $482.2 ಮಿಲಿಯನ್ ಮೊತ್ತದ ಅಮೆರಿಕದ ಬೆಂಬಲದ ಪ್ಯಾಕೇಜ್!